ಕೋವಿಡ್ ಬಳಿಕ ಜಿಎಸ್‌ಟಿ ಸಂಗ್ರಹ ಸಾಕಷ್ಟು ಹೆಚ್ಚಳ: ಆಯುಕ್ತ ಇಮಾಮುದ್ದೀನ್
Team Udayavani, Dec 8, 2022, 7:30 AM IST
ಮಂಗಳೂರು : ಕೋವಿಡ್ ಬಳಿಕ ಜಿಎಸ್‌ಟಿ ಸಂಗ್ರಹ ಹೆಚ್ಚುತ್ತಿದ್ದು, 9 ತಿಂಗಳಲ್ಲಿ ದೇಶದಲ್ಲಿ ಜಿಎಸ್‌ಟಿ ಸಂಗ್ರಹ 1 ಲಕ್ಷ 40 ಸಾವಿರ ಕೋಟಿ ರೂ.ಗೂ ಅಧಿಕವಾಗಿದೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಮಂಗಳೂರಿನ ಕೇಂದ್ರ ಅಬಕಾರಿ ಮತ್ತು ಕೇಂದ್ರ ತೆರಿಗೆ (ಜಿಎಸ್‌ಟಿ) ಆಯುಕ್ತ ಇಮಾ ಮುದ್ದೀನ್ ಅಹಮ್ಮದ್ ಹೇಳಿದರು.
ಮಂಗಳೂರಿನ ಕೇಂದ್ರ ಅಬಕಾರಿ ಮತ್ತು ಕೇಂದ್ರ ತೆರಿಗೆ (ಜಿಎಸ್‌ಟಿ) ಅಯುಕ್ತರ ಕಚೇರಿ ಮತ್ತು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ವತಿಯಿಂದ ಬುಧವಾರ ಕೆಸಿಸಿಐ ಯಲ್ಲಿ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರ್ನಾಟಕ ಎರಡನೇ ಸ್ಥಾನದಲ್ಲಿ
ದೇಶದಲ್ಲಿ ಮಹಾರಾಷ್ಟ್ರ ಜಿಎಸ್‌ಟಿ ಸಂಗ್ರಹದಲ್ಲಿ ಮೊದಲ ಸ್ಥಾನದಲ್ಲಿದ್ದು, ತಿಂಗಳಲ್ಲಿ 25 ಸಾವಿರ ಕೋಟಿ ರೂ.ವರೆಗೆ ತೆರಿಗೆ ಸಂಗ್ರಹಿಸುತ್ತಿದೆ. ಎರಡನೇ ಸ್ಥಾನದಲ್ಲಿ ಗುಜರಾತ್, ತಮಿಳು ನಾಡು ಮತ್ತು ಕರ್ನಾಟಕ ಪೈಪೋಟಿ ಮಾಡುತ್ತಿದೆ. ಆದರೆ ಆಕ್ಟೋಬರ್‌ನಿಂದ ಕರ್ನಾಟಕ 2ನೇ ಸ್ಥಾನಕ್ಕೆ ಬಂದಿದೆ.
ನವೆಂಬರ್ ತಿಂಗಳಲ್ಲೂ ಶೇ. 14-15 ರಷ್ಟು ಏರಿಕೆ ಯಾಗಿದೆ ಎಂದರು.
ಮಂಗಳೂರು ವಿಭಾಗಕ್ಕೆ ಈ ವರ್ಷ 3,600 ಕೋಟಿ ರೂ. ಗುರಿ ನಿಗದಿ ಯಾಗಿದ್ದು, ಗುರಿ ಮೀರಿ ಮುನ್ನಡೆಯುತ್ತಿದ್ದೇವೆ. ಕಳೆದ ವರ್ಷ ಕ್ಕಿಂತ ಶೇ. 35ರಷ್ಟು ಹೆಚ್ಚು ಜಿಎಸ್‌ಟಿ ಸಂಗ್ರಹವಾಗುವ ನಿರೀಕ್ಷೆಯಿದೆ. ತೆರಿಗೆ ಪಾವತಿಗೆ ಸಂಬಂಧಿಸಿ ಈ ಭಾಗದಲ್ಲಿ ಹೆಚ್ಚಿನ ಜಾಗೃತಿ ಇರುವುದರಿಂದ ಇದು ಸಾಧ್ಯವಾಗಿದೆ. ದೊಡ್ಡ ಮತ್ತು ಮಧ್ಯಮ ಉದ್ದಿಮೆಗಳು ಶೇ.90ರಷ್ಟು ಜಿಎಸ್‌ಟಿ ಫೈಲಿಂಗ್ ಮಾಡುತ್ತಿವೆ ಎಂದರು.
ಹೆಚ್ಚುವರಿ ಆಯುಕ್ತ ವಿಶಾಲ್ ಪ್ರತಾಪ ಸಿಂಗ್, ಕೆಸಿಸಿಐ ಉಪಾಧ್ಯಕ್ಷ ಅನಂತೇಶ್ ವಿ. ಪ್ರಭು, ಗೌ| ಖಜಾಂಚಿ ಅಬ್ದುರ್ ರೆಹಮಾನ್ ಮುಸ್ಬಾ, ಗೌ| ಕಾರ್ಯದರ್ಶಿ ದಿವಾಕರ್ ಪೈ. ಕೊಚ್ಚಿಕಾರ್ ಉಪಸ್ಥಿತ ರಿದ್ದರು. ಕೆಸಿಸಿಐನ ಜಿಎಸ್‌ಟಿ ಉಪ ಸಮಿತಿ ಅಧ್ಯಕ್ಷ ಕೇಶವ ಬಳ್ಳಕು ರಾಯ ಮಾತನಾಡಿದರು. ಅಧ್ಯಕ್ಷ ಗಣೇಶ್ ಕಾಮತ್ ಸ್ವಾಗತಿಸಿ ನಿರೂಪಿಸಿ ದರು. ಗೌ| ಕಾರ್ಯದರ್ಶಿ ಬಿ.ಎ. ನಝೀರ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ರಾಹುಲ್ ಗಾಂಧಿಯನ್ನು’ಮೀರ್ ಜಾಫರ್’ ಎಂದರು ; ಪ್ರಧಾನಿ ವಿರುದ್ಧ ಪ್ರಿಯಾಂಕಾ ಕಿಡಿ
ಜಿಲ್ಲೆಯಲ್ಲಿ 60 ಚೆಕ್‌ಪೋಸ್ಟ್ ಆರಂಭ; 25 ಲಕ್ಷ ರೂ. ನಗದು, 16 ಲಕ್ಷ ರೂ. ಸೀರೆ ವಶಕ್ಕೆ
ತಾಯಿ – ಮಗ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ : ಬಾಲಕ ಮೃತ್ಯು
ಪಳ್ಳಿ ಶ್ರೀ ಉಮಾಮಹೇಶ್ವರ- ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ
ನೇಕಾರ ಸಮ್ಮಾನ್ ಯೋಜನೆ; ಯುವಕನ ವಿಶಿಷ್ಟ ಕೃತಜ್ಞತೆ