“ಮದಿಪು’ವಿಗೆ ಮತ್ತೂಂದು ಗೌರವ, ಪಡೀಲ್‌ ಅತ್ಯುತ್ತಮ ಪೋಷಕ ನಟ

Team Udayavani, Apr 12, 2017, 12:21 PM IST

madipu.jpg

ಮಂಗಳೂರು: ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಮಂಗಳವಾರ ಪ್ರಕಟವಾಗಿದ್ದು, ಕರಾವಳಿ ಭಾಗಕ್ಕೆ ಮೂರು ಗೌರವಗಳು ಲಭಿಸಿವೆ. ಕರಾವಳಿಯ ಕಲಾರಾಧನೆ ಆಧಾರಿತ ತುಳುವಿನ 78ನೇ ಸಿನೆಮಾ “ಮದಿಪು’ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಕುಸಲ್ದರಸೆ ನವೀನ್‌ ಡಿ. ಪಡೀಲ್‌ “ಕುಡ್ಲ ಕೆಫೆ’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕರಾವಳಿ ಮೂಲದ ರಕ್ಷಿತ್‌ ಶೆಟ್ಟಿ ನೇತೃತ್ವದ “ಕಿರಿಕ್‌ ಪಾರ್ಟಿ’ ಚಿತ್ರ ಅತ್ಯುತ್ತಮ ಮನೋರಂಜನ ಚಿತ್ರವಾಗಿ ಮೂಡಿಬಂದಿದೆ. 

ಮದಿಪು ಚಿತ್ರ 64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ “ಅತ್ಯುತ್ತಮ ಪ್ರಾದೇಶಿಕ ಚಿತ್ರ’ ಎಂಬ ಗೌರವಕ್ಕೆ ಎ. 8ರಂದು ಭಾಜನವಾಗಿತ್ತು. ಇದೀಗ ಮತ್ತೆ ಇದೇ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಲಭಿಸುವ ಮೂಲಕ ತುಳು ಚಿತ್ರರಂಗಕ್ಕೆ ಇನ್ನಷ್ಟು ಬಲ ಬಂದಂತಾಗಿದೆ. ಆಸ್ಥಾ ಪ್ರೊಡಕ್ಷನ್‌ ಲಾಂಛನದಲ್ಲಿ ತಯಾರಾದ “ಮದಿಪು’ ಚಿತ್ರದ ಕಥೆ, ಚಿತ್ರಕಥೆ, ಕಲಾ ನಿರ್ದೇಶನವನ್ನು ಚೇತನ್‌ ಮುಂಡಾಡಿ ಮಾಡಿದ್ದು, ಸಂದೀಪ್‌ ಕುಮಾರ್‌ ನಂದಳಿಕೆ ನಿರ್ಮಾಪಕರು. ಈ ಚಿತ್ರ ಮಾ. 10ರಂದು ನಗರದ ಸುಚಿತ್ರಾ ಟಾಕೀಸ್‌ ಸೇರಿದಂತೆ ಕರಾವಳಿಯ 9 ಥಿಯೇಟರ್‌ನಲ್ಲಿ  ಬಿಡುಗಡೆಗೊಂಡಿತ್ತು. 

ಕಾಮಿಡಿ ಪಾತ್ರದ ಮೂಲಕ ಕರಾವಳಿಯಾದ್ಯಂತ ಮನೆಮತಾದ ನವೀನ್‌ ಡಿ. ಪಡೀಲ್‌ “ಕುಡ್ಲ ಕೆಫೆ’ ತುಳುಚಿತ್ರದಲ್ಲಿ ವಿಭಿನ್ನ ಪೋಷಕ ಪಾತ್ರದ ಮೂಲಕ ಗಮನ ಸೆಳೆದಿದ್ದರು. ರಂಜನ್‌ ಶೆಟ್ಟಿ ಹಾಗೂ ಸೂರ್ಯ ಮೆನನ್‌ ಸೇರಿ ನಿರ್ಮಿಸಿದ “ಕುಡ್ಲ ಕೆಫೆ’ ಚಿತ್ರವನ್ನು ಸೂರ್ಯ ಮೆನನ್‌ ನಿರ್ದೇಶಿಸಿದ್ದಾರೆ. ಗೆಳೆಯರು ಒಟ್ಟು ಸೇರಿ ಹೊಟೇಲ್‌ ಒಂದನ್ನು ಉಳಿಸಲು ಕಬಡ್ಡಿ ಆಯೋಜಿಸಿದ ಕಥೆಯ ಈ ಚಿತ್ರದಲ್ಲಿ ಪಡೀಲ್‌ ಅವರ ಅಭಿನಯಕ್ಕಾಗಿ ಪೋಷಕ ಪ್ರಶಸ್ತಿ ಗೌರವ ದೊರಕಿದೆ. 
ಈ ಹಿಂದೆ “ಕೋಟಿ ಚೆನ್ನಯ’ ಚಿತ್ರದ ನೀತು ಅವರಿಗೆ ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿ ಹಾಗೂ “ಗಗ್ಗರ’ ಚಿತ್ರದಲ್ಲಿ ಎಂ.ಕೆ. ಮಠ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ದೊರಕಿತ್ತು. 

