

Team Udayavani, Apr 12, 2017, 2:54 PM IST
ದಾವಣಗೆರೆ: ಗೋವಾದಲ್ಲಿ ಅನೇಕ ವರ್ಷದಿಂದ ವಾಸಿಸುತ್ತಿರುವ ರಾಜ್ಯದ ಲಂಬಾಣಿ ಸಮಾಜ ಬಾಂಧವರ ಬಗ್ಗೆ ಅಲ್ಲಿನ ಪ್ರವಾಸೋದ್ಯಮ ಇಲಾಖೆ ಸಚಿವ ಮನೋಹರ್ ಅಜಗಾಂವ್ಕರ್ ನೀಡಿರುವ ಹೇಳಿಕೆ ಖಂಡಿಸಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆ(ಎಚ್. ಶಿವರಾಮೇಗೌಡ ಬಣ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಶ್ರೀ ಜಯದೇವ ವೃತ್ತದಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತರು ಸಚಿವ ಮನೋಹರ್ ಅಜಗಾಂವ್ಕರ್ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ವಿವಿಧ ಭಾಗದ ಲಂಬಾಣಿ ಸಮುದಾಯವದರು ಜೀವನ ನಿರ್ವಹಣೆಗೆ ಗೋವಾದಲ್ಲಿ ಅನೇಕ ವರ್ಷದಿಂದ ವಾಸಿಸುತ್ತಿದ್ದಾರೆ.
ತಮ್ಮ ಜೀವನ ನಿರ್ವಹಣೆಯ ಜೊತೆಗೆ ಆ ರಾಜ್ಯಕ್ಕೂ ವಿವಿಧ ರೂಪದಲ್ಲಿ ಕೊಡುಗೆ ನೀಡಿದ್ದಾರೆ. ಅಂತಹ ಸಮುದಾಯದವರ ಬಗ್ಗೆ ಸಚಿವ ಮನೋಹರ್ ಅಜಗಾಂವ್ಕರ್ ನೀಡಿರುವ ಹೇಳಿಕೆ ಅತ್ಯಂತ ಖಂಡನೀಯ. ಎಲ್ಲರನ್ನೂ ಗೋವಾದಿಂದ ಹೊರ ಹಾಕುವಂತೆ ಹೇಳಿರುವುದು ಅವರಲ್ಲಿ ಪ್ರಜಾತಂತ್ರ ವ್ಯವಸ್ಥೆಯ ಬಗ್ಗೆ ಇರುವ ಅರಿವಿನ ಕೊರತೆ ಪ್ರತೀಕ ಎಂದು ದೂರಿದರು.
ಈ ಕೂಡಲೇ ಬಹಿರಂಗವಾಗಿ ಸಮಸ್ತ ಕನ್ನಡಿಗರ ಕ್ಷಮೆ ಕೋರುವ ಜೊತೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು. ನುದ್ರತ್ ಅನ್ವರ್, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಶುಭಮಂಗಳ, ತಾರೀಖ್ ನಕಾಶ್, ಜಾಲಿಕಟ್ಟೆ ಇಮ್ರಾನ್, ಜಬೀಖಾನ್, ರವಿನಾಯಕ್, ಶಬೀºರ್ ಅಹಮ್ಮದ್, ಅನ್ವರ್ ಹುಸೇನ್, ಅತೀಫುಲ್ಲಾ, ನಾಗರಾಜ್, ಲಕ್ಷ್ಮಿದೇವಿ ಇತರರು ಇದ್ದರು.
Ad
Davanagere: RTO ಹೆಸರಲ್ಲಿ ನಾಗರಿಕರ ಹಣ ದೋಚಲು ತಂತ್ರ ರೂಪಿಸಿ ಸೈಬರ್ ವಂಚಕರು
Heart attack: ಹೃದಯಾಘಾತಕ್ಕೆ ದಾವಣಗೆರೆ – ಧಾರವಾಡದಲ್ಲಿ ಇಬ್ಬರು ವಿದ್ಯಾರ್ಥಿಗಳು ಬಲಿ
BJP Karnataka: ಪಕ್ಷಕ್ಕಿಂತ ದೊಡ್ಡವರು ನಾವಲ್ಲ….: ಕುಮಾರ ಬಂಗಾರಪ್ಪ
Davanagere: ಮನೆಗೆ ಹೋಗುವ ನಡುಕದಿಂದ ಸಿಎಂ ಸಿದ್ದು ಸಭೆ ನಡೆಸುತ್ತಿದ್ದಾರೆ: ಪ್ರತಾಪ್ ಸಿಂಹ
BJP: ಯಡಿಯೂರಪ್ಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅರವಿಂದ ಲಿಂಬಾವಳಿ
Mangaluru: ಶಾಂತಿ ನೆಲೆಸಲಿ, ಮೂಲ ಸಮಸ್ಯೆಗಳಿಗೆ ಪರಿಹಾರ ಸಿಗಲಿ
ಪ್ರತೀ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ: ಡಾ.ಜಿ. ಪರಮೇಶ್ವರ್
ಮೈಸೂರು-ಕುಶಾಲನಗರ ಎಕ್ಸ್‌ಪ್ರೆಸ್‌ವೇ ಕಾರ್ಯ ಶೀಘ್ರ ಆರಂಭ
ಕೊಡಗಿನಲ್ಲಿ ಅಕ್ರಮ ರೆಸಾರ್ಟ್‌ಗಳ ಅಬ್ಬರ: ಕೂಡಲೇ ನೆಲಸಮಗೊಳಿಸಲು ಆಗ್ರಹ
Rain; ಕರಾವಳಿಯಲ್ಲಿ ಜು.10 ರಿಂದ 15ರವರೆಗೆ ಎಲ್ಲೋ ಅಲರ್ಟ್ ಘೋಷಣೆ
You seem to have an Ad Blocker on.
To continue reading, please turn it off or whitelist Udayavani.