
ಮೂಲ್ಕಿ: ರಸ್ತೆಯಲ್ಲೇ ಮಗುಚಿ ಬಿದ್ದ ಕಂಟೈನರ್ ಲಾರಿ… ಚಾಲಕನಿಗೆ ಗಂಭೀರ ಗಾಯ
Team Udayavani, Jan 22, 2023, 5:58 PM IST

ಮೂಲ್ಕಿ: ಉಡುಪಿ ಕಡೆಯಿಂದ ಕಂಟೈನರ್ ಹೊತ್ತು ಮಂಗಳೂರಿನತ್ತ ಸಾಗುತ್ತಿದ್ದ ಲಾರಿಯೊಂದು ರಾಷ್ಟ್ರೀಯ ಹೆದ್ದಾರಿಯ ಕಾರ್ನಾಡು ಪೆಟ್ರೋಲ್ ಬಂಕ್‌ನ ಕೈಗಾರಿಕಾ ಪ್ರದೇಶದ ತಿರುವಿನ ರಸ್ತೆ ಬಳಿ ಸ್ಕಿಡ್ ಆಗಿ ಬಿದ್ದು ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ತಡರಾತ್ರಿ ಸಂಭವಿಸಿದೆ.
ಹಗಲು ಅಥವಾ ಸ್ವಲ್ಪ ಬೇಗ ಈ ಘಟನೆ ನಡೆಯುತ್ತಿದ್ದರೆ ಸಾವು ನೋವು ಉಂಟಾಗುವ ಸಾಧ್ಯತೆ ಇತ್ತು. ರಸ್ತೆ ಬದಿಯಲ್ಲಿ ರೆಕ್ಸಿನ್ ವ್ಯವಹಾರ ನಡೆಸುತ್ತಿದ್ದ ಗೂಡಂಗಡಿಯ ಮೇಲೆಯೇ ಕಂಟೈನರ್ ಬಿದ್ದಿದ್ದು, ಗೂಡಂಗಡಿಯಲ್ಲಿದ್ದ ಸೊತ್ತುಗಳು ಹಾನಿಯಾಗಿವೆ.
ಇದನ್ನೂ ಓದಿ: ಧರ್ಮಸ್ಥಳದಲ್ಲಿ ಕುಳಿತು ಸರ್ಕಾರ ಪತನ ಮಾಡಿದ ಷಡ್ಯಂತ್ರ ಬಿಚ್ಚಿಡುತ್ತೇನೆ: ಸಿದ್ದರಾಮಯ್ಯ ವಿರುದ್ಧ ಹೆಚ್ ಡಿಕೆ ಕಿಡಿ
ಟಾಪ್ ನ್ಯೂಸ್
