ಪ್ರಾಪರ್ಟಿ ಕಾರ್ಡ್‌ ಕಡ್ಡಾಯಗೊಳಿಸುವ ಪ್ರಕ್ರಿಯೆ ಚುರುಕು


Team Udayavani, Oct 30, 2018, 11:51 AM IST

30-october-4.gif

ಮಹಾನಗರ: ಕರಾವಳಿ ಕರ್ನಾಟಕದಲ್ಲೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಅನುಷ್ಠಾನಗೊಂಡಿರುವ ರಾಜ್ಯ ಸರಕಾರದ ಪ್ರಾಪರ್ಟಿ ಕಾರ್ಡ್‌ (ಆಸ್ತಿ ಮಾಲಕತ್ವದ ದಾಖಲೆ) ಪ್ರಕ್ರಿಯೆ ಚುರುಕುಗೊಂಡಿದೆ. ಆ ಮೂಲಕ ಮುಂದಿನ ವರ್ಷ ಜನವರಿಯಿಂದ ನಗರದಲ್ಲಿಯೂ ಪ್ರಾಪರ್ಟಿ ಕಾರ್ಡ್‌ ವ್ಯವಸ್ಥೆಯನ್ನು ಕಡ್ಡಾಯಗೊಳಿಸುವ ಪ್ರಕ್ರಿಯೆಗೆ ಜಿಲ್ಲಾಡಳಿತ ಮುಂದಾಗಿದೆ. 2 ತಿಂಗಳಲ್ಲಿ ಆಸ್ತಿ ದಾಖಲೆಗಳ ಸಂಖ್ಯೆ ದುಪ್ಪಟ್ಟುಗೊಂಡಿದ್ದು, ತಿಂಗಳಿಗೆ 300 ಆಸ್ತಿ ದಾಖಲೆಗಳು ಸಲ್ಲಿಕೆಯಾಗುತ್ತಿವೆ. ದಿನಕ್ಕೆ 50 ಮಂದಿ ಪ್ರಾಪರ್ಟಿ ಕಾರ್ಡ್‌ ಪಡೆದುಕೊಳ್ಳುವುದಕ್ಕೆ ಬರುತ್ತಿದ್ದಾರೆ.

ಮೂಲ ಸೌಕರ್ಯ ಹೆಚ್ಚಿಸಲು ಅನುದಾನಕ್ಕೆ ಮನವಿ
ಪ್ರಾಪರ್ಟಿ ಕಾರ್ಡ್‌ ವಿತರಣೆ ಸಂಬಂಧಪಟ್ಟು ಹೆಚ್ಚುವರಿಯಾಗಿ 15 ಮಂದಿ ಸರ್ವೆಯರ್‌ಗಳನ್ನು ನಿಯುಕ್ತಿಗೊಳಿಸಲಾಗಿದ್ದು, ಒಟ್ಟು 21 ಮಂದಿ ಸರ್ವೆಯರ್‌ಗಳು ಕಾರ್ಯ ನಿರತರಾಗಿದ್ದಾರೆ. ಇವರು ಬಾಕಿ ಇರುವ ಸರ್ವೆಗಳ ಜತೆಗೆ ಮನೆ-ಮನೆಗಳಿಗೆ ತೆರಳಿ ಪ್ರಾಪರ್ಟಿ ಕಾರ್ಡ್‌ ಆವಶ್ಯಕತೆ ಬಗ್ಗೆ ವಿವರಿಸಿ ದಾಖಲೆಪತ್ರಗಳು ನೀಡಲು ಬಾಕಿ ಇರುವವರಿಂದ ಸೂಕ್ತ ದಾಖಲೆಪತ್ರಗಳನ್ನು ಸಂಗ್ರಹಿಸುತ್ತಿದ್ದಾರೆ. ಪ್ರಾಪರ್ಟಿ ಕಾರ್ಡ್‌ ವಿತರಣೆ ಪ್ರಕ್ರಿಯೆಗೆ ಇನ್ನೂ ಹೆಚ್ಚುವರಿಯಾಗಿ 5 ಮಂದಿಯನ್ನು ನಿಯುಕ್ತಿಗೊಳಿಸಿ ತರಬೇತಿ ನೀಡಲಾಗುತ್ತಿದೆ.

