
ಗಾಂಜಾ ಗ್ಯಾಂಗ್‌ನಿಂದ ಮೊಬೈಲ್, ಹಣ ದರೋಡೆ: ಕೇಸು ದಾಖಲು
Team Udayavani, Sep 26, 2022, 11:18 PM IST

ಸುರತ್ಕಲ್: ಕಾಟಿಪಳ್ಳ ಸಮೀಪದ ಪೆಲತ್ತೂರುವಿನಲ್ಲಿ 16ರ ಹರೆಯದ ಬಾಲಕನನ್ನು ಅಪಹರಣ ಮಾಡಿದ್ದ ಗಾಂಜಾ ಗ್ಯಾಂಗ್ ಒಂದರ ಸದಸ್ಯರು ಮೊಬೈಲ್ ಹಾಗೂ ಹಣ ದರೋಡೆ ಮಾಡಿ ಬೆದರಿಕೆ ಒಡ್ಡಿರುವ ಬಗ್ಗೆ ಸುರತ್ಕಲ್ ಪೊಲೀಸರು 2 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಕಾಟಿಪಳ್ಳ ನಿವಾಸಿಗಳಾದ ಅಭಿಷೇಕ್ ಶೆಟ್ಟಿ (24) ಮತ್ತು ಚೇತನ್ (23) ಬಂಧಿತರು. ಪೆಲತ್ತೂರು ಬಳಿಯ ನಿರ್ಜನ ಪ್ರದೇಶದ ರಸ್ತೆಯಲ್ಲಿ ಬಾಲಕ ಗಾಯಗೊಂಡು ಬಿದ್ದಿದ್ದು, ಆ ಬಾಲಕನ ಬಳಿ ಸಹಾಯ ಕೇಳಿ ದ್ವಿಚಕ್ರ ವಾಹನ ಹತ್ತಿದ್ದು ಬಳಿಕ ಬಾಲಕನನ್ನು ಎಟಿಎಂಗೆ ಕರೆದೊಯ್ದು ಹಣ ಡ್ರಾ ಮಾಡಿ ಬಾರ್‌ಗೆ ಕರೆದೊಯ್ದು ಆತನ ಹಣದಲ್ಲೇ ಮದ್ಯ ಸೇವಿಸಿದ್ದಾರೆ. ಬಳಿಕ ಮೊಬೈಲ್ ದರೋಡೆ ಮಾಡಿ ಬೆದರಿಕೆ ಹಾಕಿ ಪರಾರಿಯಾಗಿದ್ದಾಗಿ ಸುರತ್ಕಲ್ ಪೊಲೀಸರಿಗೆ ದೂರು ನೀಡಲಾಗಿದೆ.
ಟಾಪ್ ನ್ಯೂಸ್
