ದಾವಣಗೆರೆ: ಖಾಸಗಿ ಆಸ್ಪತ್ರೆಯಲ್ಲಿ ಶವವಿಟ್ಟು ವೈದ್ಯರ ವಿರುದ್ಧ ಪ್ರತಿಭಟನೆ

ವೈದ್ಯರ ಬಂಧನ, ಆಸ್ಪತ್ರೆ ಬಂದ್ ಮಾಡುವಂತೆ ಒತ್ತಾಯ

Team Udayavani, Jun 30, 2022, 6:27 PM IST

1-sfsfsf

ದಾವಣಗೆರೆ: ತಪ್ಪು ಚಿಕಿತ್ಸೆ ನೀಡಿ ಸಾವಿಗೆ ಕಾರಣವಾಗಿರುವ ವೈದ್ಯರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಮೃತರ ಸಂಬಂಧಿಕರು, ಸಾರ್ವಜನಿಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಗುರುವಾರ ಕೆ.ಆರ್. ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿದರು.

ದಾವಣಗೆರೆಯ ಜಯನಗರ ನಿವಾಸಿ ಅನ್ನಪೂರ್ಣಮ್ಮ(65) ಎಂಬುವರ ಸಾವಿಗೆ ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ವೃದ್ಧೆಯ ಸಂಬಂಧಿಕರು ಶವವಿಟ್ಟು ಪ್ರತಿಭಟನೆ ನಡೆಸಿದರು. ವೈದ್ಯರ ಬಂಧನ, ಆಸ್ಪತ್ರೆ ಬಂದ್ ಮಾಡುವಂತೆ ಒತ್ತಾಯಿಸಿದರು.

ಜೂ. 8 ರಂದು ನಮ್ಮ ತಾಯಿ ಅನ್ನಪೂರ್ಣಮ್ಮ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಾಗ ಆಸ್ಪತ್ರೆ ಕರೆದುಕೊಂಡು ಬರಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು ಹೊಟ್ಟೆಯಲ್ಲಿ ಗಡ್ಡೆಯಿದೆ. ಸಣ್ಣ ಆಪರೇಷನ್ ಮಾಡಬೇಕಾಗುತ್ತದೆ ಎಂದು ಹೇಳಿದರು. ಜೂ.13 ರಂದು ಆಪರೇಷನ್ ಸಹ ಮಾಡಲಾಯಿತು. ಆಪರೇಷನ್ ಮಾಡಿದ ನಂತರ ಹೊಲಿಗೆ ಹಾಕದೆ ಹಾಗೆಯೇ ಬಿಟ್ಟಿದ್ದರಿಂದ ಸಮಸ್ಯೆ ಆಗಿತ್ತು. ನಮ್ಮ ಅಮ್ಮನಿಗೆ ಪೂರ್ಣ ಗುಣವಾಗದಿದ್ದರೂ 3 ಲಕ್ಷ ರೂಪಾಯಿ ಬಿಲ್ ಕಟ್ಟಿಸಿಕೊಂಡು ಡಿಸ್ಚಾರ್ಜ್ ಮಾಡಿದರು ಎಂದು ಮಗಳು ನಂದಿನಿ ತಿಳಿಸಿದರು.

ಚಿಗಟೇರಿ ಆಸ್ಪತ್ರೆಗೆ ಸೇರಿಸಿದಾಗ ಡಾಕ್ಟರ್ ಉಳಿಯುವುದಿಲ್ಲ ಎಂದೇ ಹೇಳಿದ್ದರು. ಇವತ್ತು(ಗುರುವಾರ) ಮೃತಪಟ್ಟಿದ್ದಾರೆ. ನಮ್ಮ ಅಮ್ಮನ ಸಾವಿಗೆ ವೈದ್ಯರೇ ಕಾರಣ. ಸರಿಯಾಗಿ ಚಿಕಿತ್ಸೆ ಕೊಟ್ಟಿದ್ದರೆ ಏನೂ ಆಗುತ್ತಿರಲಿಲ್ಲ. ನಮ್ಮ ಅಮ್ಮನ ಸಾವಿಗೆ ಕಾರಣವಾಗಿರುವ ಡಾಕ್ಟರ್ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಈಗಾಗಲೇ ಬಸವ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ ಎಂದು ತಿಳಿಸಿದರು.

