ವಾರಸುದಾರರಿಲ್ಲದೆ ವಸತಿ ನಿರ್ಮಾಣಕ್ಕೆ ಅಲೆದಾಟ

ಸಾಧ್ಯವಾಗದ ಖಾತೆ ವರ್ಗಾವಣೆ ಪ್ರಕ್ರಿಯೆ , ನಾಲ್ಕು ಮನೆಗಳ ಸಂತ್ರಸ್ತರು ಅತಂತ್ರ

Team Udayavani, Dec 20, 2020, 1:18 PM IST

ವಾರಸುದಾರರಿಲ್ಲದೆ ವಸತಿ ನಿರ್ಮಾಣಕ್ಕೆ ಅಲೆದಾಟ

ಬೆಳ್ತಂಗಡಿ, ಡಿ. 19: ತಾಲೂಕಿನಲ್ಲಿ ಪ್ರವಾಹ ಸಂಭವಿಸಿ ಒಂದೂವರೆ ವರ್ಷ ಕಳೆದರೂ ಸಂತ್ರಸ್ತರ ಕೆಲವೊಂದಷ್ಟು ತಾಂತ್ರಿಕ ಸಮಸ್ಯೆಗಳು ಆಗಾಗ ಅಡ್ಡಿಪಡಿಸುತ್ತಲೇ ಇವೆ. ತಾಲೂಕಿನಲ್ಲಿ ಪ್ರವಾಹಕ್ಕೆ ತುತ್ತಾದ 289 ಮನೆಗಳ ಪೈಕಿ ಮಿತ್ತಬಾಗಿಲು ಗ್ರಾಮ ದಲ್ಲಿ ಸಂತ್ರಸ್ತ ವಾರಸುದಾರರು ಮೃತಪಟ್ಟಿದ್ದರಿಂದ ವಾರಸುದಾರರ ಹೆಸರು ಮತ್ತು ಖಾತೆ ಬದಲಾವಣೆಗೆ ತಾಂತ್ರಿಕ ತೊಡಕು ಎದುರಾಗಿದ್ದು, 1 ವರ್ಷದಿಂದ ಬಾಕಿ ಕಂತು ಬಾರದೇ ಮನೆಗಳು ನಿರ್ಮಾಣ ಹಂತದಲ್ಲೇ ಉಳಿದಿವೆ.

ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮವೊಂದರಲ್ಲೆ ಸರಿಸುಮಾರು 130ಕ್ಕೂ ಅಧಿಕ ಮನೆಗಳು ಹಾನಿಗೀಡಾಗಿದ್ದವು. ಈ ಪೈಕಿ ಸರಕಾರದಿಂದ 121 ಮನೆಗಳು ಮಂಜೂರುಗೊಂಡಿದ್ದವು. ಆರಂಭದಲ್ಲಿ ಜಿಪಿಎಸ್‌ ಸಮಸ್ಯೆ ತೀವ್ರ ತಲೆದೋರಿರುವ ನಡುವೆ ಕಂತು ಹಣ ಬಾರದೆ ಮನೆ ನಿರ್ಮಾಣ ಒಂದು ವರ್ಷ ವಿಳಂಬವಾಗಿತ್ತು. ಅನೇಕ ಅಡೆತಡೆಗಳ ನಡುವೆ ಮನೆ ನಿರ್ಮಾಣ ಹಂತಕ್ಕೆ ಬಂದಾಗ ಕೆಲವಷ್ಟು ಮನೆಗಳ ವಾರಸುದಾರರು ಮೃತಪಟ್ಟಿದ್ದಾರೆ.

ಸಂತ್ರಸ್ತರಿಗೆ ಅರ್ಥವಾಗದ ಕಾನೂನು :

