ಗಣನೀಯ ಮಳೆ; ಪುಟಿದೆದ್ದ ಅಂತರ್ಜಲ

Team Udayavani, Nov 7, 2020, 7:23 PM IST

ಗಣನೀಯ ಮಳೆ; ಪುಟಿದೆದ್ದ  ಅಂತರ್ಜಲ

ದಾವಣಗೆರೆ: ಸಮರ್ಪಕ ಮಳೆ ಬೀಳದೆ ಕೆಲವು ವರ್ಷ ಪಾತಾಳ ಕಂಡಿದ್ದ ಜಿಲ್ಲೆಯ ಅಂತರ್ಜಲ ಮಟ್ಟ, ಈ ವರ್ಷ ಉತ್ತಮ ಮಳೆಯಿಂದಾಗಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.ಹಾಗಾಗಿ ಜಿಲ್ಲೆಯಲ್ಲೀಗ ಜಲ ಸಮೃದ್ಧಿಯಾಗಿದೆ.

ಅಸಮರ್ಪಕ ಮಳೆ ಕಾರಣದಿಂದಾಗಿ ಮೂರು ವರ್ಷಗಳ ಹಿಂದೆ ಅಂದರೆ 2017ರಲ್ಲಿ ಭೂಮಿಯ ಮೇಲಿನ ಬಹುತೇಕ ಜಲಮೂಲಗಳೆಲ್ಲ ಬತ್ತಿ ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ಹಾಹಾಕಾರ ಏಳುವಂತಾಗಿತ್ತು. ಕುಡಿಯುವ ನೀರು, ಕೃಷಿಗಾಗಿ ಕೆಲವು ಕಡೆಗಳಲ್ಲಿ ಕೊಳವೆಬಾವಿಗಳನ್ನು ಸಾವಿರ ಅಡಿವರೆಗೂ ಕೊರೆಯುವ ಸ್ಥಿತಿ ನಿರ್ಮಾಣವಾಗಿತ್ತು. ಕಳೆದ ಎರಡು ವರ್ಷ ಉತ್ತಮ ಮಳೆಯಾಗುವ ಜತೆಗೆ ಪ್ರಸಕ್ತ ವರ್ಷ ಸಮೃದ್ಧ ಮಳೆಯಾಗಿದ್ದರಿಂದ ಜಲಮೂಲಗಳೆಲ್ಲ ಭರ್ತಿಯಾಗಿ ಅಂತರ್ಜಲ ಮಟ್ಟವೂ ಏರಿಕೆಯಾಗಿದೆ. ಸಂಪೂರ್ಣ ಬತ್ತಿ ಬೆಂಕಿಯಾಗಿದ್ದ ಭೂಮಿ ತಾಯಿಯ ಒಡಲು ತಂಪಾಗಿದ್ದು, ಭೂಮಿತಾಯಿ ಮಕ್ಕಳಾದ ಅನ್ನದಾತರ ಮುಖದಲ್ಲೂ ಮಂದಹಾಸ ಮೂಡಿಸಿದೆ.

ಜಗಳೂರು ತಾಲೂಕಿನಲ್ಲಿ ಈ ಬಾರಿ ಸ್ಥಿರ ಅಂತರ್ಜಲ ಮಟ್ಟ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿದೆ.2017ರಲ್ಲಿ ಜಗಳೂರು ತಾಲೂಕಿನಲ್ಲಿಸ್ಥಿರ ಅಂತರ್ಜಲ ಮಟ್ಟ 27.44 ಮೀ ಇತ್ತು. ಪ್ರಸಕ್ತ ವರ್ಷ ಸ್ಥಿರ ಅಂತರ್ಜಲ ಮಟ್ಟ 20.5 ಮೀಗೆ ಏರಿದ್ದು ಅಂತರ್ಜಲ ಮಟ್ಟ ಸರಾಸರಿ ಏಳು ಮೀನಷ್ಟು ಮೇಲಕ್ಕೆ ಬಂದಿದೆ. ದಾವಣಗೆರೆ ತಾಲೂಕಿನಲ್ಲಿ 2017ರಲ್ಲಿ ಸ್ಥಿರ ಅಂತರ್ಜಲ ಮಟ್ಟ 16.59ಇತ್ತು. ಈ ವರ್ಷ ಅದು 13.59 ಮೀ ಗೆ ಏರಿಕೆಯಾಗಿದ್ದು, ಅಂತರ್ಜಲಮಟ್ಟ ಸರಾಸರಿ ಮೂರು ಮೀನಷ್ಟು ಏರಿಕೆಯಾಗಿದೆ.

