ಪ್ಲಾಸ್ಟಿಕ್ ಸಂಗ್ರಹಣೆ ಕೇಂದ್ರ ಸ್ಥಾಪನೆಗೆ ಪ್ರಸ್ತಾವ
Team Udayavani, Nov 24, 2020, 1:59 PM IST
ಸಾಂದರ್ಭಿಕ ಚಿತ್ರ
ಮಹಾನಗರ, ನ. 23: ಪಾಲಿಕೆ ವ್ಯಾಪ್ತಿಯಲ್ಲಿ ಈ ಹಿಂದೆ ಇದ್ದ ಪ್ಲಾಸ್ಟಿಕ್ ಸಂಗ್ರಹ ಕೇಂದ್ರದ ಮಾದರಿಯಲ್ಲಿ ವ್ಯವಸ್ಥಿತ ವಾದ ಪ್ಲಾಸ್ಟಿಕ್ ಸಂಗ್ರಹಣೆ ಕೇಂದ್ರಕ್ಕೆ (ಪ್ಲಾಸ್ಟಿಕ್ ಕಲೆಕ್ಷನ್ ಸೆಂಟರ್) ಅವಕಾಶ ಮಾಡಿಕೊಡಲು ಪಾಲಿಕೆ ಮುಂದಾಗಿದೆ.
ನಗರದಲ್ಲಿ ಕ್ಯಾರಿ ಬ್ಯಾಗ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಲ್ಲದೆ 50 ಮೈಕ್ರಾನ್‌ಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್ ಉತ್ಪಾದನೆ, ಬಳಕೆಗೆ ಕೂಡ ನಿಷೇಧವಿದೆ. ಆದರೂ ಪ್ಲಾಸ್ಟಿಕ್ ಹಾವಳಿ ಹೆಚ್ಚಾಗಿದೆ. ಕೋವಿಡ್ ಸಂದರ್ಭ ಹೊಟೇಲ್‌ಗಳಿಂದ ಊಟ, ತಿಂಡಿ ಪಾರ್ಸೆಲ್ ಪ್ರಮಾಣ ಹೆಚ್ಚಳ, ಪ್ಲಾಸ್ಟಿಕ್ ವಿರುದ್ಧ ಅಧಿಕಾರಿಗಳ ಕಾರ್ಯಾಚರಣೆ ಸ್ಥಗಿತ ಮೊದಲಾದವುಗಳು ಇದಕ್ಕೆ ಕಾರಣ.
ದಿನಕ್ಕೆ 60 ಟನ್ :
ಪಾಲಿಕೆ ವ್ಯಾಪ್ತಿಯಲ್ಲಿ ಪ್ರಸ್ತುತ ದಿನಕ್ಕೆ ಸುಮಾರು 60 ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಇದರಲ್ಲಿ ಕ್ಯಾರಿ ಬ್ಯಾಗ್, ಪೊಟ್ಟಣಗಳ ಪ್ಲಾಸ್ಟಿಕ್ ಪಾಲು ದೊಡ್ಡದು. ಪಚ್ಚನಾಡಿಯಲ್ಲಿ ಪ್ಲಾಸ್ಟಿಕ್ ಸಂಸ್ಕರಣೆ ಘಟಕವಿದೆ. ಇದಲ್ಲದೆ ಬೈಕಂಪಾಡಿಯಲ್ಲಿಯೂ ಪ್ಲಾಸ್ಟಿಕ್ ರಿಸೈಕಲಿಂಗ್ ಘಟಕಗಳಿವೆ. ಆದರೂ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಸವಾಲಾಗಿದೆ.
