ಕರಾವಳಿಗೆ ಕಮಲ ಕಟಾಕ್ಷ  ಸಂಪುಟದಲ್ಲಿ  ಮೂವರಿಗೆ ಪ್ರಾತಿನಿಧ್ಯ


Team Udayavani, Aug 5, 2021, 9:00 AM IST

ಕರಾವಳಿಗೆ ಕಮಲ ಕಟಾಕ್ಷ  ಸಂಪುಟದಲ್ಲಿ  ಮೂವರಿಗೆ ಪ್ರಾತಿನಿಧ್ಯ

ಮಂಗಳೂರು: ರಾಜ್ಯದಲ್ಲಿ ಸಚಿವ ಸಂಪುಟ ರಚನೆಯೊಂದಿಗೆ ಸಚಿವ ಸ್ಥಾನ ಆಕಾಂಕ್ಷಿಗಳ ಹಾಗೂ ರಾಜಕೀಯ ಲೆಕ್ಕಾಚಾರಗಳ ಕುತೂಹಲಕ್ಕೆ ತೆರೆಬಿದ್ದಿದೆ. ಗಮನಾರ್ಹವೆಂದರೆ, ಕರಾವಳಿಗೆ ಕಮಲ ಕಟಾಕ್ಷ ಮುಂದುವರಿದಿದ್ದು, ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಒಟ್ಟು ಮೂರು ಸಚಿವ ಸ್ಥಾನಗಳೊಂದಿಗೆ ಅವಿಭಜಿತ ದ.ಕ. ಜಿಲ್ಲೆಗೆ ಬಂಪರ್‌ ಅವಕಾಶ ಲಭಿಸಿದೆ.

ಈ ಹಿಂದೆ ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿದ್ದ  ಕೋಟ ಶ್ರೀನಿವಾಸ ಪೂಜಾರಿ ಹಾಗೂ ಎಸ್‌. ಅಂಗಾರರನ್ನು ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲೂ  ಮುಂದುವರಿಸುವುದರ ಜತೆ ಯುವ ನಾಯಕ ಕಾರ್ಕಳದ ಸುನಿಲ್‌ ಕುಮಾರ್‌ ಅವರಿಗೆ ಅವಕಾಶ ಲಭಿಸಿದೆ. ಸಚಿವ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡುವೆಯೂ ಕರಾವಳಿಗೆ ಮೂರು ಸಚಿವ ಸ್ಥಾನ ಲಭಿಸಿರುವುದು ರಾಜಕೀಯವಾಗಿ ಮಹತ್ವದ ವಿಚಾರವಾಗಿದೆ.

ಕರಾವಳಿಯ ಜಿಲ್ಲೆಗಳು ಬಿಜೆಪಿಯ ಭದ್ರಕೋಟೆ ಎಂದು ಪರಿಗಣಿಸಲ್ಪಟ್ಟಿದೆ. ಎರಡು ಜಿಲ್ಲೆಗಳ ಒಟ್ಟು  13 ಶಾಸಕರ ಪೈಕಿ 12 ಶಾಸಕರು ಹಾಗೂ ಮೂವರು ಸಂಸದರನ್ನು ಬಿಜೆಪಿ ಹೊಂದಿದೆ. ಯಡಿಯೂರಪ್ಪ ಅವರ ಸಚಿವ ಸಂಪುಟದ ಮೊದಲ ಅವಧಿಯಲ್ಲಿ ಎರಡು ಜಿಲ್ಲೆಗಳಿಗೆ ಒಂದು ಸಚಿವ ಸ್ಥಾನ ಕರಾವಳಿಯಲ್ಲಿ ಒಂದಷ್ಟು ಚರ್ಚೆ ಮತ್ತು ಅಸಮಾಧಾನಕ್ಕೆ ಕಾರಣವಾಗಿದ್ದರೂ ಅನಂತರದ ಅವಧಿಗಳಲ್ಲಿ ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲು ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ, ಬೆಳ್ತಂಗಡಿಯ ಪ್ರತಾಪಸಿಂಹ ನಾಯಕ್‌ರಿಗೆ ವಿಧಾನ ಪರಿಷತ್‌ ಸದಸ್ಯತ್ವ, ಸಂಪುಟ ಪುನಾರಚನೆ ವೇಳೆ ಎಸ್‌. ಅಂಗಾರ ಅವರಿಗೆ ಸಚಿವ ಸ್ಥಾನ, ಕಳೆದ ತಿಂಗಳು ನಡೆದ ಕೇಂದ್ರ ಸಚಿವ ಸಂಪುಟ ಪುನಾರಚನೆ ವೇಳೆ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಸಚಿವ ಸ್ಥಾನ ಮತ್ತು ಇದೀಗ ಬೊಮ್ಮಾಯಿ ಸಚಿವ ಸಂಪುಟದಲ್ಲಿ  ಮೂರು ಸಚಿವ ಸ್ಥಾನಗಳನ್ನು  ನೀಡುವ ಮೂಲಕ ಕರಾವಳಿಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ ಎಂಬ ಸಂದೇಶವನ್ನು  ವರಿಷ್ಠರು ರವಾನಿಸಿದ್ದಾರೆ.

