ಜೀವನ-ಸಂಬಂಧ: ಮನುಷ್ಯ-ನಾಯಿಗಳೆರಡರ ಅಪೂರ್ವ ಬಂಧ

Team Udayavani, Nov 18, 2020, 6:15 AM IST

ಜೀವನ-ಸಂಬಂಧ: ಮನುಷ್ಯ-ನಾಯಿಗಳೆರಡರ ಅಪೂರ್ವ ಬಂಧ

ಮಂಗಳೂರು: ಪ್ರೀತಿ ನೀಡಿದ ಯಜಮಾನನನ್ನು ಅಷ್ಟೇ ಪ್ರೀತಿಯಿಂದ ಸ್ಮರಣೆಯಲ್ಲಿ ಇರಿಸಿ ಕೊಂಡು ಬೆಂಗಾವಲಾಗುವ ಪ್ರಾಣಿ ನಾಯಿ. ಇದಕ್ಕೆ ಜೀವಂತ ನಿದರ್ಶನವೊಂದು ಮಂಗಳೂರು ಮಹಾನಗರ ದಲ್ಲಿದೆ. ಅನ್ನ ಹಾಕುವ ಅಂಗವಿಕಲ ವ್ಯಕ್ತಿಯೊಬ್ಬರನ್ನು ಎಡೆಬಿಡದೆ ಕಾಯುವ ಎರಡು ನಾಯಿಗಳಿವು!

ಅಂದಹಾಗೆ ಇವು ಪಂಚತಾರಾ ದರ್ಜೆಯ ಉಪಚಾರ ಪಡೆಯುವ ಉನ್ನತ ತಳಿಯ ನಾಯಿಗಳಲ್ಲ; ಸಾದಾ ನಾಯಿಗಳು. ಇವುಗಳ ಮಾಲಕನೂ ಸ್ಥಿತಿವಂತನಲ್ಲ, ಆತ ಖರೀದಿಸಿ ಸಾಕುತ್ತಿರುವ ನಾಯಿಗಳೂ ಇವಲ್ಲ; ಬದುಕಿನ ಬಂಡಿ ಸಾಗುತ್ತಿರುವ ಹಾದಿಯಲ್ಲಿ ಅಚಾನಕ್‌ ಜತೆಯಾದವರು!

ಸದಾ ಬೆಂಗಾವಲು
ನಡೆಯಲು ಸಾಧ್ಯವಾಗದಷ್ಟು ಅಂಗವೈಕಲ್ಯ ಹೊಂದಿರುವ ಈ ವ್ಯಕ್ತಿ ತನ್ನ ಸಣ್ಣ ತಳ್ಳುಗಾಡಿಯ ಮೇಲೆ ಕುಳಿತು ಕೈಯಿಂದ ಗಾಡಿ ದೂಡುತ್ತಾ ನಗರದ ಹಂಪನಕಟ್ಟೆ, ಪಿವಿಎಸ್‌ ಮುಂತಾದೆಡೆ ಸಂಚರಿಸುತ್ತಾರೆ. ಹೀಗೆ ಸಂಚರಿಸುವಾಗ ಯಾರಾದರೂ ಹಣ ನೀಡಿದರೆ, ಅದರಿಂದ ಜೀವನ ಸಾಗಿಸುತ್ತಾರೆ. ಕೊಂಡ ಆಹಾರದಲ್ಲಿ ಈ ಎರಡು ನಾಯಿಗಳಿಗೆ ಪಾಲು ಇದ್ದೇ ಇದೆ. ಕಳೆದ ಆರೇಳು ವರ್ಷಗಳಿಂದ ಶ್ವಾನಗಳೆರಡು ಈ ವ್ಯಕ್ತಿಯ ಜತೆಯಾಗಿದ್ದು, ಚಾಚೂ ತಪ್ಪದೆ ಯಜಮಾನನ ಸೇವೆಗೈಯುತ್ತಿವೆ.

