ಮಂಗಳೂರಿನಲ್ಲಿ ನಡೆಯಲಿದೆ “ಶ್ವಾನ’ಗಳ ಸರ್ವೇ; ಪಾಲಿಕೆ ನಿರ್ಧಾರ

ಈ ಕಾರ್ಯಾಚರಣೆಗೆ ಒಟ್ಟು ಇಬ್ಬರು ವೈದ್ಯರು, ಏಳು ಮಂದಿ ಸಿಬಂದಿ ಇದ್ದಾರೆ.

Team Udayavani, Jan 26, 2023, 1:45 PM IST

ಮಂಗಳೂರಿನಲ್ಲಿ ನಡೆಯಲಿದೆ “ಶ್ವಾನ’ಗಳ ಸರ್ವೇ; ಪಾಲಿಕೆ ನಿರ್ಧಾರ

ಮಹಾನಗರ: ಕೆಲವು ಸಮಯಗಳಿಂದ ಮಂಗಳೂರಿನಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗುತ್ತಿದ್ದು, ಸಿಟಿಯಲ್ಲಿ ಎಷ್ಟು ಬೀದಿ ನಾಯಿಗಳಿವೆ ಎಂಬ ಲೆಕ್ಕ ಮಾತ್ರ ಪಾಲಿಕೆಯಲ್ಲಿಲ್ಲ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಶ್ವಾನಗಳ ಸರ್ವೇ ನಡೆಸಲು ಮಗಳೂರು ಪಾಲಿಕೆ ನಿರ್ಧರಿಸಿದೆ.

ನಗರದ ಹಲವು ಕಡೆಗಳಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗುತ್ತಿದೆ ಎಂಬ ದೂರುಗಳು ಸಾರ್ವಜನಿಕ ವಲಯದಲ್ಲಿ ಬರುತ್ತಿದೆ. ಅದರಲ್ಲೂ ನಗರದ ವಾಮಂಜೂರು, ಕದ್ರಿ, ಕೊಟ್ಟಾರ, ಸುರತ್ಕಲ್‌, ದಡ್ಡಲಕಾಡು, ಮಣ್ಣಗುಡ್ಡೆ, ಉರ್ವ ಸಹಿತ ವಿವಿಧ ಕಡೆಗಳಲ್ಲಿ ಬೀದಿ ನಾಯಿಗಳು ಗುಂಪಾಗಿ ಕಾಣಸಿಗುತ್ತಿದೆ. ಇದರ ಪಕ್ಕಾ ಲೆಕ್ಕಾಚಾರ ಪಾಲಿಕೆಯ ಬಳಿ ಇಲ್ಲ. ವರ್ಷಂಪ್ರತಿ ಬೀದಿಗಳ ಸರ್ವೇ ನಡೆಸಬೇಕು ಎಂಬ ಸೂಚನೆ ಇದ್ದರೂ, ಪಾಲಿಕೆ ಇತ್ತೀಚಿನ ದಿನಗಳಲ್ಲಿ ಈ ಸಮೀಕ್ಷೆ ನಡೆಸಿಲ್ಲ. ಇದೇ ಕಾರಣಕ್ಕೆ ಸದ್ಯದಲ್ಲೇ ನಗರದಲ್ಲಿ ಬೀದಿ ನಾಯಿಗಳ ಸಮೀಕ್ಷೆ ನಡೆಯಲಿದೆ.

ಬೀದಿ ನಾಯಿಗಳ ನಿಯಂತ್ರಣದ ಉದ್ದೇಶದಿಂದ ಐದು ವರ್ಷಗಳಲ್ಲಿ ನಗರದ 8,549 ಶ್ವಾನಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ನಡೆಸಲಾಗಿದೆ. ಶಕ್ತಿನಗರದ ಎನಿಮಲ್‌ ಕೇರ್‌ ಟ್ರಸ್ಟ್‌ ನಿಂದ ಚಿಕಿತ್ಸೆ ನೀಡಲಾಗುತ್ತದೆ. ನಗರದಲ್ಲಿ ಸುತ್ತಾಡುವ ಬೀದಿನಾಯಿಗಳನ್ನು ಬಲೆಯನ್ನು ಉಪಯೋಗಿಸಿ ಹಿಡಿಯಲಾಗುತ್ತದೆ. ಬಳಿಕ ಮಹಾನಗರ ಪಾಲಿಕೆಯ ಸಹಕಾರದೊಂದಿಗೆ ಮಂಗಳೂರಿನ ಶಕ್ತಿನಗರದಲ್ಲಿರುವ ಎನಿಮಲ್‌ ಕೇರ್‌ ಸಂಸ್ಥೆಗೆ ತಲುಪಿಸಲಾಗುತ್ತದೆ.

