ಉಪ್ಪಿನಂಗಡಿ: ನೀರು ದುರ್ಬಳಕೆ ತಡೆಗೆ ಕಾರ್ಯಾಚರಣೆ


Team Udayavani, Apr 13, 2017, 2:01 PM IST

124upg3.jpg

ಉಪ್ಪಿನಂಗಡಿ: ಗ್ರಾ.ಪಂ.ನ ಕುಡಿಯುವ ನೀರನ್ನು ದುರ್ಬಳಕೆ ಮಾಡು ವವರನ್ನು ಪತ್ತೆ ಹಚ್ಚಲು ಗುರುವಾರದಿಂದ ವಾರ್ಡ್‌ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲು ಗ್ರಾ.ಪಂ.ನ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿ ತೀರ್ಮಾನಿಸಿದೆ.

ಗ್ರಾ.ಪಂ. ಅಧ್ಯಕ್ಷ ಅಬ್ದುರ್ರಹ್ಮಾನ್‌ ಕೆ. ಅವರ ಅಧ್ಯಕ್ಷತೆಯಲ್ಲಿ ಪಂಚಾಯತ್‌ ಕಚೇರಿಯಲ್ಲಿ ಬುಧವಾರ ನಡೆದ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷ ಅಬ್ದುರ್ರಹ್ಮಾನ್‌ ಕೆ., ಕೆಲವರು ಪಂಚಾಯತ್‌ನ ಕುಡಿಯುವ ನೀರನ್ನು ಕೃಷಿ ಕಾರ್ಯಗಳಿಗೆ ಬಳಸುತ್ತಿರುವುದು ಕಂಡುಬಂದಿದೆ. ಇನ್ನು ಕೆಲವು ಕಡೆ ಕುಡಿಯುವ ನೀರು ಅನಗತ್ಯವಾಗಿ ಪೋಲಾಗುತ್ತಿದೆ. ಬೇಸಗೆಯಲ್ಲಿ ಕುಡಿಯುವ ನೀರಿಗೆ ಕೊರತೆಯಿದ್ದು, ಆದ್ದರಿಂದ ನೀರನ್ನು ನಾಜೂಕಾಗಿ ಬಳಸಬೇಕು. ಅಗತ್ಯ ಕೆಲಸಗಳನ್ನು ಬಿಟ್ಟು ಇನ್ನಿತರ ಕಾರ್ಯಗಳಿಗೆ ಕುಡಿಯುವ ನೀರನ್ನು  ದುರ್ಬಳಕೆಯಾಗಬಾರದು. ಇದನ್ನು ತಡೆಯುವ ನಿಟ್ಟಿನಲ್ಲಿ ಗ್ರಾ.ಪಂ.ನ ಪ್ರತಿ ವಾರ್ಡ್‌ನಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿಯ ಸದಸ್ಯರು ಕಾರ್ಯಾಚರಣೆ ನಡೆಸಲಿದ್ದಾರೆ. ನೀರು ದುರ್ಬಳಕೆಯಾಗುತ್ತಿರುವುದು ಕಂಡು ಬಂದಲ್ಲಿ. ಅಂಥವರ ಕುಡಿಯುವ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು. ಮತ್ತೆ ಮಳೆಗಾಲ ಪ್ರಾರಂಭವಾಗುವವರೆಗೆ ಕುಡಿಯುವ ನೀರಿನ ಸಂಪರ್ಕ ನೀಡುವು ದಿಲ್ಲ. ನಾಳೆಯಿಂದಲೇ ಈ ಕಾರ್ಯಾಚರಣೆ ಆರಂಭವಾಗಲಿದೆ ಎಂದರು.

ಸಮಿತಿಯ ಕೋಶಾಧಿಕಾರಿ ಉಷಾ ಚಂದ್ರ ಮುಳಿಯ ಮಾತನಾಡಿ, ನೇತ್ರಾವತಿ ನದಿಯಲ್ಲಿ ಬಟ್ಟೆ ಒಗೆಯುವುದು, ವಾಹನಗಳನ್ನು ತೊಳೆಯುವುದು ಕಂಡು ಬರುತ್ತಿದೆ. ಇದರಿಂದಾಗಿ ಕುಡಿಯುವ ನೀರು ಮಲಿನಗೊಳ್ಳುತ್ತಿದೆ ಎಂದು ದೂರಿದರು.
 