ಟಾಪ್ ನ್ಯೂಸ್

life insurance ನೀಡಲು ನಿರಾಕರಣೆ: ವಿಮೆ ಸಹಿತ ಖರ್ಚು ಪಾವತಿಗೆ ಗ್ರಾಹಕರ ಆಯೋಗ ಆದೇಶ

life insurance ನೀಡಲು ನಿರಾಕರಣೆ: ವಿಮೆ ಸಹಿತ ಖರ್ಚು ಪಾವತಿಗೆ ಗ್ರಾಹಕರ ಆಯೋಗ ಆದೇಶ

Belthangady ದ್ವಿಚಕ್ರವಾಹನ ಮಗುಚಿ ಬಿದ್ದು ಮಹಿಳೆಗೆ ಗಂಭೀರ ಗಾಯ

Belthangady ದ್ವಿಚಕ್ರವಾಹನ ಮಗುಚಿ ಬಿದ್ದು ಮಹಿಳೆಗೆ ಗಂಭೀರ ಗಾಯ

Keradi Government School: ಸರಕಾರಿ ಶಾಲೆಗೆ ದಾಖಲಾಗಿ: ರಿಷಬ್‌ ಶೆಟ್ಟಿ

Keradi Government School: ಸರಕಾರಿ ಶಾಲೆಗೆ ದಾಖಲಾಗಿ: ರಿಷಬ್‌ ಶೆಟ್ಟಿ

Venur Mahamastakabhisheka; ಭರತನನ್ನೇ ಗೆದ್ದ ಬಾಹುಬಲಿ ವಿಶ್ವವಂದ್ಯನಾದ

Venur Mahamastakabhisheka; ಭರತನನ್ನೇ ಗೆದ್ದ ಬಾಹುಬಲಿ ವಿಶ್ವವಂದ್ಯನಾದ

Belthangady ಮಚ್ಚಿನದಲ್ಲಿ ಹೆಜ್ಜೇನು ದಾಳಿ: 6 ಮಂದಿಗೆ ಗಾಯ

Belthangady ಮಚ್ಚಿನದಲ್ಲಿ ಹೆಜ್ಜೇನು ದಾಳಿ: 6 ಮಂದಿಗೆ ಗಾಯ

1-wewqewq

World’s largest ಧಾನ್ಯ ಸಂಗ್ರಹ ಯೋಜನೆಗೆ ಮೋದಿ ಚಾಲನೆ : 1.25 ಲಕ್ಷ ಕೋಟಿ ರೂ. ಹೂಡಿಕೆ

Belagavi: ಬೃಹತ್‌ ಸಾರಾಯಿ ಅಡ್ಡೆಗೆ 100ಕ್ಕೂ ಹೆಚ್ಚು ಪೊಲೀಸರಿಂದ ದಾಳಿ

Belagavi: ಬೃಹತ್‌ ಸಾರಾಯಿ ಅಡ್ಡೆಗೆ 100ಕ್ಕೂ ಹೆಚ್ಚು ಪೊಲೀಸರಿಂದ ದಾಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Siddeshwar BJP MP

