ಮಂಗಳೂರು: ಪಿಲಿಕುಳ ಮೃಗಾಲಯಕ್ಕೆ ಬಂದಿವೆ ಹೊಸ ಅತಿಥಿಗಳು
Team Udayavani, Dec 21, 2022, 6:45 AM IST
ಮಂಗಳೂರು: ಕೇಂದ್ರ ಮೃಗಾಲಯ ಪ್ರಾಧಿಕಾರದ ಅನಮತಿ ಮೇರೆಗೆ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಗುಜರಾತ್ನ ಗ್ರೀನ್ ಮೃಗಾಲಯದಿಂದ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಮಧ್ಯ ಮತ್ತು ದಕ್ಷಿಣ ಅಮೆರಿಕ, ಬ್ರೆಜಿಲ್, ಅರ್ಜೆಂಟೀನ, ಆಫ್ರಿಕಾ ಖಂಡ ಮತ್ತು ಆಸ್ಟ್ರೇಲಿಯಗಳಲ್ಲಿ ಕಾಣಸಿಗುವ ವಿವಿಧ ಪ್ರಾಣಿಗಳನ್ನು ತರಲಾಗಿದೆ.
ಸಣ್ಣ ಜಾತಿಯ ಅಳಿಲು ಕಪಿ, ಮಾರ್ಮೊಸೆಟ್, ಕೆಂಪು ಕೈಯ ಟೆಮಾರಿನ, ಮಾರ ಮಾರ, ಬೃಹತ್ ಗಾತ್ರದ ನೀಲಿ ಬಂಗಾರದ ಮಕಾವು, ಮಿಲಿಟರಿ ಮಕಾವು, ಗಾಲಾ ಕೋಕಟು, ಹಸಿರು ಟೊರೆಕೊ ಮತ್ತು ವಿವಿಧ ಜಾತಿಯ ಪರದೇಶದ ಪಕ್ಷಿಗಳನ್ನು ತರಿಸಲಾಗಿದೆ. ಪಿಲಿಕುಳದಲ್ಲಿ ಹೆಚ್ಚುವರಿಯಾಗಿರುವ ಹುಲಿಗಳು, ಚಿರತೆಗಳು, ಕಾಡುನಾಯಿಗಳು ಮತ್ತು ವಿವಿಧ ಜಾತಿಯ ಉರಗಗಳನ್ನು ಕೊಡಲಾಗಿದೆ.
ಹಲವು ವಿದೇಶಿ ಪ್ರಾಣಿಗಳನ್ನು ಉಚಿತವಾಗಿ ಕೊಡಲಾಗುವುದೆಂದು ಗ್ರೀನ್ ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಹೊಸದಾಗಿ ಬಂದ ಪ್ರಾಣಿಗಳ ಆರೋಗ್ಯವನ್ನು ಪರಿಶೀಲಿಸಲು ಮತ್ತು ಇಲ್ಲಿಯ ವಾತಾವರಣಕ್ಕೆ ಒಗ್ಗುವ ತನಕ ಕ್ವಾರೆಂಟೈನ್ನಲ್ಲಿ ಇಡಲಾಗಿದೆ. ಪಕ್ಷಿಗಳು ಈಗಾಗಲೇ ವೀಕ್ಷಣೆಗೆ ಮುಕ್ತವಾಗಿವೆ. ಮೃಗಾಲಯದ ವೈದ್ಯಾಧಿಕಾರಿಗಳು, ಬಯೋಲೋಜಿಸ್ಟ್ಗಳು ಮತ್ತು ಪ್ರಾಣಿಪರಿಪಾಲಕರು ಪ್ರಾಣಿಗಳ ಆರೋಗ್ಯದ ಮೇಲೆ ನಿಗಾ ವಹಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