ಅಡಿಕೆ, ತೆಂಗಿನಂತೆ ಹುಲುಸಾಗಿ ಬೆಳೆಯೋಣ ಹಲಸು


Team Udayavani, Jul 6, 2018, 2:10 AM IST

jack-fruit-5-7.jpg

ಪುತ್ತೂರು: ಪ್ರತೀ ದೇಶದಲ್ಲೂ ಒಂದೊಂದು ಹಣ್ಣಿಗೆ ಬ್ರ್ಯಾಂಡ್‌ ಇದೆ. ವಿದೇಶದ ರಂಬುಟಾನ್‌ ನಮಗಿಲ್ಲಿ ದೊಡ್ಡಸ್ತಿಕೆ. ಆದರೆ ಪಕ್ಕದ ರಾಜ್ಯ ಕೇರಳದಲ್ಲಿ ಹಲಸು ರಾಜ್ಯದ ಹಣ್ಣು. ಇಂದು ಕೇರಳದ ತುಂಬೆಲ್ಲ ಹಲಸಿನ ಬಗ್ಗೆಯೇ ಚರ್ಚೆ. ಅಲ್ಲಿನ ಕೃಷಿ ಇಲಾಖೆ ಹಲಸು ಮೌಲ್ಯವರ್ಧನೆಗೆ ಸಾಕಷ್ಟು ಕ್ರಮ ಕೈಗೊಂಡಿದೆ. ಕೇರಳದಲ್ಲಿ ಹಲಸೇ ಹಣ್ಣುಗಳ‌ ರಾಜ. ಈಗಂತೂ ಯಾವ ಹಲಸು ಎಷ್ಟು ಫ‌ಸಲು ಕೊಡುತ್ತದೆ. ರುಚಿ ಹೇಗಿದೆ? ಯಾವಾಗ ಹಣ್ಣಾಗುತ್ತದೆ? ಅದರಿಂದ ಯಾವೆಲ್ಲ ತಿಂಡಿ ತಯಾರಾಗುತ್ತದೆ? ರುಚಿ ಹೇಗಿರುತ್ತದೆ? ಎಂಬ ಬಗ್ಗೆ ಚರ್ಚೆಯಾಗುತ್ತದೆ. ಈಗ ಒಂದು ಹೆಜ್ಜೆ ಮುಂದೆ ಹೋಗಿ ಹಲಸಿನ ಕಂಪೆನಿಗಳೇ ಆರಂಭಗೊಂಡಿವೆ. ಹಲಸು ಮೌಲ್ಯವರ್ಧನೆಗೆ ಆದ್ಯತೆ ಸಿಕ್ಕಿದೆ. ಇಂದು ಹಲಸು ಕೇರಳ ರಾಜ್ಯದ ಕೃಷಿಕರಿಗೆ ಪ್ರಮುಖ ಆಹಾರ ಹಾಗೂ ಆದಾಯದ ಬೆಳೆ.