ಅದೇ ರೀತಿ ಹರಿಹರ ತಾಲೂಕಿನಲ್ಲಿ 2017ರಲ್ಲಿ ಸ್ಥಿರ ಅಂತರ್ಜಲ ಮಟ್ಟ 7.02 ಮೀ ಇತ್ತು. ಪ್ರಸಕ್ತ ವರ್ಷ 2020ರಲ್ಲಿ ಇದು 5.84 ಮೀಗೆ ಏರಿಕೆಯಾಗಿದ್ದು ಅಂತರ್ಜಲ ಮಟ್ಟ ಸರಾಸರಿ 2.5 ಮೀನಷ್ಟು ಮೇಲಕ್ಕೇರಿದೆ. ಚನ್ನಗಿರಿ ತಾಲೂಕಿನಲ್ಲಿ 2017ರಲ್ಲಿ ಸ್ಥಿರ ಅಂತರ್ಜಲ ಮಟ್ಟ 9.70 ಮೀ ಇತ್ತು. ಪ್ರಸಕ್ತ ವರ್ಷ 7.15 ಮೀನಷ್ಟು ಅಂತರ್ಜಲ ಮಟ್ಟ ತಲುಪಿದ್ದು, ಅಂತರ್ಜಲ ಮಟ್ಟ ಸರಾಸರಿ 2.5 ಮೀ ಹೆಚ್ಚಾಗಿದೆ. ಹೊನ್ನಾಳಿ ತಾಲೂಕಿನಲ್ಲಿ 2017ರಲ್ಲಿ ಸ್ಥಿರ ಅಂತರ್ಜಲ ಮಟ್ಟ 8.47 ಮೀ ಇತ್ತು. ಈ ವರ್ಷ 4.33 ಮೀ ತಲುಪಿದ್ದು ಅಂತರ್ಜಲ ಮಟ್ಟ ಸರಾಸರಿ 4.50 ಏರಿಕೆಯಾಗಿದೆ.

ಕಳೆದ ಏಳು ವರ್ಷಗಳಲ್ಲಿ ಜಿಲ್ಲೆಯಲ್ಲಿದ್ದ ಸ್ಥಿರ ಅಂತರ್ಜಲ ಮಟ್ಟವನ್ನು ಗಮನಿಸಿದರೆ 2013ರಲ್ಲಿ ಅಂತರ್ಜಲ ಮಟ್ಟ ಸಾಕಷ್ಟುಮೇಲೆಯೇ ಇತ್ತು. ನಂತರದ ವರ್ಷಗಳಲ್ಲಿ ಮಳೆ ಸರಿಯಾಗಿ ಬೀಳದೆ ಕಡಿಮೆಯಾಗುತ್ತ ಬಂದಿತ್ತು. 2017ರಲ್ಲಂತೂ ತೀರಾ ಕೆಳಗೆ ಇಳಿದಿತ್ತು. ಆಗ ಇಳಿದಿದ್ದ ಅಂತರ್ಜಲ ಮಟ್ಟ ಈ ವರ್ಷ ಏರಿಕೆ ಕಂಡಿದೆ.

ವರ್ಷವಾರು ಸ್ಥಿರ ಅಂತರ್ಜಲ ಮಟ್ಟ: ದಾವಣಗೆರೆ ತಾಲೂಕಿನಲ್ಲಿ ಸ್ಥಿರ ಅಂತರ್ಜಲ ಮಟ್ಟ 2013ರಲ್ಲಿ 11.99 ಮೀ, 2014ರಲ್ಲಿ 11.53 ಮೀ,2015ರಲ್ಲಿ 11.32 ಮೀ, 2016 ರಲ್ಲಿ 13.02 ಮೀ, 2017ರಲ್ಲಿ 16.59 ಮೀ, 2018ರಲ್ಲಿ 15.60 ಮೀ, 2019ರಲ್ಲಿ 17.13 ಮೀ ಇತ್ತು. 2020ರಲ್ಲಿ 13.59 ಮೀ ಆಗಿದೆ. ಹರಿಹರ ತಾಲೂಕಿನಲ್ಲಿ ಸ್ಥಿರ ಅಂತರ್ಜಲ ಮಟ್ಟ 2013 ರಲ್ಲಿ6.59 ಮೀ, 2014 ರಲ್ಲಿ 4.15 ಮೀ, 2015 ರಲ್ಲಿ 3.11 ಮೀ, 2016ರಲ್ಲಿ 4.59 ಮೀ, 2017ರಲ್ಲಿ 7.02 ಮೀ, 2018ರಲ್ಲಿ 5.17 ಮೀ, 2019ರಲ್ಲಿ

