ಹದಿನೈದೇ ದಿನದಲ್ಲಿ ಕನ್ನಡ ಕಲಿತ ಜಪಾನಿಗ !


Team Udayavani, Aug 5, 2018, 9:23 AM IST

kazuki.jpg

ಮಂಗಳೂರು: ಕನ್ನಡ ನಾಡಿನಲ್ಲಿದ್ದೂ ಆಂಗ್ಲ ಭಾಷಾ ವ್ಯಾಮೋಹಿ ಗಳಾಗಿರುವವರೇ ಹಲವರು. ಅಂಥದ್ದರಲ್ಲಿ ಜಪಾನ್‌ ಪ್ರಜೆಯೊಬ್ಬ ರೇಷ್ಮೆ ಬೆಳೆ ಅಧ್ಯಯನಕ್ಕಾಗಿ ಕರ್ನಾಟಕಕ್ಕೆ ಬಂದು ಹದಿನೈದೇ ದಿನದಲ್ಲಿ ಕನ್ನಡ ಕಲಿತಿದ್ದಾರೆ! ಸ್ಪಷ್ಟ ಕನ್ನಡ ಕಲಿತು ರಾಮನಗರದ ರೇಷ್ಮೆ ಬೆಳೆಗಾರರೊಂದಿಗೆ ವ್ಯವಹರಿಸುವ ಇಚ್ಛೆ ಈ ಯುವಕನದ್ದು. ಈತನಿಗೆ ಕನ್ನಡ ಕಲಿಸಿದವರು 
ಮಂಗಳೂರಿನ ಯುವಕ, ಪ್ರಸ್ತುತ ಹೊಸದಿಲ್ಲಿಯ ಡೆಲ್ಲಿ ಕನ್ನಡ ಸೀನಿಯರ್‌ ಸೆಕೆಂಡರಿ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿರುವ ಅರವಿಂದ ಬಿಜೈ.

22 ವರ್ಷದ ಕಝುಕಿ ಜಪಾನ್‌ನ ಚಿಬಾ ಮೂಲದವರು. ಜಪಾನ್‌ನ ಝೈಕಾ ಕಂಪೆನಿಯ ಮುಖಾಂತರ ರೇಷ್ಮೆ ಕುರಿತು ಅಧ್ಯಯನಕ್ಕಾಗಿ ಕರ್ನಾಟಕಕ್ಕೆ ಆಗಮಿಸಿದ್ದಾರೆ.ಹೊಸದಿಲ್ಲಿಗೆ ಬಂದ ಕಝುಕಿ, ಅಲ್ಲಿನ ಝುಬಾನ್‌ ಭಾಷಾ ಕಲಿಕಾ ಸಂಸ್ಥೆಯಲ್ಲಿ  ಕನ್ನಡ ಕಲಿಕೆಯ ಇಚ್ಛೆ  ವ್ಯಕ್ತಪಡಿಸಿದ್ದಾರೆ. ಅದರಂತೆ ಸಂಸ್ಥೆಯವರು ಅರವಿಂದ ಅವರನ್ನು ಸಂಪರ್ಕಿಸಿ   ಕನ್ನಡ ಪಾಠಕ್ಕೆ ಮನವಿ ಮಾಡಿದ್ದರು. ದಿನಕ್ಕೆ 4 ಗಂಟೆಯಂತೆ 15 ದಿನಗಳ ಕಾಲ ಅರವಿಂದ ಕನ್ನಡ ಹೇಳಿಕೊಟ್ಟಿದ್ದಾರೆ. ಕಝಕಿ ಕಲಿಕಾಸಕ್ತಿ ಎಷ್ಟಿತ್ತೆಂದರೆ ಮೊದಲ ದಿನವೇ ಕನ್ನಡ ವರ್ಣಮಾಲೆಯ “ಅ’ ದಿಂದ “ಳ’ ವರೆಗೆ ಬರೆದು ತೋರಿಸಿದ್ದರಂತೆ! 