ಅಧಿಕಾರಿ, ಸಿಬಂದಿ ತರಾಟೆಗೆ
ಸಭೆಗಳಲ್ಲಿ ನಿರ್ಣಯವಾದರೂ ಆ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಶೀಘ್ರ ನಿರ್ಣಯ ಅನುಷ್ಠಾನವಾಗುವಂತೆ ಮಾಡುತ್ತಿಲ್ಲ ಎಂದು ಪಂಚಾಯತ್‌ನ ಅಧಿಕಾರಿಗಳನ್ನು ಪಂಚಾಯತ್‌ ಅಧ್ಯಕ್ಷ ಅಬ್ದುರ್ರಹ್ಮಾನ್‌ ಕೆ. ಈ ಸಂದರ್ಭ ತರಾಟೆಗೆ ತೆಗೆದುಕೊಂಡರು. ಅಲ್ಲದೇ, ಪಂಚಾಯತ್‌ ರಾಜ್‌ ಕಾಯ್ದೆಯನ್ನು ಉಲ್ಲಂಘಿಸಿದಂತೆ ಸೂಚಿಸಿದರು. 

ಸಮಿತಿ ಸದಸ್ಯ ಮುಹಮ್ಮದ್‌ ಕೆಂಪಿ ಮಾತನಾಡಿ, ಬಸ್‌ ನಿಲ್ದಾಣದ ಬಳಿ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ವೊಂದರಿಂದ ನದಿಗೆ ಮಲಿನ ನೀರು ಬಿಡುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಜ್ಯೂನಿಯರ್‌ ಕಾಲೇಜಿನಿಂದ ಹಿಡಿದು ಶ್ರೀ ಸಹಸ್ರಲಿಂಗೇಶ್ವರ ದೇವಾಲಯದವರೆಗೆ ಅಲ್ಲಲ್ಲಿ ಮಲೀನ ನೀರು ನದಿಯನ್ನು ಸೇರುತ್ತಿದ್ದು, ಈ ಬಗ್ಗೆಯೂ ಕ್ರಮ ಕೈಗೊಳ್ಳ ಬೇಕೆಂಬ ಒತ್ತಾಯ ಕೇಳಿಬಂತು. 

ನದಿ ಮಲಿನಗೊಳಿಸದಂತೆ ಸೂಚಿಸುವ ನಾಮಫಲಕ
ಗ್ರಾ.ಪಂ. ಅಧ್ಯಕ್ಷ ಅಬ್ದುರ್ರಹ್ಮಾನ್‌ ಕೆ. ಮಾತನಾಡಿ, ನದಿ ನೀರನ್ನು ಮಲಿನಗೊಳಿಸುತ್ತಿರುವವ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ಫ‌ಲಕವನ್ನು ನದಿ ಬದಿ ಅಲ್ಲಲ್ಲಿ ಅಳವಡಿಸುವಂತೆ ಪಿಡಿಒಗೆ ಸೂಚಿಸಿದರು. ನದಿ ತೀರದ ಬಳಿ ಡೇರೆ ಹಾಕಿಕೊಂಡು ವಾಸವಾಗಿರುವ ಕಾರ್ಮಿಕರಲ್ಲಿಗೆ ತೆರಳಿ ಅವರಿಗೆ ಎಚ್ಚರಿಕೆ ನೀಡಲು ನಿರ್ಣಯ ಕೈಗೊಳ್ಳಲಾಯಿತು.

ಟಾಪ್ ನ್ಯೂಸ್

1-imek-22

Controversy ನಡುವೆ “ಪ್ರೇರಣಾ ಸ್ಥಳ’ ಉದ್ಘಾಟನೆ

1-imek

ನಮ್ಮ ‘ಐಮೆಕ್‌’ ಪ್ರಾಜೆಕ್ಟ್ ಗೆ ಜಿ7 ನಾಯಕರ ಬೆಂಬಲ!