5.60 ಮೀ ಇತ್ತು. ಈ ಬಾರಿ 5.84

ಮೀಗೆ ಅಂತರ್ಜಲ ಮಟ್ಟ ಏರಿದೆ. ಚನ್ನಗಿರಿ ತಾಲೂಕಿನಲ್ಲಿ ಸ್ಥಿರ ಅಂತರ್ಜಲ ಮಟ್ಟ 2013ರಲ್ಲಿ 9.23 ಮೀ, 2014ರಲ್ಲಿ 7.56 ಮೀ, 2015ರಲ್ಲಿ 6.65 ಮೀ, 2016ರಲ್ಲಿ 7.74 ಮೀ, 2018ರಲ್ಲಿ 8.87 ಮೀ, 2019ರಲ್ಲಿ 8.87ಮೀ ಇತ್ತು. ಪ್ರಸಕ್ತ ವರ್ಷ ಅಂತರ್ಜಲ ಮಟ್ಟ 7.15 ಮೀ ಆಗಿದೆ. ಹೊನ್ನಾಳಿ ತಾಲೂಕಿನಲ್ಲಿ ಸ್ಥಿರ ಅಂತರ್ಜಲ ಮಟ್ಟ 2013ರಲ್ಲಿ9.46 ಮೀ, 2014ರಲ್ಲಿ 8.70 ಮೀ, 2015 ರಲ್ಲಿ 6.56 ಮೀ, 2016 ರಲ್ಲಿ 8.37 ಮೀ, 2017ರಲ್ಲಿ 8.47 ಮೀ, 2018ರಲ್ಲಿ 4.91 ಮೀ, 2019 ರಲ್ಲಿ 5.02 ಮೀ ಆಗಿತ್ತು. ಈ ಸಲಅಂತರ್ಜಲ ಮಟ್ಟ 4.33 ಮೀಮೇಲೇರಿದೆ. ಜಗಳೂರು ತಾಲೂಕಿನಲ್ಲಿ ಸ್ಥಿರ ಅಂತರ್ಜಲ ಮಟ್ಟ 2013ರಲ್ಲಿ 21.89 ಮೀ, 2014 ರಲ್ಲಿ 21.65 ಮೀ, 2015ರಲ್ಲಿ 22.44 ಮೀ, 2016 ರಲ್ಲಿ 25.09 ಮೀ, 2017ರಲ್ಲಿ 27.44 ಮೀ, 2018 ರಲ್ಲಿ 21.99ಮೀ, 2019ರಲ್ಲಿ 25.23 ಮೀ ಇತ್ತು. ಈ ವರ್ಷ 20.05 ಮೀ ಬಂದಿದ್ದು ಅಪಾರ ಏರಿಕೆ ಕಂಡಿದೆ. ಒಟ್ಟಾರೆ ಈ ಬಾರಿಯ ಉತ್ತಮ ಮಳೆಯಿಂದಾಗಿ ಜಿಲ್ಲೆಯ ಸ್ಥಿರ ಅಂತರ್ಜಲಮಟ್ಟ ಹೆಚ್ಚಾಗಿದೆ. ಹಾಗಾಗಿ ಜಲ ಸಂಚಕಾರದಿಂದ ಮುಕ್ತಿ ಸಿಕ್ಕಂತಾಗಿದೆ.

