
ಧರ್ಮಸ್ಥಳದ ಗೋಶಾಲೆಗೆ ಪುಂಗನೂರು ಹಸು ಆಗಮನ
Team Udayavani, Jan 12, 2023, 10:50 PM IST

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಗೋಶಾಲೆಗೆ ಪುಂಗನೂರು ತಳಿಯ 5 ಹಸುಗಳ ಆಗಮನವಾಗಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪುಂಗನೂರು ಗ್ರಾಮದ ಗೋದಾವರಿ ತೀರದಿಂದ ಹಸುಗಳನ್ನು ತರಲಾಗಿದೆ. ಆಕರ್ಷಕ ಹಾಗೂ ಬೆಲೆಬಾಳುವ ಈ ತಳಿಯ ಹಸುವಿನ ಹಾಲನ್ನು ಶ್ರೀ ಮಂಜುನಾಥ ಸ್ವಾಮಿಯ ಅಭಿಷೇಕಕ್ಕೆ ಬಳಕೆ ಮಾಡಲು ಕ್ಷೇತ್ರವು ಚಿಂತಿಸಿದೆ.
ದೇಶದಲ್ಲಿ ಸುಮಾರು 40 ವಿವಿಧ ತಳಿಯ ಹಸುಗಳಿದ್ದರೂ ಪುಂಗನೂರು ಹಸುವಿನ ಹಾಲಿಗೆ ಪ್ರಾಮುಖ್ಯತೆ ಹೆಚ್ಚು. ಈಗಾಗಲೇ ಧರ್ಮಸ್ಥಳದಲ್ಲಿ ಪಾರಂಪರಿಕವಾಗಿ ದೇಸಿ ತಳಿ ಹಸುಗಳ ಹಾಲಿನಿಂದಲೇ ದೇವರಿಗೆ ಅಭಿಷೇಕ ಮಾಡಲಾಗುತ್ತದೆ.
ದಿನಕ್ಕೆ 3 ಲೀಟರ್ ಬಳಕೆ
ಇದೀಗ ಶ್ರೀ ಕ್ಷೇತ್ರಕ್ಕೆ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಅನುಮತಿಯಂತೆ ಪುಂಗನೂರು ತಳಿಯ 2 ದನ ಅದರಲ್ಲಿ ಒಂದು ಹೆಣ್ಣು ಹಾಗೂ ಒಂದು ಗಂಡು ಕರು ಸಹಿತ ಒಂದು ಹೋರಿಯನ್ನು ತರಲಾಗಿದೆ. ಹಸುವಿಗೆ 4 ಲಕ್ಷ ರೂ. ಹಾಗೂ ಹೋರಿಗೆ 90 ಸಾವಿರ ರೂ. ನೀಡಲಾಗಿದೆ. ಅವುಗಳ ಹಾಲಿಗೆ ವಿಶೇಷ ಸ್ಥಾನವಿದ್ದು ಪೌಷ್ಟಿಕತೆ ಮತ್ತು ಪಾವಿತ್ರ್ಯ ಅಧಿಕ. ಪ್ರತಿನಿತ್ಯ 3 ಲೀ. ಹಾಲನ್ನು ಅಭಿಷೇಕಕ್ಕೆ ಬಳಸಲಾಗುತ್ತದೆಯಂತೆ. ಇದಕ್ಕೂ ಮುನ್ನ ದೇಸಿ ತಳಿಗಳಾದ ಗಿರ್, ಹಳ್ಳಿಕಾರ್, ಸಾಯಿವಾಲ, ಮಲಾ°ಡ್ ಗಿಡ್ಡ ತಳಿಯ ಹಾಲು ಬಳಸಲಾಗುತ್ತಿತ್ತು.
139 ಗೋವುಗಳು
ಕ್ಷೇತ್ರದ ಗೋಶಾಲೆಯಲ್ಲಿ ಇದೀಗ ಒಟ್ಟು 10 ಪುಂಗನೂರು ಹಸುಗಳಿದ್ದು, 7 ಗಿರ್ ತಳಿ ಸೇರಿ ಒಟ್ಟು 139 ಗೋವುಗಳಿವೆ ಎಂದು ಕ್ಷೇತ್ರದ ಗೋಶಾಲೆ ವ್ಯವಸ್ಥಾಪಕರಾದ ಯೋಗೀಶ್ ಭಟ್ ಉದಯವಾಣಿಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್: ಪ್ರಣಯ್ ಕ್ವಾರ್ಟರ್ ಫೈನಲ್ ಪಯಣ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಜ್ಜಿಯನ್ನು ಬಡಿದು ಕೊಂದಿದ್ದ ಪ್ರಕರಣ: ಜೈಲಿನಲ್ಲಿದ್ದ ಆರೋಪಿ ಮೊಮ್ಮಗ ಆಸ್ಪತ್ರೆಯಲ್ಲಿ ಸಾವು

Road Side ತ್ಯಾಜ್ಯ ಎಸೆದವರ ಪತ್ತೆ ಹಚ್ಚಿ ಅವರಿಂದಲೇ ಶುಚಿಗೊಳಿಸಿದ ಕೊಳ್ನಾಡಿನ ಯುವಕರು

Charmadi Ghat ಬಸ್-ಸ್ಕೂಟರ್ ಅಪಘಾತ: ಓರ್ವ ಸಾವು, ಸಹಸವಾರ ಗಂಭೀರ

Belthangady: ರಸ್ತೆ ವಿಚಾರದಲ್ಲಿ ಕುಟುಂಬದ ನಡುವೆ ಹೊಡೆದಾಟ

Sulliapadavu: ಮರದ ದಿಮ್ಮಿ ಮೈಮೇಲೆ ಬಿದ್ದು ವ್ಯಕ್ತಿ ಮೃತ್ಯು
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
