ಸಿಗದ ಲಸಿಕೆ-ನಿಲ್ಲದ ನರಳಾಟ: ಕಾಲುಬಾಯಿ ರೋಗದಿಂದ ಜಾನುವಾರುಗಳ ನರಳಾಟ
Team Udayavani, Sep 26, 2021, 11:27 AM IST
ದಾವಣಗೆರೆ: ನಿರಂತರ ಮಳೆ-ಬಿಸಿಲು,ಮುಂದುವರೆದ ತಂಪುವಾತಾವರಣದಿಂದ ಜಿಲ್ಲೆಯಲ್ಲಿ ಸಾವಿರಾರು ಜಾನುವಾರುಗಳು ಕಾಲುಬಾಯಿ ರೋಗದಿಂದ ಬಳಲುತ್ತಿದ್ದು, ಸಕಾಲಕ್ಕೆ ಲಸಿಕೆ ಸಿಗದೆ ಪರದಾಡುತ್ತಿವೆ.ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿವರ್ಷ ಜೂನ್-ಜುಲೈ ಹಾಗೂನವೆಂಬರ್-ಡಿಸೆಂಬರ್‌ನಲ್ಲಿ ಎರಡುಬಾರಿ ಜಾನುವಾರುಗಳಿಗೆ ಲಸಿಕೆ ಹಾಕಲಾಗುತ್ತಿತ್ತು.
ಕೊರೊನಾಕಾರಣದಿಂದಾಗಿ ಲಸಿಕೆ ಪೂರೈಕೆಯಟೆಂಡರ್ ಪ್ರಕ್ರಿಯೆಯಲ್ಲಿವಿಳಂಬವಾಗಿದ್ದರಿಂದ ಈ ವರ್ಷಸೆಪ್ಟೆಂಬರ್ ತಿಂಗಳು ಅಂತ್ಯಕ್ಕೆಬಂದರೂ ಲಸಿಕೆ ನೀಡಿಲ್ಲ.ಹೀಗಾಗಿ ಕಾಲುಬಾಯಿರೋಗದಿಂದ ಜಾನುವಾರುಗಳನ್ನುಕಾಪಾಡಿಕೊಳ್ಳುವುದು ಪಶುಪಾಲಕರಿಗೆ ದೊಡ್ಡ ಸವಾಲಾಗಿದೆ.
ಪ್ರಸ್ತುತ ತಂಪು ವಾತಾವರಣ ಮುಂದುವರೆದಿರುವುದರಿಂದ ಹಸು, ಎಮ್ಮೆ, ಕುರಿ, ಮೇಕೆಗಳಲ್ಲಿಕಾಲುಬಾಯಿ ರೋಗ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದೆ. ಕಾಲಿನಗೊರಸು, ಬಾಯಿ ನಂಜು ಆಗಿಮೇವು ತಿನ್ನಲಾಗದ ತೊಂದರೆ ಅನುಭವಿಸುತ್ತಿವೆ. ಆದರೆ ಸಾಕಷ್ಟುಪ್ರಮಾಣದಲ್ಲಿ ಲಸಿಕೆ ಸಿಗದೆಪಶುಪಾಲಕರಲ್ಲಿ ಆತಂಕ ಸೃಷ್ಟಿಸಿದೆ.ಇದು ಕೇವಲ ದಾವಣಗೆರೆ ಜಿಲ್ಲೆಯ ಸಮಸ್ಯೆಯಲ್ಲ, ಲಸಿಕೆಪೂರೈಕೆಯಲ್ಲಿ ವಿಳಂಬವಾಗಿದ್ದರಿಂದ ಇಡೀ ದೇಶದಲ್ಲಿ ಲಸಿಕೆ ಸಮಸ್ಯೆಉಲ್ಬಣಿಸಿದೆ.
ಈ ವರ್ಷ ಮುಂದಿನತಿಂಗಳು ಅಂದರೆ ಅಕ್ಟೋಬರ್‌ನಲ್ಲಿ ಲಸಿಕೆ ಸಿಗುವ ಸಾಧ್ಯತೆ ಇದೆಎನ್ನಲಾಗುತ್ತಿದೆ.ಕಾಲುಬಾಯಿ ರೋಗಕ್ಕೆಕೇಂದ್ರ ಸರ್ಕಾರದ ಯೋಜನೆಮೂಲಕ ಲಸಿಕೆ ನೀಡಲಾಗುತ್ತದೆ.ಕೊರೊನಾ ಕಾರಣದಿಂದಾಗಿಕಳೆದ ವರ್ಷವೂ ವಿಳಂಬವಾಗಿಲಸಿಕೆ ಪೂರೈಕೆಯಾಗಿತ್ತು.
