ಮಳೆ: ನದಿಗಳಲ್ಲಿ ನೀರಿನ ಹರಿವು ಸರಾಗ

Team Udayavani, May 21, 2019, 10:16 AM IST

ಉಪ್ಪಿನಂಗಡಿ: ನಸುಕಿನಲ್ಲಿ ಬಂದ ಮಳೆಯಿಂದ ನದಿಗಳಲ್ಲಿ ಮತ್ತೆ ನೀರು ಸರಾಗವಾಗಿ ಹರಿವು ಆರಂಭಿಸಿದೆ.

ಸೋಮವಾರ ಮುಂಜಾನೆ ಏಕಾಏಕಿ ಮಳೆ ಆರಂಭಗೊಂಡು ಸತತ ಎರಡು ಗಂಟೆಗಳ ಮಳೆ ಸಿಡಿಲು ಅಬ್ಬರದಿಂದ ನೇತ್ರಾವತಿ, ಕುಮಾರಧಾರಾ ನದಿಗಳು ಜೋಡಣೆಯಾಗಿವೆ.

ಕುಮಾರಧಾರಾ ನದಿಯಲ್ಲಿ ಪುತ್ತೂರು ನಗರಕ್ಕೆ ಸಂಗ್ರಹಿಸಲಾದ ನೀರಿನಿಂದ ತೊಂದರೆ ಉಂಟಾಗಿಲ್ಲ. ಮುಂದಿನ 30 ದಿನಗಳಿಗೆ ಕುಡಿಯುವ ನೀರು ಒದಗಿಸುವಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಅಲ್ಲಿನ ಸಿಬಂದಿಗಳು ವ್ಯಕ್ತಪಡಿಸಿದ್ದಾರೆ.

ಪಟ್ಟಣದಲ್ಲಿ ಅಲ್ಲಲ್ಲಿ ಚೆಕ್‌ ಡ್ಯಾಂಗಳ ನಿರ್ಮಾಣ ಕಾರ್ಯದ ಮೂಲಕ ನೀರಿನ ಶೇಖರಣೆ ಹಾಗೂ ಆಸುಪಾಸಿನ ಕೃಷಿ ವರ್ಗದ ಜನರಿಗೆ ಪ್ರಯೋಜನವಾಗಲಿದೆ. ಈ ದಿಸೆಯಲ್ಲಿ ಚಕ್‌ ಡ್ಯಾಂಗಳ ಅಗತ್ಯತೆ ಇದೆ ಎಂದು ಜನಪ್ರತಿನಿಧಿಗಳ ಸಭೆಯಲ್ಲೂ ಅಭಿಪ್ರಾಯಪಟ್ಟಿದ್ದರು.

ಜಿಲ್ಲಾ ಉಸ್ತುವಾರಿ ಸಚಿವರಿಗೂ ಈ ಬಗ್ಗೆ ಮನವರಿಕೆ ಮಾಡಲಾಗಿದೆ ಎಂದು ನಝೀರ್‌ ಮಠ ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

  • ಯಶಸ್ಸು ಎನ್ನುವುದು ಸೋಮಾರಿಯ ಸ್ವತ್ತಲ್ಲ. ಶ್ರದ್ಧೆ, ನಿರಂತರ ಪ್ರಯತ್ನದಿಂದಷ್ಟೇ ಸಾಧನೆಯ ಶಿಖರ ಏರಬಹುದು. ಕೇವಲ ಮಾತಿನಲ್ಲಿ ಹೇಳುತ್ತಾ, ಮನಸ್ಸಿನಲ್ಲೇ ಮಂಡಿಗೆ...

  • ಎಲ್ಲ ಬಾರಿಯೂ ಭಾವನೆಗಳು ಮಾತಿನಿಂದಲೇ ವ್ಯಕ್ತವಾಗಬೇಕು ಎಂದೇನಿಲ್ಲ. ಮೌನವೂ ಉತ್ತಮವಾದ ಸಂವಹನ ನಡೆಸಬಲ್ಲದು. ಮೌನ ಸರ್ವಸ್ವ ಸಾಧನಂ, ಮೌನ ಸನ್ಮತಿಯ ಲಕ್ಷಣಂ ಎಂಬ...

  • ಪ್ರತಿಯೊಬ್ಬರಲ್ಲೂ ಒಂದು ಸಣ್ಣ ಮಗುವಿನ ಗುಣ ಅಡಕವಾಗಿರುತ್ತದೆ. ಬೆಳಗ್ಗಿನ ಸೂರ್ಯ ಉದಯಿಸಿದರೂ, ಮೋಡಗಳ ಮರೆಯಲ್ಲಿ ಕಾಣದೇ ಇರಬಹುದು. ಆದರೆ ಆತನ ಕಿರಣಗಳು ಸಣ್ಣ...

  • ಐದು ವರ್ಷದ ಮಗುವೊಂದು ಶಾಲೆಯಿಂದ ಬಂದು ಜೋರಾಗಿ ಅಳುತ್ತಿತ್ತು. ಕಾರಣ ಅಂದು ಬೆಳಗ್ಗೆ ಅದರ ಅಮ್ಮ ತೆಗೆಸಿಕೊಟ್ಟಿದ್ದ ಪೆನ್ಸಿಲ್‌ ಗೆಳೆಯರ ಗುಂಪಿನಲ್ಲಿ ಸೇರಿ...

  • ಒಂಟಿತನ ಎನ್ನುವುದು ಎಲ್ಲರ ಜೀವನದಲ್ಲಿ ಒಂದಲ್ಲ ಒಂದು ಬಾರಿ ಆವರಿಸಿಕೊಳ್ಳುತ್ತದೆ. ಅದಕ್ಕಾಗಿ ಆತಂಕ ಪಡುವುದು ಬೇಡ. ಏಕೆಂದರೆ ಜಗತ್ತಿನಲ್ಲಿ ಎಲ್ಲರೂ ಒಂದಲ್ಲ...

ಹೊಸ ಸೇರ್ಪಡೆ