ಆದರೆ, ನಮ್ಮಲ್ಲಿ ಹಲಸಿಗೆ, ಹಲಸಿನ ಮೌಲ್ಯವರ್ಧನೆಗೆ ವೇಗ ಸಿಕ್ಕಿಲ್ಲ. ಒಂದು ಪಾಲು ಹಲಸಿನ ಬಗ್ಗೆ ಮಾತುಕತೆ ನಡೆದರೆ, ಮೂರು ಪಾಲು ನೆಗೆಟಿವ್‌ ಚರ್ಚೆಗಳಾಗುತ್ತವೆ. ಅಡಿಕೆಯ ಹೊರತಾದ ಯಾವುದೇ ಸಾಧ್ಯತೆಗಳ ಬಗ್ಗೆಯೂ ಚರ್ಚೆ ಆಗುತ್ತಿಲ್ಲ. ಹಲಸು ಎಂದರೆ ಹೊಲಸು ಎಂಬುದೇ ತಲೆಗೆ ತುಂಬಿಕೊಂಡಿದೆ. ಈ ಕಾರಣದಿಂದಲೇ ನಗರದಲ್ಲಿ ಹಲಸಿನ ಉತ್ಪನ್ನಗಳಿಗೆ ಬೇಡಿಕೆ ಇದ್ದರೂ ಪೂರೈಕೆ ಕೇರಳದ ಕಡೆಯಿಂದಲೇ ಆಗಬೇಕು. ಆಯಕಟ್ಟಿನ ಸ್ಥಳದಲ್ಲಿ ಹಲಸಿನ ಗಿಡ ನೆಟ್ಟರೆ ಸಾಕು. ವಿಶೇಷ ಆರೈಕೆ ಬೇಡ. ಒಂದು ಬಾರಿ ಬೆಳೆದು ಮರವಾಗಿ ಫ‌ಲ ನೀಡಲಾರಂಭಿಸಿದರೆ ಆಯ್ತು. ತನ್ನನ್ನು ಸಾಕಿದ ರೈತನ ಕೈಬಿಟ್ಟಿಲ್ಲ. ಬಳಕೆ ತಿಳಿದವನಿಗೆ ಸದಾ ಸಮೃದ್ಧಿಯನ್ನೇ ನೀಡುತ್ತಾ ಬಂದಿದೆ.


ಮನೆ ಮನೆಯಲ್ಲೂ ಖಾದ್ಯ

ಮುಳ್ಳಿನ ಕವಚಗಳ ನಡುವೆ ಅಡಗಿ ಕುಳಿತ ಹಳದಿ ಬಣ್ಣದ ತೊಳೆಗಳನ್ನು ಕಂಡೊಡನೆ ಹಲಸು ಪ್ರಿಯರ ಮನದಲ್ಲಿ ಹಲವು ಖಾದ್ಯಗಳತ್ತ ಯೋಚನೆ ಹರಿಯುತ್ತದೆ. ಹಲಸಿನ ಹಣ್ಣಿನ ಸೀಸನ್‌ ಶುರುವಾಯಿತೆಂದರೆ ಹಳ್ಳಿ ಮನೆಗಳ ಜನರಿಗೆ ಬಿಡುವಿಲ್ಲದ ಕೆಲಸ. ಹಲಸಿನ ಗುಜ್ಜೆ ಪಲ್ಯ, ಹಪ್ಪಳ-ಸಂಡಿಗೆಗಳು, ಚಿಪ್ಸ್‌ ಅಥವಾ ಸೋಂಟೆ, ಜಾಮ್‌, ಜೆಲ್ಲಿ, ಪಾನಕ, ಉಪ್ಪಿನಕಾಯಿ, ಸುಟ್ಟ ಹಲಸಿನ ಬೀಜ, ಸಾಂಬಾರ್‌, ಹಲಸಿನಕಾಯಿ ದೋಸೆ, ಹಣ್ಣಿನ ಕಡುಬು… ಲೆಕ್ಕವಿಲ್ಲ. ಹಲಸಿನಕಾಯಿ ತೊಳೆಗಳನ್ನು ಉಪ್ಪಿನಲ್ಲಿ ಹಾಕಿಟ್ಟರೆ ಹಲವು ಸಮಯದ ಬಳಿಕವೂ ವಿವಿಧ ಖಾದ್ಯಗಳಿಗೆ ಬಳಸಬಹುದು. ಉಪ್ಪುತೊಳೆ ರೊಟ್ಟಿ, ಹಣ್ಣಿನ ಮುಳ್ಕ, ಅಪ್ಪ ಕಜ್ಜಾಯ, ವಡೆ, ಉಂಡ್ಲಿಕಾಳು, ಪಲ್ಯ ಇತ್ಯಾದಿಗಳನ್ನು ಸವಿಯದ್ದರೆ ಅದೇನೋ ಕಳೆದುಕೊಂಡ ಭಾವ. ಮಳೆಗಾಲದಲ್ಲಿ ಬಿಸಿ ಬಿಸಿ ಹಪ್ಪಳ, ಸೋಂಟೆ ಸವಿಯುತ್ತಾ, ಹೊರಗಡೆ ಧಾರಾಕಾರವಾಗಿ ಸುರಿಯುವ ಮಳೆಯನ್ನು ಆನಂದಿಸುವ ಖುಷಿ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ.


