ಮಂಗಳೂರು : ಬೆಳ್ಳಂಬೆಳಗ್ಗೆ PFI, SDPI ಕಚೇರಿ ಮೇಲೆ NIA ದಾಳಿ, ಕಾರ್ಯಕರ್ತರಿಂದ ಪ್ರತಿಭಟನೆ
Team Udayavani, Sep 22, 2022, 7:33 AM IST
ಮಂಗಳೂರು : ಎನ್ ಐ ಎ ಅಧಿಕಾರಿಗಳ ತಂಡ ಮಂಗಳೂರಿನಲ್ಲಿರುವ ಎಸ್ ಡಿಪಿಐ ಹಾಗೂ ಪಿಎಫ್ ಐ ಕಚೇರಿಗಳ ಮೇಲೆ ಬೆಳ್ಳಂಬೆಳಗ್ಗೆ ದಾಳಿ ನಡೆಸಿದೆ.
ಮಂಗಳೂರು ನಗರದ ಸುತ್ತಮುತ್ತ ಇರುವ ಕಚೇರಿಗಳ ಮೇಲೆ ಏಕಕಾಲಕ್ಕೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ನಲ್ಲೆಕಾಯಿ ರಸ್ತೆ, ಬಜ್ಪೆ, ಕುಳಾಯಿ, ಕಾವೂರು ಸೇರಿದಂತೆ ಹಲವು ತಂಡಗಳಾಗಿ ದಾಳಿ ನಡೆಸಿದೆ, ಅಲ್ಲದೆ ದಾಳಿ ವೇಳೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಮುಂಜಾನೆ ಸುಮಾರು 3;30 ರ ಸುಮಾರಿಗೆ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು ಈ ಸಂಬಂಧ ಪೊಲೀಸರು ನೆಲ್ಲಿಕಾಯಿ ರಸ್ತೆಯನ್ನು ಬಂದ್ ಮಾಡಲಾಗಿದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಜೊತೆಗೆ ದಾಳಿ ನಡೆದ ಸ್ಥಳಗಳಲ್ಲಿ ಅರೆಮೀಸಲು ಪಡೆಗಳನ್ನು ನೇಮಿಸಲಾಗಿದೆ.
ಅಧಿಕಾರಿಗಳ ಪಿಎಫ್‌ಐ, ಎಸ್ ಡಿಪಿಐ ಮುಖಂಡರ ಮನೆಗಳ ಮೇಲೂ ದಾಳಿ ನಡೆಸಿದೆ.
ಇತ್ತ ದಾಳಿ ನಡೆಯುತ್ತಿದ್ದಂತೆ ಪಿಎಫ್ ಐ ಕಾರ್ಯಕರ್ತರು ದಾಳಿ ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ.