
ತುಕ್ಕು ಹಿಡಿಯುತ್ತಿವೆ ನಿರುಪಯುಕ್ತ ಸರಕಾರಿ ಆ್ಯಂಬುಲೆನ್ಸ್‌ಗಳು !
ಹರಾಜಿನಲ್ಲಿ ಭಾಗವಹಿಸಲು ಹಿಂದೆ ಸರಿದ ಬಿಡ್‌ದಾರರು
Team Udayavani, Dec 20, 2020, 1:04 PM IST

ಮಹಾನಗರ, ಡಿ. 19: ಆರೋಗ್ಯ ಇಲಾಖೆಗೆ ಸಂಬಂಧಿಸಿದ ನಿರುಪಯುಕ್ತ ಆ್ಯಂಬುಲೆನ್ಸ್ (108) ವಾಹನಗಳ ಹರಾ ಜಿನಲ್ಲಿ ಭಾಗವಹಿಸಲು ಬಿಡ್‌ದಾರರು ಮುಂದೆ ಬರುತ್ತಿಲ್ಲ. ಹೀಗಾಗಿ, ಮಂಗಳೂರು ಸಹಿತ ರಾಜ್ಯದೆಲ್ಲೆಡೆ ನೂರಾರು ನಿರುಪಯುಕ್ತ ಆ್ಯಂಬುಲೆನ್ಸ್ ವಾಹನಗಳು ಹಲವು ಸಮಯದಿಂದ ಆರೋಗ್ಯ ಇಲಾಖೆ ಕಚೇರಿ ಮತ್ತು ಸರಕಾರಿ ಆಸ್ಪತ್ರೆಗಳ ಆವರಣದಲ್ಲಿ ತುಕ್ಕು ಹಿಡಿದು ನಿಂತಿವೆ.
ದ.ಕ. ಜಿಲ್ಲೆಯಲ್ಲಿ ಈ ರೀತಿ ನಿಂತಲ್ಲೇ ನಿಂತಿರುವ ಏಳು ಆ್ಯಂಬುಲೆನ್ಸ್ ವಾಹನ ಗಳಿವೆ. ಮಂಗಳೂರಿನ ಸರಕಾರಿ ವೆನಾÉಕ್ ಆಸ್ಪತ್ರೆಯ ಹಿಂಭಾಗದಲ್ಲಿ ನಾಲ್ಕು, ಮೂಡು ಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಎರಡು ಹಾಗೂ ಪುತ್ತೂರು ತಾ| ಸರಕಾರಿ ಆಸ್ಪತ್ರೆ ಆವರಣದಲ್ಲಿ ಒಂದು ನಿರುಪಯುಕ್ತ ಆ್ಯಂಬುಲೆನ್ಸ್ ವಾಹನ ಇವೆ.
ಈ ವಾಹನಗಳನ್ನು ಮಾರಾಟ ಮಾಡಿ ವಿಲೇವಾರಿ ಮಾಡಲು ಆರೋಗ್ಯ ಇಲಾಖೆ ಈಗಾಗಲೇ ಎರಡು ಬಾರಿ ಹರಾಜು ಹಾಕಿದೆ; ಆದರೆ ಬಿಡ್‌ದಾರರು ಯಾರೂ ಆಸಕ್ತಿ ವಹಿಸಿ ಮುಂದೆ ಬಾರದ ಕಾರಣ ಈ ವಾಹನಗಳು ವಿಲೇವಾರಿಯಾಗಿಲ್ಲ. ಜಿಲ್ಲಾ ಆರೋಗ್ಯ ಇಲಾಖೆ ಕಚೇರಿ ಆವರಣದಲ್ಲಿ ಸ್ಥಳಾವಕಾಶದ ಕೊರತೆ ಇರುವ ಕಾರಣ ನಗ ರದ 4 ನಿರುಪಯುಕ್ತ ಆ್ಯಂಬುಲೆನ್ಸ್ ಗಳನ್ನು ವೆನಾÉಕ್ ಆಸ್ಪತ್ರೆಯ ಹಿಂಭಾಗದಲ್ಲಿ ಇರಿಸಲಾಗಿದೆ. ಆ್ಯಂಬುಲೆನ್ಸ್ ವಾಹನಗಳನ್ನು ಸಾಮಾನ್ಯವಾಗಿ 4 ಲಕ್ಷ ಕಿ.ಮೀ. ಓಡಿದ ಬಳಿಕ ನಿರುಪಯುಕ್ತ ಎಂದು ಪರಿಗಣಿಸಿ, ಜಿಲ್ಲಾಮಟ್ಟದಲ್ಲಿ ಟೆಂಡರ್ ಕರೆಯಲಾ ಗು ತ್ತಿತ್ತು. ಆದರೆ ಒಂದೂವರೆ ವರ್ಷದ ಹಿಂದೆ ಟೆಂಡರ್ ಪ್ರಕ್ರಿಯೆಯ ನಿಯಮಗಳನ್ನು ಬದಲಾಯಿಸಿ ರಾಜ್ಯ ಮಟ್ಟದಲ್ಲಿ ಟೆಂಡರ್ ಕರೆಯುವ ಕ್ರಮ ಜಾರಿಗೆ ಬಂದಿದೆ. ರಾಜ್ಯಮಟ್ಟದಲ್ಲಿ ವರ್ಷದಲ್ಲಿ ಒಂದೆರಡು ಬಾರಿ ಅಥವಾ ನಿರುಪಯುಕ್ತ ವಾಹನಗಳ ಸಂಖ್ಯೆಯನ್ನು ಪರಿಗಣಿಸಿ ಟೆಂಡರ್ ಕರೆಯಲಾಗುತ್ತದೆ.