ಆರೋಗ್ಯದ ಗುಟ್ಟು!

‘ಹಸಿದು ಹಲಸಿನಹಣ್ಣು ತಿನ್ನು: ಉಂಡು ಮಾವಿನ ಹಣ್ಣು ತಿನ್ನು’ ಎನ್ನುತ್ತಾರೆ. ವಿಟಮಿನ್‌ ಸಿ ಹೇರಳವಾಗಿರುವ ಹಲಸು ವಿಷರಹಿತ ಹಣ್ಣು. ರಕ್ತ ದೊತ್ತಡ, ಮಧುಮೇಹ ಹಾಗೂ ಕ್ಯಾನ್ಸರ್‌ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಅಕಾಲ ವೃದ್ಧಾಪ್ಯವನ್ನು ತಡೆಯಲು ತಡೆ ಯಲು ಹಲಸು ಸಹಾಯಕ.

ಹಲಸಿಗೂ ಮಾನ್ಯತೆ..!
‘ಹಲಸು ಯಾರಿಗೆ ಬೇಕು ಸ್ವಾಮಿ? ಮುಟ್ಟೋಕೆ ಹೋದರೆ ಬರೀ ಮಯಣ, ಕತ್ತರಿಸುವುದೇ ಒಂದು ದೊಡ್ಡ ರಾಮಾಯಣ.. ಸೊನೆ ಅಂಟಿದರೆ ಕಲೆ ಹೋಗೋದೇ ಇಲ್ಲ’ ಎನ್ನುತ್ತಿದ್ದವರೇ ಇಂದು ಮತ್ತೆ ಅದರೆಡೆಗೆ ತಿರುಗಿ ನೋಡುವಂತಾಗಿದೆ. ರೈತರ ಆತ್ಮಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ದಶಕಗಳ ಹಿಂದೆ ಕೇರಳದಲ್ಲಿ ರಾಜ್ಯದಲ್ಲಿ ‘ಹಲಸಿನ ಆಂದೋಲನ’ ಎಂಬ ಪರಿಕಲ್ಪನೆಗೆ ನಾಂದಿ ಹಾಡಲಾಗಿತ್ತು. ಇದೀಗ ಕೇರಳದಲ್ಲಿ ಹಲಸಿನ ಹವಾ ಸೃಷ್ಟಿಯಾಗಿದೆ. ವಿದೇಶಗಳಿಗೂ ಹಲಸು, ಹಲಸಿನ ಉತ್ಪನ್ನಗಳ ರಫ್ತು ಮಾಡುವ ಬಗ್ಗೆ ಹೆಜ್ಜೆ ಇಡಲಾಗಿದೆ. ಹಲಸು ಬಗ್ಗೆ ಕೃಷಿಕರ ಪತ್ರಿಕೆ ಅಡಿಕೆ ಪತ್ರಿಕೆ ಹಾಗೂ ಪತ್ರಕರ್ತ ಶ್ರೀಪಡ್ರೆ ಹಲವು ವರ್ಷಗಳ ಹಿಂದೆಯೇ ನಾಂದಿ ಹಾಡಿದ್ದಾರೆ.


