
ಮಗನನ್ನು ಶಾಲೆಯಿಂದ ಕರೆದುಕೊಂಡು ಹೋಗಿ ನಾಪತ್ತೆಯಾಗಿದ್ದಾನೆಂದು ನಾಟಕವಾಡಿದ ತಂದೆ !
Team Udayavani, Sep 18, 2022, 7:22 AM IST

ಸಾಂದರ್ಭಿಕ ಚಿತ್ರ..
ಮೂಲ್ಕಿ: ಶಾಲೆಗೆ ಬಂದ ಹುಡುಗನನ್ನು ಆತನ ತಂದೆ ಶಾಲೆಯಿಂದ ಕರೆದುಕೊಂಡು ಹೋಗಿ ಸ್ನೇಹಿತನ ಮನೆಯಲ್ಲಿರಿಸಿ ತನ್ನ ಮಗ ಶಾಲೆಗೆ ಬಂದವನು ಎಲ್ಲಿದ್ದಾನೆ ಎಂದು ಪ್ರಶ್ನಿಸಿ ಶಾಲೆಯಲ್ಲಿ ರಂಪಾಟ ನಡೆಸಿದ ಘಟನೆಯೊಂದು ಮೂಲ್ಕಿ ಠಾಣಾ ವ್ಯಾಪ್ತಿಯ ಕಾರ್ನಾಡಿನಲ್ಲಿ ನಡೆದಿದೆ.
ಹೆಜಮಾಡಿಯ ನಿವಾಸಿ ಹರೀಶ್ ಅವರು ತನ್ನ 9 ವರ್ಷದ ಮಗ ಶಾಲೆಯಲ್ಲಿ ಇಲ್ಲದಿರುವುದನ್ನು ಪ್ರಶ್ನಿಸಿ ಶಾಲೆಯ ಸಿಬಂದಿಗೆ ಗದರಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಪೊಲೀಸರು ಧಾವಿಸಿ ಬಂದು ಶಾಲೆಯ ಬದಿಯ ಅಂಗಡಿಯೊಂದರ ಸಿಸಿ ಕೆಮರಾದ ಫೂಟೇಜ್ ಪರಿಶೀಲನೆ ನಡೆಸಿದಾಗ ಹುಡುಗ ಶಾಲೆಗೆ ಬಂದಿರುವುದು ದಾಖಲಾಗಿತ್ತು. ಸ್ವಲ್ಪ ಹೊತ್ತಿನಲ್ಲಿ ಆತನ ತಂದೆಯೇ ರಿಕ್ಷಾದಲ್ಲಿ ಕುಳ್ಳಿರಿಸಿ ಕರೆದುಕೊಂಡು ಹೋದ ದೃಶ್ಯವೂ ಸೆರೆಯಾಗಿತ್ತು. ಪೊಲೀಸರು ಹರೀಶ್‌ನನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ತಾನು ಕರೆದುಕೊಂಡು ಹೋಗಿರುವುದಾಗಿ ಒಪ್ಪಿಕೊಂಡಿದ್ದಾನೆ.
ತಂದೆ ಹರೀಶ್ ಬಾಲಕನನ್ನು ಕೆರೆಕಾಡಿನ ಸ್ನೇಹಿತನ ಮನೆಯಲ್ಲಿ ಬಿಟ್ಟು ಬಂದು ಮಗ ನಾಪತ್ತೆಯಾಗಿರುವುದಾಗಿ ನಾಟಕ ಮಾಡಿದ್ದಾನೆ. ಬಾಲಕನನ್ನು ಕರೆದುಕೊಂಡು ಬಂದ ಅನಂತರ ಪ್ರಕರಣ ಇತ್ಯರ್ಥವಾಗಿದೆ. ಆದರೆ ಯಾಕೆ ಬಾಲಕನ ತಂದೆ ಈ ರೀತಿ ವರ್ತಿಸಿದ್ದಾನೆ ಎಂಬುವುದು ತಿಳಿದು ಬಂದಿಲ್ಲ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆಧುನಿಕ ಭಾರತದ ಹರಿಕಾರ ರಾಜಾರಾಮ್ ಮೋಹನ್ರಾಯ್; ಡಾ| ಪಿ.ಎಸ್. ಯಡಪಡಿತ್ತಾಯ

ಮಂಗಳೂರು: ಮೊಬೈಲ್ ಬಳಸುವಾಗ ತಾಯಿ ಗದರಿದ್ದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ 14 ವರ್ಷದ ಬಾಲಕ

ಫಾಝಿಲ್ ಹತ್ಯೆ ಸಮರ್ಥಿಸಿ ಹೇಳಿಕೆ: ಶರಣ್ ಬಂಧನಕ್ಕೆ ಫಾಝಿಲ್ ತಂದೆ ಆಗ್ರಹ

ಕೊಲೆಗೆ ಪ್ರೇರಣೆ ನೀಡುವವರನ್ನು ಗಡೀಪಾರು ಮಾಡಿ: ಶಾಸಕ ಖಾದರ್

ನಾಳೆಯಿಂದ ಗುತ್ತಿಗೆ ಕಾರ್ಮಿಕರ ಮುಷ್ಕರ: ನೀರು ಸರಬರಾಜು, ಸ್ವಚ್ಛತೆ ಸೇವೆ ವ್ಯತ್ಯಯ ಸಾಧ್ಯತೆ
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
