ಹನುಮಂತರೆಡ್ಡಿ ಅಧ್ಯಕ್ಷರಾಗಿ ಆಯ್ಕೆ
Team Udayavani, Jun 7, 2020, 7:24 AM IST
ಹರಿಹರ: ಇಲ್ಲಿನ ಎಪಿಎಂಸಿ ಅಧ್ಯಕ್ಷರಾಗಿ ಸಾರಥಿ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹೊಸಳ್ಳಿ ಹನುಮಂತರೆಡ್ಡಿ ಅವಿರೋಧವಾಗಿ ಆಯ್ಕೆಯಾದರು.
ಸಮಿತಿಯಲ್ಲಿ ಬಿಜೆಪಿ ಕಾಂಗ್ರೆಸ್ ಸಮ್ಮಿಶ್ರ ಆಡಳಿವಿದೆ. ಬಿಜೆಪಿ ಬೆಂಬಲಿತ ಯಲವಟ್ಟಿ ಸದಸ್ಯೆ ಶಾಂತಮ್ಮ ರಾಜಿನಾಮೆ ನೀಡಿದ್ದರಿಂದ ಖಾಲಿಯಾದ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ಈ ಬಾರಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಅವಕಾಶ ನೀಡಲಾಯಿತು. ಮಾಜಿ ಶಾಸಕ ಬಿ.ಪಿ. ಹರೀಶ್, ನಗರಸಭೆ ಸದಸ್ಯ ಶಂಕರ್ ಖಟಾವ್‌ಕರ್ ನೂತನ ಅಧ್ಯಕ್ಷರಿಗೆ ಅಭಿನಂದಿಸಿದರು.
ತಾಪಂ ಮಾಜಿ ಸದಸ್ಯ ಬೆಳ್ಳೂಡಿ ಬಸವರಾಜ್, ಎಪಿಎಂಸಿ ಉಪಾಧ್ಯಕ್ಷ ಕೆ.ಬಸವರಾಜ್, ಸದಸ್ಯರಾದ ಮಹದೇವಪ್ಪಗೌಡ್ರು, ಮಂಜುನಾಥ್ ಪಾಟೀಲ್, ನರೇಂದ್ರಕುಮಾರ್, ಶೇಖಣ್ಣ ಮತ್ತಿತರರಿದ್ದರು. ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ಚುನಾವಣಾಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.