
ಸೀಲ್ ಡೌನ್ ಮಾಡಿದ್ದರೂ ಹೊರ ಜಿಲ್ಲೆಗಳಿಂದ ಕುಕ್ಕೆಗೆ ವಾಹನಗಳ ಸಾಲು
Team Udayavani, Jun 16, 2021, 9:59 AM IST

ಸುಬ್ರಹ್ಮಣ್ಯ: ಕೋವಿಡ್ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸೀಲ್ ಡೌನ್ ಮಾಡಲಾಗಿದ್ದರೂ ಹೊರ ಜಿಲ್ಲೆಗಳಿಂದ ಕುಕ್ಕೆಗೆ ಯಾತ್ರಿಕರು ಆಗಮಿಸುತ್ತಿರುವುದು ಕಂಡು ಬಂದಿದೆ.
ಸೋಮವಾರದಿಂದ ಸೀಲ್ ಡೌನ್ ಮಾಡಲಾಗಿದ್ದರೂ, ಪಂಚಾಯತಿ ವ್ಯಾಪ್ತಿಯ ಪ್ರವೇಶ ರಸ್ತೆಗಳನ್ನು ಬಂದ್ ಮಾಡಿ ಚೆಕ್ ಪೋಸ್ಟ್ ತೆರೆಯಲಾಗಿದೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತಗೊಂಡಿದೆ. ಆದರೆ ಕುಲ್ಕುಂದ ಭಾಗದಿಂದ ಕುಕ್ಕೆ ಕಡೆಗೆ ಯಾತ್ರಿಕರ ವಾಹನಗಳು ಆಗಮಿಸುತ್ತಿದೆ. ಅಲ್ಲಿ ನಿರ್ಮಿಸಿರುವ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಹಲವು ವಾಹನಗಳನ್ನು ಆದೇಶದ ಬಗ್ಗೆ ಮಾಹಿತಿ ನೀಡಿ ಹಿಂದಕ್ಕೆ ಕಳುಹಿಸಿದ್ದಾರೆ. ದಂಡವೂ ವಿಧಿಸಲಾಗಿದೆ.
ಇದನ್ನೂ ಓದಿ:ವಿದೇಶಕ್ಕೆ ತೆರಳುವವರಿಗೆ ಈ ದಾಖಲೆಗಳನ್ನು ನೀಡಿದರೆ 28 ದಿನಕ್ಕೆ 2ನೇ ಡೋಸ್ ಲಸಿಕೆ
ಹೀಗಿದ್ದರೂ ಕೆಲವು ವಾಹಗಳು ಒಳ ರಸ್ತೆ ಮೂಲಕ ರಥ ಬೀದಿಗೆ ಬಂದಿವೆ ಎಂದು ವರದಿಯಾಗಿದೆ. ಸುಬ್ರಹ್ಮಣ್ಯ ಠಾಣಾಧಿಕಾರಿ ವಾಮನ ನೇತೃತ್ವದಲ್ಲಿ ಸಿಬ್ಬಂದಿಗಳು ಹಾಗೂ ಗೃಹರಕ್ಷಕ ಸಿಬ್ಬಂದಿ ಕರ್ತವ್ಯದಲ್ಲಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Raichur: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪತ್ನಿಯನ್ನು ಕೊಂದು ಪತಿ ನೇಣಿಗೆ ಶರಣು

iPhone 15ಗಾಗಿ ಮೊಬೈಲ್ ಅಂಗಡಿ ಸಿಬ್ಬಂದಿಯನ್ನೇ ಹಿಗ್ಗಾಮುಗ್ಗಾವಾಗಿ ಥಳಿಸಿದ ಗ್ರಾಹಕರು.!

Nijjar: ಕೆನಡಾದಲ್ಲಿ ಇದ್ದುಕೊಂಡೇ ಭಾರತದಲ್ಲಿ ದಾಳಿಗೆ ಧನಸಹಾಯ ಮಾಡುತ್ತಿದ್ದ ನಿಜ್ಜರ್

Mangaluru: ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ; ಕಾರ್ಯಾಲಯ ಉದ್ಘಾಟನೆ

Meramec Caverns:ನಿಸರ್ಗದ ರಚನೆಗೆ ಮನಸೋಲದವರ್ಯಾರು….ವಿಸ್ಮಯ, ಕೌತುಕಗಳ ಆಗರ ಗುಹೆಗಳು