ಸಂಶೋಧನೆಯ ವಸ್ತು

ಹಲಸಿನ ವೈಜ್ಞಾನಿಕ ಹೆಸರು ಅರ್ಟೋಕಾರ್ಪಸ್‌ ಹೆಟೆರೋಫಿಲ್ಲಸ್‌. ಇದು ಮೊರಸಿಯೆ ಕುಟುಂಬಕ್ಕೆ, ಅರ್ಟೋ ಕಾರ್ಪಸ್‌ ಇಂಟೆಗ್ರಿಫೋಲಿಯ ವರ್ಗಕ್ಕೆ ಸೇರಿದೆ. ಮೂಲವಾಗಿ ಈ ಹಣ್ಣಿನಲ್ಲಿ ಎರಡು ವಿಧ. ನಮ್ಮ ಭಾಷೆಯಲ್ಲಿ ಹೇಳುವುದಾದರೆ ಬಕ್ಕೆ ಹಾಗೂ ಬೊಳುವ. ವಾದಾ, ಶ್ರೀವರ, ಸಿಂಧೂರ, ಕಳ್ಳಾಜೆ ರುದ್ರಾಕ್ಷಿ, ನಗರಚಂದ್ರ, ಸರಸ, ಪೆರ್ಡೂರು ಬಿಳಿ ಬಕ್ಕೆ, ತುಷಾರ, ಅನನ್ಯ, ಕುದ್ದುಪದವು ಮಧುರಾ, ರಾಜ ರುದ್ರಾಕ್ಷಿ, ಮುದ್ರಾಕ್ಷಿ, ನಿರಂತರ, ಅನಂತ, ನಂದನ, ಶ್ರಾವಣ, ಪ್ರಶಾಂತಿ ಮೊದಲಾಗಿ ಎಂಬತ್ತಕ್ಕೂ ಅಧಿಕ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಇನ್ನಷ್ಟು ಸಂಶೋಧನೆಗಳು ನಡೆಯುತ್ತಿವೆ. ಅಭಿವೃದ್ಧಿಪಡಿಸಿದವರ ಹೆಸರಿನಿಂದಲೇ ತಳಿಗಳನ್ನು ಗುರುತಿಸುತ್ತಿರುವುದು ವಿಶೇಷ.

ಲಕ್ಷ ಹಲಸಿನ ಗಿಡ ಮಾರಾಟ
ಕೇರಳದಲ್ಲಿ ಹಲಸು ಆಂದೋಲನ ಶುರುವಾದ ಬಳಿಕ ಹಲಸಿನ ಗಿಡಗಳಿಗೆ ಬೇಡಿಕೆ ಬಂದಿದೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ಮುಂತಾದ ರಾಜ್ಯಗಳಿಂದಲೂ ಹಲಸಿನ ಗಿಡಗಳಿಗೆ ಬೇಡಿಕೆ ಬಂದಿದೆ. ಹಲಸು ಗಿಡಗಳ ಕಸಿ ಹಾಗೂ ಮಾರಾಟದ ಕಾರಣಕ್ಕೆ ಕಡಬದ ಜಾಕ್‌ ಅನಿಲ್‌ ಹೆಸರುವಾಸಿ. ಅವರು ಪ್ರತಿ ವರ್ಷ ಕನಿಷ್ಠ 1.5 ಲಕ್ಷ ಕಸಿ ಹಲಸಿನ ಗಿಡ ಮಾರಾಟ ಮಾಡುತ್ತಿದ್ದಾರೆ.

ಕೃಷಿಕರಿಂದಲೇ ಪ್ರೇರಣೆ
ಬಂಟ್ವಾಳ ತಾಲೂಕಿನ ವಿಟ್ಲ, ಮಂಚಿ ಪ್ರದೇಶದಲ್ಲಿ ಹಲಸಿನ ಬಗ್ಗೆ ಕೃಷಿಕರೇ ಆಸಕ್ತರಾಗಿದ್ದಾರೆ. ವಿಟ್ಲದ ಮುಳಿಯದಲ್ಲಿ ಹಲಸು ಪ್ರೇಮಿಗಳ ಸಂಘವಿದೆ. ಉಬರು ಹಲಸು ಸ್ನೇಹಿ ಕೂಟ ಕೆಲವು ವರ್ಷಗಳಿಂದ ಕೃಷಿಕರನ್ನು ಹಲಸು ಗಿಡದತ್ತ ಪ್ರೇರೇಪಿಸುತ್ತಿದೆ. ಮುಳಿಯ ವೆಂಕಟಕೃಷ್ಣ ಅವರು ಹಲಸು ತೋಟವನ್ನೇ ಮಾಡಿದ್ದಾರೆ.