vande bharat

ಜೂ.20ಕ್ಕೆ ಬೆಂಗಳೂರು-ಮಧುರೈ ವಂದೇ ಭಾರತ್‌: ಕರ್ನಾಟಕಕ್ಕೆ 9ನೇ ರೈಲು

1-sugopi

ಇಂದಿರಾ ಗಾಂಧಿ ಕಾಂಗ್ರೆಸ್‌ ಮಾತೆ: ಉಲ್ಟಾ ಹೊಡೆದ ಸುರೇಶ್‌ ಗೋಪಿ

ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮ ಚುರುಕು: ಸಚಿವ ಎಚ್‌.ಕೆ. ಪಾಟೀಲ್‌

ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮ ಚುರುಕು: ಸಚಿವ ಎಚ್‌.ಕೆ. ಪಾಟೀಲ್‌

ಎಚ್‌ಡಿಕೆ ಕಾಲದಲ್ಲೂ ತೈಲ ದರ ಏರಿಸಿದ್ದರು: ಸಿದ್ಧರಾಮಯ್ಯ

ಎಚ್‌ಡಿಕೆ ಕಾಲದಲ್ಲೂ ತೈಲ ದರ ಏರಿಸಿದ್ದರು: ಸಿದ್ಧರಾಮಯ್ಯ

1-wewwqewq

T20 World Cup; ಐರ್ಲೆಂಡ್ ಎದುರು ಪಾಕ್ ಗೆ ಗೆಲುವಿನ ಸಮಾಧಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Missing Case ಉಪ್ಪಿನಂಗಡಿ: ತಾಯಿ, ಮಗ ನಾಪತ್ತೆMissing Case ಉಪ್ಪಿನಂಗಡಿ: ತಾಯಿ, ಮಗ ನಾಪತ್ತೆ

Missing Case ಉಪ್ಪಿನಂಗಡಿ: ತಾಯಿ, ಮಗ ನಾಪತ್ತೆ

Subramanya: ವಿದ್ಯುತ್‌ ಕಂಬಕ್ಕೆ ಕಾರು ಢಿಕ್ಕಿ

Subramanya: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

Road Mishap ಕಡಪಾಲ: ಕಾರುಗಳ ಮುಖಾಮುಖಿ ಢಿಕ್ಕಿ

Road Mishap ಕಡಪಾಲ: ಕಾರುಗಳ ಮುಖಾಮುಖಿ ಢಿಕ್ಕಿ

Belthangady ತಾಯಿಗೆ ಅನಾರೋಗ್ಯ: ವಿದ್ಯಾರ್ಥಿನಿ ಆತ್ಮಹತ್ಯೆ

Belthangady ತಾಯಿಗೆ ಅನಾರೋಗ್ಯ: ವಿದ್ಯಾರ್ಥಿನಿ ಆತ್ಮಹತ್ಯೆ

ಕರಾವಳಿಯ ದೇಗುಲಗಳಲ್ಲಿ ಭಾರೀ ಭಕ್ತ ಸಂದಣಿ

ಕರಾವಳಿಯ ದೇಗುಲಗಳಲ್ಲಿ ಭಾರೀ ಭಕ್ತ ಸಂದಣಿ

MUST WATCH

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಹೊಸ ಸೇರ್ಪಡೆ

1-imek-22

Controversy ನಡುವೆ “ಪ್ರೇರಣಾ ಸ್ಥಳ’ ಉದ್ಘಾಟನೆ

police crime

ಗೇಮಿಂಗ್‌ ಜೋನ್‌ ದುರಂತ: ಇನ್ನೂ ಇಬ್ಬರು ಪೊಲೀಸ್‌ ವಶಕ್ಕೆ

police USA

ಅಮೆರಿಕದಲ್ಲಿ 2 ಪ್ರತ್ಯೇಕ ಶೂಟೌಟ್‌: ಇಬ್ಬರು ಸಾವು

arrested

ಸಲ್ಮಾನ್‌ ಮನೆ ಹೊರಗೆ ಗುಂಡಿನ ದಾಳಿ: ರಾಜಸ್ಥಾನದ ವ್ಯಕ್ತಿ ಸೆರೆ

baby

UP ಕ್ಷುಲ್ಲಕ ಕಾರಣಕ್ಕೆ 2 ವರ್ಷದ ಮಗಳನ್ನು ಕಾಲುವೆಗೆಸೆದ ತಂದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.