Udayavni Special

ಕ್ಷೇತ್ರದ ಅಭಿವೃದ್ಧಿ ನನ್ನ ಮುಖ್ಯಗುರಿ: ಡಾ| ಭರತ್‌ ಶೆಟ್ಟಿ

Team Udayavani, Oct 25, 2020, 1:24 PM IST

mng-tdy-2

ಕೈಕಂಬ, ಅ. 24: ಜನರ ಆಕಾಂಕ್ಷೆಗಳನ್ನು ಸಾಕಾರ ಗೊಳಿಸುವುದು ಶಾಸಕನಾಗಿ ನನ್ನ ಕರ್ತವ್ಯವಾಗಿದೆ. ಅವರ ನೋವುಗಳಿಗೆ ಸ್ಪಂದಿಸಿ, ಕ್ಷೇತ್ರವನ್ನು ಅಭಿವೃದ್ಧಿ ಗೊಳಿಸುವುದೇ ನನ್ನ ಮುಖ್ಯಗುರಿ. ಅಭಿವೃದ್ಧಿಗೆ ಜನ, ಕಾರ್ಯಕರ್ತರು, ಸರಕಾರ ಸಹಕರಿಸಿದ್ದಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಶಾಸಕ ಡಾ| ಭರತ್‌ ಶೆಟ್ಟಿ ವೈ. ಹೇಳಿದರು.

ಶನಿವಾರ ಎಡಪದವು ಗ್ರಾ.ಪಂ. ವ್ಯಾಪ್ತಿಯಲ್ಲಿ 2.62 ಕೋಟಿ ರೂ. ಅನುದಾನದಲ್ಲಿ ಎಡಪದವು ಕುಪ್ಪೆಪದವು- ಮುತ್ತೂರು ಮೂಲಕ ಬಂಟ್ವಾಳ ತಾಲೂಕು ಸಂಪರ್ಕಿಸುವ ರಾಜ್ಯ ಹೆದ್ದಾರಿಯ 4ನೇ ಹಂತದ ಅಭಿವೃದ್ಧಿ, ಎಡಪದವು ಪೇಟೆಯ ಎರಡು ರಿಕ್ಷಾ ನಿಲ್ದಾಣಗಳಿಗೆ ಛಾವಣಿ, ಇಂಟರ್‌ಲಾಕ್‌ ಅಳವಡಿಕೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿಗಳ ಸಹಕಾರ, ಸ್ಪಂದನೆಯಿಂದ ವಿಶೇಷ ಅನುದಾನದಲ್ಲಿ ಈ ಕಾಮಗಾರಿಗಳು ನಡೆಯುತ್ತಿವೆ. ಮಳೆ ಹಾನಿಯ ಬಗ್ಗೆ 25 ಕೋ.ರೂ. ಅನುದಾನ ಕೇಳಿದ್ದೇನೆ. ಒತ್ತಡ ಇದ್ದರೂ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಎಡಪದವಿ ನಲ್ಲಿ ಮೆಡಿಕಲ್‌ ಕಾಲೇಜು ಸ್ಥಾಪಿಸುವ ಉದ್ದೇಶವಿದ್ದು ಅದರ ಪ್ರಕ್ರಿಯೆ ಪ್ರಥಮ ಹಂತದಲ್ಲಿದೆ ಎಂದರು.

ಈ ಸಂದರ್ಭ ಕುಪ್ಪೆಪದವಿನ ಪಡೀಲ್‌ಪದವಿನ ಎರಡು ಪರಿಶಿಷ್ಟ ಪಂಗಡದ ಲೀಲಾ ಹಾಗೂ ಗಿರಿಜಾ ಅವರ ಮನೆಯ ವಿದ್ಯುದೀಕರಣಕ್ಕೆ ಶಾಸಕರು ಚಾಲನೆ ನೀಡಿದರು. ರಸ್ತೆ ಅಪಘಾತದಲ್ಲಿ ಕಾಲಿಗೆ ಬಲವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಎಡಪದವಿನ ರಮೇಶ್‌ ಪೂಜಾರಿ ಪಾಡ್ಯಾರ್‌ ಅವರ ಮನೆಗೆ ಶಾಸಕರು ತೆರಳಿ, ವೈಯಕ್ತಿಕವಾಗಿ 10 ಸಾವಿರ ರೂ. ಸಹಾಯಧನ ನೀಡಿದರು.

