ಮಂಗಳೂರು : ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಶೌಚಾಲಯಕ್ಕೆ ಹೋದ ಯುವತಿ ನಾಪತ್ತೆ
Team Udayavani, Jul 3, 2022, 9:56 PM IST
ಮಂಗಳೂರು : ಮಂಗಳೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಶೌಚಾಲಯಕ್ಕೆಂದು ಹೋದ ದೀಪಿಕಾ (19) ನಾಪತ್ತೆಯಾಗಿರುವುದಾಗಿ ಆಕೆಯ ತಂದೆ ಹಾವೇರಿ ಹಾನಗಲ್ ತಾಲೂಕಿನ ಹಾನಗಲ್ ತಾಲೂಕಿನ ನಿವಾಸಿ ನಾಗರಾಜ್ ಫಕೀರಪ್ಪ ಗೊಲ್ಲರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ನಾಗರಾಜ್ ಫಕೀರಪ್ಪ ಗೊಲ್ಲರ ಅವರು ಮಂಡಿನೋವಿನ ಚಿಕಿತ್ಸೆಗಾಗಿ ಮಂಗಳೂರಿಗೆ ಪುತ್ರಿ ದೀಪಿಕಾ ಜತೆಯಲ್ಲಿ ಹೊರಟು ಜು. 2ರಂದು ಬೆಳಗ್ಗೆ 5 ಗಂಟೆಗೆ ಮಂಗಳೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ತಲುಪಿದ್ದರು. ಅಲ್ಲಿ ನಾಗರಾಜ್ ಪುರುಷರ ಶೌಚಾಲಯಕ್ಕೆ ತೆರಳಿದ್ದರು.
ದೀಪಿಕಾ ಮಹಿಳೆಯರ ಶೌಚಾಲಯಕ್ಕೆ ತೆರಳಿದ್ದರು. ನಾಗರಾಜ್ ಅವರು ಶೌಚಾಲಯದಿಂದ ಹೊರಗೆ ಬಂದು ದೀಪಿಕಾಳಿಗೆ ಕಾದು ಕುಳಿತರೂ ಆಕೆ ಬಂದಿರಲಿಲ್ಲ. ಬಸ್ ನಿಲ್ದಾಣದ ವಠಾರದಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ ಎಂದು ಬರ್ಕೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುರತ್ಕಲ್ :ಮಿತ್ರಪಟ್ಟಣ ಭಾಗದಲ್ಲಿ ಭಾರಿ ಕಡಲ್ಕೊರೆತ : ಅಪಾಯದ ಅಂಚಿನಲ್ಲಿ ಮೀನುಗಾರಿಕಾ ರಸ್ತೆ
ಪದೇ ಪದೇ ಜಾಗ ಬದಲಾಯಿಸುತ್ತಿದ್ದ ಪ್ರವೀಣ್ ಹಂತಕರು : ಆರೋಪಿಗಳ ಮಾಹಿತಿ ಬಿಚ್ಚಿಟ್ಟ ಎಡಿಜಿಪಿ
ಕಿನ್ಯ ಗ್ರಾಮದಲ್ಲಿ ಸಮಸ್ಯೆಗಳೇ ಬಹುದೊಡ್ಡದು
ತೊಕ್ಕೊಟ್ಟು: ಬೈಕ್ -ಕಾರು ಢಿಕ್ಕಿ; ಇಬ್ಬರಿಗೆ ಗಾಯ
ಚಪ್ಪಲಿಯಲ್ಲಿ ಮರೆ ಮಾಚಿ ಅಕ್ರಮ ಸಾಗಾಟ; 17 ಲಕ್ಷ ರೂ. ಮೌಲ್ಯದ ಚಿನ್ನ ವಶ