ಹಿರಿತನಕ್ಕೆ ಮಣೆ, ಹೊಸಬರಿಗೆ ಅವಕಾಶ:

ಕರಾವಳಿಗೆ ಸಚಿವ ಸ್ಥಾನದ ಹಿಂದೆ ಇನ್ನು  ಕೆಲವೇ ತಿಂಗಳಲ್ಲಿ ಎದುರಾಗಲಿರುವ ಜಿ. ಪಂ., ತಾ. ಪಂ. ಚುನಾವಣೆಗಳ ಛಾಯೆ ಇರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಕೋಟ ಶ್ರೀನಿವಾಸ ಪೂಜಾರಿ ಹಾಗೂ ಎಸ್‌. ಅಂಗಾರ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವುದರ ಮೂಲಕ ಹಿರಿತನಕ್ಕೆ ಪಕ್ಷ ಮಣೆ ಹಾಕಿರುವುದು ಸ್ಪಷ್ಟ. ಕೋಟ ಶ್ರೀನಿವಾಸ ಪೂಜಾರಿ ಅವರ ವಿಧಾನ ಪರಿಷತ್‌ ಸದಸ್ಯತ್ವ  ಮುಂದಿನ ಜ. 6ಕ್ಕೆ ಕೊನೆಗೊಳ್ಳಲಿದ್ದು, ಮತ್ತೆ ಚುನಾವಣೆಯನ್ನು ಎದುರಿಸಬೇಕಾಗಿದೆ. ಸುನಿಲ್‌ ಕುಮಾರ್‌ ಅವರನ್ನು ಸಚಿವ ಸಂಪುಟದಲ್ಲಿ  ಸೇರ್ಪಡೆಗೊಳಿಸುವ ಮೂಲಕ ಯುವ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿದೆ. ಸುನಿಲ್‌ ಕುಮಾರ್‌ ಅವರು ವಿಧಾನಸಭೆಯಲ್ಲಿ ಮುಖ್ಯ ಸಚೇತಕ ಹೊಣೆಗಾರಿಕೆ ಹಾಗೂ ಪಕ್ಷ ಸಂಘಟನೆಯಲ್ಲಿ ಕೇರಳ ರಾಜ್ಯ ಸಹ ಪ್ರಭಾರಿ ಹುದ್ದೆಯನ್ನು ನಿರ್ವಹಿಸಿದ್ದಾರೆ.

ಖಾತೆ ಕುತೂಹಲ :

ಸಚಿವ ಸಂಪುಟದ ಬೆನ್ನಲ್ಲೇ ಇದೀಗ ಖಾತೆ ಕುತೂಹಲ ಆರಂಭಗೊಂಡಿದೆ. ಯಡಿಯೂರಪ್ಪ ಅವರ ಸಂಪುಟದಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರು ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಎಸ್‌. ಅಂಗಾರ ಅವರು ಮೀನುಗಾರಿಕಾ ಮತ್ತು ಬಂದರು ಖಾತೆಯನ್ನು ಹೊಂದಿದ್ದರು. ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲೂ  ಇದು ಮುಂದುವರಿಯಲಿದೆಯೋ ಅಥವಾ ಹೊಸ ಖಾತೆ ದೊರೆಯಲಿದೆಯೇ ಎಂಬ ಚರ್ಚೆಗಳು ಆರಂಭಗೊಂಡಿವೆ. ನೂತನ ಸಚಿವರಾಗಿ ಆಯ್ಕೆಯಾಗಿರುವ ಸುನಿಲ್‌ ಕುಮಾರ್‌ಗೆ ಯಾವ ಖಾತೆ ದೊರೆಯಬಹುದು ಎಂಬ ಬಗ್ಗೆ ಕುತೂಹಲವಿದೆ.

