ವಾರದಲ್ಲಿ ಬೆಳೆ ವಿಮೆ ಹಣ ಬಿಡುಗಡೆ: ಸಚಿವ ಬಿ.ಸಿ.ಪಾಟೀಲ್
ಬಿರುಗಾಳಿಯಿಂದ ಹಾನಿಗೀಡಾದ ಭತ್ತದ ಬೆಳೆಗೂ ಪರಿಹಾರ
Team Udayavani, May 20, 2022, 10:16 PM IST
ದಾವಣಗೆರೆ: ಕಳೆದ ಸಾಲಿನ (2021-22ನೇ) ಬೆಳೆ ವಿಮೆ ಹಣ ಇನ್ನೊಂದು ವಾರದಲ್ಲಿ ರೈತರ ಕೈ ಸೇರಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಹರಿಹರ ತಾಲೂಕಿನ ನಂದಿತಾವರೆ ಬಳಿಯ ಭಾಸ್ಕರರಾವ್ ಕ್ಯಾಂಪಿನಲ್ಲಿ ಹಾನಿಗೊಳಗಾದ ಜಮೀನುಗಳಿಗೆ ಭೇಟಿ ನೀಡಿ ಬೆಳೆಗಳನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್ ಮಾರ್ಗಸೂಚಿಗಿಂತ ಹೆಚ್ಚಿನ ಪರಿಹಾರ ನೀಡಲಾಗಿದೆ. ಪ್ರಸ್ತುತ ವರ್ಷವೂ ಅಷ್ಟೇ ಪ್ರಮಾಣದಲ್ಲಿ ಪರಿಹಾರ ನೀಡಲಾಗುವುದು. ಭತ್ತದ ಬೆಳೆಗೆ ವಿಮಾ ಪರಿಹಾರ ವಿಷಯದಲ್ಲಿ ರೈತರು ಆತಂಕ ಪಡುವುದು ಬೇಡ. ಬಿರುಗಾಳಿಗೆ ಭತ್ತ ನೆಲಕ್ಕೆ ಬಿದ್ದಿರುವುದರಿಂದ ಅದು ಪ್ರಕೃತಿ ವಿಕೋಪ ಪರಿಹಾರದಡಿ ಬರುತ್ತದೆ. ಹಾಗಾಗಿ ಭತ್ತದ ಬೆಳೆಗೂ ಪರಿಹಾರ ಸಿಗಲಿದೆ.
ಅಧಿಕಾರಿಗಳು ಕಚೇರಿಯಲ್ಲಿ ಕುಳಿತುಕೊಳ್ಳದೆ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ನಷ್ಟ ಅಂದಾಜು ಮಾಡುವುದು ಹಾಗೂ ಅವರಿಗೆ ಸೂಕ್ತ ಬೆಳೆ ಹಾನಿ ಪರಿಹಾರ ನೀಡುವುದರ ಕಡೆಗೆ ಗಮನ ಹರಿಸಬೇಕು ಎಂದರು.
ಮಿಶ್ರ ಬೆಳೆಗೆ ಆದ್ಯತೆ ನೀಡಿ: ರೈತರು ವಿವಿಧ ಬೆಳೆ ಬೆಳೆಯುವ ಮೂಲಕ ಸಮತೋಲನ ಕಾಪಾಡಬೇಕು. ಯಾವುದಾದರೊಂದು ಬೆಳೆಯ ಬೆಲೆ ಕೈಕೊಟ್ಟರೆ ಮತ್ತೊಂದು ಬೆಳೆ ಕೈಹಿಡಿಯುತ್ತದೆ. ಆದ್ದರಿಂದ ರೈತರು ಮಿಶ್ರಬೆಳೆ, ಬಹು ಬೆಳೆ ಬೆಳೆಯುವತ್ತ ಗಮನಹರಿಸಬೇಕು ಎಂದರು.
ರಸಗೊಬ್ಬರ ಕೊರತೆ ಇಲ್ಲ:
ಈಗಾಗಲೇ ರಸಗೊಬ್ಬರ ಮತ್ತು ಬಿತ್ತನೆ ಬೀಜದ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಪ್ರಸಕ್ತ ವರ್ಷ ಈಗಷ್ಟೇ ಮುಂಗಾರು ಪ್ರಾರಂಭವಾಗಿದೆ.
ಕೆಲ ವ್ಯಾಪಾರಸ್ಥರು ದುರುದ್ದೇಶದಿಂದ ಅಕ್ರಮವಾಗಿ ಸಂಗ್ರಹ ಮಾಡಿಕೊಂಡು ಅದನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದಕ್ಕಾಗಿ ರಸಗೊಬ್ಬರ ಮತ್ತು ಬೀಜದ ಕೊರತೆಯಾಗುತ್ತದೆ ಎಂಬ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ರೈತರು ಇದನ್ನು ನಂಬಬಾರದು. ರಸಗೊಬ್ಬರ ಮತ್ತು ಬೀಜಕ್ಕೆ ಯಾವುದೇ ರೀತಿಯ ಕೊರತೆಯಿಲ್ಲ.
