ದಾವಣಗೆರೆ ರಸ್ತೆಗಳೀಗ ಸೋ ಸ್ಮಾರ್ಟ್‌


Team Udayavani, Apr 8, 2017, 1:01 PM IST

dvg3.jpg

ದಾವಣಗೆರೆ: ಕೆಲವು ತಿಂಗಳ ಹಿಂದಷ್ಟೇ ಧೂಳುನಗರಿ ಎಂಬ ಅಪಖ್ಯಾತಿಗೆ ಒಳಗಾಗಿದ್ದ ದಾವಣಗೆರೆ ನಗರದ ರಸ್ತೆಗಳೀಗ ಕಾಂಕ್ರೀಟ್‌ ರಸ್ತೆಗಳಾಗಿ ಪರಿವರ್ತನೆಯಾಗುತ್ತಿವೆ. ಪಾಲಿಕೆ ಪ್ರಮುಖ ರಸ್ತೆಗಳಲ್ಲದೆ ಗಲ್ಲಿ ಗಲ್ಲಿಯ ಡಾಂಬರ್‌ ರಸ್ತೆಗಳು ಸಹ ಸಿಮೆಂಟ್‌ ರಸ್ತೆಗಳಾಗಿವೆ. ಈ ರಸ್ತೆಗಳು ಸ್ಮಾರ್ಟ್‌ಸಿಟಿಗೆ ಮೆರಗು ನೀಡಲಿವೆ.

ನಗರದ ಬಹುತೇಕ ಪ್ರಮುಖ ರಸ್ತೆಗಳು ಕಾಂಕ್ರೀಟಿಕರಣಗೊಂಡಿವೆ. ಇನ್ನೂ ಅನೇಕ ರಸ್ತೆಗಳು ಕಾಂಕ್ರೀಟ್‌ ಹೊದಿಕೆ ಕಾಣಲಿವೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ನಗರದ 120 ಕಿ.ಮೀ. ರಸ್ತೆ 270 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟಿಕರಣಗೊಂಡಿದೆ. ಮಹಾನಗರ ಪಾಲಿಕೆ, ಎಪಿಎಂಸಿಯ ನಬಾರ್ಡ್‌ ಯೋಜನೆ, ಲೋಕೋಪಯೋಗಿ ಇಲಾಖೆ, ದೂಡಾ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ವಿಭಾಗದಿಂದ ರಸ್ತೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ.

ಮುಂದೆ ಇನ್ನೂ ಸುಮಾರು 194 ಕಿ.ಮೀ. ರಸ್ತೆ ಕಾಂಕ್ರೀಟ್‌ ರಸ್ತೆಯಾಗಿ ಪರಿವರ್ತನೆಗೊಳ್ಳಲಿದೆ. ನಗರದ ಎಲ್ಲ ದಿಕ್ಕುಗಳಿಂದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಇದೀಗ ಕಾಂಕ್ರೀಟ್‌ ರಸ್ತೆಗಳಾಗಿ ಮಾರ್ಪಟ್ಟಿವೆ. ಎಪಿಎಂಸಿಗೆ ನಬಾರ್ಡ್‌ ನಿಂದ ಬಂದ ಅನುದಾನದಲ್ಲಿ ಈ ರಸ್ತೆಗಳನ್ನು ಕಾಂಕ್ರೀಟ್‌ ರಸ್ತೆ ಮಾಡಲಾಗಿದೆ. ನಬಾರ್ಡ್‌ ಯೋಜನೆಯಡಿ 2013-14 ರಿಂದ 2016-17ನೇ ಸಾಲಿನವರೆಗೆ ಒಟ್ಟು 106.29 ಕೋಟಿ ರೂ. ವೆಚ್ಚದಲ್ಲಿ 29.50 ಕಿ.ಮೀ. ಉದ್ದದ ರಸ್ತೆಯನ್ನು ಕಾಂಕ್ರೀಟ್‌ ಮಾಡಲಾಗಿದೆ.

