ಅಡಿಕೆಗೆ ಹಳದಿ ಎಲೆ ರೋಗ : ಪರಿಹಾರ ಕೊಡಿಸುವ ಜವಾಬ್ದಾರಿ ಅಧ್ಯಯನ ಸಮಿತಿಗೆ
Team Udayavani, Nov 7, 2022, 2:41 PM IST
ಮಂಗಳೂರು: ಅಡಿಕೆಯ ಹಳದಿ ಎಲೆ ರೋಗ ಮತ್ತು ಎಲೆ ಚುಕ್ಕಿ ರೋಗಕ್ಕೆ ಶೀಘ್ರ ಔಷಧ ಕಂಡುಹಿಡಿದು ರೋಗದಿಂದ ನಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರ ಕೊಡಿಸುವ ಜವಾ
ಬ್ದಾರಿಯನ್ನು ಕೇಂದ್ರದಿಂದ ನೇಮಿಸಲ್ಪಟ್ಟ ಅಧ್ಯಯನ ಸಮಿತಿಗೆ ವಹಿಸಬೇಕು ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಆಗ್ರಹಿಸಿದ್ದಾರೆ.
ಕ್ಯಾಂಪ್ಕೊ ಹಾಗೂ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ನಡೆದ ಅಡಿಕೆಯ ಹಳದಿ ಎಲೆ ರೋಗ ಮತ್ತು ಎಲೆ ಚುಕ್ಕಿ ರೋಗದ ಬಗ್ಗೆ ಒಂದು ದಿನದ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕ್ಯಾಂಪ್ಕೊ ಈಗಾಗಲೇ ಅಡಿಕೆ ಆಮದಿಗೆ ಕನಿಷ್ಠ ಆಮದು ಬೆಲೆಯನ್ನು ನಿಗದಿ ಪಡಿಸಲು ಕೇಂದ್ರ ಸರಕಾರಕ್ಕೆ ಮನವಿ ಮಾಡಿದೆ. ಆ ಮನವಿಗೆ ಸಕಾರಾತ್ಮಕವಾಗಿ ಶಿಫಾರಸು ಮಾಡಬೇಕೆಂದು ಕೇಂದ್ರದಿಂದ ರಚಿಸಲ್ಪಟ್ಟ ಅಧ್ಯಯನ ಸಮಿತಿಯ ಸದಸ್ಯ ಮತ್ತು ಅರೆಕಾನಟ್ ಮತ್ತು ಸ್ಪೈಸಸ್ ಡೆವಲಪ್‌ಮೆಂಟ್‌ನ ನಿರ್ದೇಶಕ ರಾದ ಡಾ| ಹೋಮಿ ಚೆರಿಯನ್ ಅವರಲ್ಲಿ ಮನವಿ ಮಾಡಿದರು.
ಹಣಕಾಸಿನ ಆವಶ್ಯಕತೆ
ಡಾ| ಹೋಮಿ ಚೆರಿಯನ್ ಮಾತನಾಡಿ, ಸಂಶೋಧನೆಗೆ ಹೆಚ್ಚಿನ ಪ್ರಮಾಣದ ಹಣಕಾಸಿನ ಆವಶ್ಯಕತೆ ಇದೆ. ವಿಜ್ಞಾನಿಗಳು ಸಮನ್ವಯದಿಂದ ಕೆಲಸ ಮಾಡಿದಾಗ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.
ಕ್ಯಾಂಪ್ಕೊ ವ್ಯವ ಸ್ಥಾಪಕ ನಿರ್ದೇಶಕ ಎಚ್.ಎಂ. ಕೃಷ್ಣಕುಮಾರ್ ಪ್ರಸ್ತಾವನೆ ಗೈದರು. ವಿಜ್ಞಾನಿಗಳಾದ ಡಾ| ವಿನಾಯಕ ಹೆಗಡೆ, ಡಾ| ಇಂದ್ರಾಣಿ ಕರುಣಾಸಾಗರ್, ಡಾ| ಕೇಶವ ಭಟ್ ಮತ್ತು ಪ್ರೊ| ಗಂಗಾಧರ್ ನಾಯ್ಕ, ಖಾಸಗಿ ಸಂಶೋಧನ ಸಂಸ್ಥೆ ಐಸಿರಿಯ ಡಾ| ನಂದಿನಿ ಎಂ. ಘಂಟೆ ವಿಚಾರ ಮಂಡಿಸಿದರು.
ಕ್ಯಾಂಪ್ಕೊ ಉಪಾಧ್ಯಕ್ಷ ಶಂಕರನಾರಾ ಯಣ ಖಂಡಿಗೆ, ಮಾಜಿ ಅಧ್ಯಕ್ಷರಾದ ಕೊಂಕೊಡಿ ಪದ್ಮನಾಭ, ನಾಗರಾಜ ಶೆಟ್ಟಿ, ಮಾಜಿ ಅಧ್ಯಕ್ಷ ಮತ್ತು ಹಾಲಿ ನಿರ್ದೇಶಕರಾದ ಎಸ್.ಆರ್. ಸತೀಶ್ಚಂದ್ರ, ರಾಜ್ಯ ಅಡಿಕೆ ಮಹಾ ಮಂಡಲದ ಅಧ್ಯಕ್ಷ ಸುಬ್ರಹ್ಮಣ್ಯ ಯಡಗೆರೆ, ಮ್ಯಾಮೊಸ್ ಉಪಾಧ್ಯಕ್ಷ ಮಹೇಶ್, ತುಮಕೋಸ್ ಅಧ್ಯಕ್ಷ ಆರ್.ಎಂ. ರವಿ, ಶಿರಸಿಯ ಟಿಎಸ್‌ಎಸ್ ಪ್ರತಿನಿಧಿ, ಕ್ಯಾಂಪ್ಕೊದ ಮಾಜಿ ಉಪಾಧ್ಯಕ್ಷ ಸತೀಶ್ಚಂದ್ರ ಭಂಡಾರಿ, ಮಾಜಿ ನಿರ್ದೇಶಕರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮೋದಿ ಕೈಕೆಳಗೆ ಕೆಲಸ ಮಾಡುತ್ತೇನೆಯೇ ಹೊರತು ರಾಜ್ಯ ರಾಜಕಾರಣಕ್ಕೆ ಬರಲ್ಲ: ಪ್ರತಾಪ್ ಸಿಂಹ
ರಾಜಧಾನಿಯಲ್ಲಿ ಮೇಳೈಸಿದ ಸ್ಟಾರ್ ಸ್ಪೋರ್ಟ್ಸ್ ನ “ಟ್ರೋಫಿ ಟೂರ್’
50 ಕೊಡ್ತಿರಿ ಅಂತ ಗೊತ್ತಿದೆ,ಬೇಕಿರೋದು 123 ಸ್ಥಾನ : ಹೆಚ್.ಡಿ.ಕುಮಾರಸ್ವಾಮಿ
ಮಧ್ಯಪ್ರದೇಶದಲ್ಲಿ 230 ರಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ: ನಡ್ಡಾ
ಮೋದಿ ಸರಕಾರ 9 ವರ್ಷಗಳಲ್ಲಿ ಏನು ಕಡಿದು ಗುಡ್ಡೆ ಹಾಕಿದೆ: ನಲಪಾಡ್ ಪ್ರಶ್ನೆ