ಈ ಮಧ್ಯೆ ಕರಾವಳಿ ಮೂಲದವರಾದ ರಕ್ಷಿತ್‌ ಶೆಟ್ಟಿ ನಿರ್ಮಾಣ ಹಾಗೂ ಅಭಿನಯದ ರಿಷಭ್‌ ಶೆಟ್ಟಿ ನಿರ್ದೇಶನದ “ಕಿರಿಕ್‌ ಪಾರ್ಟಿ’ ಕನ್ನಡ ಚಿತ್ರ ಅತ್ಯುತ್ತಮ ಮನೋರಂಜನಾ ಚಿತ್ರ ಎಂಬ ಗೌರವಕ್ಕೆ ಪಾತ್ರವಾಗಿದೆ. ಈ ಚಿತ್ರ ಇತ್ತೀಚೆಗೆ ತೆರೆಕಂಡು ರಾಜ್ಯವ್ಯಾಪಿ ಉತ್ತಮ ಗಳಿಕೆಯೊಂದಿಗೆ ಸದ್ದು ಮಾಡಿತ್ತು. 

ತುಳುನಾಡಿಗೆ ಸಂದ ಗೌರವ
ತುಳು ಭಾಷೆ ಮೇಲಿನ ಪ್ರೀತಿಯಿಂದ ನನ್ನನ್ನು ಆಶೀರ್ವದಿಸಿದ ತುಳುನಾಡಿನ ಸರ್ವ ಧರ್ಮದ ಸಮಸ್ತ ಜನರಿಗೆ ಸಂದ ಗೌರವ ಇದಾಗಿದೆ. ರಂಗಭೂಮಿಯ ಮೂಲಕ, ತುಳು, ಕನ್ನಡ ಚಿತ್ರರಂಗದಲ್ಲಿ ಸಾಧನೆ ಮಾಡಲು ಕಾರಣವಾದ ನನ್ನ ತಾಯ್ನೆಲ ಹಾಗೂ ಬೆಂಬಲಿಸಿದ ಸರ್ವರಿಗೂ ಆಭಾರಿ. ಈ ಪ್ರಶಸ್ತಿ ಮೂಲಕ ತುಳುಚಿತ್ರರಂಗಕ್ಕೆ  ಇನ್ನಷ್ಟು  ಸ್ಫೂರ್ತಿ ಸಿಗುವಂತಾಗಲಿ.
– ನವೀನ್‌ ಡಿ. ಪಡೀಲ್‌, ಖ್ಯಾತ ನಟ

ಟಾಪ್ ನ್ಯೂಸ್

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

Exam

NEET ಮಹಾರಾಷ್ಟ್ರದಲ್ಲೂ ಅಕ್ರಮ ಬಹಿರಂಗ

HDK (3)

Mining; ನನ್ನ ಮೇಲೆ ಸಿಟ್ಟು ; ದೇವದಾರಿಗೆ ತಡೆ : ಕೇಂದ್ರ ಸಚಿವ ಕುಮಾರಸ್ವಾಮಿ

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Rain ಕರಾವಳಿ: ಜೂ.26ರ ವರೆಗೆ ಬಿರುಸಿನ ಮಳೆ ಸಾಧ್ಯತೆ

Rain ಕರಾವಳಿ: ಜೂ.26ರ ವರೆಗೆ ಬಿರುಸಿನ ಮಳೆ ಸಾಧ್ಯತೆ

ಕರಾವಳಿಯ ಪ್ರಮುಖ ದೇಗುಲಗಳಲ್ಲಿ ಭಕ್ತಸಂದಣಿ

ಕರಾವಳಿಯ ಪ್ರಮುಖ ದೇಗುಲಗಳಲ್ಲಿ ಭಕ್ತಸಂದಣಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Rain ಕರಾವಳಿ: ಜೂ.26ರ ವರೆಗೆ ಬಿರುಸಿನ ಮಳೆ ಸಾಧ್ಯತೆ

Rain ಕರಾವಳಿ: ಜೂ.26ರ ವರೆಗೆ ಬಿರುಸಿನ ಮಳೆ ಸಾಧ್ಯತೆ

Theft Case ಮಂಗಳೂರು: 13 ಲಕ್ಷ ರೂ. ಚಿನ್ನಾಭರಣ ಕಳವು

Theft Case ಮಂಗಳೂರು: 13 ಲಕ್ಷ ರೂ. ಚಿನ್ನಾಭರಣ ಕಳವು

“ಮಂಗಳೂರಿನಲ್ಲಿ’ ಸಿದ್ಧವಾಗುತ್ತಿದೆ “ತೇಲುವ ಜೆಟ್ಟಿ’! ದೇಶದಲ್ಲೇ ನಿರೀಕ್ಷಿತ ಯೋಜನೆ

“ಮಂಗಳೂರಿನಲ್ಲಿ’ ಸಿದ್ಧವಾಗುತ್ತಿದೆ “ತೇಲುವ ಜೆಟ್ಟಿ’! ದೇಶದಲ್ಲೇ ನಿರೀಕ್ಷಿತ ಯೋಜನೆ

ಕರಾವಳಿಯಲ್ಲಿ ಸುರಿದೇ ಇಲ್ಲ ಜಿಟಿ ಜಿಟಿ ಮಳೆ

ಕರಾವಳಿಯಲ್ಲಿ ಸುರಿದೇ ಇಲ್ಲ ಜಿಟಿ ಜಿಟಿ ಮಳೆ

MUST WATCH

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

udayavani youtube

ಕಡುಬು ಸೇವೆಗೆ ಒಲಿಯುವ ಮುಂಡ್ರಪಾಡಿ ಈಶ

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

ಹೊಸ ಸೇರ್ಪಡೆ

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

Exam

NEET ಮಹಾರಾಷ್ಟ್ರದಲ್ಲೂ ಅಕ್ರಮ ಬಹಿರಂಗ

HDK (3)

Mining; ನನ್ನ ಮೇಲೆ ಸಿಟ್ಟು ; ದೇವದಾರಿಗೆ ತಡೆ : ಕೇಂದ್ರ ಸಚಿವ ಕುಮಾರಸ್ವಾಮಿ

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.