ಈರುಳ್ಳಿ ಮಾರುಕಟ್ಟೆ ರಸ್ತೆಯಿಂದ ಲಿಂಗೇಶ್ವರ ದೇವಸ್ಥಾನದ ಮುಖಾಂತರ ಅಶೋಕ ಟಾಕೀಸ್‌ ಕಡೆ ಹೋಗುವ ರಸ್ತೆ, ಹಳೆ ಪಿ.ಬಿ. ರಸ್ತೆಯಿಂದ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದ ಪಕ್ಕದಿಂದ ನಿಟುವಳ್ಳಿ ಶ್ರೀ ದುರ್ಗಾಂಬಿಕ ದೇವಸ್ಥಾನದ ಮೂಲಕ ರಾಷ್ಟ್ರೀಯ ಹೆದ್ದಾರಿ-4ಕ್ಕೆ ತಲುಪುವ ರಸ್ತೆ, ದುರ್ಗಾಂಬಿಕ ದೇಗುಲದ ರಸ್ತೆಯಿಂದ ದುರ್ಗಾಂಬಿಕ ಶಾಲೆಯ ಮುಖಾಂತರ ಚಿಕ್ಕಮಣಿ ದೇವರಾಜ್‌ ಅರಸ್‌ ಬಡಾವಣೆಯ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ,

ದೃಶ್ಯ ಕಲಾ ಕಾಲೇಜಿನಿಂದ ರಾಷ್ಟ್ರೀಯ ಹೆದ್ದಾರಿ-4ಕ್ಕೆ ಸಂಪರ್ಕ ಕಲ್ಪಿಸುವ ವಿದ್ಯಾನಗರ ಮುಖ್ಯ ರಸ್ತೆ, ರಾಷ್ಟ್ರೀಯ ಹೆದ್ದಾರಿ-4ರಿಂದ ನೂತನ ಕಾಲೇಜು ಮೂಲಕ ವಿದ್ಯಾನಗರ ತಲುಪುವ ರಸ್ತೆ, ದಾವಣಗೆರೆ-ಹರಿಹರ ಸಮುದಾಯ ಭವನದಿಂದ ಎಂಸಿಸಿ ಎ ಮತ್ತು ಬಿ ಬ್ಲಾಕ್‌ನ 6ನೇ ಮುಖ್ಯ ರಸ್ತೆಯ ಮೂಲಕ ಮೆಡಿಕಲ್‌ ಕಾಲೇಜಿಗೆ ಹೋಗುವ ರಸ್ತೆ, ನಿಟುವಳ್ಳಿ ಮುಖ್ಯ ರಸ್ತೆಯಿಂದ ಶಾಮನೂರು-ನಿಟುವಳ್ಳಿ ರಸ್ತೆಯ ಮೂಲಕ ಹದಡಿ ರಸ್ತೆಯವರೆಗೆ ಸಂಪರ್ಕ ಕಲ್ಪಿಸುವ ರಸ್ತೆ,

ಶಾಮನೂರು ರಸ್ತೆಯಿಂದ ಸರ್‌. ಎಂ. ವಿಶ್ವೇಶ್ವರಯ್ಯ ರಸ್ತೆ ಮೂಲಕ ಕುಂದುವಾಡ ಕೆರೆಗೆ ಹೋಗುವ ರಸ್ತೆ ಈ ನಬಾರ್ಡ್‌ ಯೋಜನೆಯಡಿ ಕಾಂಕ್ರೀಟ್‌ ಮಾಡಲ್ಪಟ್ಟಿವೆ. ಇದೇ ರೀತಿ ಮಹಾನಗರ ಪಾಲಿಕೆ ವಿವಿಧ ಅನುದಾನದಡಿ ಒಟ್ಟು 49.25 ಕಿ.ಮೀ. ರಸ್ತೆ ಕಾಂಕ್ರೀಟ್‌ ಕಂಡಿದೆ. ಒಟ್ಟು 49.73 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ. ಡಾ| ಎಂ.ಸಿ. ಮೋದಿ ವೃತ್ತದಿಂದ ದೃಶ್ಯಕಲಾ ಕಾಲೇಜುವರೆಗಿನ ಎಂಸಿಸಿ ಬಿ ಬ್ಲಾಕ್‌ನ 1ನೇ ಮುಖ್ಯ ರಸ್ತೆ,