ಟಾಪ್ ನ್ಯೂಸ್

1-ewe-wr-we

ಪಿಒಕೆ ಕುರಿತು 1971ರಲ್ಲೇ ನಿರ್ಧಾರ ತೆಗೆದುಕೊಳ್ಳಬೇಕಿತ್ತು: ರಾಜನಾಥ್ ಸಿಂಗ್

32 ವರ್ಷದ ಸೂರ್ಯಕುಮಾರ್‌ ನನ್ನು “ಮಗು” ಎಂದ ಖ್ಯಾತ ಮಾಜಿ ಆಲೌ ರೌಂಡರ್; ನೆಟ್ಟಿಗರಿಂದ ಟ್ರೋಲ್

32 ವರ್ಷದ ಸೂರ್ಯಕುಮಾರ್‌ ಗೆ “ಮಗು” ಎಂದ ಖ್ಯಾತ ಮಾಜಿ ಆಲೌ ರೌಂಡರ್; ನೆಟ್ಟಿಗರಿಂದ ಟ್ರೋಲ್

ಬಿಜೆಪಿ ಭಂಡತನದಿಂದ ವಿತಂಡವಾದ ಮಾಡುತ್ತಿದೆ: ಎಚ್.ಡಿ.ಕುಮಾರಸ್ವಾಮಿ ಟೀಕೆ

ಬಿಜೆಪಿ ಭಂಡತನದಿಂದ ವಿತಂಡವಾದ ಮಾಡುತ್ತಿದೆ: ಎಚ್.ಡಿ.ಕುಮಾರಸ್ವಾಮಿ ಟೀಕೆ

web exxclusive diet exclusive

ಉಪವಾಸ ವ್ರತ ಆಚರಣೆ ಮಾಡುವುದರ ಮಹತ್ವ, ಪ್ರಯೋಜನಗಳು  

ಐಐಐಟಿ ಧಾರವಾಡ ಘಟಕ ಉದ್ಘಾಟಿಸಿದ ರಾಷ್ಟ್ರಪತಿ ಮುರ್ಮು

ಐಐಐಟಿ ಧಾರವಾಡ ಘಟಕ ಉದ್ಘಾಟಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

1-asds-dsad

ವಕ್ಫ್ ಬೋರ್ಡ್ ಅಕ್ರಮ: ಎಎಪಿ ಶಾಸಕ ಅಮಾನತುಲ್ಲಾ ಗೆ 14 ದಿನಗಳ ನ್ಯಾಯಾಂಗ ಬಂಧನ

ನಾವು ಮೊದಲೇ ಡೀನ್ ಗೆ ಎಚ್ಚರಿಕೆ ನೀಡಿದ್ದೆವು: ರನೌಟ್ ಬಗ್ಗೆ ದೀಪ್ತಿ ಶರ್ಮಾ ಹೇಳಿಕೆ

ನಾವು ಮೊದಲೇ ಡೀನ್ ಗೆ ಎಚ್ಚರಿಕೆ ನೀಡಿದ್ದೆವು: ರನೌಟ್ ಬಗ್ಗೆ ದೀಪ್ತಿ ಶರ್ಮಾ ಹೇಳಿಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಿಜೆಪಿ ಭಂಡತನದಿಂದ ವಿತಂಡವಾದ ಮಾಡುತ್ತಿದೆ: ಎಚ್.ಡಿ.ಕುಮಾರಸ್ವಾಮಿ ಟೀಕೆ