ಐಸ್‌ ಕ್ರೀಂಗೂ ಹಲಸು!
ಐಸ್‌ಕ್ರೀಂಗಳಲ್ಲೂ ಹಲಸಿನ ಸ್ವಾದ ಹೆಸರು ಮಾಡಿದೆ. ಶುಭ ಕಾರ್ಯಗಳಲ್ಲೂ ಇದರ ವಿತರಣೆ ಪ್ರತಿಷ್ಠೆಯ ವಿಚಾರವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿ ರಸ್ತೆ ಬದಿಯಲ್ಲೆಲ್ಲ ಹಲಸಿನ ಹಣ್ಣಿನ ವ್ಯಾಪಾರದ್ದೇ ಭರಾಟೆ. ಪೆರಿಯಶಾಂತಿಯಲ್ಲಿ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಹೋಗುವ ಭಕ್ತರಿಂದ ಹಲಸಿನ ಹಣ್ಣಿಗೆ ಹೆಚ್ಚು ಬೇಡಿಕೆ ಇರುತ್ತದೆ. ಹಲಸಿನ ಹಣ್ಣು, ಹಲಸಿನ ಕಾಯಿ ಮತ್ತು ಹಣ್ಣಿನ ಎಸಳುಗಳು ಪ್ಯಾಕೆಟ್‌ಗಳಾಗಿ ಲಭ್ಯ. ಸ್ಥಳೀಯವಾಗಿ ಮನೆಗಳಿಂದ ನಿರ್ದಿಷ್ಟ ಹಣ ನೀಡಿ ಹಲಸನ್ನು ಖರೀದಿಸಿ ಇವರು ವ್ಯಾಪಾರಕ್ಕೆ ತರುತ್ತಾರೆ. ನೆಲಕ್ಕೆ ಬೀಳದಂತೆ ಮರದಿಂದ ಎಚ್ಚರಿಕೆಯಿಂದ ಕೊಯ್ದು ಹಣ್ಣಾದ ಬಳಿಕ ಮಾರಾಟಕ್ಕೆ ತರಲಾಗುತ್ತದೆ.

ಹಲಸು ಮೇಳಗಳ ಸ್ಫೂರ್ತಿ
ಹಲಸು ಮೇಳ ಮೊದಲು ಮಾಡಿದ್ದು ಉರವು – 2007ರಲ್ಲಿ. ಕರ್ನಾಟಕದಲ್ಲಿ ಬೈಫ್ ಮತ್ತು ಕದಂಬ ಹಿಂದಿನ ವರ್ಷ ಮಾಡಿದ ಹಲಸು ಮೇಳಗಳು ಜನಪ್ರಿಯ ಆದವು. ಈ ವರ್ಷ ಶಿರಸಿ, ತೀರ್ಥಹಳ್ಳಿ, ನಿಟ್ಟೂರು, ಲಾಲ್‌ಭಾಗ್‌, ಬೆಂಗಳೂರು, ಮಂಗಳೂರು ಹಾಗೂ ಕೇರಳದಲ್ಲಿ ಹಲಸು ಮೇಳಗಳು ನಡೆದವು. ವಯನಾಡಿನ ಮೇಳದಲ್ಲಿ ಹಲಸನ್ನು ಮೆರವಣಿಗೆಯಲ್ಲಿ ವೇದಿಕೆಗೆ ತರಲಾಗಿತ್ತು.

100 ಎಕ್ರೆ ಹಲಸು ತೋಟ
ಕೇರಳದ ಕೊಟ್ಟಾಯಂ ಜಿಲ್ಲೆಯ ಮೀನಾಚಿಲ್‌ ಮತ್ತು ಕಹೀರಪ್ಪಲ್ಲಿ ಎಂಬ ತಾಲೂಕುಗಳಲ್ಲಿ ಮೂರು ವರ್ಷಗಳಿಂದ 100 ಎಕ್ರೆ ಪ್ರದೇಶಗಳಲ್ಲಿ ಪ್ರಧಾನ ಬೆಳೆಯಾಗಿ ಹಲಸನ್ನು ಬೆಳೆಯಲಾಗುತ್ತಿದೆ ಎಂದು ರೊನಿ ಮ್ಯಾಥ್ಯೂ ಹೇಳುತ್ತಾರೆ.

