ವಾಹನಗಳ ಮಿತಿ ಮೀರಿದ ವೇಗದಿಂದ ಹೆಚ್ಚುತ್ತಿರುವ ಅಪಘಾತ

ಬಿ.ಸಿ.ರೋಡ್‌-ಜಕ್ರಿಬೆಟ್ಟು-ಪುಂಜಾಲಕಟ್ಟೆ ಸುಸಜ್ಜಿತ ರಸ್ತೆ

Team Udayavani, Apr 12, 2022, 10:16 AM IST

vehicle

ಬಂಟ್ವಾಳ: ರಸ್ತೆ, ಹೆದ್ದಾರಿಗಳು ಅಭಿ ವೃದ್ಧಿಗೊಂಡತೆ ಅಲ್ಲಿ ಸಾಗುವ ವಾಹನಗಳ ವೇಗವೂ ಹೆಚ್ಚಾಗುತ್ತಿದ್ದು, ಸಾಕಷ್ಟು ಸಂದ ರ್ಭಗಳಲ್ಲಿ ವೇಗವೇ ಅಪಾಯಕ್ಕೆ ಕಾರಣವಾಗುತ್ತಿದೆ. ಅಭಿವೃದ್ಧಿಗೊಂಡ ಬಿ.ಸಿ. ರೋಡ್‌-ಜಕ್ರಿಬೆಟ್ಟು- ಪುಂಜಾಲಕಟ್ಟೆ ಹೆದ್ದಾರಿಯಲ್ಲೂ ವಾಹನಗಳ ಮಿತಿ ಮೀರಿದ ವೇಗದಿಂದ ಈಗಾಗಲೇ ಹಲವು ಅಪಘಾತಗಳು ಸಂಭವಿಸಿದ್ದು, ಕ್ರಮಕ್ಕೆ ಆಗಹ್ರ ಕೇಳಿಬಂದಿದೆ.

ಅಭಿವೃದ್ಧಿಗೊಂಡ ಹೆದ್ದಾರಿಯನ್ನು ಅಗಲದ ಜತೆಗೆ ನೇರವಾಗಿ ಮಾಡಲಾಗಿದೆ. ಹೀಗಾಗಿ ವಾಹನಗಳು ವೇಗದಲ್ಲೇ ಸಾಗುತ್ತಿ ರುತ್ತವೆ. ನೇರವಾಗಿರುವ ರಸ್ತೆಯ ವೇಗವನ್ನೇ ತಿರುವಿ ನಲ್ಲೂ ಮುಂದುವರಿಸುತ್ತಿರುವ ಪರಿ ಣಾಮ ಅಪಘಾತಗಳಿಗೆ ಕಾರಣವಾಗುತ್ತಿದೆ.

ಬಿ.ಸಿ.ರೋಡ್‌ನಿಂದ ಜಕ್ರಿಬೆಟ್ಟುವರೆಗಿನ 3.85 ಕಿ.ಮೀ. ಹೆದ್ದಾರಿಯು ಕಾಂಕ್ರೀಟ್‌ ರಸ್ತೆಯಾಗಿ ಚತುಷ್ಪಥಗೊಂಡಿದ್ದು, ಜಕ್ರಿ ಬೆಟ್ಟುನಿಂದ ಪುಂಜಾಲಕಟ್ಟೆವರೆಗಿನ 16 ಕಿ.ಮೀ. ಹೆದ್ದಾರಿ ದ್ವಿಪಥ ರಸ್ತೆಯಾಗಿ ಮೇಲ್ದರ್ಜೆಗೇರಿದೆ. ಪ್ರಸ್ತುತ ಜಕ್ರಿಬೆಟ್ಟುನಿಂದ ಪುಂಜಾಲಕಟ್ಟೆವರೆಗೆ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದೆ ಎಂಬ ದೂರುಗಳಿವೆ.

