
ಪುತ್ತೂರು: ಕಳ್ಳತನ ಪ್ರಕರಣ; ಇಬ್ಬರು ಆರೋಪಿಗಳ ಬಂಧನ
Team Udayavani, Jan 11, 2023, 1:54 AM IST

ಪುತ್ತೂರು: ಎಪಿಎಂಸಿ ರಸ್ತೆಯ ಸೂತ್ರಬೆಟ್ಟುವಿನ ಬಾಡಿಗೆ ಮನೆಯೊಂದರಿಂದ ಕಳವು ಮಾಡಿದ ಇಬ್ಬರು ಆರೋಪಿಗಳನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ.
ಕೂರ್ನಡ್ಕ ನಿವಾಸಿ ಮಹಮ್ಮದ್ ಮುಸ್ತಫ³ (28), ಸವಣೂರು ಚಾಪಳ್ಳ ನಿವಾಸಿ ಶಮೀರ್(24) ಬಂಧಿತರು. ಬಾಡಿಗೆ ಮನೆ ನಿವಾಸಿ ವಿವೇಕಾನಂದ ಯಾನೆ ಸತ್ಯನಾರಾಯಣ ಅವರು ಜ. 4ರಂದು ಸ್ವಂತ ಊರಾದ ಮಧುರೈಗೆ ಹೋಗಿದ್ದರು.
ಹಾಗಾಗಿ ಅವರ ಅಣ್ಣ ಗೋಪಿನಾಥ ಅವರು ಬಾಡಿಗೆ ಬಿಡಾರಕ್ಕೆ ಬೀಗ ಹಾಕಿ ಒಂದು ಜತೆ ಬೀಗದ ಕೀಯನ್ನು ಮನೆಯ ಹೊರಗಡೆ ನಿಲ್ಲಿಸಿದ್ದ ಮೋಟಾರು ಸೈಕಲ್‌ನ ಬಾಕ್ಸ್ ನಲ್ಲಿಟ್ಟು, ಇನ್ನೊಂದು ಜತೆ ಕೀಯನ್ನು ತೆಗೆದುಕೊಂಡು ಹೋಗಿದ್ದರು.
ಜ.8ರಂದು ಬಿಡಾರಕ್ಕೆ ವಾಪಸ್ ಬಂದು ನೋಡಿದಾಗ ಕಳ್ಳತನ ಬೆಳಕಿಗೆ ಬಂದಿತು. ಬಾಡಿಗೆ ಮನೆಯಿಂದ ಸುಮಾರು 25 ಸಾವಿರ ರೂ. ಮೌಲ್ಯದ ವಿವಿಧ ವಸ್ತುಗಳನ್ನು ಕಳವು ಮಾಡಲಾಗಿತ್ತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಜ್ಜಿಯನ್ನು ಬಡಿದು ಕೊಂದಿದ್ದ ಪ್ರಕರಣ: ಜೈಲಿನಲ್ಲಿದ್ದ ಆರೋಪಿ ಮೊಮ್ಮಗ ಆಸ್ಪತ್ರೆಯಲ್ಲಿ ಸಾವು

Road Side ತ್ಯಾಜ್ಯ ಎಸೆದವರ ಪತ್ತೆ ಹಚ್ಚಿ ಅವರಿಂದಲೇ ಶುಚಿಗೊಳಿಸಿದ ಕೊಳ್ನಾಡಿನ ಯುವಕರು

Charmadi Ghat ಬಸ್-ಸ್ಕೂಟರ್ ಅಪಘಾತ: ಓರ್ವ ಸಾವು, ಸಹಸವಾರ ಗಂಭೀರ

Belthangady: ರಸ್ತೆ ವಿಚಾರದಲ್ಲಿ ಕುಟುಂಬದ ನಡುವೆ ಹೊಡೆದಾಟ

Sulliapadavu: ಮರದ ದಿಮ್ಮಿ ಮೈಮೇಲೆ ಬಿದ್ದು ವ್ಯಕ್ತಿ ಮೃತ್ಯು
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
