ಫಾಸ್ಟ್ಯಾಗ್‌ನಲ್ಲಿ ಲೋಪ ಪತ್ತೆ, ಲಕ್ಷಾಂತರ ರೂಪಾಯಿ ನಷ್ಟ!

Team Udayavani, Jan 26, 2020, 7:42 AM IST

ಸುರತ್ಕಲ್‌: ಖಾಸಗಿ ಬ್ಯಾಂಕ್‌ಗಳು, ಇ ಸರ್ವೀಸ್‌ ಕೇಂದ್ರಗಳು ವಿತರಣೆ ಮಾಡಿರುವ ಫಾಸ್ಟಾಗ್‌ ಸ್ಟಿಕ್ಕರ್‌ಗಳ ಮೂಲಕ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದ್ದು, ಟ್ರಕ್‌ನಂತಹ ಘನ ವಾಹನಗಳು ಕಡಿಮೆ ದರ ತೆತ್ತು ಟೋಲ್‌ಗ‌ಳಲ್ಲಿ ಸಾಗುತ್ತಿರುವುದು ಗೊತ್ತಾಗಿದೆ. ಇದರಿಂದ ಸರಕಾರಕ್ಕೆ ಭಾರೀ ನಷ್ಟವಾದರೆ ಲಾರಿ, ಟ್ರಕ್‌ ಮಾಲಕರು ಮೌನವಾಗಿ ಕಡಿಮೆ ದರದಲ್ಲಿ ಓಡಾಟ ನಡೆಸಿ ಲಾಭ ಮಾಡಿಕೊಳ್ಳುತ್ತಿದ್ದಾರೆ.

ಖಾಸಗಿ ಬ್ಯಾಂಕ್‌ಗಳು, ಇ ಸರ್ವಿಸ್‌ ನೀಡುವ ಸಂಸ್ಥೆಗಳು ನೀಡಿರುವ ಫಾಸ್ಟಾಗ್‌ಗಳಲ್ಲಿ ಈ ದೋಷ ಕಂಡುಬರುತ್ತಿದೆ. ಸುರತ್ಕಲ್‌ ಟೋಲ್‌ ಒಂದರಲ್ಲೇ ಒಂದು ವಾರದಲ್ಲಿ ನೂರಕ್ಕೂ ಅಧಿಕ ಭಾರೀ ವಾಹನಗಳು ಕಡಿಮೆ ದರದಲ್ಲಿ ಟೋಲ್‌ಗೇಟ್‌ ದಾಟಿರುವುದು ದಾಖಲಾಗಿದೆ. ಈಗ ಸುರತ್ಕಲ್‌, ಹೆಜಮಾಡಿ, ಸಾಸ್ತಾನ, ಬ್ರಹ್ಮರಕೂಟ್ಲು, ತಲಪಾಡಿ ಟೋಲ್‌ ಕೇಂದ್ರಗಳು ಒಗ್ಗೂಡಿ ಇಂತಹ ವಾಹನಗಳ ಫಾಸ್ಟಾಗ್‌ ಬ್ಲಾಕ್‌ ಮಾಡುತ್ತಿದ್ದು, ವಾಹನಗಳ ಚಾಲಕರಿಗೆ ಬ್ಯಾಂಕ್‌ಗಳಿಗೆ ತೆರಳಿ ಸರಿಯಾದ ಮಾಹಿತಿ ನೀಡುವಂತೆ ಮನವಿ ಮಾಡಿಕೊಳ್ಳುತ್ತಿವೆ.

ಈ ಲೋಪದಿಂದ ಒಂದೆರಡು ತಿಂಗಳ ಅವ ಧಿಯಲ್ಲಿ ಲಕ್ಷಾಂತರ ರೂ. ನಷ್ಟವುಂಟಾಗಿದ್ದು, ಗುತ್ತಿಗೆ ಕಂಪೆನಿಗಳು ಹೆದ್ದಾರಿ ಪ್ರಾಧಿಕಾರದ ಗಮನಕ್ಕೆ ತಂದ ಬಳಿಕ ಈಗ ಲೋಪವುಳ್ಳ ಫಾಸ್ಟಾಗ್‌ಗಳನ್ನು ಬ್ಲಾಕ್‌ ಮಾಡಲು ಸೂಚಿಸಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಸಹಾಯಾನುದಾನ ಮತ್ತು ವಂತಿಗೆ ಹಾಗೂ ತೆರಿಗೆ ಪಾಲಿನ ಕಡಿತದ ಪರಿಣಾಮ 2020-21 ನೇ ಸಾಲಿನ ಬಜೆಟ್‌ ಮೇಲೆ ಪರಿಣಾಮ ಬೀರಲಿದ್ದು...

  • ಹುಬ್ಬಳ್ಳಿ: ಮಹದಾಯಿ ಕುರಿತು ಕೇಂದ್ರದಿಂದ ಅಧಿಸೂಚನೆ ಹೊರಡಿಸುವುದು ವಿಶೇಷವಾಗಿ ಇಬ್ಬರು ಸಚಿವರಿಗೆ ಪ್ರತಿಷ್ಠೆಯಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ,...

  • ಕಾರವಾರ: ಕೊರೊನಾ ವೈರಸ್‌ ಕಾರಣಕ್ಕೆ ಜಪಾನ್‌ನ ಯೊಕೊಹಾಮಾದಲ್ಲಿ ಡೈಮಂಡ್‌ ಪ್ರಿನ್ಸಸ್‌ ಎಂಬ ಕ್ರೂಸ್‌ ಹಡಗಿನಲ್ಲಿ ಬಂಧಿಯಾಗಿದ್ದ ಕಾರವಾರ ಮೂಲದ ಅಭಿಷೇಕ್‌...

  • ಮುದಗಲ್ಲ (ರಾಯಚೂರು): ಚೀನಾದಲ್ಲಿ ಮಾರಣಹೋಮ ನಡೆಸಿರುವ ಕೊರೊನಾ ವೈರಸ್‌ ಪರಿಣಾಮ ಇಲ್ಲಿನ ಕಲ್ಲು ಗಣಿಗಾರಿಕೆ ಮೇಲೂ ಆಗಿದೆ. ಕೊರೊನಾ ವೈರಸ್‌ ಪರಿಣಾಮ ಚೀನಾ ಸೇರಿ...

  • ಬೆಂಗಳೂರು: ಸಿದ್ದರಾಮಯ್ಯ ಹೇಳಿದ ಕೂಡಲೇ ಕಾಂಗ್ರೆಸ್‌ ಬಿಟ್ಟು ಹೋಗಿರುವವರು ವಾಪಸ್‌ ಬರ್ತಾರೆ ಎಂದು ಕಾಂಗ್ರೆಸ್‌ ಹಿರಿಯ ನಾಯಕಿ ಮಾರ್ಗರೇಟ್‌ ಆಳ್ವಾ ಹೇಳಿಕೆಯನ್ನು...