ಬಿಸಿಯೂಟಕ್ಕೆ ಅಕ್ಕಿ ಇದೆ… ಬೇಳೆ ಇಲ್ಲ…ಟೆಂಡರ್‌ ವಿಳಂಬವಾಗಿರುವುದರಿಂದ ಸರಬರಾಜು ಆಗಿಲ್ಲ

ಶಾಲಾ ಮಕ್ಕಳ ಮಧ್ಯಾಹ್ನದ ಊಟಕ್ಕೆ ತೊಗರಿಬೇಳೆ ಕೊರತೆ

Team Udayavani, Dec 7, 2022, 7:17 AM IST

ಬಿಸಿಯೂಟಕ್ಕೆ ಅಕ್ಕಿ ಇದೆ… ಬೇಳೆ ಇಲ್ಲ…ಟೆಂಡರ್‌ ವಿಳಂಬವಾಗಿರುವುದರಿಂದ ಸರಬರಾಜು ಆಗಿಲ್ಲ

ದಾವಣಗೆರೆ: “ಪಿಎಂ ಪೋಷಣ್‌ ಶಕ್ತಿ ನಿರ್ಮಾಣ್‌’ ಯೋಜನೆಯಡಿ ಶಾಲಾ ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟಕ್ಕೆ ತೊಗರಿಬೇಳೆಯ ಕೊರತೆ ಎದುರಾಗಿದೆ. ಹಲವು ಶಾಲೆಗಳಲ್ಲಿ ತೊಗರಿಬೇಳೆ ಇಲ್ಲದೆ ಅಡುಗೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅನೇಕ ಶಾಲೆಗಳಲ್ಲಿ ನವೆಂಬರ್‌ನಲ್ಲಿಯೇ ತೊಗರಿ ಬೇಳೆ ದಾಸ್ತಾನು ಖಾಲಿಯಾಗಿದೆ. ಕೆಲವು ಶಾಲೆಗಳಲ್ಲಿ ಡಿಸೆಂಬರ್‌ ಮೊದಲ ವಾರಕ್ಕೆ ಆಗುವಷ್ಟು ದಾಸ್ತಾನು ಇದ್ದು, ತೀರಾ ಕಡಿಮೆ ಪ್ರಮಾಣದಲ್ಲಿ ಬೇಳೆ ಬಳಸಲಾಗುತ್ತಿದೆ.

ಟೆಂಡರ್‌ ವಿಳಂಬ
ಕೋವಿಡ್‌ ಬರುವ ಮೊದಲು ಪ್ರತೀ ತಿಂಗಳು ರಾಜ್ಯ ಮಟ್ಟದಲ್ಲಿ ಟೆಂಡರ್‌ ಕರೆದು ತೊಗರಿಬೇಳೆ ಪೂರೈಸಲಾಗುತ್ತಿತ್ತು. ಕೋವಿಡ್‌ ಬಳಿಕ ಮೂರು ತಿಂಗಳಿಗೊಮ್ಮೆ ತೊಗರಿಬೇಳೆಯನ್ನು ಒಮ್ಮೆಲೆ ಸರಬರಾಜು ಮಾಡಲಾಗುತ್ತಿದೆ. ಕಳೆದ ಸೆಪ್ಟಂಬರ್‌ ಮೊದಲ ವಾರದಲ್ಲಿ ಶಾಲೆಗಳಿಗೆ ತೊಗರಿಬೇಳೆ ಸರಬರಾಜು ಆಗಿತ್ತು. ಬಳಿಕ ನವೆಂಬರ್‌ ವೇಳೆಗೆ ಪೂರೈಕೆ ಆಗಬೇಕಿತ್ತು. ಆದರೆ ರಾಜ್ಯ ಮಟ್ಟದಲ್ಲಿ ಟೆಂಡರ್‌ ವಿಳಂಬವಾದದ್ದರಿಂದ ಡಿಸೆಂಬರ್‌ ಬಂದರೂ ಸರಬರಾಜು ಆಗಿಲ್ಲ. ಈಗ 3 ತಿಂಗಳಿಗೊಮ್ಮೆ ಬೇಳೆ ಪೂರೈಸುತ್ತಿರುವುದರಿಂದ ಗುಣಮಟ್ಟವೂ ಕೆಡುತ್ತಿದೆ. ಇದರಿಂದ ಕಳಪೆ ಬೇಳೆ ನೀಡುತ್ತಿದ್ದಾರೆಂಬ ಆರೋಪ ಕೇಳಿಬರುತ್ತಿದೆ.

ಶಾಲಾ ಹಂತದಲ್ಲೇ ಖರೀದಿಗೆ ಸೂಚನೆ
ರಾಜ್ಯಾದ್ಯಂತ ಶಾಲೆಗಳಲ್ಲಿ ತೊಗರಿಬೇಳೆ ಕೊರತೆ ಉಂಟಾಗಿರುವುದನ್ನು ಮನಗಂಡ ಪಿಎಂ ಪೋಷಣ್‌ ಶಕ್ತಿ ನಿರ್ಮಾಣ್‌ ಯೋಜನೆಯ ನಿರ್ದೇಶಕರು, ತೊಗರಿಬೇಳೆ ಕೊರತೆಯಾದಲ್ಲಿ ಶಾಲಾ ಹಂತದಲ್ಲಿ ಉಳಿಕೆ ಇರುವ ಅಕ್ಷರ ದಾಸೋಹ ಅನುದಾನ ಬಳಸಿ, ಬೇಳೆ ಪೂರೈಕೆ ಆಗುವವರೆಗೆ ಸ್ಥಳೀಯವಾಗಿ ಗುಣಮಟ್ಟದ ತೊಗರಿಬೇಳೆ ಖರೀದಿಸಲು ಸೂಚನೆ ನೀಡಿದ್ದಾರೆ.

ನವೆಂಬರ್‌-ಡಿಸೆಂಬರ್‌ ತಿಂಗಳ ತೊಗರಿ ಬೇಳೆ ಪೂರೈಕೆ ವಿಳಂಬವಾಗಿದೆ. ಆದರೆ ಅದರಿಂದ ತುಂಬಾ ಸಮಸ್ಯೆಯಾಗಿಲ್ಲ. ಇದುವರೆಗೆ ದಾಸ್ತಾನಿದ್ದ ತೊಗರಿಬೇಳೆ ಬಳಸಿಕೊಂಡಿದ್ದೇವೆ. ಸ್ಥಳೀಯವಾಗಿ ಶಾಲಾ ಮಟ್ಟದಲ್ಲಿಯೇ ತೊಗರಿಬೇಳೆ ಖರೀದಿಸಲು ಕೂಡ ಆದೇಶ ನೀಡಿದ್ದೇವೆ.
– ಉಷಾ, ಶಿಕ್ಷಣಾಧಿಕಾರಿ,
ಅಕ್ಷರ ದಾಸೋಹ, ದ.ಕ. ಜಿಲ್ಲೆ

ಉಡುಪಿ ಜಿಲ್ಲೆಯಲ್ಲಿ ಶಾಲಾ ಮಕ್ಕಳ ಬಿಸಿಯೂಟಕ್ಕೆ ಸಂಬಂಧಿಸಿ ತೋಗರಿಬೇಳೆ ಅಥವಾ ಯಾವುದೇ ಆಹಾರ ಪದಾರ್ಥಗಳ ಕೊರತೆ ಇಲ್ಲ. ಎಲ್ಲ ಶಾಲೆಗಳಲ್ಲೂ ಸರಕಾರದ ನಿಯಮದಂತೆ ಬಿಸಿಯೂಟ ಯಥಾಪ್ರಕಾರ ನಡೆಯುತ್ತಿದೆ.
-ಪ್ರಸನ್ನ ಎಚ್‌.,
ಸಿಇಒ ಜಿ.ಪಂ. ಉಡುಪಿ

ರಾಜ್ಯ ಮಟ್ಟದಲ್ಲಿ ನಡೆಯಬೇಕಿದ್ದ ಟೆಂಡರ್‌ ವಿಳಂಬವಾಗಿದ್ದರಿಂದ ಶಾಲೆಗಳಲ್ಲಿ ತೊಗರಿಬೇಳೆ ಕೊರತೆಯುಂಟಾಗಿದೆ. ಯೋಜನೆಯ ನಿರ್ದೇಶಕರು ಶಾಲಾ ಅನುದಾನದಲ್ಲಿ ಸ್ಥಳೀಯವಾಗಿ ಖರೀದಿಸಲು ಸೂಚನೆ ನೀಡಿರುವುದರಿಂದ ಬೇಳೆ ಬರುವವರೆಗೆ ಮಕ್ಕಳ ಊಟಕ್ಕೆ ಸಮಸ್ಯೆಯಾಗದಂತೆ ಸ್ಥಳೀಯವಾಗಿ ಬೇಳೆ ಖರೀದಿಸಿ ಮಕ್ಕಳ ಊಟಕ್ಕೆ ಬಳಸಲಾಗುವುದು.
-ಡಾ| ಎ. ಚನ್ನಪ್ಪ, ದಾವಣಗೆರೆ ಜಿ.ಪಂ. ಸಿಇಒ

-  ಎಚ್‌.ಕೆ. ನಟರಾಜ

ಟಾಪ್ ನ್ಯೂಸ್

1-woqf

Waqf ಒತ್ತುವರಿ ಆಸ್ತಿ ಸಮುದಾಯದ ಏಳ್ಗೆಗೆ ಬಳಕೆ: ಸಚಿವ ಜಮೀರ್

New York; Virat Kohli’s statue unveiled at the famous Times Square

New York; ಪ್ರಸಿದ್ದ ಟೈಮ್ಸ್ ಸ್ಕ್ಯಾರ್ ನಲ್ಲಿ ವಿರಾಟ್ ಕೊಹ್ಲಿಯ ಪ್ರತಿಮೆ ಅನಾವರಣ

Team announced for Zimbabwe tour: Rest for seniors; Five first-timers in the team