ಮಿತ್ತಬಾಗಿಲು ರಾಮಣ್ಣ ಗೌಡ ಅವರಿಗೆ 2019 ಸೆ. 30ರಿಂದ 2020 ಮೇ ವರೆಗೆ 25,000 ರೂ., 75,000 ರೂ., 1 ಲಕ್ಷ ರೂ. ಕೈಸೇರಿದೆ. ಉಳಿದವು ಬಾಕಿ ಉಳಿದಿವೆ. ಹೆಸರು ಬದಲಾವಣೆಗೆ ಎಲ್ಲ ಮೂಲ ದಾಖಲೆ ಸಹಿತ ತಾ.ಪಂ., ಜಿ.ಪಂ. ವಸತಿ ನಿಗಮಕ್ಕೂ ಕಳುಹಿಸಲಾಗಿದೆ. ಆದರೂ ಈವರೆಗೆ ಖಾತೆ ಬದಲಾಗಿಲ್ಲ. ಹೆಚ್ಚಾಗಿ ಬಸವ, ಇಂದಿರಾ ಗಾಂಧಿ ಆವಾಸ್‌ ಯೋಜನೆಗಳು ಆಯಾಯ ತಾ.ಪಂ. ಇಒ ಅಥವಾ ಜಿ.ಪಂ. ಸಿಇಒಗಳು ಪ್ರಕ್ರಿಯೆ ಕೈಗೊಳ್ಳಬೇಕಾಗಿದೆ. ಆದರೆ ನೆರೆ ಸಂತ್ರಸ್ತರ ಪ್ರಕರಣವನ್ನು ವಿಶೇಷವಾಗಿ ಕಂದಾಯ ಇಲಾಖೆ ನಿರ್ವಹಿಸಲ್ಪಡುವುದರಿಂದ ಇಲ್ಲಿ ಕೆಲ ಗೊಂದಲಗಳು ಏರ್ಪಟ್ಟಿವೆ. ಬೆಳ್ತಂಗಡಿ ತಾಲೂ ಕಿನಲ್ಲಿ ಸಂಗ್ರಹವಾದ ಕಾಳಜಿ ಫ್ಲಡ್‌ ರಿಲೀಫ್ ಫ‌ಂಡ್‌ನಿಂದ  ಸಂತ್ರಸ್ತರಿಗೆ ತಲಾ ಒಂದು ಲಕ್ಷ ರೂ. ಲಭಿಸಿದ್ದು, ಒಂದಷ್ಟು ಅನುಕೂಲವಾಗಿದೆ. ಆದರೆ ಸರಕಾರದ ತಾಂತ್ರಿಕ ಸಮಸ್ಯೆಯಿಂದಾಗಿ ಮನೆ ನಿರ್ಮಾಣ ವಿಳಂಬವಾಗಿದೆ.

ಕಿಲ್ಲೂರು ಅಬ್ದುಲ್‌ ರಝಾಕ್‌  2020 ಜನವರಿಯಲ್ಲಿ ಮೃತಪಟ್ಟಿದ್ದಾರೆ. ಇದಕ್ಕೂ ಮುನ್ನ 2019 ಸೆಪ್ಟಂಬರ್‌ನಲ್ಲಿ 25,000, ಅಕ್ಟೋಬರ್‌ನಲ್ಲಿ 31,000 ಎರಡು ಕಂತು ಹೊರತುಪಡಿಸಿ ವಸತಿ ನಿಗಮದಿಂದ ಇನ್ನಾವುದೇ ಹಣ ಖಾತೆಗೆ ಬಂದಿಲ್ಲ.

ಕಲ್ಲೊಲೆ ಲಿಂಗಪ್ಪ ಗೌಡ ಎಪ್ರಿಲ್‌ 2020ರಲ್ಲಿ ಮೃತಪಟ್ಟಿದ್ದು, 2019 ಸೆಪ್ಟಂಬರ್‌ನಿಂದ ಮೂರು ಕಂತುಗಳಲ್ಲಿ ತಲಾ 1 ಲಕ್ಷ ರೂ. ಬಂದಿದ್ದು, ಇನ್ನೆರಡು ಕಂತುಗಳು ಖಾತೆ ಸೇರಿಲ್ಲ. ಮತ್ತೂಂದೆಡೆ 2020 ಸೆಪ್ಟಂಬರ್‌ನಲ್ಲಿ ಖಾತೆಗೆ 1 ಲಕ್ಷ ರೂ. ಜಮೆ ಯಾಗಿರುವುದು ಆ್ಯಪ್‌ನಲ್ಲಿ ತೋರಿಸುತ್ತಿದ್ದು, ಖಾತೆಗೆ ಜಮೆಯಾಗಿಲ್ಲ.

ಕೊಲ್ಲಿ ಸೀತು ಗೌಡ ಮೃತಪಟ್ಟಿದ್ದು, ಅವರಿಗೆ ಈವರೆಗೆ ನಾಲ್ಕು ಕಂತುಗಳು ಖಾತೆ ಸೇರಿದ್ದು, 1 ಕಂತು ಬಾಕಿ ಉಳಿದಿದೆ. ಮನೆ ಮಂದಿ ಬೆಂಗಳೂರು ಸಹಿತ ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳನ್ನು ಭೇಟಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ವಾರಸುದಾರರ ಬದಲಾವಣೆ ವಿಚಾರವಾಗಿ ಇಲಾಖೆ ಮುಂಚೆಯೇ ಚಿಂತಿಸದೆ ಇದ್ದುದರಿಂದ ಮಧ್ಯಾಂತರದಲ್ಲಿ ಇವುಗಳ ಬದಲಾವಣೆಗೆ ಸಮಸ್ಯೆಯಾಗಿದೆ. ಈ ಕುರಿತು ಸರಕಾರದ ಮಟ್ಟದಲ್ಲಿ ಅಥವಾ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕಿದೆ.