ಕೃತಕ ಗೊಬ್ಬರದ ಅಭಾವ ಉಂಟಾಗುವಂತೆ ಮಾಡುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ, ಕೃಷಿ ಅಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಸದ ವಾಹನದಲ್ಲಿ ಕೆಂಪೇಗೌಡರ ಭಾವಚಿತ್ರ ಮೆರವಣಿಗೆ: ಉಗ್ರ ಹೋರಾಟದ ಎಚ್ಚರಿಕೆ
ಪೌರ ಕಾರ್ಮಿಕರನ್ನು ಖಾಯಂ ಮಾಡಿ ; ಇಲ್ಲದಿದ್ದರೆ ಜುಲೈ 1 ರಿಂದ ಕೆಲಸ ಸ್ಥಗಿತ
ಕೆಂಪೇಗೌಡರ ಆಶಯ ಈಡೇರಿಸುತ್ತಿರುವ ಪ್ರಧಾನಿ ಮೋದಿ: ನಳಿನ್ಕುಮಾರ್ ಕಟೀಲ್
ಸಾಗರ : ಅಗ್ನಿಪಥ್ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ, 50 ಕ್ಕೂ ಹೆಚ್ಚು ಕಾರ್ಯಕರ್ತರ ಬಂಧನ
ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ;ಲಕ್ಷ್ಮಣ ನಿಂಬರಗಿ, ಹರಿರಾಂ ಶಂಕರ್ ಸೇರಿ ಹಲವರ ವರ್ಗಾವಣೆ
MUST WATCH
ಚಿಕ್ಕಮಗಳೂರು : ವೀಲಿಂಗ್ ಶೋಕಿ ಮಾಡಿದವರಿಗೆ ಖಾಕಿಗಳ ಬುಲ್ಡೋಜರ್ ಟ್ರೀಟ್ಮೆಂಟ್
ರಸ್ತೆ ಮಧ್ಯೆಯೇ ಪ್ರವಾಸಿಗರ ಸೆಲ್ಪಿ… ಚಾರ್ಮಾಡಿ ಘಾಟ್ ನಲ್ಲಿ ವಾಹನ ಸವಾರರ ಪರದಾಟ
ವರ್ಷದ ಬಳಿಕ ತಾಯಿ ಮಡಿಲು ಸೇರಿದ ಮಗ: ವಿಳಾಸ ಪತ್ತೆಗೆ ನೆರವಾಯಿತು ಫೇಸ್ ಬುಕ್
ಉಡುಪಿ : ಆಟೋರಿಕ್ಷಾ ಬಳಿ ತೆರಳಿ ಪ್ರಕರಣ ಇತ್ಯರ್ಥಪಡಿಸಿದ ನ್ಯಾಯಾಧೀಶರು
ಸುಳ್ಯ, ಕೊಡಗಿನ ಕೆಲವೆಡೆ ಭಾರಿ ಶಬ್ದದೊಂದಿಗೆ ಭೂಕಂಪನ, ಗೋಡೆ ಬಿರುಕು
ಹೊಸ ಸೇರ್ಪಡೆ
‘ಓ ಮೈ ಲವ್’ ನಲ್ಲಿ ಕ್ಯೂಟ್ ಲವ್ ಸ್ಟೋರಿ: ಶಶಿಕುಮಾರ್ ಪುತ್ರನ ಹೊಸ ಕನಸಿದು
ಕಸದ ವಾಹನದಲ್ಲಿ ಕೆಂಪೇಗೌಡರ ಭಾವಚಿತ್ರ ಮೆರವಣಿಗೆ: ಉಗ್ರ ಹೋರಾಟದ ಎಚ್ಚರಿಕೆ
30 ನಿಮಿಷದಲ್ಲಿ 3.5 ಕೆ.ಜಿ.ರಾಗಿ ಮುದ್ದೆ ತಿಂದ ಶಿವಲಿಂಗುಗೆ ಬಹುಮಾನ
ಪಕ್ಷಿಗಳ ಹೆರಿಗೆ ಆಸ್ಪತ್ರೆಯಂತಾದ ಭದ್ರಾ ಜಲಾಶಯ ಹಿನ್ನೀರು ಪ್ರದೇಶ
ಮೀನು ಸಾಯುವ, ವಲಸೆ ಹಕ್ಕಿ ಬರುವುದನ್ನು ನಿಲ್ಲಿಸುವ ಮೊದಲು ಕೆರೆ ಸ್ವಚ್ಛಗೊಳಿಸಿ: ಬಿಜ್ಜೂರ್