Updated: 11:11 AM IST
Saturday 23 Aug, 2025
Updated: 11:11 AM IST
Saturday 23 Aug, 2025
Team Udayavani
ದಾವಣಗೆರೆ: ಮುಡಾ ಹಗರಣದಲ್ಲಿ ಬಚಾವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಲ್ಮೀಕಿ ನಿಗಮ ಹಗರಣದಲ್ಲಿ ಯಾವಾಗ ಬೇಕಾದರೂ ಮನೆಗೆ ಹೋಗುವ ಸಾಧ್ಯತೆಯಿದೆ. ಆದ್ದರಿಂದ ಅವರಿಗೆ ನಡುಕ ಶುರುವಾಗಿದ್ದು ಸಭೆ ಮೇಲೆ ಸಭೆ ನಡೆಸುತ್ತಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.
ಜಿ.ಎಂ. ಸಿದ್ದೇಶ್ವರ ಅವರ 74ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಅಭಿವೃದ್ಧಿ ಸಂಪೂರ್ಣ ಮರೆತಿದೆ. ಎಲ್ಲದರ ಬೆಲೆ ಏರಿಕೆ ಮಾಡಿದೆ. ಆಶಾ ಕಾರ್ಯಕರ್ತರಿಗೆ ಮಾಸಿಕ 10 ಸಾವಿರ ಕೊಡುತ್ತೇನೆಂದು ಹೇಳಿತ್ತು. ರಾಜ್ಯ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ತರುವುದಾಗಿ ಹೇಳಿತ್ತು. ಯಾವುದೂ ಮಾಡಿಲ್ಲ ಎಂದರು.
ಎಲ್ಲರಿಗೂ ಬಸ್ ಪ್ರಯಾಣ ಉಚಿತ, ವಿದ್ಯುತ್ ಉಚಿತ, ಪ್ರತಿ ತಿಂಗಳು 2000 ರೂ. ಕೊಡ್ತೇನೆ ಎಂದಿದ್ದರೆ ವಿನಃ ರಸ್ತೆ ಮಾಡಲ್ಲ; ಅಭಿವೃದ್ಧಿ ಕೆಲಸ ಮಾಡಲ್ಲ. ಎಲ್ಲದಕ್ಕೂ ತೆರಿಗೆ ಹೆಚ್ಚಳ ಮಾಡುತ್ತೇವೆ ಎಂದು ಹೇಳಿರಲಿಲ್ಲ. ಈಗ 48 ಅಗತ್ಯ ವಸ್ತುಗಳ ಸೇವೆಗಳ ಬೆಲೆ ಹೆಚ್ಚಿಸಿದೆ. ಕಾಂಗ್ರೆಸ್ ಆಡಳಿತಕ್ಕೆ ಜನ ಬೇಸತ್ತಿದ್ದು ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಸಹಯೋಗದಲ್ಲಿ ಬಿಜೆಪಿ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರಲಿದೆ. ಸಿದ್ದೇಶ್ವರ ನೇತೃತ್ವದಲ್ಲಿ ಪಕ್ಷದ ಬಾವುಟ ದಾವಣಗೆರೆಯಲ್ಲಿ ಹಾರಲಿದೆ ಎಂದರು.
ದಾವಣಗೆರೆ ಕ್ಷೇತ್ರದ ಅಭಿವೃದ್ಧಿಗೆ, ಬಿಜೆಪಿ ಪಕ್ಷಕ್ಕೆ ಸಿದ್ದೇಶ್ವರ ಅಪಾರ ಕೊಡುಗೆ ನೀಡಿದ್ದಾರೆ. ಸಾವಿರಾರು ಕೋಟಿ ರೂ. ಅನುದಾನ ತಂದು ಅಭಿವೃದ್ಧಿ ಮಾಡಿದ್ದಾರೆ. ಗಾಯತ್ರಿ ಸಿದ್ದೇಶ್ವರ ಗೆದ್ದಿದ್ದರೆ ವಿಮಾನ ನಿಲ್ದಾಣ ಸೇರಿದಂತೆ ಬಾಕಿ ಇರುವ ಯೋಜನೆಗಳೆಲ್ಲ ಕಾರ್ಯಗತವಾಗುತ್ತಿದ್ದವು. ನಮ್ಮ ಪಕ್ಷದ ಸಿದ್ದಾಂತ ಗೊತ್ತಿಲ್ಲದವರು ಸಿದ್ದೇಶ್ವರ ಅವರನ್ನು ಟೀಕೆ ಮಾಡುತ್ತಿದ್ದಾರೆ. ಅವರ ಪ್ರಮಾಣಪತ್ರ ಸಿದ್ದೇಶ್ವರರಿಗೆ ಬೇಕಿಲ್ಲ ಎಂದರು.
ಮಾವನವರು ಚುನಾವಣೆಯಲ್ಲಿ ಅಡ್ಜಸ್ಟಮ್ಮೆಂಟ್ ಮಾಡಿದ ಪರಿಣಾಮವಾಗಿ ದಾವಣಗೆರೆಯಲ್ಲಿ ಕಾಂಗ್ರೆಸ್ ಸಂಸದೆಯಾಗಿ ಪ್ರಭಾ ಮಲ್ಲಿಕಾರ್ಜುನ್ ಗೆದ್ದಿದ್ದಾರೆ. ಅವರು ಕಾಂಗ್ರೆಸ್‌ನಿಂದ ಗೆದ್ದಿಲ್ಲ. ನಮ್ಮವರು ನಮಗೆ ಮಾಡಿದ ದ್ರೋಹದಿಂದ ಹಾಗೂ ಅನ್ಯಾಯ ಮಾರ್ಗದಿಂದ ಅವರು ಗೆದ್ದಿದ್ದಾರೆ.ಅಮಿತ್ ಶಾ ಅವರನ್ನು ಹೊಗಳಿಲ್ಲ, ಬದಲಾಗಿ ಭಾರಿ ಚಾಲಕಿ ಎಂದಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದರು.
4 days ago
7 days ago
7 days ago
7 days ago
12 days ago
13 days ago
13 days ago
16 days ago
18 days ago
25 days ago