ಮಿತ್ತಬಾಗಿಲು ಗ್ರಾ.ಪಂ.ನ ಮಲವಂತಿಗೆ ಗ್ರಾಮದ ಪಾಮಜಿ ಮನೆ ನಿವಾಸಿ ರಾಮಣ್ಣಗೌಡ, ಕಿಲ್ಲೂರುತ್ಮಿನಬೆಟ್ಟು ಅಬ್ದುಲ್‌ ರಫೀಕ್‌, ಕಲ್ಲೊಲೆ ಲಿಂಗಪ್ಪ ಗೌಡ ಸೇರಿದಂತೆ ಕೊಲ್ಲಿ ಸೀತು ಗೌಡ ಮೃತಪಟ್ಟಿದ್ದು, ಮಕ್ಕಳು ಅಥವಾ ಪತ್ನಿ ಹೆಸರಿಗೆ ಬದಲಾಯಿಸಲು ಬೆಂಗಳೂರು ರಾಜೀವ್‌ ಗಾಂಧಿ ವಸತಿ ನಿಗಮದ ಎಲ್ಲ ಇಲಾಖೆಗಳನ್ನು  ಸುತ್ತಾಡಿದರೂ ಪ್ರಯೋಜನವಾಗಿಲ್ಲ. ಸಂಪೂರ್ಣ ದಾಖಲೆ ಒದಗಿ ಸಿದರೂ ಕಂದಾಯ ಇಲಾಖೆ ಇದಕ್ಕೆ ಸಂಬಂಧವೇ ಇಲ್ಲದಂತೆ ಕುಳಿತಿದೆ. ಪ್ರಸಕ್ತ ಮುಂದಿನ ಹಂತದ ಜಿ.ಪಿ.ಎಸ್‌. ಪ್ರಕ್ರಿಯೆ ನಡೆಯದಿರುವುದರಿಂದ 3 ಅಥವಾ ನಾಲ್ಕು ಕಂತುಗಳು ಬಂದಿದ್ದು, ಉಳಿದ ಕಂತು ಬಾಕಿಯಾಗಿವೆ.ಈ ಕುರಿತು ಇಲಾಖೆಗಳಲ್ಲೂ ಸ್ಪಷ್ಟ ಉತ್ತರ ದೊರೆತಿಲ್ಲ.

ವಾರಸುದಾರರ ಬದಲಾವಣೆಗೆ ಬೆಂಗಳೂರು ಅಲೆದಾಟ :  ಮಿತ್ತಬಾಗಿಲು ಗ್ರಾ.ಪಂ.ನ ಮಲವಂತಿಗೆ ಗ್ರಾಮದ ಪಾಮಜಿ ಮನೆ ನಿವಾಸಿ ರಾಮಣ್ಣಗೌಡ, ಕಿಲ್ಲೂರುತ್ಮಿನಬೆಟ್ಟು ಅಬ್ದುಲ್‌ ರಫೀಕ್‌, ಕಲ್ಲೊಲೆ ಲಿಂಗಪ್ಪ ಗೌಡ ಸೇರಿದಂತೆ ಕೊಲ್ಲಿ ಸೀತು ಗೌಡ ಮೃತಪಟ್ಟಿದ್ದು, ಮಕ್ಕಳು ಅಥವಾ ಪತ್ನಿ ಹೆಸರಿಗೆ ಬದಲಾಯಿಸಲು ಬೆಂಗಳೂರು ರಾಜೀವ್‌ ಗಾಂಧಿ ವಸತಿ ನಿಗಮದ ಎಲ್ಲ ಇಲಾಖೆಗಳನ್ನು  ಸುತ್ತಾಡಿದರೂ ಪ್ರಯೋಜನವಾಗಿಲ್ಲ. ಸಂಪೂರ್ಣ ದಾಖಲೆ ಒದಗಿ ಸಿದರೂ ಕಂದಾಯ ಇಲಾಖೆ ಇದಕ್ಕೆ ಸಂಬಂಧವೇ ಇಲ್ಲದಂತೆ ಕುಳಿತಿದೆ. ಪ್ರಸಕ್ತ ಮುಂದಿನ ಹಂತದ ಜಿ.ಪಿ.ಎಸ್‌. ಪ್ರಕ್ರಿಯೆ ನಡೆಯದಿರುವುದರಿಂದ 3 ಅಥವಾ ನಾಲ್ಕು ಕಂತುಗಳು ಬಂದಿದ್ದು, ಉಳಿದ ಕಂತು ಬಾಕಿಯಾಗಿವೆ.ಈ ಕುರಿತು ಇಲಾಖೆಗಳಲ್ಲೂ ಸ್ಪಷ್ಟ ಉತ್ತರ ದೊರೆತಿಲ್ಲ.

