ಸುಳ್ಯ, ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ; ಕೃಷಿ ಭೂಮಿ, ತೋಟಗಳಿಗೆ ನುಗ್ಗಿದ ಮಳೆ ನೀರು


Team Udayavani, Jun 18, 2022, 11:41 PM IST

ಸುಳ್ಯ, ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ; ಕೃಷಿ ಭೂಮಿ, ತೋಟಗಳಿಗೆ ನುಗ್ಗಿದ ಮಳೆ ನೀರು

ಮಂಗಳೂರು/ ಉಡುಪಿ/ ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಕಡೆಗಳಲ್ಲಿ ಬಿರುಸಿನ ಮಳೆ ಕ್ಷೀಣಿಸಿದ್ದರೂ, ಸುಳ್ಯ, ಸುಬ್ರಹ್ಮಣ್ಯ ಭಾಗದಲ್ಲಿ ಜೋರು ಮಳೆಯಾಗಿದೆ. ಇತರೆಡೆ ಸಾಧಾರಣ ಮಳೆಯಾಗಿದೆ. ಉಳಿದಂತೆ ಬಿಸಿಲು ಮತ್ತು ಮೋಡಿದಿಂದ ಕೂಡಿದ ವಾತಾವರಣ ಇತ್ತು. ಸೆಕೆಯ ತೀವ್ರತೆ ಹೆಚ್ಚಿತ್ತು. ಶನಿವಾರ ಬೆಳಗ್ಗಿನ ಜಾವ ಮಳೆಯಾಗಿತ್ತು.

ಮುಂದಿನ 3 ದಿನಗಳ ಕಾಲ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಜೂ.19ರಿಂದ 22ರವರೆಗೆ ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಈ ವೇಳೆ ಗುಡುಗು, ಗಾಳಿ ಸಹಿತ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಮಾಹಿತಿಯಂತೆ ಶನಿವಾರದಂದು ಮಂಗಳೂರಿನಲ್ಲಿ 30.2 ಡಿ.ಸೆ. ಗರಿಷ್ಠ ಮತ್ತು 24.2 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು.

ಕೃಷಿ ಭೂಮಿ, ತೋಟಗಳಿಗೆ
ನುಗ್ಗಿದ ಮಳೆ ನೀರು
ಸುಳ್ಯ, ಸುಬ್ರಹ್ಮಣ್ಯ ಪರಿಸರದಲ್ಲಿ ಶನಿವಾರ ಸಂಜೆ ವೇಳೆ ಭಾರೀ ಮಳೆಯಾಗಿದ್ದು, ಅಸಮರ್ಪಕ ಚರಂಡಿಯಿಂದಾಗಿ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿರುವ ಪರಿಣಾಮ ವಾಹನ ಸವಾರರು ಸಂಕಷ್ಟ ಅನುಭವಿಸಿದ್ದಾರೆ. ಶುಕ್ರವಾರ ರಾತ್ರಿಯೂ ಬಾರೀ ಮಳೆಯಾಗಿದೆ. ಶನಿವಾರ ಸಂಜೆ ವೇಳೆ ಆರಂಭಗೊಂಡ ಮಳೆ ಸುಮಾರು ಮೂರು ಗಂಟೆಗಳ ಕಾಲ ಸುರಿದಿದೆ. ಸತತವಾಗಿ ಸುರಿದ ಬಾರೀ ಮಳೆಗೆ ಹಳ್ಳ, ತೋಡುಗಳು ತುಂಬಿ ಹರಿದಿದ್ದು, ತೋಡಿನ ಬದಿಯ ಕೃಷಿ ಭೂಮಿ, ತೋಟಗಳಿಗೆ ನೀರು ನುಗ್ಗಿದೆ.

ರಾಜ್ಯ ಹೆದ್ದಾರಿಯಲ್ಲೇ ಮಳೆ ನೀರು ಹರಿದಿತ್ತು. ಸುಳ್ಯ-ಬೆಳ್ಳಾರೆ, ಬೆಳ್ಳಾರೆ- ನಿಂತಿಕಲ್ಲು- ಪಂಜ, ಪಂಜ-ಕಡಬ ರಾಜ್ಯ ಹೆದ್ದಾರಿ ಸೇರಿದಂತೆ ಹಲವೆಡೆ ರಾಜ್ಯ ಹೆದ್ದಾರಿಯಲ್ಲಿ ಸಹಿತ ಗ್ರಾಮೀಣ ರಸ್ತೆಯಲ್ಲೂ ಮಳೆ ನೀರು ಹರಿಯುತ್ತಿತ್ತು.
ಸುಳ್ಯ, , ಕನಕಮಜಲು, ಅರಂತೋಡು, ಕಲ್ಲುಗುಂಡಿ, ಸಂಪಾಜೆ, ಬೆಳ್ಳಾರೆ, ನಿಂತಿಕಲ್ಲು, ಐವರ್ನಾಡು, ಕಲ್ಮಡ್ಕ, ಪಂಜ, ಸುಬ್ರಹ್ಮಣ್ಯ, ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು, ಬಳ್ಪ, ಗುತ್ತಿಗಾರು, ಬಿಳಿನೆಲೆ, ಕಡಬದ ಕಲ್ಲುಗುಡ್ಡೆ, ನೂಜಿಬಾಳ್ತಿಲ, ರೆಂಜಿಲಾಡಿ, ಇಚ್ಲಂಪಾಡಿ, ಕೊಣಾಜೆ ಭಾಗದಲ್ಲೂ ಭಾರೀ ಮಳೆಯಾಯಿತು.

