ದುಷ್ಕರ್ಮಿಗಳಿಂದ ವ್ಯಕ್ತಿ ಹತ್ಯೆ
Team Udayavani, May 24, 2022, 5:34 PM IST
ದಾವಣಗೆರೆ: ಹೊನ್ನಾಳಿ ಪಟ್ಟಣದ ಕೆಂಚೆದೇವರು ಬೀರಲಿಂಗೇಶ್ವರ ದೇವಾಲಯದ ದೇವರ ಮಗನಾಗಿದ್ದ (ಗಣ ಮಗ) ಎಚ್.ಕೆ. ಕುಮಾರ್ (40) ಅವರನ್ನು ಹೊರವಲಯದ ಎಚ್. ಕಡದಕಟ್ಟೆ ಹೊಲವೊಂದರಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿದೆ.
ಕೊಲೆಗೈದಿರುವ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಮೃತರ ಕುಟುಂಬಕ್ಕೆ ಪಾರ್ಥಿವ ಶರೀರ ಹಸ್ತಾಂತರಿಸಲಾಯಿತು. ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆದಷ್ಟು ಬೇಗ ದುಷ್ಕರ್ಮಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ವೃತ್ತ ನಿರೀಕ್ಷಕ ಟಿ.ಎನ್. ದೇವರಾಜ್ ತಿಳಿಸಿದ್ದಾರೆ.