ಕಂಬಳ ಇರಲಿ; ಪ್ರಾಣಿ ಬಲಿ ನಿಷೇಧವಾಗಲಿ: ಡಾ| ಹೆಗ್ಗಡೆ

Team Udayavani, Jan 30, 2017, 3:50 AM IST

heggade.jpg

ಬೆಳ್ತಂಗಡಿ: ನೇರ ಹಿಂಸೆ ಇಲ್ಲದ ಕ್ರೀಡೆಯಾದ ತುಳುನಾಡಿನ ಜನಪದ ಆಚರಣೆ ಕಂಬಳ ಇರಲಿ. ಆದರೆ ಸರಕಾರ ಅನೇಕ ಶ್ರದ್ಧಾ ಕೇಂದ್ರ ಗಳಲ್ಲಿ ನಡೆಯುತ್ತಿರುವ ಆವೇಶದ ಹಿಂಸಾತ್ಮಕ ಪ್ರಾಣಿಬಲಿಗೆ ನಿಷೇಧ ಹೇರಲಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಅವರು ರವಿವಾರ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆವರಣದಲ್ಲಿ  ಮಧ್ವಾಚಾರ್ಯ ನಗರ, ಕೃಷ್ಣ ಪಡ್ವೆಟ್ನಾಯ ಸಭಾಂಗಣ, ಮಂಜಯ್ಯ ಹೆಗ್ಗಡೆ ವೇದಿಕೆಯಲ್ಲಿ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾ ರೋಪದಲ್ಲಿ ಮಾತನಾಡಿದರು.

ಮಾತೃಸ್ವರೂಪಿಗಳು
ನಾಡು ನುಡಿಯ ಕುರಿತು ಸಮ ಕಾಲೀನರಿಗೆ ಅರಿವಿರಬೇಕು ಎಂಬ ಉದ್ದೇಶದಿಂದ ಸಾಹಿತ್ಯ ಸಮ್ಮೇಳನದ
ಅಗತ್ಯ ಇದೆ. ನಾಡು – ನುಡಿ ನಾವು ಗೌರವಿಸಬೇಕಾದ ಮಾತೃ ಸ್ವರೂಪಿಗಳು. ಅವು ನಮಗೆ ಗೌರವ, ವ್ಯಕ್ತಿತ್ವವನ್ನು ನೀಡುತ್ತವೆ. ಅಂತಹ ನಾಡು ನುಡಿಯ ಮೇಲೆ ಸಾಹಿತಿಗಳ ಸಾಹಿತ್ಯದ ಪ್ರಭಾವ ಅಗೋಚರವಾಗಿ ಇರುತ್ತದೆ ಎಂದರು.

ಜೀವ ಕಾರುಣ್ಯದ ಸೃಷ್ಟಿ
ಸಮಾರೋಪ ಭಾಷಣ ಮಾಡಿದ ಶಿಕ್ಷಣ ತಜ್ಞ ಡಾ| ರಾಧಾಕೃಷ್ಣ, ಸಾಹಿತಿ ಗಳು ಸಮಾಜವನ್ನು ತಿದ್ದಬೇಕೇ ಅಥವಾ ಸಮಾಜದ ಧ್ವನಿಯಾಗಬೇಕೆ ಎಂಬ ಜಿಜ್ಞಾಸೆ ಹಿಂದಿನಿಂದಲೂ ಇದೆ. ಆದರೆ ಸುಡುವ ಸಂಸ್ಕೃತಿ ಸಾಹಿತ್ಯದ್ದಲ್ಲ. ನೆಡುವ ಹಾಗೂ ಕೊಡುವ ಸಂಸ್ಕೃತಿ ಸಾಹಿತ್ಯದ್ದು ಎಂದರು.

ನೆಲೆ ನಿಲ್ಲಿಸಿ
ಸಮ್ಮೇಳನಾಧ್ಯಕ್ಷ ಡಾ| ಕೆ. ಚಿನ್ನಪ್ಪ ಗೌಡ ಮಾತನಾಡಿ, ಸಾಹಿತ್ಯದಲ್ಲಿ ಧಾರ್ಮಿಕವಾಗಿ ನೋಡಿದರೆ ಲೌಲಿಕ, ಅಲೌಕಿಕ ಹಾಗೂ ಇಹಪರಗಳೆಂಬ ಮೂರು ದೃಷ್ಟಿಕೋನಗಳು ಕಾಣಿಸುತ್ತವೆ. ಕನ್ನಡಿಗನ ಮನಸ್ಸು ಯಾವಾಗ ನೆಲ ಬಿಡುತ್ತದೋ ಆಗ ನೆಲದಲ್ಲಿ ನೆಲೆ ನಿಲ್ಲಿಸುವ ಕೆಲಸ ಸಾಹಿತ್ಯದಿಂದ ಆಗಬೇಕು ಎಂದರು.