ಜಕ್ರಿಬೆಟ್ಟುವಿನಲ್ಲಿ ಕಾಂಕ್ರೀಟ್‌ ರಸ್ತೆ ಮುಗಿದು ಡಾಮಾರು ರಸ್ತೆಯಲ್ಲಿ ಕೊಂಚ ದೂರ ಸಂಚರಿಸುತ್ತಿದ್ದಂತೆ ತಿರುವಿನ ಬಳಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದೆ.

ಕ್ಷಣ ಮಾತ್ರದಲ್ಲಿ ಹತ್ತಿರಕ್ಕೆ ಹೆದ್ದಾರಿ

ಅಭಿವೃದ್ಧಿಗೊಂಡಿರುವ ಜತೆಗೆ ದೂರದಲ್ಲಿ ವಾಹನಗಳು ಬರುವುದು ಕೂಡ ಸ್ಪಷ್ಟವಾಗಿ ಕಾಣುತ್ತದೆ. ವಾಹನ ದೂರ ಇದೆ ಎಂದು ರಸ್ತೆ ಕ್ರಾಸ್‌ ಮಾಡುವ ವೇಳೆ ರಸ್ತೆಯ ಮಧ್ಯಕ್ಕೆ ತಲುಪುತ್ತಿದ್ದಂತೆ ವಾಹನಗಳು ಕ್ಷಣ ಮಾತ್ರದಲ್ಲಿ ಹತ್ತಿರಕ್ಕೆ ಬಂದಿರುತ್ತದೆ. ಅಂದರೆ ವಾಹನಗಳ ವೇಗ ಅಷ್ಟಿದ್ದು, ಈ ವೇಳೆ ವಾಹನ ಚಾಲಕನ ನಿಯಂತ್ರಣ ತಪ್ಪಿದರೆ ಅಥವಾ ರಸ್ತೆ ದಾಟುವ ವ್ಯಕ್ತಿ ಗೊಂದಲಕ್ಕೆ ಒಳಗಾದರೆ ಅಪಘಾತದ ಸಾಧ್ಯತೆ ಹೆಚ್ಚಿರುತ್ತದೆ. ಇದು ಜೀವಹಾನಿಗೂ ಕಾರಣವಾಗುವ ಸಾಧ್ಯತೆಯೂ ಇದೆ.

ಚತುಷ್ಪಥದಲ್ಲೂ ಅಪಾಯ

ಬಿ.ಸಿ.ರೋಡ್‌-ಜಕ್ರಿಬೆಟ್ಟು ಹೆದ್ದಾರಿ ಯಲ್ಲೂ ಅಪಾಯದ ಸ್ಥಿತಿ ಇದೆ. ಅಂದರೆ 2 ದಿಕ್ಕಿನಲ್ಲೂ ಸಾಗುವ ವಾಹನಗಳಿಗೆ ಮಧ್ಯೆ ಡಿವೈಡರ್‌ ಇದ್ದು ಪ್ರತ್ಯೇಕ ರಸ್ತೆಗಳಿವೆ. ಆದರೆ ಕೆಲವೊಂದು ವಾಹನಗಳು ರಾಂಗ್‌ ಸೈಡ್‌ ನಿಂದ ಬರುತ್ತಿರುವುದರಿಂದ ಅಪಾಯಕ್ಕೆ ಕಾರಣವಾಗುತ್ತಿದೆ. ಇನ್ನು ಒಳರಸ್ತೆಗಳು ಹೆದ್ದಾರಿಯನ್ನು ಸೇರುವಲ್ಲಿಯೂ ಅಪಘಾತದ ಸ್ಥಿತಿ ಹೆಚ್ಚಿರುತ್ತದೆ. ಚತುಷ್ಪಥ ಹೆದ್ದಾರಿಯ ಬಂಟ್ವಾಳ ಬೈಪಾಸ್‌ ಜಂಕ್ಷನ್‌ನಲ್ಲಿ ನಾಲ್ಕು ರಸ್ತೆಗಳು ಸೇರುತ್ತಿ ರುವುದರಿಂದ ಗೊಂದಲ ಗಳಿದ್ದು, ಅಪಘಾತದ ಸಾಧ್ಯತೆ ಇದೆ. ಅಲ್ಲಿ ವೃತ್ತ ಮಾಡಿದ್ದರೆ ವಾಹನಗಳು ಗೊಂದಲಕ್ಕೆ ಒಳಗಾಗುತ್ತಿರಲಿಲ್ಲ ಎಂಬ ಅಭಿಪ್ರಾಯಗಳು ಕೇಳಿಬರುತ್ತಿದೆ. ಈ ಎಲ್ಲ ರಸ್ತೆಗಳಲ್ಲೂ ಬರುವ ವಾಹನಗಳು ಒಂದೇ ವೇಗದಲ್ಲಿ ಬರುವುದರಿಂದ ಅಪಾಯ ಹೆಚ್ಚಿರುತ್ತದೆ.

