

Team Udayavani, Oct 29, 2023, 2:33 PM IST
ದಾವಣಗೆರೆ: ಇಲ್ಲಿನ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿನ ಟೆನ್ನಿಸ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಟಿಎಫ್ ದಾವಣಗೆರೆ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಬಾಗ್ಡಾನ್ ಬೊಬ್ರಾವ್ ಚಾಂಪಿಯನ್ ಶಿಪ್ ಮುಡಿಗೇರಿಸಿ ಕೊಂಡರು.
ಅಂತಿಮ ಹಣಾಹಣಿಯಲ್ಲಿ ಅಮೆರಿಕಾದ ನಿಕ್ ಚಾಪೆಲ್ ವಿರುದ್ಧ ಬಾಗ್ಡಾನ್ 6-3, 7-6 ನೇರ ಸೆಟ್ ಗಳ ಜಯಗಳಿಸುವ ಮೂಲಕ ಆರನೇ ಐಟಿಎಫ್ ಪ್ರಶಸ್ತಿ ಪಡೆದರು.
ಸೆಮಿಫೈನಲ್ ನಲ್ಲಿ ಬೊಬ್ರಾವ್ ಭಾರತದ ರಾಮಕುಮಾರ್ ರಾಮನಾಥನ್ ವಿರುದ್ಧ 6-4, 7-6 ರಲ್ಲಿ ಗೆದ್ದಿದ್ದರು. ಅಮೆರಿಕಾದ ನಿಕ್ ಚಾಪೆಲ್ ಅವರು ಭಾರತದ ನಿಕಿ ಕಲಿಯಂಡ ಪೂಣಚ್ಚ ವಿರುದ್ಧ 6-3, 6-2 ರಲ್ಲಿ ಗೆಲುವು ಸಾಧಿಸಿದ್ದರು.
ಡಬಲ್ ಜೋಡಿಯಾಗಿರುವ ನಿಕ್ ಚಾಪೆಲ್ ಮತ್ತು ಬೊಬ್ರಾವ್ ನಡುವೆ ಪ್ರಶಸ್ತಿಗಾಗಿ ರೋಚಕ ಹಣಾಹಣಿ ನಡೆಯಿತು. ಪಾಯಿಂಟ್ ಗಾಗಿ ಇಬ್ಬರೂ ತುರುಸಿನ ಹೋರಾಟ ನಡೆಸಿದರು. ಅಂತಿಮವಾಗಿ ಮೊದಲ ಸೆಟ್ ನ್ನು 6-3 ರಲ್ಲಿ ಬೊಬ್ರಾವ್ ಗೆದ್ದರು.
ಎರಡನೇ ಸೆಟ್ ನಲ್ಲಿ ನಿಕ್ ಚಾಪೆಲ್ ನಿರೀಕ್ಷೆಗೂ ಮೀರಿದ ಹೋರಾಟ ನಡೆಸಿದರು. ಪಂದ್ಯ ಟ್ರೈಬೇಕರ್ ವರೆಗೆ ಸಾಗಿತು. ಕೊನೆಗೆ ಬೊಬ್ರಾವ್ 7-6 ರಲ್ಲಿ ಸೆಟ್ ಜೊತೆಗೆ ಪಂದ್ಯ ಗೆದ್ದರು. 1.38 ಗಂಟೆಗಳ ರೋಚಕ ಪೈಪೋಟಿ ಟೆನ್ನಿಸ್ ಅಭಿಮಾನಿಗಳ ಮನಸೂರೆಗೊಂಡಿತು.
Ad
Davangere: ವಾಯುವಿಹಾರ ಮಾಡುತ್ತಿದ್ದಾಗ ಕುಸಿದು ಬಿದ್ದು 40 ವರ್ಷದ ಉದ್ಯಮಿ ಸಾ*ವು
ಕಾರ್ಮಿಕರ ಕಲ್ಯಾಣಕ್ಕೆ ಇಂಧನ ಸೆಸ್‌ಗೆ ಪ್ರಸ್ತಾವ: ಸಂತೋಷ್ ಲಾಡ್
Davanagere:ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು: ನಾಲ್ವರು ಪಾರು
Channagiri; ಸಾಲ ಮರುಪಾವತಿಸದ ಪತ್ನಿಯ ಮೂಗು ಕಚ್ಚಿದ!
CM;ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವುದು ಖಚಿತ: ನೋಣವಿನಕೆರೆ ಶಿವಯೋಗೀಶ್ವರ ಸ್ವಾಮೀಜಿ
Stray Dogs: ಬೀದಿ ನಾಯಿಗೆ ಮನೆಯಲ್ಲೇ ಆಹಾರ ನೀಡಿ: ಸುಪ್ರೀಂ ಕೋರ್ಟ್
Mangaluru: ಅತ್ಯಾಚಾರ ಆರೋಪದಡಿ ಪೊಲೀಸ್ ಸಿಬ್ಬಂದಿ ಬಂಧನ
Bollywood;ಮೊದಲ ಮಗುವಿನ ಸಂಭ್ರಮದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ-ಕಿಯಾರಾ ಅಡ್ವಾಣಿ ದಂಪತಿ
Shocking; ಸ್ಲೀಪರ್ ಕೋಚ್ ಬಸ್ ನಲ್ಲೆ ಹೆರಿಗೆ: ಹೊರಗೆಸೆದ ನವಜಾತ ಶಿಶು ಸಾ*ವು!
Bengaluru;ವಿಮಾನ, ಬಸ್‌ನಲ್ಲಿ ಮಾದಕ ವಸ್ತು ತರಿಸುತ್ತಿದ್ದ 3 ಮಹಿಳೆಯರ ಬಂಧನ
You seem to have an Ad Blocker on.
To continue reading, please turn it off or whitelist Udayavani.