ಜಿಲ್ಲಾ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ, ತಾಲೂಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ| ಬಿ. ಯಶೋವರ್ಮ, ಸಮ್ಮೇಳನ ಸ್ವಾ‌ಗತ ಸಮಿತಿ ಅಧ್ಯಕ್ಷ ವಿಜಯರಾಘವ ಪಡ್ವೆಟ್ನಾಯ, ಕಾರ್ಯಾಧ್ಯಕ್ಷ ಪ್ರತಾಪ ಸಿಂಹ ನಾಯಕ್‌, ಪ್ರಧಾನ ಕಾರ್ಯ ದರ್ಶಿ ಡಾ| ಎಂ.ಎಂ. ದಯಾಕರ್‌, ಪದಾಧಿಕಾರಿಗಳಾದ ಹರೀಶ್‌ ಪೂಂಜಾ, ಸಂಪತ್‌ ಬಿ. ಸುವರ್ಣ, ಕೇಶವ ಪಿ. ಬೆಳಾಲು, ತಮ್ಮಯ್ಯ, ಐತಪ್ಪ, ಅಚ್ಚು ಮುಂಡಾಜೆ, ಪೂರ್ಣಿಮಾ ರಾವ್‌, ಮೋಹನ್‌ ರಾವ್‌, ಶಾಂತಿ ಚಿನ್ನಪ್ಪ ಗೌಡ  ಮೊದಲಾದವರು ಉಪಸ್ಥಿತರಿದ್ದರು.

ಕಂಬಳಕ್ಕೆ ಬೆಂಬಲ
ಸಾಹಿತ್ಯ ಸಮ್ಮೇಳನದಲ್ಲಿ ಕಂಬಳವನ್ನು ಬೆಂಬಲಿಸಿ ನಿರ್ಣಯ ಕೈಗೊಳ್ಳಲಾ ಯಿತು. ತುಳುನಾಡಿನ ಕಂಬಳಕ್ಕೆ ನಮ್ಮ ಬೆಂಬಲವನ್ನು ಸೂಚಿಸುತ್ತಾ ಎಲ್ಲ ಹಿಂಸೆ ರಹಿತ, ಜೂಜುರಹಿತ, ವ್ಯಸನ ರಹಿತ ಜನಪದೀಯ ಆಚರಣೆ ಗಳಿಗೆ ಶಾಸನಾತ್ಮಕವಾಗಿ ಅವಕಾಶ ಕಲ್ಪಿಸಿಕೊಡಬೇಕೆಂದು ಸರಕಾರವನ್ನು ಆಗ್ರಹಿಸಲಾಯಿತು. ಕುದ್ಮಲ್‌ ರಂಗರಾವ್‌ ಸಹಿತ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಅನೇಕ ಮಹನೀಯರನ್ನು ಪ್ರಾಥಮಿಕ ಶಿಕ್ಷಣ ಹಂತದಲ್ಲಿಯೇ ಪರಿಚಯಿಸುವಂತಹ ವ್ಯವಸ್ಥೆ ಆಗಬೇಕು. ಎಲ್ಲ ಹಂತದ ಶಿಕ್ಷಣದಲ್ಲಿ ಕನ್ನಡಕ್ಕೆ ಸಮಾನ ಸ್ಥಾನ ಒದಗಿಸಬೇಕು. ಪದವಿ ರ್‍ಯಾಂಕ್‌ ನೀಡುವ ಸಂದರ್ಭ ಕನ್ನಡ ಭಾಷಾ ವಿಷಯದ ಅಂಕಗ ಳನ್ನು ಪರಿಗಣಿಸಬೇಕೆಂದು ಆಗ್ರಹಿಸಲಾಯಿತು. ಜತೆಗೆ ಈ ಹಿಂದಿನ 20 ಸಮ್ಮೇಳನಗಳ ನಿರ್ಣಯನ್ನು ಅನುಷ್ಠಾನಗೆೊಳಿಸಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು.
ಡಾ| ದಯಾಕರ್‌ ಸ್ವಾಗತಿಸಿ, ಡಾ| ಎಂ. ಪಿ. ಶ್ರೀನಾಥ್‌ ವಂದಿಸಿದರು. ಶ್ರೀನಿವಾಸ ರಾವ್‌ ನಿರ್ವಹಿಸಿದರು.

ಟಾಪ್ ನ್ಯೂಸ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.