
ಹರಕೆ ಹೊತ್ತು ಹೊರಬರುತ್ತಲೇ ಕಳೆದುಕೊಂಡ ಚಿನ್ನದ ಸರ ಪತ್ತೆ!
Team Udayavani, Jan 13, 2022, 7:05 AM IST

ಉಪ್ಪಿನಂಗಡಿ: ಮಗಳ ಮನೆಗೆ ಹೋಗುತ್ತಿರುವ ದಾರಿಯಲ್ಲಿ ಕಳೆದುಕೊಂಡಿದ್ದ 24 ಗ್ರಾಂನ ಚಿನ್ನದ ಸರವೊಂದು ದೈವ ದೇವರಿಗೆ ಹರಕೆ ಹೊತ್ತ ಕೂಡಲೇ ಲಭಿಸಿದ ಸ್ವಾರಸ್ಯಕರ ಘಟನೆ ಉಪ್ಪಿನಂಗಡಿಯಿಂದ ವರದಿಯಾಗಿದೆ.
ಉಪ್ಪಿನಂಗಡಿಯ ಇಂದಿರಾ ದೇವಾಡಿಗ ಸುಳ್ಯಪದವಿನಲ್ಲಿರುವ ಮಗಳ ಮನೆಗೆ ಹೋಗುವಾಗ ಸರವನ್ನು ಕಳೆದುಕೊಂಡಿದ್ದರು. ಸುಳ್ಯ ಪದವಿಗೆ ತಲುಪಿದಾಗ ಈ ವಿಚಾರ ಅರಿವಿಗೆ ಬಂದಿತು. ಪರಿಸರದ ರಿಕ್ಷಾ ಚಾಲಕ ರಮೇಶ್ ಅವರಿಗೆ ವಿಷಯ ತಿಳಿಸಿ ಮೊಬೈಲ್ ಸಂಖ್ಯೆ ನೀಡಿ ಮಗಳ ಮನೆಗೆ ಹೋದರು. ದಾರಿಯಲ್ಲೆಲ್ಲೋ ಬಿದ್ದಿರುವ ಹಿನ್ನೆಲೆಯಲ್ಲಿ ಹುಡುಕುವ ಪ್ರಯತ್ನ ಅಸಾಧ್ಯವೆಂದುಕೊಂಡು ವಾಪಸ್ ಉಪ್ಪಿನಂಗಡಿಗೆ ಬಂದ ಅವರು ಮಹಾಕಾಳಿ ದೇವರಿಗೆ ಹಾಗೂ ಕೊರಗಜ್ಜನಿಗೆ ಹರಕೆ ಸಂಕಲ್ಪಿಸಿ ಚಿನ್ನದ ಸರ ದೊರಕಿಸುವಂತೆ ಪ್ರಾರ್ಥಿಸಿದರು.
ವಿಸ್ಮಯವೆಂಬಂತೆ ದೇವಸ್ಥಾನದಿಂದ ಹೊರಬರುತ್ತಿದ್ದಂತೆಯೇ ಪುತ್ತೂರಿ ನಿಂದ ಬಂದ ಫೋನ್ ಕರೆ
ಯೊಂದು ಕಳೆದುಹೋದ ಚಿನ್ನಾ ಭರಣ ಪುತ್ತೂರಿನಲ್ಲಿ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿತು.
ಇದನ್ನೂ ಓದಿ:ಯೋಗಿ ಆದಿತ್ಯನಾಥ್ ರನ್ನು ಅಯೋಧ್ಯೆಯಿಂದ ಕಣಕ್ಕಿಳಿಸಲು ಬಿಜೆಪಿ ಸಿದ್ಧತೆ?
ನಡೆದುದೇನು?
ಪುತ್ತೂರಿನ ಮಾರ್ಕೆಟ್ ರಸ್ತೆಯಲ್ಲಿ ಸಿಕ್ಕಿದ ಚಿನ್ನದ ಸರ ಬಿದ್ದು ಹೋಗಿತ್ತು. ಅದು ರಿಕ್ಷಾ ಚಾಲಕ ಜನಾರ್ದನ್ ನಾಯಕ್ ಅಲಿಯಾಸ್ ಚಂದ್ರಕಾಂತ್ ಅವರಿಗೆ ಕಾಣಿಸಿದ್ದು, ಅವರು ಅದನ್ನು ಬಿಎಂಎಸ್ ರಿûಾ ಚಾಲಕ ಮಾಲಕರ ಸಂಘದ ಕಚೇರಿಗೆ ತಲುಪಿಸಿದ್ದರು. ಅಲ್ಲದೆ ಈ ವಿಚಾರವನ್ನು ವಾಟ್ಸ್‌ಆ್ಯಪ್‌ನಲ್ಲಿ ಹರಿಯ ಬಿಟ್ಟಿದ್ದರು. ಸುಳ್ಯಪದವು ಪರಿಸರದ ರಿûಾ ಚಾಲಕ ರಮೇಶ್ ಇದನ್ನು ಗಮನಿಸಿ ಇಂದಿರಾಗೆ ತಿಳಿಸಿದರು.
ರಿಕ್ಷಾ ಚಾಲಕನ ಪ್ರಾಮಾಣಿಕತೆ
ಪುತ್ತೂರು ಪೊಲೀಸ್ ಠಾಣೆಯಲ್ಲಿ ಚಿನ್ನದ ಸರವನ್ನು ಅಧಿಕಾರಿಗಳಿಂದ ಸ್ವೀಕರಿಸಿದ ಇಂದಿರಾ ದೇವಾಡಿಗ ಅವರು ಚಿನ್ನ ಕೊಟ್ಟು ಪ್ರಾಮಾಣಿಕತೆ ಮೆರೆದ ಜನಾರ್ದನ್ ನಾಯಕ್ ಅವರಿಗೆ ಹಣ ನೀಡಲು ಮುಂದಾದರು. ಆದರೆ ಅವರು ಸ್ವೀಕರಿಸದೇ ಕ್ಯಾನ್ಸರ್ ಪೀಡಿತ ಬಪ್ಪಳಿಗೆ ನಿವಾಸಿ ಕ್ಯಾನ್ಸರ್ ಪೀಡಿತ ಸಂಜೀವ ಅವರಿಗೆ ಇಂದಿರಾ ಅವರಿಂದಲೇ ಹಸ್ತಾಂತರಿಸಿ ಮಾನವೀಯತೆ ಮೆರೆದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Asian Games: ಶೂಟಿಂಗ್ ಟ್ರ್ಯಾಪ್ ಪುರುಷರ ತಂಡ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನ

Cleaning: ಅರಣ್ಯ ಇಲಾಖೆ ವತಿಯಿಂದ ಚಾರ್ಮಾಡಿ ಘಾಟ್ ನಲ್ಲಿ ಸ್ವಚ್ಚತಾ ಕಾರ್ಯ

ಸಚಿವ ಸ್ಥಾನ ಪಡೆದ ಬಳಿಕ ಮೊದಲ ಸಲ ಮತಕ್ಷೇತ್ರಕ್ಕೆ ಭೇಟಿ ನೀಡಿದ ಸಚಿವ ಡಾ. ಶರಣಪ್ರಕಾಶ ಪಾಟೀಲ

Dr. TMA Pai Convention Centre; 3 ದಿನಗಳ “ಬಿಗ್ ಬ್ರ್ಯಾಂಡ್ಸ್ ಎಕ್ಸ್‌ಪೋಗೆ’ ಚಾಲನೆ

Health: ಸೋಶಿಯಲ್ ಆ್ಯಂಕ್ಸೈಟಿ ಡಿಸಾರ್ಡರ್