ಹೀಗೆ ಮಾಡಬಹುದು..
ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವನ ಮಹೋತ್ಸವ, ಇತರ ಇತರ ಸಮಾರಂಭ ಗಳಲ್ಲಿ ಹಲಸಿನ ಗಿಡಗಳನ್ನು ಕೊಟ್ಟರೆ ಹಲಸಿನ ಅಭಿವೃದ್ಧಿಗೆ ಉತ್ತೇಜನ ನೀಡಿದಂತಾ ಗುವುದು. ಇದಕ್ಕೆ ಪೂರಕವಾಗಿ ಮೇ 25ರಿಂದ 20 ದಿನಗಳ ಕಾಲ ಮಾವು ಹಲಸು ಮೇಳ ನಡೆದಿತ್ತು. ಇದರಲ್ಲಿ ಜಿಕೆವಿಕೆ, ಐ.ಐ.ಎಚ್‌.ಆರ್‌ ಸಂಶೋಧಿಸಿದ ಹಲಸಿನ ತಳಿಗಳು ಹಾಗೂ ರೈತರು ಬೆಳೆದ ನಾನಾ ತಳಿಗಳನ್ನು ಮಾರಾಟ ಮಾಡಲಾಗಿತ್ತು.

ಪುತ್ತೂರಿನಲ್ಲಿ ಜು. 8ರಂದು ಹಲಸಿನ ಹಬ್ಬ
ಪುತ್ತೂರಿನಲ್ಲಿ ಪ್ರಥಮ ಬಾರಿಗೆ ‘ಹಲಸಿನ ಹಬ್ಬ’ವು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ‘ನಟರಾಜ ವೇದಿಕೆ’ಯಲ್ಲಿ ಜು. 8 ರಂದು (ರವಿವಾರ) ಜರಗಲಿದೆ. ಪುತ್ತೂರಿನ ನವಚೇತನ ಸ್ನೇಹ ಸಂಗಮ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಅಡಿಕೆ ಪತ್ರಿಕೆ ಪುತ್ತೂರು – ಸಂಯುಕ್ತವಾಗಿ ಆಯೋಜಿಸಿದ್ದಾರೆ. ವಿವಿಧ ಹಲಸಿನ ತಳಿ/ಗಿಡಗಳ ಪ್ರದರ್ಶನ ಮತ್ತು ಮಾರಾಟ, ಹಲಸಿನ ಖಾದ್ಯ ವೈವಿಧ್ಯಗಳ ದರ್ಶನ, ಮೌಲ್ಯವರ್ಧಿತ ಉತ್ಪನ್ನಗಳ ಸಮ್ಮಿಲನ, ವಿಶೇಷ ತಳಿಗಳ ಶೋಧ, ಹಲಸಿನ ಹಣ್ಣು ತಿನ್ನುವ ಸ್ಪರ್ಧೆ, ಮನೆ ತಯಾರಿ ಹಲಸಿನ ಖಾದ್ಯಗಳ ಪ್ರದರ್ಶನ. ಮೊದಲಾದ ವೈಶಿಷ್ಟ್ಯವನ್ನು ಹಬ್ಬವು ಹೊಂದಿದೆ.

