ಸಿಎಂ ಪರಿಹಾರ ನಿಧಿಗೆ ಕೋಟಿ ರೂ. ದೇಣಿಗೆ
Team Udayavani, Dec 8, 2022, 7:27 PM IST
ದಾವಣಗೆರೆ: ರಾಜ್ಯ ಸರ್ಕಾರದ ಜಾಹೀರಾತು ಸಂಸ್ಥೆಯಾದ ಮೆ|ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಆ್ಯಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ ಕಂಪನಿ(ಎಂಸಿಎ)ಯು ಸುವರ್ಣ ಮಹೋತ್ಸವ ವರ್ಷದ 2021-22ನೇ ಸಾಲಿನ ಲಾಭಾಂಶದಿಂದ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ|ಮುರುಗೇಶ ಆರ್. ನಿರಾಣಿ ಸಮ್ಮುಖ ಹಾಗೂ ಕಂಪನಿ ಅಧ್ಯಕÒ ಎಂ.ಎಸ್. ಕರಿಗೌಡ್ರ ಅವರ ನೇತೃತ್ವದಲ್ಲಿ ನಿರ್ದೇಶಕರಾದ ವೀರೇಶ್ ಸಂಗಳದ, ಎಚ್.ಆರ್. ತೀರ್ಥಲಿಂಗಪ್ಪ (ತೀರ್ಥೇಶ್), ಕೆ.ಜಿ. ವಸಂತ ಗೌಡ, ವ್ಯವಸ್ಥಾಪಕ ನಿರ್ದೇಶಕ ಸಿದ್ಧಲಿಂಗಪ್ಪ ಬಿ. ಪೂಜಾರಿ, ಉಪ ಪ್ರಧಾನ ವ್ಯವಸ್ಥಾಪಕ ಪಿ.ಎಸ್. ನಂದೀಶ್, ವ್ಯವಸ್ಥಾಪಕ ನಾಗಪ್ಪ ಕಿತ್ತೂರು ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರಿಗೆ ಚೆಕ್ ಹಸ್ತಾಂತರಿಸಲಾಯಿತು.