ಸೌತಡ್ಕ: ಎಂಡೋ ವಿರೋಧಿ ಸಂತ್ರಸ್ತರ‌ ಸಭೆ


Team Udayavani, Apr 10, 2017, 2:42 PM IST

84NLD1.jpg

ನೆಲ್ಯಾಡಿ : ಎಂಡೋ ಸಂತ್ರಸ್ತರ ಬಗೆಗೆ ಸರಕಾರದ ನಿರ್ಲಕ್ಷ್ಯ ಧೋರಣೆ ವಿರುದ್ಧ ಎಂಡೋ ವಿರೋಧಿ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು ಅವರ ಅಧ್ಯಕ್ಷತೆಯಲ್ಲಿ  ಮುಂದಿನ ಕಾರ್ಯತಂತ್ರದ ಬಗ್ಗೆ ಸಮಾಲೋಚನಾ ಸಭೆಯು ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಗಣೇಶ ಕಲಾಮಂದಿರದಲ್ಲಿ ನಡೆಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಪುರಂದರ ಗೌಡ ಕಡಿರ, ಎಂಡೋ ಸಂತ್ರಸ್ತರ ಬಾಳಿನಲ್ಲಿ ಸರಕಾರ ಚೆಲ್ಲಾಟ ವಾಡುತ್ತಿದ್ದು  ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ  ಎಂಡೋ ಸಂತ್ರಸ್ತರು ಹೋಗಿ ಪ್ರತಿಭಟಿಸಿಯೂ ಸರಕಾರದ ನಿರ್ಲಕ್ಷ್ಯ  ಧೋರಣೆ ಮುಂದುವರಿಸಿದೆ. ಇದೀಗ ನಿರ್ಣಾಯಕ ಹೋರಾಟ ನಡೆಸಿ  ಈ ಸಮಸ್ಯೆಗೆ ತಾರ್ಕಿಕ ಅಂತ್ಯ ತರಲು ಉದ್ದೇಶಿಸಿ ಈ ಸಮಾಲೋಚನ  ಸಭೆ ಕರೆಯಲಾಗಿದೆ ಎಂದು ನುಡಿದರು.

ಉಡುಪಿ, ದ.ಕ. ಜಿಲ್ಲಾ  ಅಂಗವಿಕಲರ ಸಂಘದ ಅಧ್ಯಕ್ಷ ಡಾ| ಮುರಳೀಧರ ನಾಯಕ್‌ ಮಾತನಾಡಿ, ಕೇರಳ ಸರಕಾರವು ಎಂಡೋ ಸಂತ್ರಸ್ತರಿಗೆ ಸೂಕ್ತರೀತಿಯಲ್ಲಿ  ಪರಿಹಾರದ ವ್ಯವಸ್ಥೆ ಮಾಡಿರುವಾಗ ನಮ್ಮಲ್ಲಿ ಯಾಕೆ ನಿರ್ಲಕ್ಷ್ಯಮಾಡಲಾಗುತ್ತಿದೆ ಎಂದರು.