ಮಿತಿ ಮೀರಿದ ವೇಗಕ್ಕೆ ದಂಡ

ಈ ಹೊಸ ರಸ್ತೆಯಲ್ಲಿ ಅಪಘಾತವಾಗುವ ಕುರಿತು ನನ್ನ ಗಮನಕ್ಕೂ ಬಂದಿದೆ. ಈಗಾಗಲೇ ಹತ್ತಾರು ಅಪಘಾತಗಳು ನಡೆದಿರುವ ಮಾಹಿತಿ ಇದೆ. ಹೀಗಾಗಿ ಕೆಲವು ಪ್ರಮುಖ ಸ್ಥಳಗಳಲ್ಲಿ ವಾಹನಗಳು ಮಿತಿ ಮೀರಿದ ವೇಗದಲ್ಲಿ ಸಾಗುವುದಕ್ಕೆ ನಿಯಂತ್ರಣ ಹಾಕುವ ದೃಷ್ಟಿಯಿಂದ ಸಂಚಾರಿ ಪೊಲೀಸರನ್ನು ನಿಯೋಜಿಸಿ ದಂಡ ವಿಧಿಸುವ ಕಾರ್ಯವನ್ನು ಆರಂಭಿಸಲಾಗುವುದು. ಪ್ರತಾಪ್‌ ಸಿಂಗ್‌ ಥೋರಟ್‌, ಡಿವೈಎಸ್‌ಪಿ, ಬಂಟ್ವಾಳ

ಇಲಾಖೆಗೆ ಮನವಿ

ನಮ್ಮ ಭಾಗದ ಹೆದ್ದಾರಿಯಲ್ಲಿ ವಾಹನಗಳ ವೇಗ ಮಿತಿಮೀರಿದ್ದು, ಅಪಘಾತಗಳು ಕೂಡ ಹೆಚ್ಚುತ್ತಿದೆ. ಕಳೆದ ಜ. 25ರಂದು ನಮಗೂ ಕೂಡ ಅಪಘಾತದ ಅನುಭವವಾಗಿದೆ. ಇಂಡಿಕೇಟರ್‌ ಹಾಕಿ ನಾನು ಕಾರನ್ನು ಮನೆಗೆ ತಿರುಗಿಸುತ್ತಿದ್ದ ವೇಳೆ ಹಿಂದಿನಿಂದ ಅತೀ ವೇಗದಿಂದ ಬಂದ ಕಾರು ಢಿಕ್ಕಿ ಹೊಡೆದಿದೆ. ಹೆದ್ದಾರಿಯಲ್ಲಿ ವೇಗ ನಿಯಂತ್ರಣ, ಅಪಘಾತಗಳ ಸೂಚನೆಗಳನ್ನು ಹಾಕುವುದಕ್ಕೆ ಹೆದ್ದಾರಿ ಇಲಾಖೆಗೆ ಮನವಿಯನ್ನೂ ಮಾಡಿದ್ದೇವೆ. –ರಾಜೇಂದ್ರ ಕುಮಾರ್‌ ಮಣ್ಣಾಪು, ಜಕ್ರಿಬೆಟ್ಟು ನಿವಾಸಿ

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.