ಕನ್ನಡದಲ್ಲಿ  ಟೈಪಿಂಗ್‌
ಕಝುಕಿ ಸದ್ಯ ಕನ್ನಡ ಕೀಲಿಮಣೆಯನ್ನೂ ಕಲಿತಿದ್ದು, ಮಾರ್ಗದರ್ಶಕ ಅರವಿಂದ್‌ ಜತೆ ಮೊಬೈಲ್‌ ಮೂಲಕ ಕನ್ನಡದಲ್ಲೇ ಸಂದೇಶ ಸಂವಹನ ನಡೆಸುತ್ತಾರೆ. ಹೊಸದಿಲ್ಲಿಯ ಝುಬಾನ್‌ ಭಾಷಾ ಕಲಿಕಾ ಸಂಸ್ಥೆಯಲ್ಲಿ ಕನ್ನಡ ಕಲಿಸಿ ಎಂದು ಕೇಳಿದ ಮೊದಲ ವಿದೇಶಿಗ ಬಹುಶಃ ಕಝುಕಿ ಎಂದು ಸಂಸ್ಥೆಯವರೇ ಹೇಳುತ್ತಾರೆ. ಈ ಸಂಸ್ಥೆಯಲ್ಲಿ ಹೊರ ರಾಜ್ಯ ಅಥವಾ ವಿದೇಶಗಳಿಂದ ಆಗಮಿಸಿದವರಿಗೆ ಭಾಷೆ ಕಲಿಸಲಾಗುತ್ತದೆ. ಉರ್ದು, ಹಿಂದಿ, ಇಂಗ್ಲಿಷ್‌ ಸೇರಿದಂತೆ ವಿವಿಧ ಭಾಷೆಗಳನ್ನು ಇಲ್ಲಿ ಕಲಿಸಲಾಗುತ್ತದೆ. ಕನ್ನಡಕ್ಕೆ ಸಂಪನ್ಮೂಲ ವ್ಯಕ್ತಿಗಳಿಲ್ಲದ ಕಾರಣ ಅರವಿಂದ ಅವರ ಮೂಲಕ ಕಲಿಸಲಾಗಿದೆ.

ವಚನ ತಪ್ಪಿಲ್ಲದೆ ಓದುತ್ತಾರೆ
ಬಸವಣ್ಣನವರ “ಕಳಬೇಡ, ಕೊಲಬೇಡ… ಹುಸಿಯ ನುಡಿಯಲು ಬೇಡ..’ ವಚನವನ್ನು ಕಝುಕಿ ನಿರರ್ಗಳವಾಗಿ ಓದುತ್ತಾರೆ. ಇದನ್ನು ಅರವಿಂದ ತನ್ನಫೇಸುºಕ್‌ ಖಾತೆಯಲ್ಲಿ ವೀಡಿಯೋ ಸಮೇತ ಅಪ್‌ಲೋಡ್‌ ಮಾಡಿದ್ದಾರೆ. ಓದು ಮತ್ತು ಬರಹ ಶೀಘ್ರ
ಕಲಿತಿರುವ ಕಝುಕಿ ಮಾತನಾಡುವಾಗ ಸ್ವಲ್ಪ ತಡವರಿಸು ತ್ತಾರೆ. ಏನೇ ಕೇಳಿದರೂ ಯೋಚನೆ ಮಾಡಿ ಕನ್ನಡದಲ್ಲಿ ಉತ್ತರಿಸುತ್ತಾರೆ. 

ಕನ್ನಡದಲ್ಲೇ ವ್ಯವಹರಿಸುವ ಇಚ್ಛೆ
ರೇಷ್ಮೆ ಕುರಿತು ಅಧ್ಯಯನಕ್ಕಾಗಿ ಕರ್ನಾಟಕಕ್ಕೆ ಬಂದಿದ್ದೇನೆ. ಇಲ್ಲಿನ ವ್ಯಾವಹಾರಿಕ ಭಾಷೆ ಕನ್ನಡವಾದ್ದರಿಂದ ಅದೇ ಭಾಷೆಯಲ್ಲಿ ಜನರೊಂದಿಗೆ ಬೆರೆಯುವ ಇಚ್ಛೆ ನನ್ನದು. ಮುಂದೆ ರಾಮನಗರದ ರೇಷ್ಮೆ ಬೆಳೆಗಾರರೊಂದಿಗೆ ಕನ್ನಡದಲ್ಲೇ ವ್ಯವಹರಿಸಿ ಸಮಗ್ರ ಅಧ್ಯಯನ ನಡೆಸಬೇಕೆಂಬುದೇ ಆಸೆ. 
 – ಕಝುಕಿ, ಕನ್ನಡ ಕಲಿತ ಜಪಾನಿಗ

*ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

1-dsad

Odisha ಭೀಕರ ರೈಲು ಅವಘಡ; ಕನಿಷ್ಠ 50 ಮೃತ್ಯು, 350ಕ್ಕೂ ಹೆಚ್ಚು ಮಂದಿಗೆ ಗಾಯ

HDK

ಸಿದ್ದರಾಮಯ್ಯ ಯುವಕರ ಹಣೆಗೆ ತುಪ್ಪ ಸವರಿದ್ದಾರೆ: ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ

1-dsasa

WFI ಬ್ರಿಜ್ ಭೂಷಣ್ ಬಂಧಿಸಲು ಗಡುವು ವಿಧಿಸಿದ ಖಾಪ್ ಮಹಾಪಂಚಾಯತ್

imran-khan

Pakistan ಇಮ್ರಾನ್ ಖಾನ್‌ಗೆ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದಿಂದ ಜಾಮೀನು

1-SADSAASD

Nithin Gopi: 39 ರ ಹರೆಯದಲ್ಲೇ ನಟ ನಿತಿನ್​ ಗೋಪಿ ವಿಧಿವಶ

1-sdasdasd

Congress Guarantee ನನ್ನ ಹೆಂಡತಿಗೂ ಸಿಗುತ್ತೆ ರೀ; ಸಿದ್ದರಾಮಯ್ಯ ಹಾಸ್ಯ ಚಟಾಕಿ

1-sadasd

Congress Guarantee ”ಅಕ್ಕಿ ನಿಮ್ದು, ಚೀಲ ನಮ್ದು”: ಬಿಜೆಪಿ ತಿರುಗೇಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sddasd

SNM ಪಾಲಿಟೆಕ್ನಿಕ್ NSS ನವರಿಂದ ಬಡವರ ಮನೆಗಳಿಗೆ ಕಾಯಕಲ್ಪ

nalin kumar kateel

ಗ್ಯಾರಂಟಿ ಯೋಜನೆಗೆ ಹಣದ ಕ್ರೋಢೀಕರಣದ ಬಗ್ಗೆ ಶ್ವೇತಪತ್ರ ಹೊರಡಿಸಲಿ: ನಳಿನ್ ಕಟೀಲ್

2-mangaluru

Mangaluru: ಮೂಡ ಕಚೇರಿ ಸಿಬ್ಬಂದಿ ಸ್ಟೋರ್ ರೂಮ್ ನಲ್ಲೇ ಆತ್ಮಹತ್ಯೆ

ಕಡಲಿಗಿಳಿಯುವ ನಾಡದೋಣಿಗಳಿಗೆ ಇನ್ನೆರಡು ತಿಂಗಳು ಸುಗ್ಗಿ!

ಕಡಲಿಗಿಳಿಯುವ ನಾಡದೋಣಿಗಳಿಗೆ ಇನ್ನೆರಡು ತಿಂಗಳು ಸುಗ್ಗಿ!

Someshwara Beach ನೈತಿಕ ಪೊಲೀಸ್ ಗಿರಿ ಪ್ರಕರಣ: ಐವರು ಪೊಲೀಸ್ ವಶಕ್ಕೆ

Someshwara Beach ನೈತಿಕ ಪೊಲೀಸ್ ಗಿರಿ ಪ್ರಕರಣ: ಐವರು ಪೊಲೀಸ್ ವಶಕ್ಕೆ

MUST WATCH

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

ಹೊಸ ಸೇರ್ಪಡೆ

12-sadsad

Davanagere ವೃದ್ಧರೊಬ್ಬನ್ನು ಅಪಹರಿಸಿ ಭಾರಿ ಹಣಕ್ಕೆ ಬೇಡಿಕೆ; ಐವರ ಬಂಧನ

1-sddasd

SNM ಪಾಲಿಟೆಕ್ನಿಕ್ NSS ನವರಿಂದ ಬಡವರ ಮನೆಗಳಿಗೆ ಕಾಯಕಲ್ಪ

1-wewqewq

Amazon ಫ್ಯಾಷನ್‌ನಿಂದ ವಾರ್ಡ್‌ರೋಬ್‌ ರಿಫ್ರೆಶ್‌ ಸೇಲ್‌ ಆರಂಭ

1-dsad

Odisha ಭೀಕರ ರೈಲು ಅವಘಡ; ಕನಿಷ್ಠ 50 ಮೃತ್ಯು, 350ಕ್ಕೂ ಹೆಚ್ಚು ಮಂದಿಗೆ ಗಾಯ

1-qwwqeqwe

Mahalingpur ಗಾಳಿ ಮಳೆಗೆ ವ್ಯಾಪಕ ನಷ್ಟ; ಹಲವು ಮನೆಗಳಿಗೆ ಹಾನಿ, ಪರದಾಟ