ದೇವರಾಜ ಅರಸ್‌ ಬಡಾವಣೆ ಅಯ್ಯಪ್ಪಸ್ವಾಮಿ ದೇಗುಲದಿಂದ ಶಿವಾಲಿ ಟಾಕೀಸ್‌ ಮುಖಾಂತರ  ಕೊಂಡಜ್ಜಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ, ದೇವರಾಜ ಅರಸ್‌ ಬಡಾವಣೆಯ ಡಬಲ್‌ ರಸ್ತೆ, ದೊಡ್ಡಪೇಟೆಯ ಕನ್ನಿಕಾಪರಮೇಶ್ವರಿ ದೇವಸ್ಥಾನದ ಮೂಲಕ ಶಿವಾಜಿ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಹಗೇದಿಬ್ಬ ವೃತ್ತದಿಂದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಮೂಲಕ ಶಿವಾಜಿ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಪಿ.ಜೆ. ಬಡಾವಣೆಯ 2ನೇ ಮುಖ್ಯರಸ್ತೆ (ಎವಿಕೆ ಕಾಲೇಜು ರಸ್ತೆ) ಇವುಗಳಲ್ಲಿ ಪ್ರಮುಖವಾಗಿವೆ. 

ಲೋಕೋಪಯೋಗಿ ಇಲಾಖೆಯಿಂದ 72.03 ಕೋಟಿ ರೂ. ವೆಚ್ಚದಲ್ಲಿ 16.25 ಕಿ.ಮೀ. ರಸ್ತೆ ಸಿಮೆಂಟ್‌ ರಸ್ತೆ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಬೀರೂರು- ಸಮ್ಮಸಗಿ ರಾಜ್ಯ ಹೆದ್ದಾರಿ (ಹಳೆ ಪಿಬಿ ರಸ್ತೆ)ಯ 8 ಕಿ.ಮೀ. ಹಾಗೂ ಶಾಮನೂರು ರಸ್ತೆಯ ಲಕ್ಷ್ಮಿ ಫ್ಲೋರ್‌ ಮಿಲ್‌ನಿಂದ ಬಾಪೂಜಿ ಸಮುದಾಯ ಭವನದವರೆಗಿನ ರಸ್ತೆ ಸೇರಿವೆ. 

ಇದಲ್ಲದೆ ನೀರಾವರಿ ಇಲಾಖೆಯ ಎಸ್‌ ಸಿಪಿ, ಟಿಎಸ್‌ಪಿ ಉಪ ಯೋಜನೆಯಡಿ ಎಸ್‌ಸಿ, ಎಸ್‌ಟಿ ಜನಾಂಗದ ಕಾಲೋನಿಗಳ 20.44 ಕಿ.ಮೀ. ರಸ್ತೆಯನ್ನು 25.55 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್‌ ಮಾಡಲಾಗಿದೆ. ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ 4.29 ಕೋಟಿ ರೂ. ವೆಚ್ಚದಲ್ಲಿ 2.35 ಕಿಮೀ ರಸ್ತೆ ಸಿಮೆಂಟೀಕರಣಗೊಂಡಿದೆ. ಪಿಬಿ ರಸ್ತೆಯ ರಾಜ್ಯ ಸಾರಿಗೆ ಬಸ್‌ ನಿಲ್ದಾಣದಿಂದ ಅರುಣ ಚಿತ್ರಮಂದಿರದವರೆಗಿನ 1.47 ಕಿ.ಮೀ. ರಸ್ತೆಯನ್ನು 11 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಉಪವಿಭಾಗದಿಂದ ಕಾಂಕ್ರೀಟ್‌ ಮಾಡಲಾಗಿದೆ. 

