
ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಪೋಕ್ಸೋ ಪ್ರಕರಣದ ಆರೋಪಿ ದೋಷಮುಕ್ತ
Team Udayavani, Jan 20, 2023, 5:30 AM IST

ಮಂಗಳೂರು: ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಗರ್ಭಿಣಿಯಾಗಿಸಿದ ಆರೋಪದಡಿ ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿದ್ದ ಸತೀಶ್ ಅಂಚನ್‌ನನ್ನು ಎರಡನೇ ಜಿಲ್ಲಾ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯ ನಿರಪರಾಧಿಯೆಂದು ತೀರ್ಮಾನಿಸಿ ದೋಷಮುಕ್ತಗೊಳಿಸಿದೆ.
ಸತೀಶ್ ಅಂಚನ್ ಆಟೋ ಚಾಲಕನಾಗಿದ್ದು, ಬಾಲಕಿಯನ್ನು ಐದು ವರ್ಷಗಳ ಹಿಂದೆ ಪರಿಚಯ ಮಾಡಿಕೊಂಡು ಶಾಲೆಗೆ ಹೋಗುವಾಗ ತನ್ನ ಆಟೋದಲ್ಲಿ ಕರೆದುಕೊಂಡು ಹೋಗುತ್ತಿದ್ದ. 2020ರ ಜುಲೈನಲ್ಲಿ ಒಂದು ದಿನ ಸಂಜೆ ಆಕೆ ಪೇಟೆಯಿಂದ ಬಟ್ಟೆ ತೆಗೆದುಕೊಂಡು ಮನೆಗೆ ಹಿಂದಿರುಗುತ್ತಿದ್ದ ಸಂದರ್ಭ ಆರೋಪಿ, ಆಕೆಯನ್ನು ಆಟೋದಲ್ಲಿ ಬರುವಂತೆ ಕರೆದಿದ್ದಾನೆ. ಆಕೆ ನಿರಾಕರಿಸಿದ್ದು, ಅದಕ್ಕೆ ನಿನ್ನ ಫೋಟೋ ನನ್ನ ಬಳಿ ಇದ್ದು, ನನ್ನ ಜತೆ ಬಂದು ದೈಹಿಕ ಸಂಪರ್ಕ ನಡೆಸು, ಇಲ್ಲದಿದ್ದರೆ ಫೋಟೋ ವೈರಲ್ ಮಾಡುವುದಾಗಿ ಬೆದರಿಸಿದ್ದ. ಇದರಿಂದ ಹೆದರಿದ ಬಾಲಕಿ ಆಟೋದಲ್ಲಿ ಕುಳಿತಿದ್ದು, ಕಲ್ಲಮುಂಡ್ಕೂರು ಬಳಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಬಲಾತ್ಕಾರವಾಗಿ ಲೈಂಗಿಕ ಸಂಪರ್ಕ ನಡೆಸಿದ್ದಾನೆ. ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಆಕೆಯನ್ನು ಮತ್ತು ಮನೆಯವರನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದ ಎಂದು ಆರೋಪಿಸಲಾಗಿತ್ತು.
ಬಾಲಕಿ ಗರ್ಭಿಣಿಯಾಗಿದ್ದು, ಮಂಗಳೂರಿನ ಮಹಿಳಾ ಠಾಣೆಯಲ್ಲಿ ಸತೀಶ್ ವಿರುದ್ಧ ಪೋಕೊÕ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು. ಅನಂತರ ಆಕೆಯ ಗರ್ಭಪಾತ ಮಾಡಿಸಿದ್ದು, ಭ್ರೂಣವನ್ನು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿದಾಗ, ಭ್ರೂಣದ ಜೈವಿಕ ವರ್ಗೀಕರಣದ ಪ್ರಕಾರ ಆರೋಪಿಯೇ ಜೈವಿಕ ತಂದೆ ಎಂದು ವರದಿ ಬಂದಿತ್ತು.
ವಿಚಾರಣೆ ನಡೆಸಿದ 2ನೇ ಎಫ್‌ಟಿಎಸ್‌ಸಿ ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ. ರಾಧಾಕೃಷ್ಣ ಅವರು, ವಾದ-ಪ್ರತಿವಾದ ಆಲಿಸಿ, ನೊಂದ ಬಾಲಕಿಯ ವಯಸ್ಸು 16 ವರ್ಷಕ್ಕಿಂತ ಕಡಿಮೆ ಇದೆ ಎಂದು ಸಾಬೀತುಪಡಿಸಲು ಪ್ರಾಸಿಕ್ಯೂಶನ್ ವಿಫಲವಾಗಿದ್ದು, ಪ್ರಕರಣವು “ಒಪ್ಪಿಗೆಯ ಲೈಂಗಿಕ ಸಂಪರ್ಕ’ ಎಂದು ಪರಿಗಣಿಸಿ ಸತೀಶ್ ಅಂಚನ್‌ನನ್ನು ನಿರಪರಾಧಿ ಎಂದು ತೀರ್ಪು ನೀಡಿದ್ದಾರೆ.
ಆರೋಪಿ ಪರ ಎಸ್.ಪಿ. ಚಂಗಪ್ಪ, ರಹಿಯಾನಾ, ಭವ್ಯಾ, ವಿನುತಾ ಕುಟಿನ್ಹೋ, ಸೋನಲ್ ಮಂಡನ್ ಮತ್ತು ಶ್ವೇತಾ ವಾದಿಸಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ
ಹೊಸ ಸೇರ್ಪಡೆ

odisha ರೈಲು ಅಪಘಾತ; ಕಳಸದಿಂದ ತೆರಳಿದ್ದ 110 ಮಂದಿ ಸುರಕ್ಷಿತ

Odisha ಭೀಕರ ರೈಲು ಅವಘಡ; ಸಾವಿನ ಸಂಖ್ಯೆ 233ಕ್ಕೆ ಏರಿಕೆ; 900ಕ್ಕೂ ಹೆಚ್ಚು ಮಂದಿಗೆ ಗಾಯ

Milk : 8 ತಿಂಗಳಿಂದ ಸಿಗದ ಹಾಲಿನ ಪ್ರೋತ್ಸಾಹ ಧನ

Mangalore ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿದ್ದ ಆದಿತ್ಯ ವಿರುದ್ಧ ಮತ್ತೂಂದು ದೂರು

World Bicycle Day- ಸುಸ್ಥಿರ ಭವಿಷ್ಯಕ್ಕಾಗಿ ಸೈಕಲ್ ತುಳಿಯೋಣ