ಒಂದು ಕಾಲಘಟ್ಟದಲ್ಲಿ ಹಲಸು ಹೊಟ್ಟೆಯನ್ನು ತಂಪು ಮಾಡಿ ಬಡತನವನ್ನು ನೀಗಿದ ಫ‌ಲ. ಹತ್ತು ವರುಷಗಳಿಂದ ಕೇರಳ, ಕರ್ನಾಟದಲ್ಲಿ ಹಲಸಿನ ಆಂದೋಲನ ಫ‌ಲವಾಗಿ ಹಲವಾರು ಮೌಲ್ಯವರ್ಧಿತ ಉತ್ಪನ್ನ ಗಳು, ಹಲಸಿನ ತೋಟವನ್ನು ನಿರ್ಮಿಸುವ ಉತ್ಸಾಹಗಳು, ದೈನಂದಿನ ಅಡುಗೆಯಲ್ಲಿ ಹಲಸಿನ ಖಾದ್ಯಗಳು ಸೇರಿಕೊಂಡಿವೆ. ನೂರಾರು ಹಲಸಿನ ಹಬ್ಬಗಳು ಸಂಪನ್ನವಾಗಿವೆ. ಈ ಹಿನ್ನೆಲೆಯಲ್ಲಿ ಪುತ್ತೂರಿನಲ್ಲಿ ಮೊದಲ ಬಾರಿಗೆ ಹಲಸಿನ ಹಬ್ಬವನ್ನು ಆಯೋಜಿಸಲಾಗಿದೆ. ನವಚೇತನ ಸ್ನೇಹ ಸಂಗಮದ ಉತ್ಸುಕತೆಯಲ್ಲಿ ಪುತ್ತೂರಿನ ಅನನ್ಯ ಹಲಸು ಪ್ರಿಯ ಮನಸ್ಸುಗಳು ಹಬ್ಬಕ್ಕೆ ಕೈ ಜೋಡಿಸಲಿವೆ. ದೂರದೂರಿನ ಹಲಸು ಪ್ರೇಮಿಗಳು ಆಗಮಿಸಲಿದ್ದಾರೆ.

ಟಾಪ್ ನ್ಯೂಸ್

arrested

Renuka Swamy ಹತ್ಯೆ ಪ್ರಕರಣ; A-8 ಆರೋಪಿ ಪೊಲೀಸರಿಗೆ ಶರಣು

drowned

Srirangapatna: ಕಾವೇರಿಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರುಪಾಲು

1-ajit

Security; ಮೂರನೇ ಬಾರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್ ದೋವಲ್ ನೇಮಕ

3

Pradeep K Vijayan: ಮನೆಯಲ್ಲಿ ಶವವಾಗಿ ಪತ್ತೆಯಾದ ಖ್ಯಾತ ನಟ; ತನಿಖೆ ಆರಂಭ

ಗ್ಯಾರಂಟಿ ಯೋಜನೆ ಕೈಬಿಡುವಂತೆ ಕಾಂಗ್ರೆಸ್ ಪಕ್ಷದಲ್ಲೇ ಒತ್ತಡ ಹೆಚ್ಚುತ್ತಿದೆ: ಶೆಟ್ಟರ್

ಗ್ಯಾರಂಟಿ ಯೋಜನೆ ಕೈಬಿಡುವಂತೆ ಕಾಂಗ್ರೆಸ್ ಪಕ್ಷದಲ್ಲೇ ಒತ್ತಡ ಹೆಚ್ಚುತ್ತಿದೆ: ಶೆಟ್ಟರ್

‌Bollywood: ಮತ್ತೆ ಸೀಕ್ವೆಲ್‌ ನತ್ತ ಮುಖಮಾಡಿದ ಸನ್ನಿ ಡಿಯೋಲ್‌: ʼಬಾರ್ಡರ್‌ -2ʼ ಅನೌನ್ಸ್

‌Bollywood: ಮತ್ತೆ ಸೀಕ್ವೆಲ್‌ ನತ್ತ ಮುಖಮಾಡಿದ ಸನ್ನಿ ಡಿಯೋಲ್‌: ʼಬಾರ್ಡರ್‌ -2ʼ ಅನೌನ್ಸ್

Hubballi: ಅಮಾನವೀಯವಾಗಿ ವರ್ತಿಸಲು ಕಾನೂನಿನಲ್ಲಿ ಯಾರಿಗೂ ಅವಕಾಶವಿಲ್ಲ: ಬೊಮ್ಮಾಯಿ

Hubballi: ಅಮಾನವೀಯವಾಗಿ ವರ್ತಿಸಲು ಕಾನೂನಿನಲ್ಲಿ ಯಾರಿಗೂ ಅವಕಾಶವಿಲ್ಲ: ಬೊಮ್ಮಾಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