ಓರ್ವ ಅಧೀಕ್ಷಕ ಹಾಗೂ 3 ಮಂದಿ ತಹಶೀಲ್ದಾರರು ಸೇರಿ 4 ಮಂದಿ ವಿಚಾರಣಾ ಅಧಿಕಾರಿಗಳಿದ್ದಾರೆ. ಹೆಚ್ಚುವರಿ ಕಂಪ್ಯೂಟರ್‌ ಸೇರಿದಂತೆ ಮೂಲ ಸೌಕರ್ಯಗಳನ್ನು ಹೆಚ್ಚಿಸಲು ಅನುದಾನ ಕೋರಲಾಗಿದೆ ಎಂದು ಪ್ರಾಪರ್ಟಿ ಕಾರ್ಡ್‌ ಯೋಜನಾಧಿಕಾರಿ ಬಿ.ಕೆ. ಕುಸುಮಾಧರ್‌ ತಿಳಿಸಿದ್ದಾರೆ.

ಜನವರಿಯಿಂದ ಕಡ್ಡಾಯ
ಮಂಗಳೂರು ನಗರದಲ್ಲಿ 2012ರ ಎಪ್ರಿಲ್‌ನಲ್ಲಿ ಯೋಜನೆ ಆರಂಭಗೊಂಡಿತ್ತು. ಆದರೆ ಪ್ರಾಪರ್ಟಿ ಕಾರ್ಡ್‌ ಕಡ್ಡಾಯಗೊಳಿಸುವ ಬಗ್ಗೆ ಸರಕಾರದ ಮಟ್ಟದಲ್ಲಿ ಇದ್ದ ಗೊಂದಲಗಳಿಂದಾಗಿ ಕಾರ್ಡ್‌ ವಿತರಣೆಯಲ್ಲಿ ಹೆಚ್ಚಿನ ಪ್ರಗತಿ ಸಾಧ್ಯವಾಗಿರಲಿಲ್ಲ. ಇದೀಗ ಜಿಲ್ಲಾಡಳಿತ ಇದನ್ನು ಕಡ್ಡಾಯಗೊಳಿಸಲು ಕಾರ್ಯೋನ್ಮುಖವಾಗಿದೆ. ಅಕ್ಟೋಬರ್‌ ನಲ್ಲಿ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಅವರು ಪತ್ರಿಕಾ ಪ್ರಕಟನೆ ನೀಡಿ ಜನವರಿಯಿಂದ ಕಡ್ಡಾಯವಾಗಲಿದೆ ಎಂಬುದಾಗಿ ತಿಳಿಸಿದ್ದರು.

ಆಸ್ತಿಗಳ ದಾಖಲೆ ಪತ್ರಗಳನ್ನು ನೀಡಲು ಮಾಲಕರಿಗೆ ಮೂರು ತಿಂಗಳ ಕಾಲಾವಕಾಶ ನೀಡಿ ಪಿ.ಆರ್‌. ಕಾರ್ಡ್‌ ಪಡೆಯಲು ಜನವರಿಯೊಳಗೆ ದಾಖಲೆಗಳನ್ನು ಒದಗಿಸಬೇಕು ಎಂದು ತಿಳಿಸಿಕೋರಿದ್ದರು. ಈ ಸಂಬಂಧ ಸರಕಾರದ ಆದೇಶಕ್ಕಾಗಿ ಕಾಯಲಾಗುತ್ತಿದ್ದು, ಡಿ.1ರಿಂದಲೇ ನಗರದಲ್ಲಿ ಪ್ರಾಪರ್ಟಿ ಕಾರ್ಡ್‌ ಕಡ್ಡಾಯಗೊಳಿಸುವ ಸಾಧ್ಯತೆ ಇದೆ.