ಸ್ಥಳಾವಕಾಶಕ್ಕೆ ಬೇಡಿಕೆ :
ಈ ಹಿಂದೆ ಕದ್ರಿ ಮಾರ್ಕೆಟ್ ಕಟ್ಟಡದಲ್ಲಿ “ಪ್ಲಾಸ್ಟಿಕ್ ಕಲೆಕ್ಷನ್ ಸೆಂಟರ್’ ಇತ್ತು. ಅಲ್ಲಿ ಸಾರ್ವಜನಿಕರಿಂದ ಕ್ಯಾರಿಬ್ಯಾಗ್ ಸಹಿತ ಎಲ್ಲ ರೀತಿಯ ಪ್ಲಾಸ್ಟಿಕ್‌ಗಳನ್ನು ಖರೀದಿಸಲಾಗುತ್ತಿತು. ಆದರೆ ಕಟ್ಟಡವನ್ನು ಕೆಡವಿದ ಅನಂತರ ಈಗ ಸ್ಥಳಾವಕಾಶವಿಲ್ಲ. ಅದೇ ರೀತಿಯ ಕಲೆಕ್ಷನ್ ಸೆಂಟರ್ ಮಾಡಲು ಪಾಲಿಕೆ ವ್ಯಾಪ್ತಿಯಲ್ಲಿ ಅವಕಾಶ ನೀಡಬೇಕು ಎಂದು ಪ್ಲಾಸ್ಟಿಕ್ ಉತ್ಪಾದನ ಸಂಸ್ಥೆಯವರು ಪಾಲಿಕೆಗೆ ಮನವಿ ಸಲ್ಲಿಸಿದ್ದು, ಇದಕ್ಕೆ ಪಾಲಿಕೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಕಾರ್ಯಾಚರಣೆ ಚುರುಕು :
ಪ್ಲಾಸ್ಟಿಕ್ ನಿರ್ವಹಣೆ ಬಗ್ಗೆ ಎನ್‌ಜಿಟಿ ಕೂಡ ಮಾಹಿತಿ ಕೇಳಿದೆ. ಹಸಿ, ಒಣಕಸವನ್ನು ವಿಂಗಡಿಸಿ ನೀಡುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ. ಪ್ಲಾಸ್ಟಿಕ್‌ನ ವಿಂಗಡಣೆ, ರಿಸೈಕಲಿಂಗ್ ಪಚ್ಚನಾಡಿ ಯಲ್ಲಿಯೂ ನಡೆಯುತ್ತದೆ. ನಿಷೇಧಿತ ಪ್ಲಾಸ್ಟಿಕ್ ಮಾರಾಟ, ಬಳಕೆ ಕಂಡು ಬಂದರೆ ದಂಡ ವಿಧಿಸುವ ಪ್ರಕ್ರಿಯೆಯನ್ನು ಇನ್ನಷ್ಟು ಹೆಚ್ಚಿಲಾಗುವುದು ಎಂದು ಮನಪಾ ಪರಿಸರ ಎಂಜಿನಿಯರ್ ಮಧು ಮನೋಹರ್ ತಿಳಿಸಿದ್ದಾರೆ.
ಪ್ಲಾಸ್ಟಿಕ್ ಬರುವುದು ಎಲ್ಲಿಂದ? :
ನಿಷೇಧಿತ ಪ್ಲಾಸ್ಟಿಕ್‌ಗಳ ಉತ್ಪಾದನೆ ದ.ಕ. ಜಿಲ್ಲೆಯಲ್ಲಿ ನಡೆಯುತ್ತಿಲ್ಲ. ಆದರೆ ಮುಂಬಯಿ, ಬೆಂಗಳೂರು ಕಡೆಯಿಂದ ಯಥೇಚ್ಛವಾಗಿ ಜಿಲ್ಲೆಗೆ ಪ್ಲಾಸ್ಟಿಕ್ ಪೂರೈಕೆಯಾಗುತ್ತಿದೆ. ಪ್ಲಾಸ್ಟಿಕ್ ನಿಷೇಧ ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕಾದರೆ ಈ ರೀತಿ ಬೇರೆ ರಾಜ್ಯ, ಜಿಲ್ಲೆಗಳಿಂದ ಬರುವ ಪ್ಲಾಸ್ಟಿಕ್ ಅನ್ನು ನಿರ್ಬಂಧಿಸಬೇಕು. ಪ್ಲಾಸ್ಟಿಕ್ ಬಳಕೆ ನಿಷೇಧ ಶೇ. 100ರಷ್ಟು ಕಷ್ಟಸಾಧ್ಯವಾದ್ದರಿಂದ ಅದರ ವಿಲೇವಾರಿಗೂ ಅಗತ್ಯ ಕ್ರಮ ಕೈಗೊಳ್ಳಬೇಕು. ಕಲೆಕ್ಷನ್ ಸೆಂಟರ್ ಮಾಡಿದರೆ ಜನರೇ ಸ್ವಯಂ ಆಗಿ ತಂದುಕೊಡಲು ಆಸಕ್ತಿ ತೋರಿಸಬಹುದು ಎನ್ನುವುದು ಪ್ಲಾಸ್ಟಿಕ್ ಉತ್ಪಾದಕರ ಅಭಿಪ್ರಾಯ.