‌ಸರಾಸರಿ 211ಮಿಮೀ ಅಧಿಕ ಮಳೆ :  ಜಿಲ್ಲೆಯಲ್ಲಿ 2013ರಲ್ಲಿ ಸರಾಸರಿ  651ಮಿಮೀ, 2014 ರಲ್ಲಿ 921 ಮಿಮೀ, 2015ರಲ್ಲಿ 688 ಮಿಮೀ, 2016ರಲ್ಲಿ 466 ಮಿಮೀ, 2017ರಲ್ಲಿ 746 ಮಿಮೀ, 2018ರಲ್ಲಿ 633 ಮಿಮೀ, 2019ರಲ್ಲಿ 681ಮಿಮೀ ಮಳೆಯಾಗಿತ್ತು. ಪ್ರಸಕ್ತ ವರ್ಷ ಜನವರಿಯಿಂದ ಇಲ್ಲಿಯವರೆಗೆ 813 ಮಿಮೀ ಮಳೆಯಾಗಿದೆ. ಈವರೆಗಿನ ವಾಡಿಕೆ ಮಳೆ ಪ್ರಮಾಣ 602 ಮಿಮೀ ಆಗಿದ್ದು, ಸರಾಸರಿ 211ಮಿಮೀ ಹೆಚ್ಚಿನ ಮಳೆಯಾಗಿದೆ.

ಪ್ರಸಕ್ತ ವರ್ಷ ಹೆಚ್ಚುಮಳೆಯಾಗಿದ್ದರಿಂದಜಿಲ್ಲೆಯ ಸ್ಥಿರ ಅಂತರ್ಜಲ ಮಟ್ಟದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. 2017ರಲ್ಲಿ ಜಲಮೂಲಗಳೆಲ್ಲ ಬತ್ತಿ ಅಂತರ್ಜಲ ಮಟ್ಟ ಹೆಚ್ಚು ಕೆಳಗೆ ಹೋಗಿತ್ತು. ಜಿಲ್ಲೆಯಲ್ಲಿ 46ಅಧ್ಯಯನ ಬಾವಿಗಳಿದ್ದು ಪ್ರತಿ ತಿಂಗಳು ಸ್ಥಿರ ಅಂತರ್ಜಲಮಟ್ಟವನ್ನು ಪರೀಕ್ಷಿಸಲಾಗುತ್ತದೆ. ಈ ಅಧ್ಯಯನದ ಆಧಾರದಲ್ಲಿ ಜಿಲ್ಲೆಯ ಸ್ಥಿರ ಅಂತರ್ಜಲ ಮಟ್ಟ ಈ ವರ್ಷ ಸುಧಾರಿಸಿದೆ.-ಬಸವರಾಜ್‌ ಆರ್‌., ಹಿರಿಯ ಭೂ ವಿಜ್ಞಾನಿ.

-ಎಚ್‌.ಕೆ. ನಟರಾಜ

ಟಾಪ್ ನ್ಯೂಸ್

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೋದಿ 3ನೇ ಬಾರಿ ಪ್ರಧಾನಿಯಾಗಲು ಸಹಕರಿಸಿ: ಗಾಯತ್ರಿ ಸಿದ್ದೇಶ್ವರ

ಮೋದಿ 3ನೇ ಬಾರಿ ಪ್ರಧಾನಿಯಾಗಲು ಸಹಕರಿಸಿ: ಗಾಯತ್ರಿ ಸಿದ್ದೇಶ್ವರ

ಕರ್ತವ್ಯ ಲೋಪ: ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕ ರಿಯಾಜ್ ಅಹಮದ್ ಅಮಾನತು

ಕರ್ತವ್ಯ ಲೋಪ: ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕ ರಿಯಾಜ್ ಅಹಮ್ಮದ್ ಅಮಾನತು

1-dvg

Election Campaign: ಮೋದಿಯವರಿಂದ ಮಹಿಳಾ ಶಕ್ತಿಗೆ ಮುನ್ನುಡಿ

Davanagere: ಬಿಜೆಪಿ ಅಸಮಾಧಾನ ತಣಿಸಿದ ಬಿಎಸ್ ವೈ; ರವೀಂದ್ರನಾಥ್ ಗೆ ಚುನಾವಣೆ ಹೊಣೆ

Davanagere: ಬಿಜೆಪಿ ಅಸಮಾಧಾನ ತಣಿಸಿದ ಬಿಎಸ್ ವೈ; ರವೀಂದ್ರನಾಥ್ ಗೆ ಚುನಾವಣೆ ಹೊಣೆ

Gayatri Siddeshwar: ಮೋದಿ ಕೈ ಬಲಪಡಿಸಲು ಬಿಜೆಪಿ ಗೆಲ್ಲಿಸಿ; ಗಾಯತ್ರಿ

Gayatri Siddeshwar: ಮೋದಿ ಕೈ ಬಲಪಡಿಸಲು ಬಿಜೆಪಿ ಗೆಲ್ಲಿಸಿ; ಗಾಯತ್ರಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

17

ಕೋರ್ಟ್‌ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.