Zimbabwe ಪ್ರವಾಸಕ್ಕೆ ತಂಡ ಪ್ರಕಟ: ಹಿರಿಯರಿಗೆ ರೆಸ್ಟ್; ಮೊದಲ ಬಾರಿಗೆ ಸ್ಥಾನ ಪಡೆದ ಐವರು

yatnal

BJP ಹೈಕಮಾಂಡ್ ಗೆ ದೊಡ್ಡವರ ಪಕ್ಷ ವಿರೋಧಿ ಚಟುವಟಿಕೆ ಮಾಹಿತಿ: ಯತ್ನಾಳ್

1-abbi

Hosanagara: ಅಬ್ಬಿ ಫಾಲ್ಸ್ ನಲ್ಲಿ‌ ನೀರುಪಾಲಾಗಿದ್ದ ಯುವಕನ ಶವ ಪತ್ತೆ

JP-Nadda

Rajya Sabha ಸಭಾ ನಾಯಕರಾಗಿ ಜೆ.ಪಿ.ನಡ್ಡಾ ನೇಮಕ

1-modi

‘Emergency’ ಕುರಿತು ಪ್ರಧಾನಿ ಮೋದಿ ಹೇಳಿಕೆ: ವಿಪಕ್ಷಗಳ ಆಕ್ರೋಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-woqf

Waqf ಒತ್ತುವರಿ ಆಸ್ತಿ ಸಮುದಾಯದ ಏಳ್ಗೆಗೆ ಬಳಕೆ: ಸಚಿವ ಜಮೀರ್

yatnal

BJP ಹೈಕಮಾಂಡ್ ಗೆ ದೊಡ್ಡವರ ಪಕ್ಷ ವಿರೋಧಿ ಚಟುವಟಿಕೆ ಮಾಹಿತಿ: ಯತ್ನಾಳ್

tankar

ಆನಂದಪುರ – ಶಿಕಾರಿಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ: ಓರ್ವ ಸ್ಥಳದಲ್ಲೇ ಮೃತ್ಯು

Road mishap: ಖಾಸಗಿ ಬಸ್ – ಗೂಡ್ಸ್ ವಾಹನದ ನಡುವೆ ಅಪಘಾತ: ಇಬ್ಬರಿಗೆ ಸಣ್ಣಪುಟ್ಟ ಗಾಯ

Road mishap: ಖಾಸಗಿ ಬಸ್ – ಗೂಡ್ಸ್ ವಾಹನದ ನಡುವೆ ಅಪಘಾತ: ಇಬ್ಬರಿಗೆ ಸಣ್ಣಪುಟ್ಟ ಗಾಯ

Gundlupete: ಕಚೇರಿಯ ಕೊಠಡಿಯಲ್ಲೇ ನೇಣಿಗೆ ಶರಣಾದ ಪೈನಾನ್ಸ್ ಸಿಬ್ಬಂದಿ… ಕಾರಣ ನಿಗೂಢ

Gundlupete: ಕಚೇರಿಯ ಕೊಠಡಿಯಲ್ಲೇ ನೇಣಿಗೆ ಶರಣಾದ ಫೈನಾನ್ಸ್ ಸಿಬ್ಬಂದಿ… ಕಾರಣ ನಿಗೂಢ

MUST WATCH

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

udayavani youtube

“ನನ್ನಿಂದ ತಪ್ಪಾಗಿದೆ ಸರ್‌ ಆದರೆ..” | ಸಪ್ತಮಿ ಅವರದ್ದು ಎನ್ನಲಾದ Audio

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

ಹೊಸ ಸೇರ್ಪಡೆ

1-woqf

Waqf ಒತ್ತುವರಿ ಆಸ್ತಿ ಸಮುದಾಯದ ಏಳ್ಗೆಗೆ ಬಳಕೆ: ಸಚಿವ ಜಮೀರ್

1-sadsdasd

“ದೇವರಂತಹ” ಮತದಾರರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ: ಅಯೋಧ್ಯೆ ಸಂಸದ

New York; Virat Kohli’s statue unveiled at the famous Times Square

New York; ಪ್ರಸಿದ್ದ ಟೈಮ್ಸ್ ಸ್ಕ್ಯಾರ್ ನಲ್ಲಿ ವಿರಾಟ್ ಕೊಹ್ಲಿಯ ಪ್ರತಿಮೆ ಅನಾವರಣ

Team announced for Zimbabwe tour: Rest for seniors; Five first-timers in the team

Zimbabwe ಪ್ರವಾಸಕ್ಕೆ ತಂಡ ಪ್ರಕಟ: ಹಿರಿಯರಿಗೆ ರೆಸ್ಟ್; ಮೊದಲ ಬಾರಿಗೆ ಸ್ಥಾನ ಪಡೆದ ಐವರು

yatnal

BJP ಹೈಕಮಾಂಡ್ ಗೆ ದೊಡ್ಡವರ ಪಕ್ಷ ವಿರೋಧಿ ಚಟುವಟಿಕೆ ಮಾಹಿತಿ: ಯತ್ನಾಳ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.