ಅಪಪ್ರಚಾರವೇ ಬಿಜೆಪಿಯವರ ಸಾಧನೆ: ಬಸವರಾಜ್‌


Team Udayavani, Dec 13, 2020, 4:40 PM IST

ಅಪಪ್ರಚಾರವೇ ಬಿಜೆಪಿಯವರ ಸಾಧನೆ: ಬಸವರಾಜ್‌

ದಾವಣಗೆರೆ: ಎಸ್‌.ಎಸ್‌. ಹೈಟೆಕ್‌ ಆಸ್ಪತ್ರೆಮತ್ತು ಎಸ್‌.ಎಸ್‌. ಮಾಲ್‌ನಲ್ಲಿ ಸಾರ್ವಜನಿಕರ ರಸ್ತೆಗಳೇನಾದರೂ ಇದ್ದಲ್ಲಿ ಬಿಜೆಪಿಯವರುತೋರಿಸಲಿ. ಜಿಎಂಐಟಿ ಇತರೆ ಕಡೆ ಸಹರಸ್ತೆಗಳು ಇರುವುದನ್ನ ನಾವು ದಾಖಲೆ ಸಮೇತ ತೋರಿಸುತ್ತೇವೆ ಎಂದು ಕಾಂಗ್ರೆಸ್‌ ಮುಖಂಡರು ಸವಾಲು ಹಾಕಿದ್ದಾರೆ.

ದೂಡಾ ಅಧ್ಯಕ್ಷರು ಅಭಿವೃದ್ಧಿ ಕಾರ್ಯಗಳತ್ತ ಗಮನ ನೀಡದೆ ಬರೀ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಕುಟುಂಬದ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ. ದೊಡ್ಡವರನ್ನು ಟೀಕೆ ಮಾಡಿದ ಮಾತ್ರಕ್ಕೆ ನಾವು ದೊಡ್ಡವರಾಗಿ ಹೋಗುತ್ತೇವೆ.ಅಪಪ್ರಚಾರವೇ ಬಿಜೆಪಿಯವರ ಸಾಧನೆ ಎಂದು ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಡಿ. ಬಸವರಾಜ್‌ ದೂರಿದರು.

ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಬಿಜೆಪಿಯವರದ್ದು ಯಾವುದೇ ಅಭಿವೃದ್ಧಿ ಕಾರ್ಯ ಇಲ್ಲ. ಮೊಸರಲ್ಲಿಕಲ್ಲು ಹುಡುಕುವ ಕೆಲಸ ಬಿಟ್ಟು ಅಭಿವೃದ್ಧಿಯತ್ತಗಮನ ನೀಡಲಿ ಎಂದು ಹೇಳಿದರು. ದೂಡಾ ಮಾಜಿ ಅಧ್ಯಕ್ಷ ಮಾಲತೇಶ್‌ ಜಾಧವ್‌ ಮಾತನಾಡಿ, ನಾನು 2000ರಲ್ಲಿ ದೂಡಾ ಅಧ್ಯಕ್ಷನಾಗಿದ್ದಾಗ ಎಸ್‌.ಎಸ್‌. ಹೈಟೆಕ್‌ಆಸ್ಪತ್ರೆಗೆ ಕಾನೂನು ಬದ್ಧವಾಗಿ ಅನುಮೋದನೆನೀಡಲಾಗಿತ್ತು. 2008ರಲ್ಲಿ ಸಿಡಿಪಿ ಆಗಿದೆ. ಇಗ ಅಲ್ಲಿ ರಸ್ತೆಗಳಿವೆ ಎಂದು ಬಿಜೆಪಿಯವರು ಹೇಳುತ್ತಾರೆ.ಸಿಂಗಲ್‌ ಲೇಔಟ್‌ ಇದ್ದಾಗ ಕಾನೂನು ಪ್ರಕಾರವೇ ರಸ್ತೆ ಬಿಡಲಿಕ್ಕೆ ಬರುವುದಿಲ್ಲ ಎಂಬುದು ಸಹಅವರಿಗೆ ಗೊತ್ತಿಲ್ಲ. ವಾಣಿ ಹೋಂಡಾ ಶೋರೂಂಸಹ ಸಿಂಗಲ್‌ ಲೇಔಟ್‌ ಮಾಡಿಕೊಡಲಾಗಿತ್ತು.ಅಲ್ಲಿಯೂ ರಸ್ತೆಗಳಿವೆ. ಈಗ ಬಿಟ್ಟು ಕೊಡುತ್ತಾರಾ. ಜಿಎಂಐಟಿ ಜಾಗದಲ್ಲು ರಸ್ತೆಗೆ ಜಾಗ ಇದ್ರೆ ಬಿಟ್ಟು ಕೊಡುತ್ತಾರೆ. ಬಿಜೆಪಿಯವರ ಎಲ್ಲಾ ಆರೋಪಗಳು ಸುಳ್ಳು ಎಂದು ತಿಳಿಸಿದರು.

