
ಮಂಗಳೂರು: ಮತಾಂತರ, ಲೈಂಗಿಕ ಕಿರುಕುಳ: ಯುವತಿ ದೂರು
Team Udayavani, Nov 27, 2022, 7:50 AM IST

ಮಂಗಳೂರು: ಮತಾಂತರಗೊಳಿಸಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಯುವತಿಯೋರ್ವಳು ಮಂಗಳೂರು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.
ಬಿಕರ್ನಕಟ್ಟೆಯಲ್ಲಿರುವ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾಗ ಬಿಕರ್ನಕಟ್ಟೆಯ ಕೈಕಂಬದಲ್ಲಿರುವ ಖಲೀಲ್‌ನ ಮೊಬೈಲ್ ಶಾಪ್‌ನಲ್ಲೇ ಮೊಬೈಲ್ ರಿಚಾರ್ಜ್ ಮಾಡುತ್ತಿದ್ದೆ. ಆಗ ಖಲೀಲ್‌ನ ಪರಿಚಯವಾಗಿತ್ತು.
2021ರ ಜ.14ರಂದು ಖಲೀಲ್ ಒಳ್ಳೆಯ ಕೆಲಸ ಮತ್ತು ಹಣ ಕೊಡುವುದಾಗಿ ಆಮಿಷವೊಡ್ಡಿ ಪುಸಲಾಯಿಸಿ ಆತನ ಕುಟುಂಬದ ಮನೆಯಾದ ಕಲ್ಲಾಪುಗೆ ಕರೆದುಕೊಂಡು ಹೋಗಿ ಅಲ್ಲಿದ್ದ ಮಹಿಳೆಯರಿಗೆ ಪರಿಚಯಿಸಿದ. ಮುಸ್ಲಿಂ ಧರ್ಮಕ್ಕೆ ಮತಾಂತರವಾಗಲು, ಕುರಾನ್ ಓದಲು ಒತ್ತಾಯ ಮಾಡಿ ನಮಾಝ್ ಮಾಡಿಸಿದ್ದ. ಅನಂತರ ಲೈಂಗಿಕ ಕಿರುಕುಳ ನೀಡಿದ್ದಾನೆ.
ಹಿಂದೂ ಹೆಸರನ್ನು ಆಯಿಷಾ ಎಂದು ಬದಲಾಯಿಸಿ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೆಲಸದಿಂದ ತೆಗೆಸುವುದಾಗಿ ಬೆದರಿಕೆ ಹಾಕಿದ್ದಾನೆ. ಬುರ್ಖಾ ಧರಿಸುವಂತೆ ಒತ್ತಾಯಿಸಿ ಬುರ್ಖಾ ತಂದು ಕೊಟ್ಟಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
ಹೊಸ ಸೇರ್ಪಡೆ

ಸಲ್ಮಾನ್ ಖಾನ್ ಗೆ ಸಿನಿಮಾ ಆಫರ್ ಕೊಟ್ಟ ಆಮಿರ್: ನಿರ್ಮಾಪಕರಾಗಿ ಕಂಬ್ಯಾಕ್ ಮಾಡ್ತಾರ ಮಿ.ಪರ್ಫೆಕ್ಟ್?

ಜಾನಪದ ಕಲೆಗೆ ವಿಶೇಷ ಒತ್ತು ಅಗತ್ಯ

ದಳಪತಿ 67ನೇ ಸಿನಿಮಾಕ್ಕೆ ನಾಯಕಿಯಾಗಿ ತ್ರಿಷಾ ಆಯ್ಕೆ: 14 ವರ್ಷದ ಬಳಿಕ ಒಂದೇ ಸ್ಕ್ರೀನ್ ನಲ್ಲಿ ನಟನೆ

5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ ತಲುಪಲು ಈ ಬಜೆಟ್ ಸಹಕಾರಿ: ರಾಜನಾಥ್ ಸಿಂಗ್

Union Budget 2023: ಪೊಲ್ಯೂಟಿಂಗ್ ಪದದ ಬದಲು ಓಲ್ಡ್ ಪಾಲಿಟಿಕಲ್ ಎಂದ ಸಚಿವೆ ನಿರ್ಮಲಾ: ಸದನದಲ್ಲಿ ನಗೆಯ ಅಲೆ!