ತನ್ನ ಹೊಟ್ಟೆ ತುಂಬುವಷ್ಟು ಸಿಗದಿದ್ದರೂ ಈ ಎರಡು ಶ್ವಾನಗಳ ಹೊಟ್ಟೆ ತುಂಬಿಸುವುದನ್ನು ಮಾತ್ರ ಈ ವ್ಯಕ್ತಿ ಎಂದೂ ತಪ್ಪಿಸಿಲ್ಲ ಎಂದು ಈತನನ್ನು ಹತ್ತಿರದಿಂದ ಗಮನಿಸಿರುವ ನಗರದ ಜನರು ಹೇಳುತ್ತಾರೆ. ಸದ್ಯ ಈ ವ್ಯಕ್ತಿ ಯೊಂದಿಗೆ ಶ್ವಾನಗಳೆರಡು ಸದಾ ಜತೆಯಾಗಿರುವ ವೀಡಿಯೋ ಸಾಮಾ ಜಿಕ ತಾಣದಲ್ಲಿ ವೈರಲ್‌ ಆಗಿದೆ.

ಸದ್ದು ಕೇಳಿದರೆ ಓಡಿ ಬರುತ್ತವೆ!
ಆಹಾರ ಉಣಿಸುವ ಈ ಯಜಮಾನನಿಗೆ ಅಷ್ಟೇ ಪ್ರೀತಿ ಕೊಡುತ್ತಿವೆ ಈ ಎರಡು ನಾಯಿಗಳು. ಆತ ಮಲಗಿರುವಾಗ ಶ್ವಾನಗಳೆರಡೂ ಎಚ್ಚರವಿದ್ದು ಕಾಯುತ್ತವೆ. ಯಜಮಾನನ ತಳ್ಳುಗಾಡಿ ಚಲಿಸುವ ಸದ್ದು ಕೇಳಿದ ತತ್‌ಕ್ಷಣ ಓಡಿ ಬರುತ್ತವೆ. ಆತ ಹೋದಲೆಲ್ಲ ಆತನೊಂದಿಗೆ ಸಾಗುತ್ತವೆ. ಮನುಷ್ಯ ಮತ್ತು ಎರಡು ಶ್ವಾನಗಳ ನಡುವಿನ ಆತ್ಮೀಯತೆಯನ್ನು ಕಂಡು ಜನರೂ ಚಕಿತರಾಗಿದ್ದಾರೆ.

ಕಳ್ಳನನ್ನು ಹಿಮ್ಮೆಟ್ಟಿಸಿದ್ದವು
ಅಂಗವಿಕಲನಾದ ಈ ವ್ಯಕ್ತಿ ಪ್ರತೀ ದಿನ ಸಣ್ಣ ತಳ್ಳುಗಾಡಿಯಲ್ಲೇ ಸಂಚರಿಸಿ ಜನರಿಂದ ಸಹಾಯ ಯಾಚಿಸುತ್ತಾರೆ. ಜನರು ನೀಡಿದ ಹಣದಲ್ಲೇ ಜೀವನ ಕಳೆ
ಯುವ ಈತನ ಬಳಿ ಸಂಗ್ರಹವಾದ ಒಂದಷ್ಟು ಮೊತ್ತದ ಮೇಲೆಯೂ ಕಳ್ಳರ ಕಣ್ಣು ಬಿದ್ದಿತ್ತು. ಈ ಹಿಂದೆ ಕಳ್ಳನೋರ್ವ ಈ ವ್ಯಕ್ತಿಯಲ್ಲಿದ್ದ ಹಣವನ್ನು ದೋಚಿ ಪರಾರಿ ಯಾಗಲು ಯತ್ನಿಸಿದ್ದ. ತಮ್ಮ ಯಜಮಾನನಿಗಾದ ಅನ್ಯಾಯದ ವಿರುದ್ಧ ಸೆಟೆದು ನಿಂತ ನಾಯಿಗಳು ಕಳ್ಳನ ಬೆನ್ನಟ್ಟಿದ್ದವು. ಈ ವೇಳೆ ಒಂದು ಶ್ವಾನ ಗಾಯಗೊಂಡಿತ್ತು. ಗಾಯಾಳು ಶ್ವಾನವನ್ನು ಇದೇ ವ್ಯಕ್ತಿ ರಿಕ್ಷಾದಲ್ಲಿ ಆಸ್ಪತ್ರೆಗೊಯ್ದು ಚಿಕಿತ್ಸೆ ಕೊಡಿಸಿ ಗುಣಪಡಿಸಿದ್ದ ಎಂದು ನೆನಪಿಸಿಕೊಳ್ಳುತ್ತಾರೆ ಸನಿಹದಿಂದ ಗಮನಿಸಿದವರು.