BJP; ದಾವಣಗೆರೆ ಟಿಕೆಟ್ ಮುಂದೆಯೂ ನನಗೇ ಕೊಡುತ್ತಾರೆ: ಸಂಸದ ಜಿ.ಎಂ. ಸಿದ್ದೇಶ್ವರ

ಕೆ.ಎಸ್. ಈಶ್ವರಪ್ಪ

Davanagere; ರಾಹುಲ್ ಗಾಂಧಿ ದೇಶದ ಜನರ ಕ್ಷಮೆ ಕೋರಬೇಕು: ಕೆ.ಎಸ್. ಈಶ್ವರಪ್ಪ ಆಗ್ರಹ

ಚುನಾವಣೆಯಲ್ಲಿ ಗೆಲ್ಲೋವರೆಗೂ ವಿಧಾನಸೌಧದತ್ತ ಸುಳಿಯಲ್ಲ: ರೇಣುಕಾಚಾರ್ಯ

Election ಗೆಲ್ಲೋವರೆಗೂ ವಿಧಾನಸೌಧದತ್ತ ಸುಳಿಯಲ್ಲ: ರೇಣುಕಾಚಾರ್ಯ

court

Loan ವಾಪಾಸ್ ಕೊಡುವಂತೆ ಒತ್ತಾಯಿಸಿದ ಮಹಿಳೆಯ ಹತ್ಯೆಗೈದವನಿಗೆ ಜೀವಾವಧಿ ಶಿಕ್ಷೆ

suspended

Davangere: ಶಾಲಾ ಮಕ್ಕಳನ್ನು ಶೌಚಾಲಯ ಸ್ವಚ್ಛತೆಗೆ ಬಳಸಿಕೊಂಡ ಶಿಕ್ಷಕಿ ಅಮಾನತು

MUST WATCH

udayavani youtube

ಸಸಿಹಿತ್ಲು ಕಡಲು ಸೇರಿದ ಸೇರಿದ 88 ಆಲಿವ್‌ ಮರಿಗಳು

udayavani youtube

ಮಧುಮೇಹ ಕಿಡ್ನಿ ಸಮಸ್ಯೆಗೆ ಹೇಗೆ ಕಾರಣವಾಗುತ್ತದೆ ?

udayavani youtube

ಏನಿದು ಮಂಗನ ಕಾಯಿಲೆ?

udayavani youtube

ಅರಬ್ಬರ ನಾಡಿನಲ್ಲಿ ಹಿಂದೂ ದೇವಾಲಯ

udayavani youtube

ಶುಗರ್ ಬೀಟ್ : ನೂತನ ಪ್ರಯೋಗದತ್ತ ನಿಂಗಸಾನಿ ಸಹೋದರರು

ಹೊಸ ಸೇರ್ಪಡೆ

life insurance ನೀಡಲು ನಿರಾಕರಣೆ: ವಿಮೆ ಸಹಿತ ಖರ್ಚು ಪಾವತಿಗೆ ಗ್ರಾಹಕರ ಆಯೋಗ ಆದೇಶ

life insurance ನೀಡಲು ನಿರಾಕರಣೆ: ವಿಮೆ ಸಹಿತ ಖರ್ಚು ಪಾವತಿಗೆ ಗ್ರಾಹಕರ ಆಯೋಗ ಆದೇಶ

Belthangady ದ್ವಿಚಕ್ರವಾಹನ ಮಗುಚಿ ಬಿದ್ದು ಮಹಿಳೆಗೆ ಗಂಭೀರ ಗಾಯ

Belthangady ದ್ವಿಚಕ್ರವಾಹನ ಮಗುಚಿ ಬಿದ್ದು ಮಹಿಳೆಗೆ ಗಂಭೀರ ಗಾಯ

Keradi Government School: ಸರಕಾರಿ ಶಾಲೆಗೆ ದಾಖಲಾಗಿ: ರಿಷಬ್‌ ಶೆಟ್ಟಿ

Keradi Government School: ಸರಕಾರಿ ಶಾಲೆಗೆ ದಾಖಲಾಗಿ: ರಿಷಬ್‌ ಶೆಟ್ಟಿ

Venur Mahamastakabhisheka; ಭರತನನ್ನೇ ಗೆದ್ದ ಬಾಹುಬಲಿ ವಿಶ್ವವಂದ್ಯನಾದ

Venur Mahamastakabhisheka; ಭರತನನ್ನೇ ಗೆದ್ದ ಬಾಹುಬಲಿ ವಿಶ್ವವಂದ್ಯನಾದ

Belthangady ಮಚ್ಚಿನದಲ್ಲಿ ಹೆಜ್ಜೇನು ದಾಳಿ: 6 ಮಂದಿಗೆ ಗಾಯ

Belthangady ಮಚ್ಚಿನದಲ್ಲಿ ಹೆಜ್ಜೇನು ದಾಳಿ: 6 ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.