ವಾರಸುದಾರರು ಮೃತಪಟ್ಟು ಖಾತೆ ಬದಲಾವಣೆ ನಡೆಸುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಸಂಬಂಧಪಟ್ಟ ವರದಿಯನ್ನು ತರಿಸಿ, ನೆರೆ ಸಂತ್ರಸ್ತರ ಪುನರ್ವಸತಿ ಯೋಜನೆಗೆ ಸಂಬಂಧಪಟ್ಟ ಅಧಿಕಾರಿಗಳು, ಎಂಜಿನಿಯರ್‌ಗಳೊಂದಿಗೆ ಚರ್ಚಿಸಿ ತತ್‌ಕ್ಷಣ ಕ್ರಮ ಕೈಗೊಳ್ಳಲಾಗುವುದು.  -ಡಾ| ಕೆ.ವಿ.ರಾಜೇಂದ್ರ, ದ.ಕ.ಜಿಲ್ಲಾಧಿಕಾರಿ

 

-ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

ಉಡುಪಿ: ಎಸೆಸೆಲ್ಸಿ ಫ‌ಲಿತಾಂಶ ಹೆಚ್ಚಿಸಲು ಸಿದ್ಧತೆ : ಪ್ರತ್ಯೇಕ ವೇಳಾಪಟ್ಟಿ

ಉಡುಪಿ: ಎಸೆಸೆಲ್ಸಿ ಫ‌ಲಿತಾಂಶ ಹೆಚ್ಚಿಸಲು ಸಿದ್ಧತೆ : ಪ್ರತ್ಯೇಕ ವೇಳಾಪಟ್ಟಿ

ಮಂಗಳೂರು : ಶತಮಾನದ ಶಾರದೋತ್ಸವಕ್ಕೆ ವೈಭವದ ತೆರೆ

ಮಂಗಳೂರು : ಶತಮಾನದ ಶಾರದೋತ್ಸವಕ್ಕೆ ವೈಭವದ ತೆರೆ

ಅಲ್ಪಸಂಖ್ಯಾಕ ಸ್ಥಾನಮಾನ: ಪರಿಶೀಲನೆಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ

ಅಲ್ಪಸಂಖ್ಯಾಕ ಸ್ಥಾನಮಾನ: ಪರಿಶೀಲನೆಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ

1-dadsd

ರೋಚಕ ಮುಖಾಮುಖಿ: ಲಕ್ನೋದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಲಕ್‌

Covid test

ಚೀನದ ಹಲವೆಡೆ ಮತ್ತೆ ಲಾಕ್‌ಡೌನ್‌; ಪ್ರಯಾಣದ ಮೇಲೆ ನಿರ್ಬಂಧ

1-wwqwq

ಫ್ರೆಂಚ್‌ ಲೇಖಕಿ ಆ್ಯನಿ ಎರ್ನಾಕ್ಸ್‌ಗೆ ಒಲಿದ ಸಾಹಿತ್ಯ ನೊಬೆಲ್‌

1-ssdsdda

ಬೆಳಗಾವಿ: ಸುಳೇಭಾವಿ ಗ್ರಾಮದಲ್ಲಿ ಇಬ್ಬರು ಯುವಕರ ಬರ್ಬರ ಹತ್ಯೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

ಕಡಬ: ರುದ್ರಭೂಮಿಯಲ್ಲಿನ ಸಮಸ್ಯೆಗಳಿಗೆ ಶೀಘ್ರ ಮುಕ್ತಿ

ಬಾಲಕಿ ಮೇಲೆ ಅತ್ಯಾಚಾರ: ಆರೋಪಿಯ ಬಂಧನ

ಬಾಲಕಿ ಮೇಲೆ ಅತ್ಯಾಚಾರ: ಆರೋಪಿಯ ಬಂಧನ

rasaleele

“ಹನಿಟ್ರ್ಯಾಪ್”? ಮರ್ದಾಳದ ವ್ಯಕ್ತಿಗಳ ಬಲೆಗೆ ಬಿದ್ದ ಮಂಗಳೂರಿನ ಯುವಕ!

