

Team Udayavani, Apr 8, 2017, 1:03 PM IST
ದಾವಣಗೆರೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ 3 ಚಕ್ರ ಮತ್ತು 4 ಚಕ್ರ ಗೂಡ್ಸ್ ವಾಹನಗಳ ಚಾಲಕರು ಮತ್ತು ಮಾಲೀಕರು ಶುಕ್ರವಾರ ವಾಹನಗಳೊಂದಿಗೆ ಮೆರವಣಿಗೆ ನಡೆಸಿದರು. ಹೊಸ ಬಸ್ ನಿಲ್ದಾಣದಿಂದ ಮೆರವಣಿಗೆ ನಡೆಸಿದ ಮಾಲೀಕರು, ಚಾಲಕರು ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಗೆ ತೆರಳಿ, ಮನವಿ ಸಲ್ಲಿಸಿದರು.
3 ಮತ್ತು 4 ಚಕ್ರ ಗೂಡ್ಸ್ ವಾಹನದಿಂದ ಸಿಗುವ ವರಮಾನ ಅತಿ ಕಡಿಮೆಯಾಗಿದೆ. ಬಂದಂತಹ ಆದಾಯದಲ್ಲಿ ವಾಹನದ ಕಂತು, ವಾಹನ ರಿಪೇರಿಗೆ ಸಾಕಾಗುವುದಿಲ್ಲ. ದುಡಿಮೆ ಕಡಿಮೆಯಾಗಿ ಪ್ರತಿನಿತ್ಯ ಜೀವನ ನಡೆಸುವುದು ಕಷ್ಟಕರವಾಗಿದೆ. ಇದೀಗ ಸರ್ಕಾರ ಕೆಲ ಶುಲ್ಕ ಹೆಚ್ಚಳ ಮಾಡಿ, ನಮ್ಮನ್ನು ದಿವಾಳಿ ಮಾಡಲು ಮುಂದಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ನಮ್ಮ ವಾಹನಗಳ ಮೇಲಿನ ರಸ್ತೆ ಶುಲ್ಕ ರದ್ದು ಪಡಿಸಬೇಕು, ಸಾಲಮನ್ನಾಕ್ಕೆ ಕ್ರಮ ವಹಿಸಬೇಕು. ವಿಮಾ ಕಂತು ಏಕಾಏಕಿ ಶೇ.50ರಷ್ಟು ಏರಿಕೆ ಮಾಡಿದ್ದು, ಇದನ್ನು ಹಿಂದಿನ ದರಕ್ಕೆ ಇಳಿಸಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ನಮಗೆ ಸಾಲ ಕೊಡಿಸಲು ಕ್ರಮ ವಹಿಸಬೇಕು.
ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ರಾಜ್ಯ, ಕೇಂದ್ರ ಸರ್ಕಾರಗಳು ಧನ ಸಹಾಯ ಮಾಡಬೇಕು. ಪೊಲೀಸ್‌ರ ಕಿರುಕುಳದಿಂದ ಮುಕ್ತಿ ಕೊಡಿಸಬೇಕು ಎಂದು ಅವರು ಆಗ್ರಹಿಸಿದರು. ಸಂಘದ ಅಧ್ಯಕ್ಷ ಪಳನಿಸ್ವಾಮಿ, ಜಗದೀಶ್, ಹಾಲೇಶ್, ಮೆಹಬೂಬ್ ಸಾಬ್, ಹನುಮಂತಪ್ಪ, ರಘು ಮತ್ತಿತರರು ಮೆರವಣಿಗೆ ನೇತೃತ್ವ ವಹಿಸಿದ್ದರು.
Ad
Davangere: ವಾಯುವಿಹಾರ ಮಾಡುತ್ತಿದ್ದಾಗ ಕುಸಿದು ಬಿದ್ದು 40 ವರ್ಷದ ಉದ್ಯಮಿ ಸಾ*ವು
ಕಾರ್ಮಿಕರ ಕಲ್ಯಾಣಕ್ಕೆ ಇಂಧನ ಸೆಸ್‌ಗೆ ಪ್ರಸ್ತಾವ: ಸಂತೋಷ್ ಲಾಡ್
Davanagere:ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು: ನಾಲ್ವರು ಪಾರು
Channagiri; ಸಾಲ ಮರುಪಾವತಿಸದ ಪತ್ನಿಯ ಮೂಗು ಕಚ್ಚಿದ!
CM;ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವುದು ಖಚಿತ: ನೋಣವಿನಕೆರೆ ಶಿವಯೋಗೀಶ್ವರ ಸ್ವಾಮೀಜಿ
You seem to have an Ad Blocker on.
To continue reading, please turn it off or whitelist Udayavani.