ಬೇಡಿಕೆ ಪರಿಗಣನೆ : ಪ್ಲಾಸ್ಟಿಕ್ ಕಲೆಕ್ಷನ್ ಸೆಂಟರ್‌ಗೆ ಸ್ಥಳಾವಕಾಶ ನೀಡಲು ಬೇಡಿಕೆ ಬಂದಿದೆ. ಇದನ್ನು ಪರಿಗಣಿಸಿ ಪಾಲಿಕೆಗೆ ಸಂಬಂಧಿಸಿದ ಕಟ್ಟಡದಲ್ಲಿ ಸೂಕ್ತ ಸ್ಥಳಾವಕಾಶ ಒದಗಿಸಿಕೊಡುತ್ತೇವೆ. -ಅಕ್ಷಯ್ ಶ್ರೀಧರ್, ಆಯುಕ್ತರು, ಮನಪಾ
ನಿರ್ವಹಣೆಗೆ ಸಿದ್ಧ : ನಿಷೇಧಿತ ಪ್ಲಾಸ್ಟಿಕ್‌ಗಳು ಜಿಲ್ಲೆಗೆ ಪೂರೈಕೆಯಾಗದಂತೆ ನೋಡಿಕೊಳ್ಳಬೇಕು. ಪ್ಲಾಸ್ಟಿಕ್‌ನಿಂದ ಮಾಡುವ ಪ್ರಮುಖ ಕಂಪೆನಿಗಳ ತಿಂಡಿಪೊಟ್ಟಣಗಳನ್ನು ನಿಷೇಧಿಸಬೇಕು. ಪ್ಲಾಸ್ಟಿಕ್ ಬಳಕೆ ತಡೆಯುವ ಜತೆಗೆ ಬಳಕೆಯಾದ ಪ್ಲಾಸ್ಟಿಕ್‌ನ ಸಮರ್ಪಕ ವಿಲೇವಾರಿಯೂ ಅಗತ್ಯ. ಇದಕ್ಕೆ ಕಲೆಕ್ಷನ್ ಸೆಂಟರ್ ಪೂರಕ. ಇಂತಹ ಸೆಂಟರ್‌ನ್ನು ನಿರ್ವಹಿಸಲು ಅಸೋಸಿಯೇಶನ್ ಸಿದ್ಧವಿದೆ. ಈ ಬಗ್ಗೆ ಈಗಾಗಲೇ ಪಾಲಿಕೆಗೆ ಪ್ರಸ್ತಾವ ಸಲ್ಲಿಸಿದ್ದೇವೆ. -ಬಿ.ಎ. ನಝೀರ್, ಅಧ್ಯಕ್ಷರು, ಕೆನರಾ ಪ್ಲಾಸ್ಟಿಕ್ ಉತ್ಪಾದಕರ ಸಂಘ, ಮಂಗಳೂರು
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಗಳೂರು: ಲಾರಿಗಳಿಂದ ಬ್ಯಾಟರಿ ಕದಿಯುತ್ತಿದ್ದ ಆರೋಪಿಯ ಬಂಧನ
ಮಂಗಳೂರು ರಥಬೀಧಿಯಲ್ಲಿ ನೆಲಕ್ಕುರುಳಿದ ಬೃಹತ್ ಅಶ್ವಥ ಮರ: ವಾಹನಗಳಿಗೆ ಹಾನಿ
ಪಾದಾಚಾರಿಗೆ ಅಪರಿಚಿತ ವಾಹನ ಢಿಕ್ಕಿಯಾಗಿ ಪರಾರಿ: ವೃದ್ದ ಸ್ಥಳದಲ್ಲೇ ಸಾವು
ತುಳುವಿಗೆ ರಾಜ್ಯ ಭಾಷೆ ಮಾನ್ಯತೆ : ಕರಾವಳಿಯ ಅಕಾಡೆಮಿ ಅಧ್ಯಕ್ಷರಿಂದ ಸರಕಾರಕ್ಕೆ ಒತ್ತಡ
ಕಲೆಕ್ಟರ್ ಗೇಟ್ ಜಂಕ್ಷನ್: ಹಳೆ ಕಟ್ಟಡಕ್ಕೆ ಶೀಘ್ರ ಮುಕ್ತಿ?