ಪ್ರಾಪರ್ಟಿ ಕಾರ್ಡ್‌ ಪ್ರಕ್ರಿಯೆ
ಅರ್ಬನ್‌ ಪ್ರಾಪರ್ಟಿ ಒನರ್‌ಶಿಪ್‌ ರೆಕಾರ್ಡ್‌ (ನಗರ ಆಸ್ತಿ ಮಾಲಕತ್ವದ ದಾಖಲೆ) ಎಂದು ಕರೆಯಲ್ಪಡುವ ಪ್ರಾಪರ್ಟಿ ಕಾರ್ಡ್‌ ಕಂಪ್ಯೂಟರೀಕೃತ ದಾಖಲೆ ಪತ್ರ. ಆಸ್ತಿಯ ಸ್ವರೂಪ, ಆಸ್ತಿ ದಾಖಲೆಗಳು, ಋಣಭಾರ ಸೇರಿದಂತೆ ಇತರ ಬಾಧ್ಯತೆಗಳು, ಆಸ್ತಿ ನಕ್ಷೆ ವಿವರಗಳನ್ನು ಒಳಗೊಂಡಿರುತ್ತದೆ, ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಆಶ್ರಯದಲ್ಲಿ, ಖಾಸಗಿ ಸಂಸ್ಥೆ ಸಹಭಾಗಿತ್ವದಲ್ಲಿ ನಗರ ಆಸ್ತಿಗಳ ನಕ್ಷೆ ಮತ್ತು ಹಕ್ಕುದಾಖಲೆಗಳನ್ನು ಸಿದ್ಧಪಡಿಸುವ (ಅರ್ಬನ್‌ ಪ್ರಾಪರ್ಟಿ ಒನರ್‌ಶಿಪ್‌ ರೆಕಾರ್ಡ್ಸ್ -ಯುಪಿಒಆರ್‌) ಯೋಜನೆ ಇದಾಗಿದೆ.

ಆಸ್ತಿಗಳಿಗೆ ನೋಟಿಸ್‌ ನೀಡಿ ದಾಖಲೆಪತ್ರಗಳನ್ನು ಸಂಗ್ರಹಿಸಿ ಡಾಟಾ ಎಂಟ್ರಿ ಮತ್ತು ಸ್ಕ್ಯಾನಿಂಗ್, ಅಳತೆ ಹಾಗೂ ನಕ್ಷೆ ತಯಾರಿಸುವುದು, ಆಸ್ತಿಗಳ ಛಾಯಾಚಿತ್ರ ತೆಗೆಯುವುದು, ಮಾಲಕತ್ವದ ದಾಖಲೆಗಳ ಸಂಗ್ರಹಣೆ, ಪರಿಶೀಲನೆ, ಸ್ಕ್ಯಾನಿಂಗ್  ಮತ್ತು ಅಂಕಿ ಅಂಶಗಳ ದಾಖಲೀಕರಣ, ಇಲಾಖೆಯಿಂದ ಮಾಲಕತ್ವದ ತನಿಖಾ ಪ್ರಕ್ರಿಯೆಗಳು ಒಳಗೊಂಡಿದ್ದು ಕರಡು ಪ್ರಾಪರ್ಟಿ ಕಾರ್ಡ್‌ ತಯಾರಿಸಿ ವಿತರಿಸಲಾಗುತ್ತಿದೆ. ಮಾಲಕರು ಅದನ್ನು ಪರಿಶೀಲಿಸಿ ತಿದ್ದುಪಡಿಗಳಿದ್ದರೆ 30 ದಿನಗಳೊಳಗೆ ಮರಳಿಸಿ ಸರಿಪಡಿಸಬೇಕು. ಮಾಲಕರ 10 ಬೆರಳುಗಳ ಬಯೋಮೆಟ್ರಿಕ್‌ ಪಿಂಗರ್‌ಪ್ರಿಂಟ್‌ ಸಂಗ್ರಹಿಸಲಾಗುತ್ತದೆ. ಇದೆಲ್ಲ ನಡೆದು ಪಕ್ಕಾ ಕಾರ್ಡ್‌ ಸಿದ್ಧಗೊಳ್ಳುತ್ತದೆ. ಆಸ್ತಿ ಮಾಲಕರಿಂದ ನಿಗದಿತ ಶುಲ್ಕ ಪಡೆದು ಪಕ್ಕಾ ಕಾರ್ಡ್‌ ವಿತರಿಸಲಾಗುತ್ತದೆ. ಕಾರ್ಡ್‌ ಆಸ್ತಿಯ ಸ್ವರೂಪ, ಆಸ್ತಿ ದಾಖಲೆಗಳು, ಋಣಭಾರ ಸೇರಿದಂತೆ ಇತರ ಬಾಧ್ಯತೆಗಳು, ಆಸ್ತಿ ನಕ್ಷೆ, ವಿಶೇಷ ಸಂಖ್ಯೆ ಹೊಂದಿರುತ್ತದೆ.

