
ಕೃಷಿ ವಿಜ್ಞಾನ ಕೇಂದ್ರದಲ್ಲಿ ಸ್ಥಗಿತಗೊಂಡ ಮಣ್ಣು ಪರೀಕ್ಷೆ
Team Udayavani, Jan 25, 2023, 6:55 AM IST

ಮಂಗಳೂರು: ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯಲು ಮಣ್ಣು ಪರೀಕ್ಷೆ ಅಗತ್ಯ. ಇದಕ್ಕಾಗಿ ರಾಜ್ಯದ ವಿವಿಧೆಡೆ ಕೃಷಿ ಇಲಾಖೆಯಿಂದ ಮಾತ್ರ ವಲ್ಲದೆ, ಕೃಷಿ ವಿಜ್ಞಾನ ಕೇಂದ್ರ ಗಳಲ್ಲೂ ಮಣ್ಣು ಪರೀಕ್ಷಾ ಪ್ರಯೋಗಾಲಯ ತೆರೆಯಲಾಗಿದೆ. ಆದರೆ ಮಂಗಳೂರಿನ ಕೆ.ವಿ.ಕೆ.ಯಲ್ಲಿ ಮಾತ್ರ ಮಣ್ಣು ಪರೀಕ್ಷೆಗೆ ಸೂಕ್ತ ವ್ಯವಸ್ಥೆ ಇಲ್ಲ.
ಈ ಮೊದಲು ಕೆ.ವಿ.ಕೆ.ಯಲ್ಲಿ ಪ್ರಯೋ ಗಾಲಯ ಮಾತ್ರವಲ್ಲದೆ ಸಂಚಾರಿ ಪ್ರಯೋಗಾ ಲಯವೂ ಇತ್ತು. 2018ರಲ್ಲಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ರೈತರ ಮನೆಬಾಗಿಲಿಗೆ ಹೋಗಿ ಮಣ್ಣು ಮತ್ತು ನೀರಿನ ಪರೀಕ್ಷೆ ಮಾಡುವ ಸಂಚಾರಿ ಪ್ರಯೋಗಾಲಯ ವಾಹನಕ್ಕೆ ಚಾಲನೆ ನೀಡಲಾಗಿತ್ತು.
ಕೆಲವು ತಿಂಗಳುಗಳ ಕಾಲ ವಾಹನದ ಮೂಲಕ ಜಿಲ್ಲೆಯ ವಿವಿಧೆಡೆ ರೈತರ ಕೃಷಿ ಭೂಮಿಯ ಮಣ್ಣಿನ ವಿವಿಧ ಪೋಷಕಾಂಶಗಳನ್ನು ಪರೀಕ್ಷೆ ಮಾಡಲಾಯಿತು. ಆದರೆ ಬಳಿಕ ಕೆಟ್ಟು ನಿಂತ ವಾಹನ ಸೇರಿದ್ದು ಮಾತ್ರ ಗುಜರಿಗೆ!
ಕೃಷಿ ವಿಜ್ಞಾನ ಕೇಂದ್ರದಲ್ಲಿರುವ ಮಣ್ಣು ಪರೀಕ್ಷಾ ಪ್ರಯೋಗಾಲಯ ದಲ್ಲಿ ತೀರಾ ಇತ್ತೀಚಿನವರೆಗೆ ಮಣ್ಣಿನ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ ಕೆಲವು ತಿಂಗಳ ಹಿಂದೆ ಶಾರ್ಟ್ ಸಕೀìಟ್‌ನಿಂದ ಲ್ಯಾಬ್‌ನ ಉಪಕರಣ ಗಳು, ವಯರಿಂಗ್ ಸುಟ್ಟು ಹೋಗಿವೆ. ಒಂದು ಬಾರಿ ದುರಸ್ತಿ ಮಾಡಿಸಿದರೂ ಮತ್ತೆ ಸುಟ್ಟಿರುವುದರಿಂದ ಲ್ಯಾಬ್ ಕಾರ್ಯಾಚರಣೆ ಸ್ಥಗಿತಗೊಂಡಿದೆ.
ಬಿಡುಗಡೆಯಾಗದ ಅನುದಾನ
ಹಳೇ ವಾಹನವನ್ನು ಲ್ಯಾಬ್ ಆಗಿ ಪರಿವರ್ತಿಸಲಾಗಿತ್ತು. ನಿರಂತರ ಓಡಾಟದಿಂದ ವಾಹನ ಹಾಳಾಗಿದ್ದು, ದುರಸ್ತಿ ಮಾಡಿಸಲು ಅನುದಾನದ ಕೊರತೆಯಾಗಿತ್ತು. ವಾಹನದ ಪರ್ಮಿಟ್ ಅವಧಿಯೂ ಮುಗಿದಿತ್ತು. ಆರ್‌ಟಿಒ ಬಳಿ ಪರೀಕ್ಷೆಗೊಳಪಡಿಸಿ ಮತ್ತೆ ಸಂಚಾರ ಯೋಗ್ಯವಾಗಿಸಲು ಹೆಚ್ಚಿನ ಮೊತ್ತದ ಅಗತ್ಯ ಇತ್ತು. ಆದರೆ ಸೂಕ್ತ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ವಾಹನವನ್ನು ಹರಾಜು ಹಾಕಲಾಗಿದೆ. ಇನ್ನೊಂದೆಡೆ ಪ್ರಯೋ