ಕುಪ್ಪೆಪದವಿನ ಶ್ರೀ ದುರ್ಗೇಶ್ವರೀ ದೇವಿ ದೇಗುಲ, ಮುಚ್ಚಾರು ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಭೇಟಿ ನೀಡಿದರು. ಜಿ.ಪಂ. ಸದಸ್ಯ ಜನಾರ್ದನ ಗೌಡ, ತಾ.ಪಂ. ಸದಸ್ಯ ನಾಗೇಶ್‌ ಶೆಟ್ಟಿ,ಎಡಪದವು ಗ್ರಾ.ಪಂ. ನಿ.ಪೂ. ಅಧ್ಯಕ್ಷೆ ಮಾಲತಿ, ಲೋಕೋಪಯೋಗಿ ಎಂಜಿನಿಯರ್‌ ಸಂಜೀವ ಕುಮಾರ್‌ ಜಿ.ಕೆ., ರುಕ್ಮಯ ನಾಯ್ಕ, ಗಣೇಶ್‌ ಪಾಕಜೆ, ಸತೀಶ್‌ ಬಳ್ಳಾಜೆ, ಹರೀಶ್‌ ಮಿಜಾರ್‌, ಅಶೋಕ್‌ ನಾಯ್ಕ, ಜಗದೀಶ್‌ ಪಾಕಜೆ, ಆನಂದ ದೇವಾಡಿಗ, ರಾಮಚಂದ್ರ, ಸುಕುಮಾರ್‌ ದೇವಾಡಿಗ, ಜಯಂತ್‌ ಪೂಜಾರಿ ಉಪಸ್ಥಿತರಿ ದ್ದರು. ಗಂಗಾಧರ ಪೂಜಾರಿ ಸ್ವಾಗತಿಸಿ, ಕುಶಲ್‌ ಕುಮಾರ್‌ ನಿರೂಪಿಸಿದರು. ಪ್ರಸಾದ್‌ ಕುಮಾರ್‌ ವಂದಿಸಿದರು.

ಮೂಲರಪಟ್ಣ ಸೇತುವೆಗೆ ಟೆಂಡರ್‌  :  ಮಂಗಳೂರು ನಗರ ಉತ್ತರ, ಬಂಟ್ವಾಳ ವಿಧಾನಸಭೆ ಕ್ಷೇತ್ರವನ್ನು ಸಂಪರ್ಕಿಸುವ ಮೂಲರಪಟ್ಣ ಸೇತುವೆ ನಿರ್ಮಾಣಕ್ಕೆ ಟೆಂಡರ್‌ ಪ್ರಕ್ರಿಯೆ ಈಗಾಗಲೇ ಆಗಿದೆ. ಈ ರಸ್ತೆ ಅಭಿವೃದ್ಧಿಯ ಅಂಗವಾಗಿ ಎಡಪದವು- ಕುಪ್ಪೆಪದವು- ಮುತ್ತೂರು ತನಕ 7.40 ಕಿ.ಮೀ. ಡಾಮರು ಕಾಮಗಾರಿ ನಡೆಯಲಿದೆ. 5.50 ಮೀಟರ್‌ ಇದ್ದ ರಸ್ತೆಯ 7 ಮೀಟರ್‌ ತನಕ ವಿಸ್ತರಣೆ ಗೊಳ್ಳಲಿದೆ ಎಂದು ಶಾಸಕ ಡಾ| ಭರತ್‌ ಶೆಟ್ಟಿ ಹೇಳಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

“ಅಮಾನತಿಗೊಳಗಾದ ಅಧಿಕಾರಿಯನ್ನು ಅದೇ ಹುದ್ದೆಯಲ್ಲಿ ಮುಂದುವರಿಸುವಂತಿಲ್ಲ’

“ಅಮಾನತಿಗೊಳಗಾದ ಅಧಿಕಾರಿಯನ್ನು ಅದೇ ಹುದ್ದೆಯಲ್ಲಿ ಮುಂದುವರಿಸುವಂತಿಲ್ಲ’