ದೂಡಾ ಮಾಜಿ ಅಧ್ಯಕ್ಷ ಅಯೂಬ್‌ ಫೈಲ್ವಾನ್‌ ಮಾತನಾಡಿ, ನಾನು ದೂಡಾ ಅಧ್ಯಕ್ಷನಾಗಿದ್ದಾಗ 1.5 ಕೋಟಿ ವೆಚ್ಚದ ತಾತ್ಕಾಲಿಕ ಶೆಡ್‌ ನಿರ್ಮಾಣದಲ್ಲಿ ಹಣ ಕಬಳಿಸಲಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ. ಹಿಂದಿನ ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಆಡಳಿತಾಧಿಕಾರಿಯಾಗಿದ್ದಾಗ ತಾತ್ಕಾಲಿಕ ಶೆಡ್‌ ನಿರ್ಮಾಣ ಮಾಡಲಾಗಿತ್ತು. ದೂಡಾ ಬಳಿ 27 ಕೋಟಿ ವೆಚ್ಚದ ಫ್ಲೆ$ç ಓವರ್‌, 17 ಸಮಾಜಗಳಿಗೆ ನಿವೇಶನ, ಬೀದಿದೀಪಗಳ ವ್ಯವಸ್ಥೆ ಆಗಿರುವುದು ನನ್ನ ಅಧಿಕಾರವಧಿಯಲ್ಲಿ. ಬಿಜೆಪಿಯವರು ದೊಡ್ಡವರ ಹೆಸರಿಗೆ ಕಪ್ಪು ಚುಕ್ಕೆ ತರುವ ಕೆಲಸ ಬಿಟ್ಟು ಅಭಿವೃದ್ಧಿ ಮಾಡಲಿ ಎಂದು ತಿಳಿಸಿದರು.

ದೂಡಾ ಮಾಜಿ ಅಧ್ಯಕ್ಷ ಶಾಮನೂರು ರಾಮಚಂದ್ರಪ್ಪ ಮಾತನಾಡಿ, ನನ್ನಅಧಿಕಾರವಧಿಯಲ್ಲಿ ಒಂದೇ ಒಂದು ರೂ. ಅವ್ಯವಹಾರ, ಭ್ರಷ್ಟಾಚಾರ ನಡೆಸಿಲ್ಲ ಎಂದರು. ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿದಿನೇಶ್‌ ಶೆಟ್ಟಿ ಮಾತನಾಡಿ, ಯಶವಂತರಾವ್‌ ಜಾಧವ ದೂಡಾ ಅಧ್ಯಕ್ಷರಾಗಿದ್ದಾಗ ಎಸ್‌. ನಿಜಲಿಂಗಪ್ಪ ಬಡಾವಣೆಯ ಮೂಲೆ ನಿವೇಶನ ಹರಾಜು ಹಾಕಲಾಗಿತ್ತು. ಅವರ ಅತ್ತೆಯ ಹೆಸರಲ್ಲಿ ಜಾಗ ಪಡೆದು ಆಮೇಲೆ ಅವರ ಹೆಂಡತಿ ಹೆಸರಿಗೆ ದಾನಪತ್ರ ಮಾಡಿಸಿಕೊಂಡಿದ್ದಾರೆ. ಸೆಟ್‌ ಬ್ಯಾಕ್‌ ಬಿಡದೆ ವಾಣಿಜ್ಯ ಸಂಕೀರ್ಣ ಕಟ್ಟಿದ್ದಾರೆ.ಜೆ.ಎಚ್‌. ಪಟೇಲ್‌ ಬಡಾವಣೆಯಲ್ಲಿ ಅಕ್ರಮನಡೆಸಿ 612 ನಿವೇಶನ ಮಂಜೂರು ಮಾಡಿರುವ ಬಗ್ಗೆ ಲೋಕಾಯುಕ್ತ ನ್ಯಾಯಾಲಯದಲ್ಲಿ ತನಿಖೆ ನಡೆಯುತ್ತಿದೆ. ಬಿಜೆಪಿಯವರು ಸುಳ್ಳು ಆರೋಪನಿಲ್ಲಿಸಲಿ. ಮುಂದುವರೆಸಿದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್‌, ಸದಸ್ಯರಾದ ಗಡಿಗುಡಾಳ್‌ ಮಂಜುನಾಥ್‌, ಕೆ. ಚಮನ್‌ಸಾಬ್‌, ಶಾಮನೂರು ಬಸವರಾಜ್‌, ಹುಲ್ಮನೆ ಗಣೇಶ್‌, ಸೀಮೆಎಣ್ಣೆ ಮಲ್ಲೇಶ್‌ ಇತರರು ಇದ್ದರು.

ಟಾಪ್ ನ್ಯೂಸ್

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

1-wqeqwe

Davanagere: ಮತದಾನ ಜಾಗೃತಿ ಲಾಂಛನದಲ್ಲಿ ಅಪರೂಪದ ಪ್ರಾಣಿ ಚಿತ್ರ ಬಳಕೆ

Neha Hiremath Case; Protest by BJP-JDS-ABVP across the state

Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.