

Team Udayavani, May 26, 2020, 5:50 AM IST
ಚನ್ನಗಿರಿ: ಪುರಸಭೆ ಸದಸ್ಯ ಗಾದ್ರಿ ರಾಜು ಹೊನ್ನನಾಯಕನಹಳ್ಳಿ ಗ್ರಾಮದಲ್ಲಿ ಆಹಾರ ಧಾನ್ಯಗಳ ಕಿಟ್ ವಿತರಿಸಿದರು.
ಚನ್ನಗಿರಿ: ಲಾಕ್‌ಡೌನ್‌ನಿಂದ ದಿನನಿತ್ಯ ದುಡಿದು ಜೀವನ ಮಾಡುವವರು ಸಂಕಷ್ಟದಲ್ಲಿದ್ದು ಅಂಥವರನ್ನು ಗುರುತಿಸಿ ಆಹಾರ ಧಾನ್ಯಗಳನ್ನು ನೀಡುತ್ತಿದ್ದೇವೆ.
ಸಂಕಷ್ಟದಲ್ಲಿರುವ ಎಷ್ಟೇ ಕುಟುಂಬಗಳಿದ್ದರೂ ಅವರಿಗೆ ನೆರವು ನೀಡಲು ಸದಾ ಸಿದ್ಧನಿದ್ದೇನೆ ಎಂದು ಪುರಸಭೆ ಸದಸ್ಯ ಗಾದ್ರಿ ರಾಜು ಹೇಳಿದರು.
ತಾಲೂಕಿನ ಹೊನ್ನನಾಯಕನಹಳ್ಳಿ ಗ್ರಾಮದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಆಹಾರ ಧಾನ್ಯಗಳ ಕಿಟ್‌ಗಳನ್ನು ವಿತರಿಸಿ ಅವರು ಮಾತನಾಡಿದರು. ಇಡೀ ದೇಶವೇ
ಕೋವಿಡ್ ಸಂಕಷ್ಟದಲ್ಲಿ ಸಿಲುಕಿದೆ. ಈ ವೇಳೆ ಕೂಲಿ ಕಾರ್ಮಿಕರು, ಅಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು ಸೇರಿದಂತೆ ಹಲವಾರು ವರ್ಗದವರು ಪ್ರತಿನಿತ್ಯ ದುಡಿದು ತಿನ್ನುವ ವರ್ಗದವರು. ಅವರು ತುಂಬಾ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅಂಥವರಿಗೆ ಸಹಾಯ ಮಾಡಿ ಕೋವಿಡ್ ವಿರುದ್ಧದ ಹೋರಾಟಕ್ಕೆ ಸಜ್ಜಾಗಬೇಕು. ಆಗ ಮಾತ್ರ ಕೊರೊನಾ ನಿರ್ಮೂಲನೆ ಮಾಡಲು ಸಾಧ್ಯ ಎಂದರು. ಬುಳ್ಳುಸಾಗರದ ನಾಗರಾಜ್, ರಂಗನಾಥ್, ಪಾಟೀಲ್, ಮಂಜುನಾಥ್, ಚಿತ್ರಲಿಂಗಪ್ಪ, ಹರೀಶ್, ಗುರು, ರುದ್ರಪ್ಪ, ಹೇಮಂತ್ ಇದ್ದರು.
Ad
CM;ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವುದು ಖಚಿತ: ನೋಣವಿನಕೆರೆ ಶಿವಯೋಗೀಶ್ವರ ಸ್ವಾಮೀಜಿ
ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮನೆಗಳಿಗೆ ಮುತ್ತಿಗೆ: ಎಂ.ಪಿ.ರೇಣುಕಾಚಾರ್ಯ
Davanagere: ರೈಲಿಗೆ ತಲೆ ಕೊಟ್ಟು ತಾಯಿ – ಮಗಳು ಆತ್ಮಹ*ತ್ಯೆ
Davanagere: RTO ಹೆಸರಲ್ಲಿ ನಾಗರಿಕರ ಹಣ ದೋಚಲು ತಂತ್ರ ರೂಪಿಸಿ ಸೈಬರ್ ವಂಚಕರು
Heart attack: ಹೃದಯಾಘಾತಕ್ಕೆ ದಾವಣಗೆರೆ – ಧಾರವಾಡದಲ್ಲಿ ಇಬ್ಬರು ವಿದ್ಯಾರ್ಥಿಗಳು ಬಲಿ
You seem to have an Ad Blocker on.
To continue reading, please turn it off or whitelist Udayavani.