ನವಚೇತನ ಚಾರಿಟೇಬಲ್‌ ಟ್ರಸ್ಟ್‌  ಬೆಂಗಳೂರು ಇದರ ಸ್ಥಾಪಕಾಧ್ಯಕ್ಷ  ಮಂಜುನಾಥ್‌ ಮಾತನಾಡಿ, ಸರಕಾರದ ನಿರ್ಲಕ್ಷ್ಯ ಧೋರಣೆ ವಿರುದ್ಧ ಕೊಕ್ಕಡದಲ್ಲಿ ನಡೆಯುವ ಎಂಡೋಸಂತ್ರಸ್ತರ ಪ್ರತಿಭ ಟನೆಗೆ ರಾಜ್ಯಾದ್ಯಂತ ತಮ್ಮ ಸಂಘಟನೆಗಳ ಮೂಲಕವೂ ಅದೇ  ದಿನಗಳಲ್ಲಿ   ಪ್ರತಿ ಭಟನೆ ನಡೆಸುವ ಮೂಲಕ ಈ ಬಾರಿ ಎಂಡೋ ಸಂತ್ರಸ್ತರಿಗೆ  ನ್ಯಾಯ ಒದಗಿ ಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಅಧ್ಯಕ್ಷತೆ   ವಹಿಸಿ ಮಾತನಾಡಿದ ಎಂಡೋ ವಿರೋಧಿ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು  ಅವರು, ತಾನು  ಕೂಡ  ಒಬ್ಬ ಎಂಡೋ ಸಂತ್ರಸ್ತನಾಗಿ  ಇವರಿಗೆ ನ್ಯಾಯ ಒದಗಿ ಸುವ   ನಿಟ್ಟಿನಲ್ಲಿ  ಪ್ರತಿಭಟನೆ ನಡೆಸಿದ್ದಕ್ಕೆ  ಕೆಲವು ಸಚಿವರುಗಳಿಂದ  ಪ್ರಚಾರಕ್ಕಾಗಿ ಹೋರಾಟ ನಡೆಸುತ್ತಿದ್ದೇನೆ ಅನ್ನುವ ಅಪ ವಾದವೂ ಒದಗಿದೆ. ಅತ್ತ ಸಾಯಲೂ ಆಗದೇ ಇತ್ತ ಬದುಕಲೂ ಆಗದೇ ನರಳಾಡುತ್ತಿರುವ ಎಂಡೋ ಸಂತ್ರಸ್ತರು ಒಂದೆಡೆಯಾದರೆ ಮನೆಯವರಿಗೆ ಸಂತ್ರಸ್ತರನ್ನು  ಸಂಭಾಳಿಸುವುದರ ಜತೆಗೆ ಕನಿಷ್ಠ ಪರಿಹಾರಕ್ಕೂ ಸರಕಾರದ ಅಧಿಕಾರಿಗಳ ಮುಂದೆ ಅಲೆದಾಡುವ ಪರಿಸ್ಥಿತಿ ಇದೆ.  

ಕೊಕ್ಕಡದಲ್ಲಿ ಕೆಲವು ದಿನಗಳ ಹಿಂದೆ ಎಂಡೋಸಂತ್ರಸ್ತ ಕುಟುಂಬದ ಸಾಮೂಹಿಕ ಆತ್ಮಹತ್ಯೆ ಯಂತಹ  ಘಟನೆ ನಡೆದರೂ ಸರಕಾರದ ಯಾವುದೇ ಪ್ರತಿನಿಧಿಗಳೂ ಕನಿಷ್ಠ ಇಲ್ಲಿಗೆ ಭೇಟಿ ನೀಡಿ ಸಾಂತ್ವನ ಕೂಡ ಹೇಳಿಲ್ಲ.  

ಸರಕಾರಿ ಕೃಪಾಪೋಷಿತ ಎಂಡೋ ಸಿಂಪಡಣೆಯಿಂದಾಗಿ ಉಂಟಾದ ಈ ದುರವಸ್ಥೆಗೂ ಸರಕಾರದ ಬಳಿ ಪರಿಹಾರಕ್ಕಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣ ಮಾಡುತ್ತಿರುವ ಸರಕಾರದ ಹಾಗೂ ಇಲಾಖಾಧಿಕಾರಿಗಳ ವಿರುದ್ಧ ಈ ಬಾರಿ ಮಾಡು ಇಲ್ಲವೇ ಮಡಿ ಅನ್ನುವ ಹೋರಾಟ ಮಾಡುವ ಉದ್ದೇಶದಿಂದ  ಈ ಸಭೆ ನಡೆದಿದೆ. ಕಳೆದ ಬಾರಿ ಬೆಂಗಳೂರಿಗೆ ಹೋಗಿ ಎಂಡೋ ಸಂತ್ರಸ್ತರು ಪ್ರತಿಭಟಿಸಿದರೂ ನಿರೀಕ್ಷಿತ ಪರಿಹಾರಗಳು ಲಭ್ಯವಾಗದ ಕಾರಣ ಈ ಬಾರಿ ಹೋರಾಟವು ತಾರ್ಕಿಕ ಅಂತ್ಯ ಕಾಣುವುದಕ್ಕೋಸ್ಕರ ಕೊಕ್ಕಡ ದಲ್ಲಿಯೇ ಆಮರಣಾಂತ ಉಪ ವಾಸ ನಡೆಸಲಾಗುವುದು. ಮುಖ್ಯಮಂತ್ರಿಗಳು ಇಲ್ಲಿಗೆ ಬಂದು ಎಂಡೋಸಂತ್ರಸ್ತರ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.