ಬಡಾವಣೆ ರಸ್ತೆಯಷ್ಟೇ ವೇಗವಾಗಿ ಪಿಬಿ ರಸ್ತೆ ಕಾಮಗಾರಿ ಸಂಪೂರ್ಣ ಮುಗಿದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಎರಡೂವರೆ ವರ್ಷವಾದರೂ ಆ ರಸ್ತೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದರಿಂದ ವಾಹನಗಳ  ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಈಗ ಆವರಗೆರೆ ರಸ್ತೆಯಲ್ಲೂ ಸಹ ಕಾಮಗಾರಿ ಪ್ರಗತಿಯಲ್ಲಿದೆ. 

* ಪಾಟೀಲ ವೀರನಗೌಡ

ಟಾಪ್ ನ್ಯೂಸ್

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

Exam

NEET ಮಹಾರಾಷ್ಟ್ರದಲ್ಲೂ ಅಕ್ರಮ ಬಹಿರಂಗ

HDK (3)

Mining; ನನ್ನ ಮೇಲೆ ಸಿಟ್ಟು ; ದೇವದಾರಿಗೆ ತಡೆ : ಕೇಂದ್ರ ಸಚಿವ ಕುಮಾರಸ್ವಾಮಿ

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Rain ಕರಾವಳಿ: ಜೂ.26ರ ವರೆಗೆ ಬಿರುಸಿನ ಮಳೆ ಸಾಧ್ಯತೆ

Rain ಕರಾವಳಿ: ಜೂ.26ರ ವರೆಗೆ ಬಿರುಸಿನ ಮಳೆ ಸಾಧ್ಯತೆ

ಕರಾವಳಿಯ ಪ್ರಮುಖ ದೇಗುಲಗಳಲ್ಲಿ ಭಕ್ತಸಂದಣಿ

ಕರಾವಳಿಯ ಪ್ರಮುಖ ದೇಗುಲಗಳಲ್ಲಿ ಭಕ್ತಸಂದಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

Lokayukta

ದಾವಣಗೆರೆ: ಕಂದಾಯ ಅಧಿಕಾರಿ ಮತ್ತು ಎಸ್‌ಡಿಎ ಲೋಕಾಯುಕ್ತ ಬಲೆಗೆ

ಯಾರಿಗೂ, ಯಾವ ಪಕ್ಷ ಗಳಿಗೂ ರೈತರ ಕಾಳಜಿ ಇಲ್ಲ: ಎಚ್‌. ಆರ್‌. ಬಸವರಾಜಪ್ಪ

ಯಾರಿಗೂ, ಯಾವ ಪಕ್ಷ ಗಳಿಗೂ ರೈತರ ಕಾಳಜಿ ಇಲ್ಲ: ಎಚ್‌. ಆರ್‌. ಬಸವರಾಜಪ್ಪ

6

Davangere: ಸರಣಿ ಅಪಘಾತ; ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಸೇರಿ ಇಬ್ಬರಿಗೆ ಗಂಭೀರ ಗಾಯ

renukaacharya

BJP vs BJP; ಶಾಸಕ ಬಿ.ಪಿ. ಹರೀಶ್ ವಿರುದ್ಧ ಕಿಡಿ ಕಾರಿದ ರೇಣುಕಾಚಾರ್ಯ

MUST WATCH

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

udayavani youtube

ಕಡುಬು ಸೇವೆಗೆ ಒಲಿಯುವ ಮುಂಡ್ರಪಾಡಿ ಈಶ

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

ಹೊಸ ಸೇರ್ಪಡೆ

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

Exam

NEET ಮಹಾರಾಷ್ಟ್ರದಲ್ಲೂ ಅಕ್ರಮ ಬಹಿರಂಗ

HDK (3)

Mining; ನನ್ನ ಮೇಲೆ ಸಿಟ್ಟು ; ದೇವದಾರಿಗೆ ತಡೆ : ಕೇಂದ್ರ ಸಚಿವ ಕುಮಾರಸ್ವಾಮಿ

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.