ಬಳಿಕ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಿ ಅನಂತರ ನಾಲ್ಕು ದಿನಗಳ ಕಾಲ ಅವುಗಳನ್ನು ಆರೈಕೆ ಮಾಡಲಾಗುತ್ತದೆ. ಬಳಿಕ ಯಾವ ಪ್ರದೇಶದಿಂದ ನಾಯಿಗಳನ್ನು ಹಿಡಿದು ತರಲಾಗಿತ್ತೋ, ಅಲ್ಲೇ ಮರಳಿ ಬಿಡಲಾಗುತ್ತದೆ. ಈ ಸಮಯದಲ್ಲಿ ನಾಯಿಗಳಿಗೆ ರೇಬಿಸ್‌ ಚುಚ್ಚುಮದ್ದು ನೀಡಲಾಗುತ್ತದೆ. ಅಲ್ಲದೆ ಸಂತಾನಶಕ್ತಿ ಹರಣ ಮಾಡಿದ ನಾಯಿಯ ಎಡ ಕಿವಿಯಲ್ಲಿ “ವಿ’ ಆಕಾರದಲ್ಲಿ ಮಾರ್ಕ್‌ ಮಾಡಲಾಗುತ್ತದೆ. ಈ ಕಾರ್ಯಾಚರಣೆಗೆ ಒಟ್ಟು ಇಬ್ಬರು ವೈದ್ಯರು, ಏಳು ಮಂದಿ ಸಿಬಂದಿ ಇದ್ದಾರೆ.

ನಾಯಿ ಕಚ್ಚಿದರೆ ಪಾಲಿಕೆಯಿಂದ ನೆರವು ಬೀದಿ ನಾಯಿಗಳು ಅಥವಾ ಮನೆ ನಾಯಿಗಳು ಕಚ್ಚಿದರೆ ಅಂತಹವರಿಗೆ ಮಂಗಳೂರು ಪಾಲಿಕೆಯಿಂದ ಸಹಾಯ ಧನ ನೀಡಲಾಗುತ್ತದೆ. ಕಳೆದ ವರ್ಷ ಪಾಲಿಕೆ ವ್ಯಾಪ್ತಿಯ 24 ಮಂದಿಗೆ 2,000 ರೂ. ನೀಡಲಾಗಿದೆ.

ಸದ್ಯದಲ್ಲೇ ಸಮೀಕ್ಷೆ
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು ಎಷ್ಟು ಬೀದಿ ನಾಯಿಗಳಿವೆ ಎಂಬ ಬಗ್ಗೆ ಸದ್ಯದಲ್ಲೇ ಪಾಲಿಕೆಯಿಂದ ಸಮೀಕ್ಷೆ ನಡೆಸಲಾಗುವುದು. ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ನಗರದಲ್ಲಿ ಎನಿಮಲ್‌ ಕೇರ್‌ ಟ್ರಸ್ಟ್‌ ಮತ್ತು ಪಾಲಿಕೆ ಸಹಯೋಗದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸಾರ್ವಜನಿಕರಿಗೆ ಬೀದಿ ಅಥವಾ ಸಾಕು ನಾಯಿಗಳು ಕಚ್ಚಿದರೆ ಅವರಿಗೆ 2000 ರೂ. ಸಹಾಯ ಧನ ನೀಡಲಾಗುತ್ತದೆ.
– ಡಾ| ಮಂಜಯ್ಯ ಶೆಟ್ಟಿ, ಪಾಲಿಕೆ ಆರೋಗ್ಯಾಧಿಕಾರಿ