750ಕ್ಕಿಂತಲೂ ಹೆಚ್ಚು ಸಂತ್ರಸ್ತರು ಇದರಲ್ಲಿ ಪಾಲ್ಗೊಂಡಿದ್ದರು.ವೇದಿಕೆಯಲ್ಲಿ   ಹಿರಿಯ ಬಿಜೆಪಿ ಮುಖಂಡ ಪೂವಾಜೆ ಕುಶಾಲಪ್ಪಗೌಡ, ನ್ಯಾಯವಾದಿ ಹರೀಶ್‌ ಪೂಂಜ, ಸೇವಾ ಭಾರತಿ ಕನ್ಯಾಡಿ ಇದರ ಸಂಯೋಜಕ ವಿನಾಯಕ ರಾವ್‌, ದ.ಕ. ಜಿಲ್ಲಾ  ಅಂಗವಿಕಲರ ಸಂಘದ ಕಾರ್ಯದರ್ಶಿ ಕೊರಗಪ್ಪಗೌಡ, ಕೊಕ್ಕಡ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ  ನಾರಾಯಣ ಗೌಡ, ರೇವತೀ ತಾಮಣ್‌ಕರ್‌, ಅಲ್ಬರ್ಟ್‌  ಮಿನೇಜಸ್‌   ಮೊದಲಾದವರು  ಉಪಸ್ಥಿತರಿದ್ದರು.
 

Ad

ಟಾಪ್ ನ್ಯೂಸ್

ಫಿಡೆ ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ

FIDE ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ

Tokyo ಜಪಾನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್ ಮೇಲೆ ನಿರೀಕ್ಷೆ

Tokyo ಜಪಾನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್ ಮೇಲೆ ನಿರೀಕ್ಷೆ

ಸನ್‌ರೈಸರ್ ಹೈದರಾಬಾದ್‌ಗೆ ವರುಣ್‌ ಆರೋನ್‌ ಬೌಲಿಂಗ್‌ ಕೋಚ್‌

IPL: ಸನ್‌ರೈಸರ್ ಹೈದರಾಬಾದ್‌ಗೆ ವರುಣ್‌ ಆರೋನ್‌ ಬೌಲಿಂಗ್‌ ಕೋಚ್‌

ವಿಂಬಲ್ಡನ್‌ ಗೆಲ್ಲಬೇಕಾದರೆ ಅಲ್ಕರಾಜ್‌ ಅವರನ್ನು ಮಣಿಸಲೇಬೇಕಿತ್ತು: ಸಿನ್ನರ್‌ವಿಂಬಲ್ಡನ್‌ ಗೆಲ್ಲಬೇಕಾದರೆ ಅಲ್ಕರಾಜ್‌ ಅವರನ್ನು ಮಣಿಸಲೇಬೇಕಿತ್ತು: ಸಿನ್ನರ್‌