ಆರು ತಿಂಗಳಿಗೊಮ್ಮೆಕೊಡಬೇಕಾದ ಈ ಲಸಿಕೆಯನ್ನುಹಿಂದಿನ ವರ್ಷವೂ ಸಕಾಲಕ್ಕೆನೀಡದೆ ಇರುವುದರಿಂದ ಈ ಬಾರಿಕಾಲುಬಾಯಿ ಲಕ್ಷಣಗಳು ಹೆಚ್ಚಿನಪ್ರಾಣಿಗಳಲ್ಲಿ ಕಾಣಿಸಿಕೊಂಡಿದೆ.ಸ್ಥಳೀಯ ನಿಧಿ ಬಳಕೆ ಮಾಡಿಅಧಿಕಾರಿಗಳು ಕಾಲುಬಾಯಿಲಸಿಕೆ ನೀಡುವ ವ್ಯವಸ್ಥೆ ಒಂದಿಷ್ಟುಪ್ರಮಾಣದಲ್ಲಿ ಮಾಡುತ್ತಿದ್ದಾರೆ.ಆದರೆ ಬೇಡಿಕೆಯಷ್ಟು ಪ್ರಮಾಣದಲ್ಲಿಲಸಿಕೆ ಸಿಗದೆ ಇರುವುದರಿಂದಜಾನುವಾರುಗಳು ಲಸಿಕೆ ಇಲ್ಲದೇ ಕಾಲುಬಾಯಿ ರೋಗದಿಂದ ನರಳುವಂತಾಗಿದೆ.
ಕುರಿ, ಹೈನುದ್ಯಮದಾರರಲ್ಲಿ ಆತಂಕ: ಸಕಾಲಕ್ಕೆ ಲಸಿಕೆ ಸಿಗದೆಇರುವುದು ಕುರಿ-ಮೇಕೆಸಾಕಾಣಿಕೆ, ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡವರ ನಿದ್ದೆಗೆಡೆಸಿದೆ. ಒಂದಕ್ಕೆ ಕಾಲುಬಾಯಿ ರೋಗಬಂತೆಂದರೆ ಸಾಕು, ಎಲ್ಲದಕ್ಕೂ ಹರಡುವ ಸಾಧ್ಯತೆ ಇರುವುದರಿಂದ ಜಾನುವಾರುಗಳನ್ನು ಕಾಲುಬಾಯಿಯಿಂದ ಕಾಪಾಡಿಕೊಳ್ಳಲು ಇಲ್ಲದ ಪ್ರಯತ್ನ ನಡೆಸಿದ್ದಾರೆ. ಆದರೆಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಸಿಗದೆ ಇರುವುದರಿಂದ ಉದ್ಯಮಿಗಳಲ್ಲಿ ಆತಂಕವೂ ಸೃಷ್ಟಿಸಿದೆ.
ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕಲಘಟಗಿ ಅಭಿವೃದ್ಧಿಗೆ ಪಟ್ಟಣ ಪಂಚಾಯಿತಿ ಮುಂದಡಿ
ದಾವಣಗೆರೆ: ಅಪ್ರಾಪ್ತೆಯ ವಿವಾಹಕ್ಕೆ ತಯಾರಿ… ಅಧಿಕಾರಿಗಳಿಂದ ವಿವಾಹಕ್ಕೆ ತಡೆ
ಕ್ಷೇತ್ರದ ಮತದಾರರು ನನ್ನ ಜೊತೆ ಇದ್ದಾರೆ, ಹೆದರುವ ಪ್ರಶ್ನೆಯೇ ಇಲ್ಲ: ಶಾಸಕ ಮುನವಳ್ಳಿ
ಚಿಕ್ಕೋಡಿ: ಸಂಬಂಧಿಯನ್ನೇ ಕೊಲೆಗೈದ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ
ಚಾರ್ಮಾಡಿ ಘಾಟ್: ದುಷ್ಕರ್ಮಿಗಳ ಗುಂಡೇಟಿಗೆ ಕಡವೆ ಬಲಿ