ಗಾಲಯ ಸಹಾಯಕರ ನೇಮಕಾತಿಯೂ ನಡೆದಿರಲಿಲ್ಲ. ಶಾರ್ಟ್ ಸರ್ಕ್ಯೂಟ್ ನಿಂದ ಯಂತ್ರೋಪಕರಣ ಗಳು ಹಾಳಾಗಿದ್ದು, ದುರಸ್ತಿಗಾಗಿ ಮತ್ತೆ ಅನುದಾನಕ್ಕೆ ಕಾಯುವಂತಾಗಿದೆ ಎನ್ನುತ್ತಾರೆ ಕೇಂದ್ರದ ವಿಜ್ಞಾನಿ.
ರೈತರಿಗೆ ಸಲಹೆ ಮಾತ್ರ
ಇಲ್ಲಿ ಜಿಲ್ಲೆಯಿಂದ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದಲೂ ಮಣ್ಣಿನ ಮಾದರಿಗಳನ್ನು ರೈತರು ನೇರವಾಗಿ
ತಂದು ಪರೀಕ್ಷೆ ಮಾಡಿಸಿ ತೆಗೆದು ಕೊಂಡು ವರದಿ ತೆಗೆದುಕೊಂಡು ಹೋಗುತ್ತಿದ್ದರು. ಸದ್ಯ ಖಾಸಗಿ ಅಥವಾ ಕೃಷಿ ಇಲಾಖೆಯ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಬೇಕಾ ಗಿದೆ. ರೈತರು ಪರೀಕ್ಷೆ ಮಾಡಿಸಿದ ವರದಿಗಳನ್ನು ಕೆ.ವಿ.ಕೆ.ಯ ವಿಜ್ಞಾನಿಗಳು ಪರಿಶೀಲಿಸಿ ಸೂಕ್ತ ಸಲಹೆ, ಸೂಚನೆ ಮಾತ್ರ ನೀಡುತ್ತಿದ್ದಾರೆ.
ಗ್ರಾ.ಪಂ.ಗಳಲ್ಲಿಆರಂಭವಾಗಿಲ್ಲ ಲ್ಯಾಬ್
ರಾಜ್ಯದ ಪ್ರತೀ ಗ್ರಾ.ಪಂ.ಗಳಲ್ಲಿ ಮಣ್ಣು ಪರೀಕ್ಷೆ ಕೇಂದ್ರ ತೆರೆಯುವ ನಿಟ್ಟಿನಲ್ಲಿ ಕೃಷಿ ಇಲಾಖೆಯಿಂದ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಅದು ಪ್ರಸ್ತಾವನೆಯ ಹಂತದಲ್ಲೇ ಇದೆ. ಜಿಲ್ಲೆಯಲ್ಲಿ ಮೂರು ಖಾಸಗಿ ಮತ್ತು ಒಂದು ಇಲಾಖಾ ಪ್ರಯೋಗಾಲಯದಲ್ಲಿ ಮಣ್ಣು ಪರೀಕ್ಷೆ ನಡೆಯುತ್ತಿದೆ ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಡಾ. ಸೀತಾ.
ಕೃಷಿ ವಿಜ್ಞಾನ ಕೇಂದ್ರದಲ್ಲಿ ಸದ್ಯ ಮಣ್ಣು ತಪಾಸಣೆಗೆ ವ್ಯವಸ್ಥೆ ಇಲ್ಲ. ಪ್ರಯೋಗಾಲಯ ಶಾರ್ಟ್ ಸರ್ಕ್ನೂಟ್‌ನಿಂದ ಹಾನಿಗೀಡಾಗಿದೆ. ಮೊಬೈಲ್ ವಾಹನದಲ್ಲಿ ಪ್ರಯೋಗ ಸಲಕರಣೆಗಳಿಗೆ ಹಾನಿ ಹೆಚ್ಚು. ಇದರಿಂದ ಪ್ರಯೋಗ ಮಾಡಲು ಕಷ್ಟವಾಗುತ್ತಿತ್ತು.
-ಡಾ| ಮಲ್ಲಿಕಾರ್ಜುನ ಎಲ್.
ಕೆ.ವಿ.ಕೆ. ವಿಜ್ಞಾನಿ (ಮಣ್ಣು ವಿಜ್ಞಾನ)
-ಭರತ್ ಶೆಟ್ಟಿಗಾರ್
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಂಗಳೂರು ಕಾರ್ಯಕ್ರಮ ರದ್ದುಮಾಡಿ ಕುತ್ತಾರು ಕೊರಗಜ್ಜಕ್ಷೇತ್ರದಲ್ಲಿ ಮುಹೂರ್ತಮಾಡಿದ ಚಿತ್ರತಂಡ

PU ಫೇಲಾದ ಪ್ರಿಯಾಂಕ ಖರ್ಗೆ ಎಂಜಿನಿಯರ್ ಸೂಲಿಬೆಲೆಯ ಪದವಿ ಕೇಳುತ್ತಿದ್ದಾರೆ: ಭರತ್ ಶೆಟ್ಟಿ

Mangaluru: ಎಂಡಿಎಂಎ ಮಾದಕ ವಸ್ತು ಹೊಂದಿದ ಇಬ್ಬರು ಆರೋಪಿಗಳ ಸೆರೆ

ಮಟ್ಕಾ ಜುಗಾರಿ: 25 ಮಂದಿ ಸೆರೆ

ಉಳ್ಳಾಲ: 24 ಪುಟಗಳ ಡೆತ್ ನೋಟ್ ಬರೆದಿಟ್ಟು ನೂತನ ಮನೆಯಲ್ಲೇ ಆತ್ಮಹತ್ಯೆಗೆ ಶರಣಾದ ಯುವತಿ