ಉಡುಪಿ: ಅಲ್ಲಲ್ಲಿ ಮಳೆ
ಉಡುಪಿ ಜಿಲ್ಲೆಯಲ್ಲಿ ಶನಿವಾರ ಬಿಸಿಲು, ಮಳೆ ವಾತಾವರಣ ಇದ್ದು, ಹಲವೆಡೆ ಬಿಟ್ಟುಬಿಟ್ಟು ಮಳೆಯಾಗಿದೆ. ಉಡುಪಿ, ಕುಂದಾಪುರ, ಕಾರ್ಕಳ, ಹೆಬ್ರಿ, ಬ್ರಹ್ಮಾವರ, ಬೈಂದೂರು ಭಾಗದಲ್ಲಿ ಉತ್ತಮ ಮಳೆಯಾಗಿದೆ.

ಪರ್ಕಳ, ಮಣಿ ಪಾಲ, ಮಲ್ಪೆ ಸುತ್ತಮುತ್ತ ಜಿಟಿಜಿಟಿ ಮಳೆ ಸುರಿದಿದೆ. ಶನಿವಾರ ಬೆಳಗ್ಗೆ 8.30ರ ಹಿಂದಿನ 24 ತಾಸು 13.3 ಮಿ. ಮೀ. ಮಳೆಯಾಗಿದ್ದು, ಬೈಂದೂರು, ಕಾರ್ಕಳ, ಹೆಬ್ರಿ ಭಾಗದಲ್ಲಿ ಅತೀ ಹೆಚ್ಚು ಮಳೆಯಾಗಿದೆ.

ಟಾಪ್ ನ್ಯೂಸ್

9

ಕೊಟ್ಟಿಗೆಹಾರ: ಅಕ್ರಮ ಕಳ್ಳಬಟ್ಟಿ ಅಡ್ಡೆ ಮೇಲೆ ಪೊಲೀಸರ ದಾಳಿ

thumb news case baNNED

ಟೆಕ್ಕಿ, ಉಪನ್ಯಾಸಕರು ಟು ಸರ್ಕಾರಿ ಉದ್ಯೋಗಿಗಳು…ಇದು ಬಂಧಿತ PFI ಮುಖಂಡರ ಹಿನ್ನೆಲೆ!

araga-jnanendra

ಪಿಎಫ್ಐ ಪರವಾಗಿ ಯಾರೇ ಧ್ವನಿ ಎತ್ತಿದರೂ ಕಠಿಣ ಕ್ರಮ: ಆರಗ ಜ್ಞಾನೇಂದ್ರ ಎಚ್ಚರಿಕೆ

8

ಕುಷ್ಟಗಿ: ಲಂಪಿ ವೈರಸ್; ಜಾನುವಾರು ಸಂತೆ ರದ್ದು

7-1

ಮದ್ಯದಂಗಡಿ ವಿರೋಧಿಸಿ ಪ್ರತಿಭಟನೆ; ವಿಡಿಯೋ ಚಿತ್ರೀಕರಣ ಮಾಡಿದ ವ್ಯಕ್ತಿ ಪೊಲೀಸ್ ವಶಕ್ಕೆ

ಮೊದಲು ನಳಿನ್ ಕುಮಾರ್ ಕಟೀಲ್ ಮಂಪರು ಪರೀಕ್ಷೆ ಮಾಡಿ: ಹರಿಪ್ರಸಾದ್

ಮೊದಲು ನಳಿನ್ ಕುಮಾರ್ ಕಟೀಲ್ ಮಂಪರು ಪರೀಕ್ಷೆ ಮಾಡಿ: ಹರಿಪ್ರಸಾದ್

arun-singh

ಪೇಸಿಎಂ ಎಂಬುದು ಸಜ್ಜನ, ಸಾಮಾನ್ಯರ ಸಿಎಂ ಗೆ ಮಾಡುವ ಅಪಮಾನ: ಅರುಣ್ ಸಿಂಗ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಗಳೂರು : ಪಿಎಫ್ಐ, ಸಿಎಫ್ಐ ಕಚೇರಿಗಳಲ್ಲಿ ಪೊಲೀಸರಿಂದ ಶೋಧ; ಬೀಗ ಮುದ್ರೆ