ಸುಳ್ಯ ಎಲಿಮಲೆ ಬಳಿ ಸ್ಕೂಟಿ – ಕಾರು ನಡುವೆ ಭೀಕರ ಅಪಘಾತ ; ಅಣ್ಣ, ತಂಗಿ ಸಾವು

ಸುಳ್ಯ ಎಲಿಮಲೆ ಬಳಿ ಸ್ಕೂಟಿ – ಕಾರು ನಡುವೆ ಭೀಕರ ಅಪಘಾತ ; ಅಣ್ಣ, ತಂಗಿ ಸಾವು

ಪುಂಜಾಲಕಟ್ಟೆ: ಆರೆಸ್ಸೆಸ್ ವಿರುದ್ಧ ಆಕ್ಷೇಪಾರ್ಹ ರಸ್ತೆ ಬರಹ; ತಪ್ಪಿತಸ್ಥರ ಬಂಧನಕ್ಕೆ ಆಗ್ರಹ

ಪುಂಜಾಲಕಟ್ಟೆ: ಆರೆಸ್ಸೆಸ್ ವಿರುದ್ಧ ಆಕ್ಷೇಪಾರ್ಹ ರಸ್ತೆ ಬರಹ; ತಪ್ಪಿತಸ್ಥರ ಬಂಧನಕ್ಕೆ ಆಗ್ರಹ

MUST WATCH

udayavani youtube

ಯುವಕನಾದ ಸಿದ್ದರಾಮಯ್ಯ… ರಾಹುಲ್ ಜತೆ ರೇಸ್ …. ವಿಡಿಯೋ ವೈರಲ್

udayavani youtube

ಮೈಸೂರು ಜಂಬೂ ಸವಾರಿಯಲ್ಲೂ ಅಪ್ಪು ಸ್ಮರಣೆ

udayavani youtube

ಉಚ್ಚಿಲ‌ ದಸರಾ‌ 2022 : ಶೋಭಾಯಾತ್ರೆ ಗೆ ಅಂತಿಮ ಹಂತದ ಸಿದ್ಧತೆ

udayavani youtube

ಭಾರತ್ ಜೋಡೋ : ಮಳೆಯಲ್ಲಿ ನೆನೆಯುತ್ತಾ ಭಾಷಣ ಮಾಡಿದ ರಾಹುಲ್

udayavani youtube

ದಿನ8 | ಮಹಾಗೌರಿ |ಮಹಾಗೌರಿಯ ಆರಾಧನೆಯನ್ನು ಯಾಕಾಗಿ ಮಾಡಬೇಕು ??

ಹೊಸ ಸೇರ್ಪಡೆ

ಉಡುಪಿ: ಎಸೆಸೆಲ್ಸಿ ಫ‌ಲಿತಾಂಶ ಹೆಚ್ಚಿಸಲು ಸಿದ್ಧತೆ : ಪ್ರತ್ಯೇಕ ವೇಳಾಪಟ್ಟಿ

ಉಡುಪಿ: ಎಸೆಸೆಲ್ಸಿ ಫ‌ಲಿತಾಂಶ ಹೆಚ್ಚಿಸಲು ಸಿದ್ಧತೆ : ಪ್ರತ್ಯೇಕ ವೇಳಾಪಟ್ಟಿ

ಮಂಗಳೂರು : ಶತಮಾನದ ಶಾರದೋತ್ಸವಕ್ಕೆ ವೈಭವದ ತೆರೆ

ಮಂಗಳೂರು : ಶತಮಾನದ ಶಾರದೋತ್ಸವಕ್ಕೆ ವೈಭವದ ತೆರೆ

ಅಲ್ಪಸಂಖ್ಯಾಕ ಸ್ಥಾನಮಾನ: ಪರಿಶೀಲನೆಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ

ಅಲ್ಪಸಂಖ್ಯಾಕ ಸ್ಥಾನಮಾನ: ಪರಿಶೀಲನೆಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ

1-dadsd

ರೋಚಕ ಮುಖಾಮುಖಿ: ಲಕ್ನೋದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಲಕ್‌

Covid test

ಚೀನದ ಹಲವೆಡೆ ಮತ್ತೆ ಲಾಕ್‌ಡೌನ್‌; ಪ್ರಯಾಣದ ಮೇಲೆ ನಿರ್ಬಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.