ಖಾಸಗಿ ಶಾಲೆಗಳ ಖಜಾನೆ ತುಂಬಬೇಕೆಂದರೆ ಆಗದು: ಎಚ್‌. ವಿಶ್ವನಾಥ್‌

ಖಾಸಗಿ ಶಾಲೆಗಳ ಖಜಾನೆ ತುಂಬಬೇಕೆಂದರೆ ಆಗದು: ಎಚ್‌. ವಿಶ್ವನಾಥ್‌

ಮತ್ತೆ ಟೆನಿಸ್‌ ಆಡುವ ಬಗ್ಗೆ ಅನುಮಾನವಿತ್ತು: ಸಾನಿಯಾ ಮಿರ್ಜಾ

ಮತ್ತೆ ಟೆನಿಸ್‌ ಆಡುವ ಬಗ್ಗೆ ಅನುಮಾನವಿತ್ತು: ಸಾನಿಯಾ ಮಿರ್ಜಾ

0000

ಕಣ್ಣಿಲ್ಲದವನಲ್ಲಿ ಸಾಧಿಸುವ ಕನಸಿತ್ತು : ಕೋಟಿ ಕೋಟಿ ಲಾಭ ಗಳಿಸುವ ಸಂಸ್ಥೆಯ ಸಿಇಓ ಶ್ರೀಕಾಂತ್

“ದೆಹಲಿ ಚಲೋ’ ವೇಳೆ ರೈತರು-ಪೊಲೀಸರ ನಡುವೆ ಘರ್ಷಣೆ; ಹರ್ಯಾಣದಲ್ಲಿ ಹೈಡ್ರಾಮಾ

“ದೆಹಲಿ ಚಲೋ’ ವೇಳೆ ರೈತರು-ಪೊಲೀಸರ ನಡುವೆ ಘರ್ಷಣೆ; ಹರ್ಯಾಣದಲ್ಲಿ ಹೈಡ್ರಾಮಾ

mamata-banerjee

ಬಿಜೆಪಿ ಹೊರಗಿನವರ ಪಕ್ಷ; ಬಿಜೆಪಿಯನ್ನು ಬಂಗಾಳದಲ್ಲಿ ಬೇರೂರಲು ಬಿಡುವುದಿಲ್ಲ ಮಮತಾ ಬ್ಯಾನರ್ಜಿ

ರೌಡಿಶೀಟರ್ ಸುಮಂತ್ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು

ರೌಡಿಶೀಟರ್ ಸುಮಂತ್ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

barke police station

ಮಂಗಳೂರು: ಬೊಕ್ಕ ಪಟ್ನ ಬೋಟ್ ಯಾರ್ಡ್ ಬಳಿ ರೌಡಿ ಶೀಟರ್ ಬರ್ಬರ ಹತ್ಯೆ

ಆದೇಶಕ್ಕೆ 16 ವರ್ಷ: ಇನ್ನೂ ಆಗದ ಅಧಿಸೂಚನೆ

ಆದೇಶಕ್ಕೆ 16 ವರ್ಷ: ಇನ್ನೂ ಆಗದ ಅಧಿಸೂಚನೆ

ಕೆಎಸ್ಸಾರ್ಟಿಸಿ ಹಳೆ ಬಸ್‌ ಇನ್ನು ಸಂಚಾರಿ ಗ್ರಂಥಾಲಯ

ಕೆಎಸ್ಸಾರ್ಟಿಸಿ ಹಳೆ ಬಸ್‌ ಇನ್ನು ಸಂಚಾರಿ ಗ್ರಂಥಾಲಯ

ಅಶ್ಲೀಲ ಚಿತ್ರ ಸಂಗ್ರಹಿಸಿ ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ ಬೆದರಿಕೆ ಕರೆ: ಇಬ್ಬರ ಬಂಧನ

ಅಶ್ಲೀಲ ಚಿತ್ರ ಸಂಗ್ರಹಿಸಿ ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ ಬೆದರಿಕೆ ಕರೆ: ಇಬ್ಬರ ಬಂಧನ