ಮಂಗಳೂರು : ಪಿಎಫ್ಐ, ಸಿಎಫ್ಐ ಕಚೇರಿಗಳಲ್ಲಿ ಪೊಲೀಸರಿಂದ ಶೋಧ; ಬೀಗ ಮುದ್ರೆ

ಸಂಪೂರ್ಣ ಸಾಕ್ಷರತೆಯತ್ತ ಸಾವಿರ ಗ್ರಾ.ಪಂ.ಗಳು; ದ.ಕ., ಉಡುಪಿಯ 51 ಗ್ರಾ.ಪಂ.ಗಳಲ್ಲಿ ಸಿದ್ಧತೆ

ಸಂಪೂರ್ಣ ಸಾಕ್ಷರತೆಯತ್ತ ಸಾವಿರ ಗ್ರಾ.ಪಂ.ಗಳು; ದ.ಕ., ಉಡುಪಿಯ 51 ಗ್ರಾ.ಪಂ.ಗಳಲ್ಲಿ ಸಿದ್ಧತೆ

ಮಂಗಳೂರಿನಲ್ಲಿ ಶೀಘ್ರ ಸ್ಥಾಪನೆಯಾಗಲಿದೆ: ರಾಣಿ ಅಬ್ಬಕ್ಕ ಸೇನಾಪೂರ್ವ ಆಯ್ಕೆ ತರಬೇತಿ ಕೇಂದ್ರ

ಮಂಗಳೂರಿನಲ್ಲಿ ಶೀಘ್ರ ಸ್ಥಾಪನೆಯಾಗಲಿದೆ: ರಾಣಿ ಅಬ್ಬಕ್ಕ ಸೇನಾಪೂರ್ವ ಆಯ್ಕೆ ತರಬೇತಿ ಕೇಂದ್ರ

gold 2

ಮಂಗಳೂರು ವಿಮಾನ ನಿಲ್ದಾಣ: 23 ಲಕ್ಷ ರೂ ಮೌಲ್ಯದ ಅಕ್ರಮ ಚಿನ್ನ ವಶ

1—s-ddad

ಉಳ್ಳಾಲ ಸೀಮಂತ ಕಾರ್ಯಕ್ರಮದ ಫ್ಲೆಕ್ಸ್ ನಲ್ಲಿ ಗರ್ಭಿಣಿಯ ಭಾವಚಿತ್ರ ; ವಿವಾದ

MUST WATCH

udayavani youtube

ದಿನ 4| ಕೂಷ್ಮಾಂಡ ದೇವಿ

udayavani youtube

ಮಂಗಳೂರು ಶ್ರೀ ಶಾರದಾ ಮಹೋತ್ಸವ – 100 ವರ್ಷಗಳ ಪಯಣ ಹೇಗಿತ್ತು ?

udayavani youtube

ದಸರಾ ಆನೆಗಳ ತೂಕವನ್ನು ಹೆಚ್ಚಿಸಲು ಏನೆಲ್ಲಾ ತಿನ್ನಿಸುತ್ತಾರೆ ನೋಡಿ !

udayavani youtube

ಬಿಜೆಪಿ ಸರಕಾರ ಇರೋವರೆಗೆ ದೇಶ ದ್ರೋಹಿಗಳಿಗೆ ವಿಜೃಂಭಿಸಲು ಅವಕಾಶವಿಲ್ಲ

udayavani youtube

ಉಚ್ಚಿಲ ದಸರಾ ವೈಭವಕ್ಕೆ ಅದ್ದೂರಿಯ ಚಾಲನೆ

ಹೊಸ ಸೇರ್ಪಡೆ

cruelty

ಪ್ರಾಣಿಗಳ ಮೇಲಿನ ದೌರ್ಜನ್ಯಕ್ಕೆ ಜೈಲು ಶಿಕ್ಷೆ: ಎಚ್ಚರಿಕೆ

9

ಕೊಟ್ಟಿಗೆಹಾರ: ಅಕ್ರಮ ಕಳ್ಳಬಟ್ಟಿ ಅಡ್ಡೆ ಮೇಲೆ ಪೊಲೀಸರ ದಾಳಿ

thumb news case baNNED

ಟೆಕ್ಕಿ, ಉಪನ್ಯಾಸಕರು ಟು ಸರ್ಕಾರಿ ಉದ್ಯೋಗಿಗಳು…ಇದು ಬಂಧಿತ PFI ಮುಖಂಡರ ಹಿನ್ನೆಲೆ!

araga-jnanendra

ಪಿಎಫ್ಐ ಪರವಾಗಿ ಯಾರೇ ಧ್ವನಿ ಎತ್ತಿದರೂ ಕಠಿಣ ಕ್ರಮ: ಆರಗ ಜ್ಞಾನೇಂದ್ರ ಎಚ್ಚರಿಕೆ

8

ಕುಷ್ಟಗಿ: ಲಂಪಿ ವೈರಸ್; ಜಾನುವಾರು ಸಂತೆ ರದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.