ಕೊಲ್ಯ ಬಳಿ ಭೀಕರ ಕಾರು ಅಪಘಾತ: ಗಂಭೀರ ಗಾಯಗೊಂಡಿದ್ದ ಇನ್ನೋರ್ವ ಗಾಯಾಳು ಮೃತ್ಯು
Team Udayavani, Jan 30, 2023, 6:56 PM IST
ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ಕೊಲ್ಯ -ಅಡ್ಕ ನಡುವೆ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉಪ್ಪಳ ನಯಾ ಬಝಾರ್ ನಿವಾಸಿ ಬಾಷಾರ್ ಅಹಮ್ಮದ್(22) ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಇದರೊಂದಿಗೆ ಅಪಘಾತದಲ್ಲಿ ಮೃತಪಟ್ಟರ ಸಂಖ್ಯೆ ಎರಡಕ್ಕೇರಿದ್ದು ಅಪಘಾತದಲ್ಲಿ ಮೃತಪಟ್ಟ ಇಬ್ಬರೂ ಸಹೋದರ ಸಂಬಂಧಿಗಳು. ಗಾಯಾಳುಗಳಾದ ಫಾತೀಮಾ ಮತ್ತು ರೇವತಿ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಗಳೂರಿನಿಂದ ತಲಪಾಡಿ ಕಡೆಗೆ ಭಾನುವಾರ ರಾತ್ರಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಕೊಲ್ಯ -ಅಡ್ಕದ ನಡುವೆ ಕಾರು ಚಾಲಕನ ನಿಯಂತ್ರಣ ಕಳೆದು ಡಿವೈಡರ್ ಏರಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಸಂಪೂರ್ಣ ನುಜ್ಜುಗುಜ್ಜಾಗಿತ್ತು.
ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮಂಜೇಶ್ವರ ಉದ್ಯಾವರ ನಿವಾಸಿ ಅಬ್ದುಲ್ ರಿಫಾಯಿ(22) ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದರು, ಗಂಭೀರ ಗಾಯಗೊಂಡಿದ್ದ ಉಪ್ಪಳ ಹಿದಾಯತ್ ನಗರದ ಬಾಷರ್ ಅಹಮ್ಮದ್ (22) ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ.
ಬಾಷರ್ ಅಹಮ್ನದ್. ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಬಿಎ ವಿದ್ಯಾಭ್ಯಾಸ ಮುಗಿಸಿದ್ದು, ವಿದ್ಯಾರ್ಥಿನಿಯರಿಬ್ಬರು ಅದೇ ಕಾಲೇಜಿನ ಬಿಸಿಎ ವಿದ್ಯಾಭ್ಯಾಸ ಪೂರೈಸಿದ್ದರು. ಮೃತಪಟ್ಟ ಇಬ್ಬರೂ ಸೇರಿ ನಾಲ್ವರು ಸ್ನೇಹಿತರಾಗಿದ್ದು, ಜ.28 ರಂದು ಬಾಷರ್ ಅಹಮ್ಮದ್ ನ ಸಹೋದರ ವಿದೇಶದಿಂದ ಆಗಮಿಸಿದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಭೇಟಿ ಮಾಡಿ ವಾಪಾಸ್ ತಲಪಾಡಿ ಕಡೆ ಬರುವಾಗ ಈ ದುರ್ಘಟನೆ ನಡೆದಿದೆ.
ಮೃತ ಅಬ್ದುಲ್ ರಿಫಾಯಿ ತಂದೆ, ತಾಯಿ, ಇಬ್ಬರು ಸಹೋದರರು ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ.
ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: 49 ಸಾವಿರ ರೂ. ಚಿತ್ರ 25 ಕೋಟಿ ರೂಪಾಯಿಗೆ ಮಾರಾಟವಾಯಿತು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸ್ಟಾರ್ಟ್‌ಅಪ್ ಕನಸು ಹೊತ್ತವರ ಚಿತ್ರ: ಮೇಡ್ ಇನ್ ಬೆಂಗಳೂರು
ಆನ್ಲೈನ್ ನಲ್ಲಿ ವಿದ್ಯುತ್ ಬಿಲ್ ಕಟ್ಟಲು ಹೋಗಿ 7 ಲಕ್ಷ ರೂ. ಕಳೆದುಕೊಂಡ ಮಹಿಳೆ
ರಣದೀಪ್ ಸಿಂಗ್ ಸುರ್ಜೆವಾಲ ಇತಿಹಾಸವನ್ನು ಓದಿಕೊಳ್ಳಬೇಕು: ಸಿಎಂ ಬೊಮ್ಮಾಯಿ
ಬ್ಯಾಂಕ್ ಸಾಲ ತೀರಿಸಲು ಮಲ್ಯ ಬಳಿ ಸಾಕಷ್ಟು ಹಣವಿತ್ತು,ಆದರೂ.; ಚಾರ್ಜ್’ಶೀಟ್ ಸಲ್ಲಿಸಿದ ಸಿಬಿಐ
ಜಗತ್ತನ್ನು ಆಳುತ್ತಿದೆ ರಾಕ್ಷಸ ಚಕ್ರವರ್ತಿ