ಟಾಪ್ ನ್ಯೂಸ್

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಲ್ಲಿಕಾರ್ಜುನ ಖರ್ಗೆ

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಲ್ಲಿಕಾರ್ಜುನ ಖರ್ಗೆ

ತೋತಾಪುರಿ

‘ತೋತಾಪುರಿ’ ಚಿತ್ರ ವಿಮರ್ಶೆ: ಜಾತಿ-ಧರ್ಮದ ಬೇಲಿಯಲ್ಲಿ ತೋತಾಪುರಿ ತೊಟ್ಟು!

ಜಾತಕದಲ್ಲಿʼಬಂಧನ ದೋಷʼವಿದ್ದರೆ ಇಲ್ಲಿ 500 ರೂ.ಬಾಡಿಗೆ ಕೊಟ್ಟು ಒಂದು ದಿನ ಜೈಲಿನಲ್ಲಿರಬಹುದು!

ಜಾತಕದಲ್ಲಿʼಬಂಧನ ದೋಷʼವಿದ್ದರೆ ಇಲ್ಲಿ 500 ರೂ.ಬಾಡಿಗೆ ಕೊಟ್ಟು ಒಂದು ದಿನ ಜೈಲಿನಲ್ಲಿರಬಹುದು!

ಚಲಿಸುತ್ತಿದ್ದ ಕಾರಿನ ಮೇಲೆ ಪಲ್ಟಿಯಾದ ಟ್ರಕ್ : ಮೂವರು ಸ್ಥಳದಲ್ಲೇ ಸಾವು

ಚಲಿಸುತ್ತಿದ್ದ ಕಾರಿನ ಮೇಲೆ ಪಲ್ಟಿಯಾದ ಟ್ರಕ್ : ಮೂವರು ಸ್ಥಳದಲ್ಲೇ ಸಾವು

5g

5ಜಿ ಸೇವೆ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ; ಅಗ್ಗದ ದರದಲ್ಲಿ ಇಂಟರ್ನೆಟ್ ಎಂದ ಜಿಯೋ

ವಿರಾಟ್ ಕೊಹ್ಲಿಯ ಟಿ20 ದಾಖಲೆ ಸರಿಗಟ್ಟಿದ ಬಾಬರ್ ಅಜಂ

ವಿರಾಟ್ ಕೊಹ್ಲಿಯ ಟಿ20 ದಾಖಲೆ ಸರಿಗಟ್ಟಿದ ಬಾಬರ್ ಅಜಂ

Y category security to 5 RSS leaders of Kerala

ದಾಳಿ ಸಾಧ್ಯತೆ; ಕೇರಳದ ಐವರು ಆರ್ ಎಸ್ಎಸ್ ನಾಯಕರಿಗೆ ‘ವೈ’ ಕೆಟಗರಿ ಭದ್ರತೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಗಳೂರು: 10 ಲಕ್ಷ ರೂ. ವಂಚನೆ ಪ್ರಕರಣ: ಕೇಸು ದಾಖಲು

ಮಂಗಳೂರು: 10 ಲಕ್ಷ ರೂ. ವಂಚನೆ ಪ್ರಕರಣ: ಕೇಸು ದಾಖಲು

ಪಾಸ್‌ಪೋರ್ಟ್‌ ದುರುಪಯೋಗ: ಆರೋಪಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ

ಪಾಸ್‌ಪೋರ್ಟ್‌ ದುರುಪಯೋಗ: ಆರೋಪಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ

1-saddasdad

ಮಂಗಳೂರು ವಿಮಾನ ನಿಲ್ದಾಣದಲ್ಲಿ 86 ಲಕ್ಷ ರೂ. ಮೌಲ್ಯದ ಚಿನ್ನ ವಶ

13

ನವರಾತ್ರಿ ಸೊಬಗು; ನಗರವೆಲ್ಲ ದೀಪಾಲಂಕಾರದ ಮೆರುಗು

money 2

ಮಂಗಳೂರು: ಲಂಚ ಸ್ವೀಕರಿಸುತ್ತಿದ್ದಾಗ ರೆಡ್‌ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ

MUST WATCH

udayavani youtube

ದಿನ6| ಕಾತ್ಯಾಯಿನಿ ದೇವಿ|ಕಾತ್ಯಾಯಿನಿ ದೇವಿ ಪೂಜೆಯ ಪ್ರಯೋಜನವೇನು ಗೊತ್ತೇ. | Udayavani

udayavani youtube

ದಿನ 5| ಸ್ಕಂದ ಮಾತೆ | ಸ್ಕಂದ ಮಾತೆ ಪ್ರತಿಯೊಬ್ಬ ತಾಯಿಯ ಪ್ರತಿರೂಪ ಹೇಗೆ ? | Udayavani

udayavani youtube

ಸಿದ್ದರಾಮಯ್ಯ RSS ಬ್ಯಾನ್ ಮಾತಿಗೆ ಮುಖ್ಯಮಂತ್ರಿ ಖಂಡನೆ

udayavani youtube

ಈ ಮಾದರಿಯಲ್ಲಿ ಹೈನುಗಾರಿಕೆ ಮಾಡಿದ್ದಾರೆ ಉತ್ತಮ ಲಾಭ ಆಗುತ್ತದೆ

udayavani youtube

ನವರಾತ್ರಿ ವಿಶೇಷ : 50 ವರ್ಷಗಳಿಂದ ಗೊಂಬೆಯ ಆರಾಧನೆ ಮಾಡುತ್ತಿರುವ ಕುಟುಂಬ

ಹೊಸ ಸೇರ್ಪಡೆ

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಲ್ಲಿಕಾರ್ಜುನ ಖರ್ಗೆ

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಲ್ಲಿಕಾರ್ಜುನ ಖರ್ಗೆ

ತೋತಾಪುರಿ

‘ತೋತಾಪುರಿ’ ಚಿತ್ರ ವಿಮರ್ಶೆ: ಜಾತಿ-ಧರ್ಮದ ಬೇಲಿಯಲ್ಲಿ ತೋತಾಪುರಿ ತೊಟ್ಟು!

ಜಾತಕದಲ್ಲಿʼಬಂಧನ ದೋಷʼವಿದ್ದರೆ ಇಲ್ಲಿ 500 ರೂ.ಬಾಡಿಗೆ ಕೊಟ್ಟು ಒಂದು ದಿನ ಜೈಲಿನಲ್ಲಿರಬಹುದು!

ಜಾತಕದಲ್ಲಿʼಬಂಧನ ದೋಷʼವಿದ್ದರೆ ಇಲ್ಲಿ 500 ರೂ.ಬಾಡಿಗೆ ಕೊಟ್ಟು ಒಂದು ದಿನ ಜೈಲಿನಲ್ಲಿರಬಹುದು!

ಚಲಿಸುತ್ತಿದ್ದ ಕಾರಿನ ಮೇಲೆ ಪಲ್ಟಿಯಾದ ಟ್ರಕ್ : ಮೂವರು ಸ್ಥಳದಲ್ಲೇ ಸಾವು

ಚಲಿಸುತ್ತಿದ್ದ ಕಾರಿನ ಮೇಲೆ ಪಲ್ಟಿಯಾದ ಟ್ರಕ್ : ಮೂವರು ಸ್ಥಳದಲ್ಲೇ ಸಾವು

ಮೈಸೂರು ದಸರಾ ಪ್ರಯುಕ್ತ ವಿಂಟೇಜ್ ಕಾರ್ ಶೋಗೆ ಚಾಲನೆ

ಮೈಸೂರು ದಸರಾ ಪ್ರಯುಕ್ತ ವಿಂಟೇಜ್ ಕಾರ್ ಶೋಗೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.