*ನವೀನ್‌ ಭಟ್‌ ಇಳಂತಿಲ

ಟಾಪ್ ನ್ಯೂಸ್

arrest

ತಂಬುತಡ್ಕದಲ್ಲಿ ಜೂಜಾಟ: ಆರು ಮಂದಿಯ ಬಂಧನ

arrest 3

ಚಿನ್ನಾಭರಣ ಕಳ್ಳತನ: ಆರೋಪಿ ಬಂಧನ

DOCTOR

ಅಸ್ವಸ್ಥ ಮಹಿಳೆಯ ರಕ್ಷಣೆ

ವಿವಿಧ ರಾಜಕೀಯ ಪಕ್ಷಗಳ ಜತೆ ಮುಖ್ಯ ಚುನಾವಣಾಧಿಕಾರಿ ಸಭೆ

ವಿವಿಧ ರಾಜಕೀಯ ಪಕ್ಷಗಳ ಜತೆ ಮುಖ್ಯ ಚುನಾವಣಾಧಿಕಾರಿ ಸಭೆ

ಹಾವೇರಿ: ಕಾಂಗ್ರೆಸ್‌ಗೆ ಬಂಡಾಯದ ಬಿಸಿ

ಹಾವೇರಿ: ಕಾಂಗ್ರೆಸ್‌ಗೆ ಬಂಡಾಯದ ಬಿಸಿ

accident 2

ಉದ್ಯಾವರ : ಅಪರಿಚಿತ ವಾಹನ ಢಿಕ್ಕಿ : ವ್ಯಕ್ತಿ ಗಂಭೀರ

accuident

ಹಾಲ್ಕಲ್‌ ಬಳಿ ಬಸ್‌ ಮಗುಚಿ ಬಿದ್ದು, ಓರ್ವ ಪ್ರಯಾಣಿಕ ಸಾವು, ಐದು ಮಂದಿಗೆ ಗಂಭೀರ ಗಾಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DOCTOR

ಅಸ್ವಸ್ಥ ಮಹಿಳೆಯ ರಕ್ಷಣೆ

arrest

ಇಬ್ಬರು ಬೈಕ್‌ ಕಳ್ಳರ ಬಂಧನ

ಅಧಿಕ ಲಾಭಾಂಶ ನೀಡುವುದಾಗಿ ಹಣ ಪಡೆದು ಎನ್ ಐಟಿಕೆ ವಿದ್ಯಾರ್ಥಿಯಿಂದ 27.96 ಲ.ರೂ ವಂಚನೆ

death

ಮಂಗಳೂರು : ಅಪಾರ್ಟ್ಮೆಂಟ್ ನ 9 ನೇ ಮಹಡಿಯಿಂದ ಬಿದ್ದು ವ್ಯಕ್ತಿ ಸಾವು

ಚುನಾವಣೆ ಘೋಷಣೆ: ಉಡುಪಿ ಮಂಗಳೂರಿನಲ್ಲಿ ಫ್ಲೆಕ್ಸ್, ಬ್ಯಾನರ್ ತೆರವುಗೊಳಿಸಲು ಸೂಚನೆ

ಚುನಾವಣೆ ಘೋಷಣೆ: ಉಡುಪಿ ಮಂಗಳೂರಿನಲ್ಲಿ ಫ್ಲೆಕ್ಸ್, ಬ್ಯಾನರ್ ತೆರವುಗೊಳಿಸಲು ಸೂಚನೆ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

arrest

ತಂಬುತಡ್ಕದಲ್ಲಿ ಜೂಜಾಟ: ಆರು ಮಂದಿಯ ಬಂಧನ

arrest 3

ಚಿನ್ನಾಭರಣ ಕಳ್ಳತನ: ಆರೋಪಿ ಬಂಧನ

DOCTOR

ಅಸ್ವಸ್ಥ ಮಹಿಳೆಯ ರಕ್ಷಣೆ

ವಿವಿಧ ರಾಜಕೀಯ ಪಕ್ಷಗಳ ಜತೆ ಮುಖ್ಯ ಚುನಾವಣಾಧಿಕಾರಿ ಸಭೆ

ವಿವಿಧ ರಾಜಕೀಯ ಪಕ್ಷಗಳ ಜತೆ ಮುಖ್ಯ ಚುನಾವಣಾಧಿಕಾರಿ ಸಭೆ

ಹಾವೇರಿ: ಕಾಂಗ್ರೆಸ್‌ಗೆ ಬಂಡಾಯದ ಬಿಸಿ

ಹಾವೇರಿ: ಕಾಂಗ್ರೆಸ್‌ಗೆ ಬಂಡಾಯದ ಬಿಸಿ