 ಶೀಘ್ರ ನೀಡಲು ಮಾಲಕರಿಗೆ ಮನವಿ
ಪ್ರಾಪರ್ಟಿಕಾರ್ಡ್‌ ಪ್ರಕ್ರಿಯೆ ವೇಗ ಪಡೆದುಕೊಂಡಿದೆ. ಈಗಾಗಲೇ ಹೆಚ್ಚುವರಿ ಸಿಬಂದಿಯನ್ನು ನಿಯೋಜಿಸಲಾಗಿದ್ದು ಸರ್ವೆ ಹಾಗೂ ದಾಖಲೆಗಳ ಸಂಗ್ರಹ ಕಾರ್ಯ ಪ್ರಗತಿಯಲ್ಲಿದೆ. ದಾಖಲೆಗಳನ್ನು ನೀಡಲು ಬಾಕಿ ಇರುವ ಆಸ್ತಿಗಳ ಮಾಲಕರು ಇವುಗಳನ್ನು ಶೀಘ್ರ ನೀಡಬೇಕು ಎಂಬುದಾಗಿ ಮನವಿ ಮಾಡಲಾಗಿದೆ.
– ಬಿ.ಕೆ.ಕುಸುಮಾಧರ್‌,
ಪ್ರಾಪರ್ಟಿ ಕಾರ್ಡ್‌ ಯೋಜನಾಧಿಕಾರಿ 

18,380 ಆಸ್ತಿಗಳ ಮಾಲಕರಿಗೆ ಪಿಆರ್‌ ಕಾರ್ಡ್‌ ವಿತರಣೆ
ಪಾಲಿಕೆ ವ್ಯಾಪ್ತಿಯ 32 ಕಂದಾಯ ಗ್ರಾಮಗಳಲ್ಲಿನ 60 ವಾರ್ಡ್‌ಗಳಲ್ಲಿ ಅನುಷ್ಠಾನಗೊಳ್ಳುತ್ತಿದೆ. ಪಾಲಿಕೆಯ 32 ಕಂದಾಯ ಗ್ರಾಮಗಳನ್ನು 6 ವಲಯಗಳಾಗಿ ಮತ್ತು 30 ಸೆಕ್ಟರ್‌ಗಳಾಗಿ ವಿಂಗಡಿಸಿದ್ದು ಅಳತೆಗೆ ಒಳಪಟ್ಟ 1,50,581 ಆಸ್ತಿಗಳನ್ನು ಸಮೀಕ್ಷೆ ನಡೆಸಲಾಗಿದೆ. ಈಗಾಗಲೇ ಅ. 27ರ ವರೆಗೆ 77,070 ಆಸ್ತಿಗಳ ದಾಖಲೆಗಳನ್ನು ಸಂಗ್ರಹಿಸಲಾಗಿದ್ದು 31,626 ಆಸ್ತಿಗಳ ಕರಡು ಪಿಆರ್‌ ಕಾರ್ಡ್‌ಗಳನ್ನು ತಯಾರಿಸಲಾಗಿದೆ. 26,220 ಆಸ್ತಿಗಳ ಕರಡು ಪಿಆರ್‌ ಕಾರ್ಡ್‌ ವಿತರಿಸಲಾಗಿದೆ. 23,503 ಅಂತಿಮ ಪಿಆರ್‌ ಕಾರ್ಡ್‌ಗಳು ಸಿದ್ಧಗೊಂಡಿದ್ದು 18,380 ಆಸ್ತಿಗಳ ಅಂತಿಮ ಪಿಆರ್‌ ಕಾರ್ಡ್‌ಗಳನ್ನು ಮಾಲಕರಿಗೆ ವಿತರಿಸಲಾಗಿದೆ.

ವಿಶೇಷ ವರದಿ

ಟಾಪ್ ನ್ಯೂಸ್

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.