ಸಾರಿಗೆ ಇಲಾಖೆಯ ಅಧಿಕಾರಿಗಳು ವಾಹನಗಳ ಕ್ಷಮತೆಯನ್ನು ಪರಿಗಣಿಸಿ ಮೌಲ್ಯ ನಿರ್ಣಯ ಮಾಡುತ್ತಾರೆ. ಸುಮಾರು 1 ವರ್ಷದ ಹಿಂದೆ ಮೊದಲು ಆಹ್ವಾನಿಸಿದ ಟೆಂಡರ್‌ಗೆ ಯಾರೂ ಬಿಡ್ ಹಾಕಿರಲಿಲ್ಲ. ಬಳಿಕ ಮರು ಮೌಲ್ಯ ನಿರ್ಣಯ ಮಾಡಿ ಟೆಂಡರ್ ಕರೆದಾಗಲೂ ಯಾರೊಬ್ಬರೂ ಬಿಡ್ ಹಾಕಲು ಮುಂದೆ ಬಂದಿಲ್ಲ. ಇದೀಗ 3 ನೇ ಬಾರಿ ಸಾರಿಗೆ ಇಲಾಖೆಯ ಅಧಿಕಾರಿಗಳಿಂದ ಮರು ಮೌಲ್ಯ ನಿರ್ಣಯ ಮಾಡಿ ಆರೋಗ್ಯ ಇಲಾಖೆಯ ಬೆಂಗಳೂರು ಕಚೇರಿಗೆ ಕಳುಹಿಸಿ ಕೊಡಲಾಗಿದೆ. ಯಾವಾಗ ಟೆಂಡರ್ ಕರೆಯುತ್ತಾರೆ ಎಂಬುದು ತಿಳಿ ಯದು ಎಂದು ಮಂಗಳೂರಿ ನ ಆರೋಗ್ಯ ಇಲಾಖೆ ಕಚೇರಿ ಮೂಲಗಳು ತಿಳಿಸಿವೆ.
ನಿರುಪಯುಕ್ತ ಆ್ಯಂಬಲೆನ್ಸ್ ವಾಹನಗಳ ಹರಾಜನ್ನು ರಾಜ್ಯಮಟ್ಟದಲ್ಲಿ ಮಾಡಲಾಗುತ್ತಿದೆ. ಸಾರಿಗೆ ಇಲಾಖೆ ಈ ವಾಹನಕ್ಕೆ ದರ ನಿಗದಿ ಮಾಡುತ್ತದೆ. ಈಗಿರುವ 7 ನಿರುಪಯುಕ್ತ ಆ್ಯಂಬುಲೆನ್ಸ್‌ಗಳಿಗೆ 2 ಬಾರಿ ಟೆಂಡರ್ ಕರೆದಿದ್ದರೂ, ಯಾರೊಬ್ಬರೂ ಬಿಡ್ ಮಾಡಲು ಮುಂದೆ ಬಂದಿಲ್ಲ, ಇದೀಗ 3 ನೇ ಬಾರಿ ವಾಹನಗಳ ಮೌಲ್ಯವನ್ನು ಪರಿಷ್ಕರಿಸಿ (ಕಡಿಮೆ ಮಾಡಿ) ಬೆಂಗಳೂರಿನ ಆರೋಗ್ಯ ಇಲಾಖೆಗೆ ಕಳುಹಿಸಲಾಗಿದೆ. -ಡಾ| ರಾಮಚಂದ್ರ ಬಾಯರಿ,ಜಿಲ್ಲಾ ಆರೋಗ್ಯ ಅಧಿಕಾರಿ
ಟಾಪ್ ನ್ಯೂಸ್