ಕಡಂದಲೆ ನದಿಯಲ್ಲಿ ಮುಳುಗಿ ನಾಲ್ವರು ಸಾವು ಪ್ರಕರಣ: ಇಂದು ಇಬ್ಬರ ಶವ ಪತ್ತೆ

ಕಡಂದಲೆ ನದಿಯಲ್ಲಿ ಮುಳುಗಿ ನಾಲ್ವರು ಸಾವು ಪ್ರಕರಣ: ಇಂದು ಇಬ್ಬರ ಶವ ಪತ್ತೆ

MUST WATCH

udayavani youtube

ಮಂಗಳೂರು ವಿಮಾನನಿಲ್ದಾಣಕ್ಕೆ ಮಧ್ವಶಂಕರ ಹೆಸರು: ಪುತ್ತಿಗೆ ಶ್ರೀ ಒಲವು

udayavani youtube

ಶತಮಾನಗಳಿಂದಲೂ ನಡೆಯುತ್ತಿರುವ ತುಳುವರ ಭೂಮಿಪೂಜೆ ಗದ್ದೆಕೋರಿ ಈಗಲೂ ಇಲ್ಲಿ ಜೀವಂತ

udayavani youtube

ಮಂಗಳೂರು: ಉಪ್ಪುನೀರು ತಡೆ ಅಣೆಕಟ್ಟು ಕಾಮಗಾರಿ ವೀಕ್ಷಿಸಿದ ಸಚಿವ ಮಾಧುಸ್ವಾಮಿ

udayavani youtube

ಕರಾವಳಿಯಲ್ಲೂ ಪರಿಚಯವಾಯಿತು ಜಪಾನಿನ ಕೊಕೆಡಾಮ ಕಲೆ

udayavani youtube

ಕೊರೊನಾ ಪರಿಣಾಮ ಅಧ್ಯಯನಕ್ಕಾಗಿ ರೋಡ್ ಆಶ್ರಮ್ ಅಭಿಯಾನ

ಹೊಸ ಸೇರ್ಪಡೆ

ಬಳ್ಳಾರಿ ಬುಡಾ ಆಯುಕ್ತ ವರ್ಗಾವಣೆ: ನೂತನ ಆಯುಕ್ತರಾಗಿ ವೀರೇಂದ್ರ ನಿಯೋಜನೆ

ಬಳ್ಳಾರಿ: ಬುಡಾ ಆಯುಕ್ತ ವರ್ಗಾವಣೆ: ನೂತನ ಆಯುಕ್ತರಾಗಿ ವೀರೇಂದ್ರ ನಿಯೋಜನೆ

“ಅಮಾನತಿಗೊಳಗಾದ ಅಧಿಕಾರಿಯನ್ನು ಅದೇ ಹುದ್ದೆಯಲ್ಲಿ ಮುಂದುವರಿಸುವಂತಿಲ್ಲ’

“ಅಮಾನತಿಗೊಳಗಾದ ಅಧಿಕಾರಿಯನ್ನು ಅದೇ ಹುದ್ದೆಯಲ್ಲಿ ಮುಂದುವರಿಸುವಂತಿಲ್ಲ’

ಖಾಸಗಿ ಶಾಲೆಗಳ ಖಜಾನೆ ತುಂಬಬೇಕೆಂದರೆ ಆಗದು: ಎಚ್‌. ವಿಶ್ವನಾಥ್‌

ಖಾಸಗಿ ಶಾಲೆಗಳ ಖಜಾನೆ ತುಂಬಬೇಕೆಂದರೆ ಆಗದು: ಎಚ್‌. ವಿಶ್ವನಾಥ್‌

ಮತ್ತೆ ಟೆನಿಸ್‌ ಆಡುವ ಬಗ್ಗೆ ಅನುಮಾನವಿತ್ತು: ಸಾನಿಯಾ ಮಿರ್ಜಾ

ಮತ್ತೆ ಟೆನಿಸ್‌ ಆಡುವ ಬಗ್ಗೆ ಅನುಮಾನವಿತ್ತು: ಸಾನಿಯಾ ಮಿರ್ಜಾ

ಹಕ್ಕಿಫಿಕ್ಕಿ ಸಮುದಾಯದ ಪಾರಂಪಾರಿಕ ಗಿಡಮೂಲಿಕೆ ಅಂತರಾಷ್ಟ್ರೀಯ ಮಾರೂಕಟ್ಟೆ ಒದಗಿಸಲು ಕ್ರಮ

ಹಕ್ಕಿಫಿಕ್ಕಿ ಸಮುದಾಯದ ಗಿಡಮೂಲಿಕೆ ಔಷಧಿಗೆ ಅಂತರಾಷ್ಟ್ರೀಯ ಮಾರೂಕಟ್ಟೆ: ಶ್ರೀರಾಮುಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.