ಬಂಟ್ವಾಳ ಸರಕಾರಿ ಆಸ್ಪತ್ರೆ ಬಳಿಯಿಂದ ಬೈಕ್‌ ಕಳವು

8-ptr

Puttur: ವ್ಯಕ್ತಿಗೆ ಚೂರಿ ಇರಿತ

Kukke Shree Subrahmanya ದೇವರ ನಿತ್ಯೋತ್ಸವ ಸಮಾಪ್ತಿ

Kukke Shree Subrahmanya ದೇವರ ನಿತ್ಯೋತ್ಸವ ಸಮಾಪ್ತಿ

Sullia: ರಸ್ತೆ ದಾಟುತ್ತಿದ್ದ ಮಹಿಳೆಗೆ ಬಸ್‌ ಢಿಕ್ಕಿ

Sullia: ರಸ್ತೆ ದಾಟುತ್ತಿದ್ದ ಮಹಿಳೆಗೆ ಬಸ್‌ ಢಿಕ್ಕಿ

ರಿಕ್ಷಾ ಚಾಲಕನಿಂದ ಮಹಿಳೆಗೆ ಲೈಂಗಿಕ ಕಿರುಕುಳ: ಬೇಲೂರು ಮೂಲದ ಆರೋಪಿ ಬಂಧನ

ರಿಕ್ಷಾ ಚಾಲಕನಿಂದ ಮಹಿಳೆಗೆ ಲೈಂಗಿಕ ಕಿರುಕುಳ: ಬೇಲೂರು ಮೂಲದ ಆರೋಪಿ ಬಂಧನ

MUST WATCH

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

udayavani youtube

ಲಾಭದಾಯಕ ಮಲ್ಲಿಗೆ ಕೃಷಿ ಮಾಡುವುದು ಹೇಗೆ? | ಶಂಕರಪುರ ಮಲ್ಲಿಗೆ

udayavani youtube

ಪ್ಯಾಕೇಜ್ಡ್ ಫುಡ್ ಆರೋಗ್ಯಕರವಾದದ್ದೇ ? | ತಜ್ಞರು ಹೇಳುವುದೇನು?

udayavani youtube

ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಭಾಗಿ ; ಪೇಜಾವರ ಶ್ರೀಗಳ ನುಡಿಗಳು

ಹೊಸ ಸೇರ್ಪಡೆ

1-asdsadas

Government ಭೂಮಿ ಮಣ್ಣು ವ್ಯಾಪಾರಕ್ಕೆ ಅವಕಾಶವಿಲ್ಲ; ಬೇಳೂರು ಎಚ್ಚರಿಕೆ

4

ಬಂಟ್ವಾಳ ಸರಕಾರಿ ಆಸ್ಪತ್ರೆ ಬಳಿಯಿಂದ ಬೈಕ್‌ ಕಳವು

court

Illegal mining case; ಬಿಜೆಪಿ ಮುಖಂಡರಾದ ಶಶಿರಾಜ್ ಶೆಟ್ಟಿ, ಪ್ರಮೋದ್ ಗೆ ಜಾಮೀನು

arrested

Renuka Swamy ಹತ್ಯೆ ಪ್ರಕರಣ; A-8 ಆರೋಪಿ ಪೊಲೀಸರಿಗೆ ಶರಣು

ಹುಬ್ಬಳ್ಳಿ: ತಾಪಮಾನ ಹೆಚ್ಚಳ ತಡೆಗೆ ಗಿಡ ನೆಡುವುದೇ ಪರಿಹಾರ

ಹುಬ್ಬಳ್ಳಿ: ತಾಪಮಾನ ಹೆಚ್ಚಳ ತಡೆಗೆ ಗಿಡ ನೆಡುವುದೇ ಪರಿಹಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.