MUST WATCH
ಸಮುದ್ರದಲ್ಲಿ ಪದ್ಮಾಸನ ಭಂಗಿ: ಕಾಲಿಗೆ ಸರಪಳಿ ಬಿಗಿದು ಈಜಿ ದಾಖಲೆ ಬರೆದ ಗಂಗಾಧರ್ ಜಿ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅವಾಂತರ: ನೂರಾರು ಮಂದಿಯ ಪ್ರಾಣ ಉಳಿಸಿದ ಕಾಪು ಎಸ್ಐ
ಅಹಿತಕರ ಬೆಳವಣಿಗೆಗಳು ಕಂಡುಬಂದರೆ ವಾಟ್ಸಾಪ್ ಮೂಲಕ ಮಾಹಿತಿ ಹಂಚಿಕೊಳ್ಳಿ; Compol ಶಶಿಕುಮಾರ್
ತಲೆಕೂದಲು, ಮೀಸೆ ಬೋಳಿಸುವಂತೆ ರಾಗಿಂಗ್: ಮಂಗಳೂರಿನಲ್ಲಿ 9 ವಿದ್ಯಾರ್ಥಿಗಳ ಬಂಧನ
ನೇತಾಜಿಯವರ ಜನ್ಮ ದಿನದಂದು ಅವರ ಆಪ್ತರ ಪುತ್ರಿಯಾದ ಜೊತೆ ಉಡುಪಿಯಲ್ಲಿ ಮಾತುಕತೆ,
ಹೊಸ ಸೇರ್ಪಡೆ
ಎಂಬುಲ್ದೇನಿಯ-ರೂಟ್ ಗ್ರೇಟ್ ಫೈಟ್
ಮಂಗಳೂರು ಪ್ಲಾಸ್ಟಿಕ್ ಪಾರ್ಕ್ಗೆ ಕೇಂದ್ರದಿಂದ 40 ಕೋ.ರೂ. : ಡಿವಿಎಸ್
ನಮ್ಮ ರಾಜ್ಯದ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್ ಓದಬೇಕು : ಬಿ.ಸಿ.ಪಾಟೀಲ್
ಸಕಾಲಕ್ಕೆ ಬಾರದ ತುರ್ತುವಾಹನ : ಸಾರ್ವಜನಿಕ ಆಸ್ಪತ್ರೆಗೆ ನುಗ್ಗಿ ದಾಂಧಲೆ ನಡೆಸಿದ ಗ್ರಾಮಸ್ಥರು
ಭಾರೀ ಚರ್ಚೆಗೆ ಗ್ರಾಸವಾದ ಬಿಜೆಪಿ-ಜೆಡಿಎಸ್ ಬೆಂಬಲಿತ ಸದಸ್ಯರ ಮೈತ್ರಿ ಧರ್ಮಪಾಲನೆ ಆಣೆ ಪ್ರಮಾಣ