ಕರಾವಳಿಯಲ್ಲಿ ಭಾರೀ ಮಳೆ; ಜೂನ್. 26ರವರೆಗೆ ಆರೆಂಜ್ ಅಲರ್ಟ್ ಘೋಷಣೆ
Team Udayavani, Jun 25, 2022, 1:30 AM IST
ಮಂಗಳೂರು/ಉಡುಪಿ: ಕರಾವಳಿ ಭಾಗದಲ್ಲಿ ಮುಂಗಾರು ಮಳೆ ಬಿರುಸು ಪಡೆಯುವ ನಿರೀಕ್ಷೆ ಇದ್ದು, ಜೂ.25 ಮತ್ತು 26ರಂದು ಆರೆಂಜ್ ಅಲರ್ಟ್ ಘೊಷಿಸಲಾಗಿದೆ.
ಈ ವೇಳೆ ಧಾರಾಕಾರ ಮಳೆ, ಗುಡುಗು ಸಹಿತ ಗಾಳಿ ಕೂಡ ಇರಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆ ಶುಕ್ರವಾರ ಮಳೆಯಾಗಿತ್ತು. ಹವಾಮಾನ ಇಲಾಖೆ ಮಾಹಿತಿಯಂತೆ ಶುಕ್ರವಾರ ಮಂಗಳೂರಿನಲ್ಲಿ 29.1 ಡಿ.ಸೆ. ಗರಿಷ್ಠ ಮತ್ತು 23.5 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು.
ಉಡುಪಿ: ಸಾಧಾರಣ ಮಳೆ: ಜಿಲ್ಲೆಯಲ್ಲಿ ಶುಕ್ರವಾರ ಸಾಧಾರಣ ಮಳೆಯಾಗಿದೆ. ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣ ಇತ್ತಾದರೂ ನಿರಂತರ ಮಳೆ ಸುರಿಯಲಿಲ್ಲ.
ಜೂ.23ರಂದು ಸುರಿದ ಮಳೆಗೆ ಮೂಡನಿಡಂಬೂರಿನ ನಿತ್ಯಾನಂದ ಅವರ ಮನೆಯ ಮೇಲೆ ಗಾಳಿ ಮಳೆಯಿಂದಾಗಿ ಮರಬಿದ್ದು, ಸುಮಾರು 50 ಸಾವಿರ ರೂ. ನಷ್ಟ ಉಂಟಾಗಿದೆ.
ಹಿರೇಬೆಟ್ಟು ಗ್ರಾಮದ ಲೀಲಾಶೆಟ್ಟಿ ಅವರ ಮನೆ ಗಾಳಿ-ಮಳೆಯಿಂದ ಬಿರುಕುಗೊಂಡು ಭಾಗಶಃ ಹಾನಿಯಾಗಿದೆ. 2.5 ಲ.ರೂ.ನಷ್ಟ ಉಂಟಾಗಿದೆ. 80 ಬಡಗಬೆಟ್ಟುವಿನ ಅನಂತ ನಾಯಕ್ ಅವರ ಮನೆಗೆ ಹಾನಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುರತ್ಕಲ್ :ಮಿತ್ರಪಟ್ಟಣ ಭಾಗದಲ್ಲಿ ಭಾರಿ ಕಡಲ್ಕೊರೆತ : ಅಪಾಯದ ಅಂಚಿನಲ್ಲಿ ಮೀನುಗಾರಿಕಾ ರಸ್ತೆ
ಪದೇ ಪದೇ ಜಾಗ ಬದಲಾಯಿಸುತ್ತಿದ್ದ ಪ್ರವೀಣ್ ಹಂತಕರು : ಆರೋಪಿಗಳ ಮಾಹಿತಿ ಬಿಚ್ಚಿಟ್ಟ ಎಡಿಜಿಪಿ
ಕಿನ್ಯ ಗ್ರಾಮದಲ್ಲಿ ಸಮಸ್ಯೆಗಳೇ ಬಹುದೊಡ್ಡದು
ತೊಕ್ಕೊಟ್ಟು: ಬೈಕ್ -ಕಾರು ಢಿಕ್ಕಿ; ಇಬ್ಬರಿಗೆ ಗಾಯ
ಚಪ್ಪಲಿಯಲ್ಲಿ ಮರೆ ಮಾಚಿ ಅಕ್ರಮ ಸಾಗಾಟ; 17 ಲಕ್ಷ ರೂ. ಮೌಲ್ಯದ ಚಿನ್ನ ವಶ