ಬಿಜೆಪಿ ಭಂಡತನದಿಂದ ವಿತಂಡವಾದ ಮಾಡುತ್ತಿದೆ: ಎಚ್.ಡಿ.ಕುಮಾರಸ್ವಾಮಿ ಟೀಕೆ

ಕೆಲಸ ಮಾಡದ ಮುಖಂಡರಿಗೆ ಖಡಕ್ ಎಚ್ಚರಿಕೆ ನೀಡಿದ ಎಚ್.ಡಿ.ಕುಮಾರಸ್ವಾಮಿ

ಕೆಲಸ ಮಾಡದ ಮುಖಂಡರಿಗೆ ಖಡಕ್ ಎಚ್ಚರಿಕೆ ನೀಡಿದ ಎಚ್.ಡಿ.ಕುಮಾರಸ್ವಾಮಿ

dk-shivakumar

ರಾಜ್ಯದಲ್ಲಿ ಸರ್ಕಾರವೇ ಇಲ್ಲ ಎಂಬಂತೆ ಅದು ವಿಫಲವಾಗಿದೆ: ಡಿ.ಕೆ.ಶಿವಕುಮಾರ್

ಮೈಸೂರಿನಲ್ಲೇ ತಯಾರಾದ ರೇಷ್ಮೆ ಸೀರೆಯುಟ್ಟು ದಸರೆಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಮೈಸೂರಿನಲ್ಲೇ ತಯಾರಾದ ರೇಷ್ಮೆ ಸೀರೆಯುಟ್ಟು ದಸರೆಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

dk shivakumar met sm krishna in Manipal hospital

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಆರೋಗ್ಯ ವಿಚಾರಿಸಿದ ಡಿ.ಕೆ. ಶಿವಕುಮಾರ್

MUST WATCH

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

udayavani youtube

ದೇವ್ರೇ ನನಗೆ 25 ಕೋಟಿ ಬಹುಮಾನ ಬರಬಾರದಿತ್ತು…

udayavani youtube

ಪತ್ರಿ ವರ್ಷ ಈ ಬೆಣ್ಣೆಹಣ್ಣು ಮರದಲ್ಲಿ 300 ರಿಂದ 400 ಹಣ್ಣುಗಳು ಸಿಗುತ್ತದೆ

udayavani youtube

ಸೆ. 26ರಿಂದ ಅ. 5 ವರೆಗೆ ವೈಭವದ ಉಚ್ಚಿಲ ದಸರಾ

ಹೊಸ ಸೇರ್ಪಡೆ

1-ewe-wr-we

ಪಿಒಕೆ ಕುರಿತು 1971ರಲ್ಲೇ ನಿರ್ಧಾರ ತೆಗೆದುಕೊಳ್ಳಬೇಕಿತ್ತು: ರಾಜನಾಥ್ ಸಿಂಗ್

32 ವರ್ಷದ ಸೂರ್ಯಕುಮಾರ್‌ ನನ್ನು “ಮಗು” ಎಂದ ಖ್ಯಾತ ಮಾಜಿ ಆಲೌ ರೌಂಡರ್; ನೆಟ್ಟಿಗರಿಂದ ಟ್ರೋಲ್

32 ವರ್ಷದ ಸೂರ್ಯಕುಮಾರ್‌ ಗೆ “ಮಗು” ಎಂದ ಖ್ಯಾತ ಮಾಜಿ ಆಲೌ ರೌಂಡರ್; ನೆಟ್ಟಿಗರಿಂದ ಟ್ರೋಲ್

ಹೊಸ ವರ್ಷಕ್ಕೆ ಮಸ್ಕಿಯಲ್ಲಿ ಪ್ರತ್ಯೇಕ ಕೋರ್ಟ್‌

ಹೊಸ ವರ್ಷಕ್ಕೆ ಮಸ್ಕಿಯಲ್ಲಿ ಪ್ರತ್ಯೇಕ ಕೋರ್ಟ್‌

ವಿದೇಶಿ ಮಾರುಕಟ್ಟೆಗೆ ಕೊರಳ್ಳಿ ಬಾಳೆ; ಹಳದಿ ಕಲ್ಲಂಗಡಿ ಬೆಳೆದಿದ್ದ ರೈತನ ಸಾಧನೆ

ವಿದೇಶಿ ಮಾರುಕಟ್ಟೆಗೆ ಕೊರಳ್ಳಿ ಬಾಳೆ; ಹಳದಿ ಕಲ್ಲಂಗಡಿ ಬೆಳೆದಿದ್ದ ರೈತನ ಸಾಧನೆ

Shindhe

ಹಲವಾರು ನಾಯಕರು ಸಂಪರ್ಕದಲ್ಲಿದ್ದಾರೆ : ಮಹಾರಾಷ್ಟ್ರ ಸಿಎಂ ಶಿಂಧೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.