ವಿಂಬಲ್ಡನ್‌ ಗೆಲ್ಲಬೇಕಾದರೆ ಅಲ್ಕರಾಜ್‌ ಅವರನ್ನು ಮಣಿಸಲೇಬೇಕಿತ್ತು: ಸಿನ್ನರ್‌

Australia Vs West Indies; ಕಿಂಗ್‌ಸ್ಟನ್‌ ಟೆಸ್ಟ್‌ : 181 ರನ್‌ ಮುನ್ನಡೆಯಲ್ಲಿ ಆಸ್ಟ್ರೇಲಿಯ

AUS Vs WI: ಕಿಂಗ್‌ಸ್ಟನ್‌ ಟೆಸ್ಟ್‌ : 181 ರನ್‌ ಮುನ್ನಡೆಯಲ್ಲಿ ಆಸ್ಟ್ರೇಲಿಯ

T20 ತ್ರಿಕೋನ ಸರಣಿ: ದಕ್ಷಿಣ ಆಫ್ರಿಕಾಕ್ಕೆ ಗೆಲುವು

T20 ತ್ರಿಕೋನ ಸರಣಿ: ದಕ್ಷಿಣ ಆಫ್ರಿಕಾಕ್ಕೆ ಗೆಲುವು

Supreme Court: ದ್ವೇಷ ಭಾಷಣ ನಿಯಂತ್ರಿಸಿ: ಸರಕಾರಕ್ಕೆ ಸುಪ್ರೀಂ ಸೂಚನೆ

Supreme Court: ದ್ವೇಷ ಭಾಷಣ ನಿಯಂತ್ರಿಸಿ: ಸರಕಾರಕ್ಕೆ ಸುಪ್ರೀಂ ಸೂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police crime

ಗೇರುಕಟ್ಟೆ: ಅಕ್ರಮ ಮರಳು ಸಾಗಾಟ ಪತ್ತೆ: ಪಿಕಪ್‌ ಚಾಲಕ ಪರಾರಿ, ಲಾರಿ ಚಾಲಕ ವಶಕ್ಕೆ

1-aa-aa-rubb

ತೋಟತ್ತಾಡಿ: ಕಾಡಾನೆ ಹಾವಳಿ

1-aa-aa-crick-aa-ara

ಅರಂತೋಡು: ಆನೆಗಳನ್ನು ಕಾಡಿಗಟ್ಟುವ ಪ್ರಕ್ರಿಯೆ ಆರಂಭ

3

Bantwal: ಕಾರು-ಆಮ್ನಿ ಢಿಕ್ಕಿ; ದಂಪತಿ ಆಸ್ಪತ್ರೆಗೆ

2

Bantwal: ಇನ್ನೋವಾ ಢಿಕ್ಕಿ; ಸ್ಕೂಟರ್‌ ಸವಾರರಿಗೆ ಗಾಯ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

ಫಿಡೆ ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ

FIDE ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ

suicide (2)

Mangaluru:ಕಾರು ಪಲ್ಟಿಯಾಗಿ ಗಂಭೀರ ಗಾಯಗೊಂಡ ಯುವಕ ಸಾ*ವು

Tokyo ಜಪಾನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್ ಮೇಲೆ ನಿರೀಕ್ಷೆ

Tokyo ಜಪಾನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್ ಮೇಲೆ ನಿರೀಕ್ಷೆ

ಸನ್‌ರೈಸರ್ ಹೈದರಾಬಾದ್‌ಗೆ ವರುಣ್‌ ಆರೋನ್‌ ಬೌಲಿಂಗ್‌ ಕೋಚ್‌

IPL: ಸನ್‌ರೈಸರ್ ಹೈದರಾಬಾದ್‌ಗೆ ವರುಣ್‌ ಆರೋನ್‌ ಬೌಲಿಂಗ್‌ ಕೋಚ್‌

1-aa-aa-RSS

ಗುರುದಕ್ಷಿಣೆ ಸಮರ್ಪಿಸಿ ಕೊನೆಯುಸಿರೆಳೆದ ಆರೆಸ್ಸೆಸ್‌ ಕಾರ್ಯಕರ್ತ ಬಾಬು ದೇವಾಡಿಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.